ಸಾವಯವದಲ್ಲಿ ದೊಣ್ಣೆ ಮೆಣಸು(ಕ್ಯಾಪ್ಸಿಕಂ)

ಸೀತೆಕೆಂಪನಹಳ್ಳಿಯ ಮಲ್ಲಿಕಾರ್ಜುನ ಅವರು ಹೊಲದಲ್ಲಿ ಬೆಳೆದಿರುವ ದೊಣ್ಣೆಮೆಣಸಿನಕಾಯಿ ಅಂಗಳ

ಬಿತ್ತನೆ ಮಾಡುವುದರಿಂದ ಹಿಡಿದು ಮಾರುಕಟ್ಟೆಗೆ ಹೋಗುವವರೆಗೂ ರಾಸಾಯನಿಕದಲ್ಲೇ ಮುಳುಗೇಳುವ ದೊಣ್ಣೆ ಮೆಣಸಿನಕಾಯಿ ಬೆಳೆಯನ್ನು ರೈತರೊಬ್ಬರು ಹಸಿರು ಮನೆಯ ಹೊರಗೆ ಸಾವಯವ ಪದ್ಧತಿಯಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ.
*****

ಬೆಂಗಳೂರು ಉತ್ತರ ತ್ಲಾಲೂಕಿನ ಸೀತೆಕೆಂಪನಹಳ್ಳಿ ಮ್ಲಲಿಕಾಜುನ್ ಮುಕ್ಕಾಲು ಎಕರೆ ಜಮೀನಿನ್ಲಲಿ ಕ್ಯಾಪ್ಸಿಕಂ(ದೊಣ್ಣೆ ಮೆಣಸಿನಕಾಯಿ) ಬೆಳೆದ್ದಿದಾರೆ. ಅರೆ, ಅದರಲ್ಲೇನು ವಿಶೇಷ ಅಂತೀರಾ ? ಖಂಡಿತಾ ವಿಶೇಷ ಇದೆ.

ಗಿಡಗಳಲ್ಲಿ ಜೋತಾಡುತ್ತಿರುವ ಕ್ಯಾಪ್ಸಿಕಂ

ಸಾಮಾನ್ಯವಾಗಿ ಕ್ಯಾಪ್ಸಿಕಂ ಬೆಳೆಯುವುದಕ್ಕೆ ಹವಾನಿಯಂತ್ರಿತ ಹಸಿರು ಮನೆ ಬೇಕು. ಹೈಟೆಕ್ ತಂತ್ರಜ್ಞಾನದ್ಲಲಿ ಬೆಳೆಸಬೇಕು. ರಸಗೊಬ್ಬರ, ಕೀಟನಾಶಕ ಕಡ್ಡಾಯವಾಗಿ ಬಳಸಬೇಕು. ನಿರಂತರ ಆರೈಕೆ.. ಹೀಗೆ ಒಂದಿಷ್ಟು ನಿಯಮಗಳಿವೆ. ಆದರೆ ಮ್ಲಲಿಕಾರ್ಜುನ ಅವನ್ನ್ಲೆಲ ‘ಉಲಂಘಿಸಿ’ ಬಟ್ಟ ಬಯಲಿನ್ಲಲಿ, ಸಾವಯವ ಕೃಷಿ ಪದ್ಧತಿಯ್ಲಲಿ, ಕಡಿಮೆ ಖರ್ಚಿನ್ಲಲಿ ಉತ್ತಮ ಬೆಳೆ ತೆಗೆದ್ದಿದಾರೆ. ಎರಡು ತಿಂಗಳಿಗೆ ಕಾಯಿ ಕೊಯ್ಲಿಗೆ ಬಂದಿದೆ. ಒಂದೊಂದು ಕಾಯಿ ೧೫೦ ರಿಂದ ೨೦೦ ಗ್ರಾಂ ತೂಕವಿದೆ. ಕಡು ಹಸಿರು ಬಣ್ಣದ ಕಾಯಿಗಳು, ರೋಗ ರಹಿತ ಗಿಡಗಳ ಮುಕ್ಕಾಲು ಎಕರೆಯ ಅಂಗಳವನ್ನು ಆವರಿಸಿಕೊಂಡಿವೆ. ‘ಕನಿಷ್ಠ ಮೂರು ತಿಂಗಳು ಉತ್ತಮ ಇಳುವರಿ ಪಡೆಯುತ್ತೇನೆ’ ಎಂಬ ಉಮೇದಿನ್ಲಲ್ದಿದಾರೆ ಮ್ಲಲಿಕಾರ್ಜುನ. ಇದೇ ಇವರ ಕೃಷಿಯ ವಿಶೇಷ !

ಮುಕ್ಕಾಲು ಎಕರೆಯ್ಲಲಿ ಮೊದಲ ಹೆಜ್ಜೆ :

ಮ್ಲಲಿಕಾರ್ಜುನ ಅವರ‍್ದದು ಒಂದು ಕಡೆ ದ್ರಾಕ್ಷಿ ತೋಟ, ಮತ್ತೊಂದು ಕಡೆ ಹೊಲ ಹಾಗೂ ಮನೆಯ ಬಳಿ ತರಕಾರಿ ತೋಟವಿದೆ. ಕಳೆದ ಏಳೆಂಟು ವರ್ಷಗಳಿಂದ ಕ್ಯಾಪ್ಸಿಕಂ ಸೇರಿದಂತೆ ವಿವಿಧ ತರಕಾರಿಗಳನ್ನು ರಾಸಾಯನಿಕ ಪದ್ಧತಿಯ್ಲಲಿ ಬೆಳೆಯುತ್ತ್ದಿದರು. ಒಂದೆರಡು ವರ್ಷಗಳಿಂದೀಚೆಗೆ ರಾಸಾಯನಿಕ ಪದ್ಧತಿಯ ಅವಾಂತರಗಳ ‘ದರ್ಶನ’ವಾಯಿತು. ಮಾಧ್ಯಮಗಳ್ಲಲಿ ಬಿತ್ತರವಾಗುತ್ತ್ದಿದ ಸಾವಯವ ಕೃಷಿ ವಿಚಾರ, ಪ್ರಗತಿಪರ ರೈತರ ಅನುಭವಗಳಿಂದ ಪ್ರೇರಿತರಾದ ಇವರು ಸಾವಯವ ಕೃಷಿಯ್ಲಲಿ ದ್ರಾಕ್ಷಿ, ತರಕಾರಿ ಬೆಳೆಯುವ ಯೋಚನೆಯ್ಲಲ್ದಿದರು. ಇದೇ ಸಮಯದ್ಲಲಿ ಹೆಸರುಘಟ್ಟದ ತೋಟಗಾರಿಕಾ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ ಪ್ರಭಾಕರ್ ಅವರು ಸಾವಯವ ಕೃಷಿಯ್ಲಲಿ ಕ್ಯಾಪ್ಸಿಕಂ ಬೆಳೆಯುವ ಸಲಹೆ ನೀಡಿದರು. ‘ಮಾರ್ಗದರ್ಶನ ನೀಡುವುದಾಗಿ’ ಭರವಸೆ ಕೊಟ್ಟರು. ಈ ನಡುವೆ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ, ಕೃಷಿ ಇಲಾಖೆ ಸಹಯೋಗದೊಂದಿಗೆ ಸಾವಯವ ಗ್ರಾಮ/ಸ್ಥಳ ಯೋಜನೆಯನ್ನು ಸೀತೆಕೆಂಪನಹಳ್ಳಿಯ್ಲಲಿ ಅನುಷ್ಠಾನಗೊಳಿಸಲಾರಂಭಿಸಿತು. ಈ ಯೋಜನೆಯಡಿ ರಚಿತವಾದ ಸಾವಯವ ಕೃಷಿ ಸಂಘಕ್ಕೆ ಮ್ಲಲಿಕಾರ್ಜುನ್ ಅಧ್ಯಕ್ಷರಾದರು. ಈ ಎಲ ‘ಬೆಳವಣಿಗೆ’ಗಳ ಮೊದಲ ಪ್ರಯತ್ನವಾಗಿ ಮೇ ತಿಂಗಳ್ಲಲಿ ಸಾವಯವ ಕೃಷಿ ಪದ್ಧತಿಯ್ಲಲಿ ಕ್ಯಾಪ್ಸಿಕಂ ಬೆಳೆಯಲು ಆರಂಭಿಸಿದರು.

ಕ್ಯಾಪ್ಸಿಕಂ ಬೆಳೆದ್ದಿದು ಹೀಗೆ :

ಮುಕ್ಕಾಲು ಎಕರೆ (೩೦ ಗುಂಟೆ) ಜಮೀನನ್ನು ಆಳವಾಗಿ ಉಳುಮೆ ಮಾಡಿಸಿದರು. ೧೫ ಟನ್ ಕೊಟ್ಟಿಗೆ(ಮೂರು ಟ್ರ್ಯಾಕ್ಟರ್) ಗೊಬ್ಬರವನ್ನು ಭೂಮಿಗೆ ಹರಗಿಸಿದರು. ಮೂರು ಅಡಿ ಅಳತೆಯ್ಲಲಿ ಸಾಲುಗಳನ್ನು ಗುರುತು ಮಾಡಿದರು. ಪ್ರತಿ ಸಾಲಿನ್ಲಲಿ ಐದು ಇಂಚು ಆಳದ ಗುಂಡಿ ತೆಗೆಸಿದರು. ವರ್ಮಿ ಕಾಂಪೊಸ್ಟ್ ೫೦೦ ಕೆ.ಜಿ, ೨೫೦ ಕೆ.ಜಿ ಬೇವಿನಹಿಂಡಿ, ನಾಲ್ಕು ಕೆ.ಜಿ ಟ್ರೈಕೋಡರ್ಮಾ ಮಿಶ್ರ ಮಾಡಿ ಮೂರು ದಿನ ಕಳಿಸಿದರು. ಈ ಮಿಶ್ರಣವನ್ನು ಪ್ರತಿ ಸಾಲುಗಳಿಗೆ ಹಾಕಿ ಮುಚ್ಚಿಗೆ ಮಾಡಿದರು. ಮತ್ತೆ ಮೂರು ದಿನಗಳ ನಂತರ ಸಾಲುಗಳ ಮೇಲೆ ಡ್ರಿಪ್ ಪೈಪ್ ಅಳವಡಿಸಲಾಯಿತು. ನಂತರ ನೀರು ಹರಿಸಿ ಮಣ್ಣನ್ನು ತೇವಗೊಳಿಸಿದರು. ಮರು ದಿನವೇ ಸಸಿಗಳ ನಾಟಿ ಆರಂಭ. ಇದ್ಲೆಲ ನಾಟಿಗೆ ೨೦ ದಿವಸಗಳ ಮುಂಚೆ ಮಾಡಿದ ಕೆಲಸ.

ಸೀತೆಕೆಂಪನಹಳ್ಮಳಿ ಮಲ್ಲಿಕಾರ್ಜುನ್

ಗಿಡಗಳನ್ನು ನಾಟಿ ಮಾಡಿದ ೨೦ ದಿನಗಳ ನಂತರ ಮತ್ತೆ ಪೋಷಕಾಂಶಗಳನ್ನು ಮೇಲುಗೊಬ್ಬರವಾಗಿ ಗಿಡಗಳಿಗೆ ನೀಡಿದರು. ಈ ಬಾರಿ ೧೦೦ ಕೆ.ಜಿ ಬೇವಿನ ಹಿಂಡಿ, ೨೫೦ ಕೆ.ಜಿ ವರ್ಮಿ ಕಾಂಪೋಸ್ಟ್ ಮಿಶ್ರಣವನ್ನು(ಒಂದು ಹಿಡಿ) ಪ್ರತಿ ಎರಡು ಸಸಿಗಳ ನಡುವೆ ಕೊಟ್ಟರು. ಸಾಲುಗಳ ನಡುವ್ದಿದ ಮಣ್ಣನ್ನು ಈ ಮಿಶ್ರಣದ ಮೇಲೆ ಮುಚ್ಚಿ ‘ಬೆಡ್’ ತಯಾರಿಸಲಾಯಿತು. ‘ಬೆಡ್ ಮಾಡ್ದಿದರಿಂದ ಕಳೆ ನಿಯಂತ್ರಣವಾಗುತ್ತದೆ. ಪೋಷಕಾಂಶಗಳು ಭೂಮಿಯೊಳಗಿನ ಗಿಡಗಳ ಬೇರಿಗೆ ನೇರವಾಗಿ ತಲುಪುತ್ತವೆ. ಬೇರು ಬೆಳವಣಿಗೆಗೂ ನೆರವಾಗುತ್ತದೆ’ ಎನ್ನುವುದು ಮ್ಲಲಿಕಾರ್ಜುನ್ ಅಭಿಪ್ರಾಯ.

ಹೂ ಅರಳಿ-ಕಾಯಾಗಿ:

ಗೊಬ್ಬರ, ಪೋಷಕಾಂಶಗಳ ಆರೈಕೆಯೊಂದಿಗೆ ತಿಂಗಳೊಳಗೆ ಗಿಡಗಳ್ಲಲಿ ಹೂವು ಬಿರಿಯಲು ಶುರುವಾಯಿತ. ಈ ಸಂಭ್ರಮದ ಜೊತೆಗೆ ಹೂವಿನ ಪಕಳೆಗಳ ನಡುವೆ ಸಣ್ಣ ಸಣ್ಣ ಹೇನುಗಳು(ತ್ರಿಪ್ಸ್) ಕಾಣಿಸಿಕೊಂಡವು. ಮ್ಲಲಿಕಾರ್ಜುನ ಧೃತಿಗೆಡಲ್ಲಿಲ. ಐಐಎಚ್‌ಆರ್ ವಿಜ್ಞಾನಿ ಪ್ರಭಾಕರ್ ಅವರು ಸೂಚಿಸ್ದಿದ ‘ಮೆಣಸಿನಕಾಯಿ ಕಷಾಯ’ (ಬಾಕ್ಸ್ ನೋಡಿ)ವನ್ನು ಗಿಡಗಳ ನೆತ್ತಿಯ ಮೇಲೆ ಸಿಂಪಡಿಸಿದರು. ‘ಈ ಕಷಾಯದಿಂದ ತ್ರಿಪ್ಸ್ ನಿಯಂತ್ರಣಕ್ಕೆ ಬಂತು. ಗಿಡಗಳ ಎಲೆಗಳು ಕೂಡ ಮೃದುವಾದವು’ ಎನುತ್ತಾರೆ ಮ್ಲಲಿಕಾರ್ಜುನ್.

ಕ್ಯಾಪ್ಸಿಕಂ ಬೆಳೆ ಸೋಲುವುದೇ ‘ಫಂಗಸ್’ ಬಾಧೆಯಿಂದ. ಫಂಗಸ್ ನಿಯಂತ್ರಣಕ್ಕೆ ಹದಿನೈದು ದಿನಗಳಿಗೊಮ್ಮೆ ಟ್ರೈಕೋಡರ್ಮವನ್ನು ಕಷಾಯ ಮಾಡಿ ಗಿಡಗಳಿಗೆ ಸಿಂಪಡಿಸಬೇಕು. ಎಲೆ- ಪೌಡರ್ ರೋಗ ಬಾಧಿಸಿದರೆ ಬೋರ್ಡೊ ದ್ರಾವಣ ಸಿಂಪಡಿಸಬೇಕು’ ಎಂಬುದು ಅವರ ಸಲಹೆ. ಇಂಥ ಸಲಹೆಗಳನ್ನು ಅಳವಡಿಸಿಕೊಂಡ್ದಿದರಿಂದಲೇ ಐದು ಸಾವಿರ ಕ್ಯಾಪ್ಸಿಕಂ ಗಿಡಗಳ್ಲಲಿ ಒಂದೇ ಒಂದು ಗಿಡವೂ ಹಾಳಾಗಲ್ಲಿಲ. ಜೊತೆಗೆ ರೋಗ ರಹಿತ ಕಾಯಿಗಳು ಹೊರ ಹೊಮ್ಮಲು ಕಾರಣವಾಯಿತು ಎನ್ನುತ್ತಾರೆ ಮ್ಲಲಿಕಾರ್ಜುನ.

ಪ್ರಸ್ತುತ ಜಮೀನಿನ್ಲಲಿ ಎಲಾ ಗಿಡಗಳು ಕಾಯಿ ಕಚ್ಚಿವೆ. ಎರಡು ಅಡಿ ಎತ್ತರವಿರುವ ಪ್ರತಿ ಗಿಡದ್ಲಲಿ ನಾಲ್ಕೈದು ಕಾಯಿಗಳು ಜೋತಾಡುತ್ತಿವೆ. ‘ರಾಸಾಯನಿಕ ಪದ್ಧತಿಯ್ಲಲಿ ಇಂಥ ತಾಜಾ ಕಾಯಿ ಕಾಣುವುದಕ್ಕೆ ಬಹಳ ಸರ್ಕಸ್ ಮಾಡಬೇಕು. ಅಷ್ಟೇ ಅಲ, ಈ ಹಂತದ್ಲಲಿ ೨೫ ಸಾವಿರ ರೂಪಾಯಿಗೂ ಹೆಚ್ಚು ಹಣ ಖರ್ಚಾಗುತ್ತಿತ್ತು. ಕೂಲಿ ಆಳು, ಗೊಬ್ಬರ, ಕಷಾಯ, ಸಸಿ.. ಹೀಗೆ ಎಲ ಲೆಕ್ಕ ಹಾಕಿದರೂ, ಹತ್ತು ಸಾವಿರ ದಾಟ್ಲಿಲ. ನನ್ನದು ಕಡಿಮೆ ಶ್ರಮದ್ಲಲಿ ಉತ್ತಮ ಇಳುವರಿ ತೆಗೆಯುವ ಪ್ರಯತ್ನ ಎಂದು ಮ್ಲಲಿಕಾರ್ಜುನ ಖುಷಿಯಿಂದ ವಿವರಿಸುತ್ತಾರೆ. ಅಂದ ಹಾಗೆ, ಎರಡೂ ಪದ್ಧತಿಯ್ಲಲಿ ಇಳುವರಿ ಒಂದೇ. ಆದರೆ ಕಾಯಿಯ ಗುಣಮಟ್ಟ (ಸಿಪ್ಪೆಯ ಗಾತ್ರ) ಸಾವಯವದ್ಲಲಿ ತುಸು ದಪ್ಪ, ರುಚಿಯ್ಲಲೂ ಸೊಗಸು’ – ಅನುಭವ ಎನ್ನುವುದು ಮ್ಲಲಿಕಾರ್ಜುನ ಅವರಿಗೆ ವಿಜ್ಞಾನ, ಲೆಕ್ಕಾಚಾರ.. ಎಲವನ್ನೂ ಕಲಿಸಿದೆ.

ಸ್ವಾವಲಂಬಿಯಾದರೆ ಖರ್ಚು ಕಡಿಮೆ :

ಸಾವಯವ ಕೃಷಿ ಪದ್ಧತಿ ಎಂದರೆ ‘ದುಬಾರಿ’ ಎನ್ನುವ ಮಾತಿದೆ. ಆ ಮಾತನ್ನು ಮ್ಲಲಿಕಾರ್ಜುನ ಸುಳ್ಳು ಮಾಡ್ದಿದಾರೆ. ಖರ್ಚು ಕಡಿಮೆಯಾಗಲು ಮನೆಗಳ್ಲಲಿ ಸಂಪನ್ಮೂಲಗಳಿರಬೇಕು ಎನ್ನುವ ಅವರು, ಸಸಿ, ಬೇವಿನ ಹಿಂಡಿ ಬಿಟ್ಟರೆ, ಬೇರೇನೂ ಹೊರಗಿನಿಂದ ಖರೀದಿಸ್ಲಿಲ. ಗಿಡ ನಾಟಿ ಹಾಗೂ ಕಳೆ ತೆಗೆಯಲು ಮಾತ್ರ ಆಳುಗಳನ್ನು ಬಳಸ್ದಿದಾರೆ. ವಿಜ್ಞಾನಿಗಳ ಲೆಕ್ಕಾಚಾರದ ಪ್ರಕಾರ ಒಂದು ಎಕರೆ ಕ್ಯಾಪ್ಸಿಕಂ ಬೆಳೆಯಲು ಕನಿಷ್ಠ ೩೫ ಸಾವಿರ ರೂಪಾಯಿ ಬೇಕು. ಹಸಿರು ಮನೆಯ್ಲಲಿ (ರಫ್ತು ಗುಣಮಟ್ಟದ)ಬಣ್ಣಬಣ್ಣದ ಕ್ಯಾಪ್ಸಿಕಂ ಬೆಳೆಯಲು 3-4 ಲಕ್ಷ ರೂಪಾಯಿ ಅಗತ್ಯ. ಮ್ಲಲಿಕಾರ್ಜುನ್ ೧೩ ಸಾವಿರ ಬಂಡವಾಳದ್ಲಲಿ ಮುಕ್ಕಾಲು ಎಕರೆಯ್ಲಲಿ ಕ್ಯಾಪ್ಸಿಕಂ ಬೆಳೆದ್ದಿದಾರೆ !

ಈಗ ಕ್ಯಾಪ್ಸಿಕಂ ಕೊಯ್ಲು ಶುರುವಾಗಿದೆ. ಎರಡು ಬಾರಿ ಕೊಯ್ಲು ಮಾಡ್ದಿದಾರೆ. ಮೊದಲು ೩೫೦ ಕೆ.ಜಿ, ನಂತರ ೫೦೦ ಕೆ.ಜಿ ಕಾಯಿಗಳು ಸಿಕ್ಕಿವೆ. ಯಲಹಂಕ ರೈತ ಸಂತೆಯ ವ್ಯಾಪಾರಸ್ಥರೊಬ್ಬರು ಮನೆ ಬಾಗಿಲಿಗೆ ಬಂದು ಕೆ.ಜಿ.ಗೆ ೨೫ ರೂಪಾಯಿ ಕೊಟ್ಟು ಖರೀದಿಸ್ದಿದಾರೆ. ಸಾಗಾಟ ವೆಚ್ಚ ಇಲ. ಮಾರ್ಕೆಟ್ ಸುಲಭವಾಗಿದೆ. ಎಲದಕ್ಕಿಂತ ಆರೋಗ್ಯಪೂರ್ಣ ಗಿಡಗಳು, ಕಾಯಿಗಳನ್ನು ಕಂಡು ಮ್ಲಲಿಕಾರ್ಜುನ್ ಸಮಾಧಾನಗೊಂಡ್ದಿದಾರೆ. ಮ್ಲಲಿಕಾರ್ಜುನ ಸಂಪರ್ಕ ಸಂಖ್ಯೆ: ೯೩೪೨೪೬೦೨೧೬.

ಪುಟ್ಟ ಕಾಡು, ಅದರೊಳಗೊಂದು ಜಲಪಾತ…

ಎತ್ತಿಪೋತೆ ಅರಣ್ಯದ ವಿಹಂಗಮ ನೋಟ

ಚಿತ್ರ ನೋಡಿದ ಕೂಡಲೇ ಯಾವುದೋ ಮಲೆನಾಡಿನ ಭಾಗವಿರಬೇಕು ಎನ್ನಿಸಿರಬೇಕಲ್ವಾ ? ಹಾಗೆಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಇದು ವರ್ಷೊಂಭತ್ತುಕಾಲ ಧಗ ಧಗ ಉರಿಯುವ ಬಿಸಿಲ ನಾಡು ಗುಲ್ಬರ್ಗ ಜಿಲ್ಲೆಯ ಸಮೀಪವಿರುವ ಒಂದು ಕಾಡಿನ ದೃಶ್ಯ. ಇತ್ತೀಚೆಗೆ ಗೆಳೆಯರಾದ ಶಿವಾನಂದ ಕಳವೆ, ಆನಂದತೀರ್ಥ ಪ್ಯಾಟಿ ಈ ಕಾಡಿಗೆ ಭೇಟಿ ನೀಡಿದ್ದಾರೆ.  ಕನ್ನಡ ನಾಡಿನ ಗಡಿಯಲ್ಲಿರುವ ಈ ಕಾಡಿನ ಬಗ್ಗೆ ಒಂದೆರಡು ತುಣುಕು ಹಾಗೂ ನಾಲ್ಕೈದು ಫೋಟೋ ಕಳುಹಿಸಿದ್ದಾನೆ ಪ್ಯಾಟಿ. ಅವನ ಬರಹದೊಂದಿಗೆ ಚಿತ್ರಗಳನ್ನು ಪೋಸ್ಟ್ ಮಾಡಿದ್ದೇನೆ. ಅದಕ್ಕೆ ಗೆಳೆಯ ವಿನೋದ್ ಪ್ರತಿಕ್ರಿಯಿಸಿದ್ದಾನೆ. ಅದನ್ನು ಪೊಸ್ಟಿಸಿದ್ದೇನೆ..

‘ಗುಲ್ಬರ್ಗ ಜಿಲ್ಲೆ ಎಂದರೆ ಬಿಸಿಲಿನ ನಾಡು. ಇಲ್ಲಿ ಕೂಡ ಹಸಿರಿನ ತಾಣವೊಂದು ಇದೆ ಗೊತ್ತೇ?! ಹೌದು… ಇದರ ಹೆಸರು ಕೊಂಚಾವರಂ ಕಾಡು. ಮಿತ್ರ ಶಿವಾನಂದ ಕಳವೆ ಜತೆ ಎರಡು ದಿನ ಸುತ್ತಾಡಿ ಬಂದ ಬಳಿಕ, ಕೆಲ ಚಿತ್ರ ಕಳಿಸುತ್ತಿದ್ದೇನೆ. ಅಂದ ಹಾಗೆ, ಕಾಡಿನಲ್ಲಿ ಜಲಪಾತ ಕೂಡ ಇದೆ!! ‘ಎತ್ತಿಪೋತೆ’ ಅಂತ ಹೆಸರು. ಇನ್ನು ಈ ಚಿತ್ರಗಳು ನಿಮಗಾಗಿ…

-ಆನಂದತೀರ್ಥ ಪ್ಯಾಟಿ

ಈ ಹಿಂದೆ  ಇದೇ ಕಾಡನ್ನು ಸುತ್ತಾಡಿ ತೋಳಗಳ ಕುರಿತು ಅಧ್ಯಯನ ನಡೆಸಿರುವ ಕಾಡು ಪ್ರೀತಿಯ ಪರ್ತಕರ್ತ ಗೆಳೆಯ ಬಿ.ವಿನೋದ್ ಕುಮಾರ್  (ಸುವರ್ಣ ನ್ಯೂಸ್ )  ಬಿಸಿಲ ನಾಡಿನ ಕಾಡು ಕುರಿತು ಖುಷಿಯಿಂದ ಪ್ರತಿಕ್ರಿಯಿಸಿದ್ದಾರ. ಆ ಪ್ರತಿಕ್ರಿಯೆ ಹೀಗಿದೆ ;

……This is like a oasis in your district. I had an opportunity to roam in this forest searching for indian grey wolves. This is one of the finest forest patch in this region. if i am not wrong, this joins bidar and gulbarga with some parts of AP. Forest department is declaring this as a wildlife sanctuary.
This amazing forest is facing a major threat from local villagers as all of they directly depend on this forest for firewood.
I request you to focus on this forest  and write some stories, which will definately help to restore this beautiful bio diversity.

ಹೀಗೆಲ್ಲ ಹೇಳಿದ ಮೇಲೆ ಬಿಸಲೂರಿನ  ಈ ಕಾಡು ನೋಡಬೇಕೆನಿಸಿದೆ. ಈ ಚಳಿಗಾಲದಲ್ಲೇಕೆ ಒಮ್ಮೆ ಭೇಟಿ ಕೊಡಬಾರದು ? ಎಂದು ಯೋಚಿಸುತ್ತಿದ್ದೇನೆ. ಅದಕ್ಕೆ ಮುಂದೆ ಈ ಚಿತ್ರಗಳನ್ನೊಮ್ಮೆ ನೋಡಿ.. ಎಂಜಾಯ್್ ಮಾಡಿ.

ಗಾಣಧಾಳು..

ಕಾಡೊಳಗಿನ ಕೆರೆ/ನದಿಯ ವಿಹಂಗಮ ನೋಟ
ಕಾಡಿನೊಳಗೊಂದು ಜಲಪಾತ.. ಊಹಿಸಲೂ ಅಸಾಧ್ಯ
ಗಾಲ್ಫ್ ಅಂಗಳದಂತೆ ಕಾಡುವ ಎತ್ತಿಪೋತೆ ಕಾಡಿನ ಅಂಗಳ
ದಟ್ಟ ಕಾಡಿನೊಳಗಿನ ರಸ್ತೆ

ಗುಬ್ಬಚ್ಚಿಗಳೇ, ಬನ್ನಿ ಗೂಡಿಗೆ !

ಗೂಡಿಗಾಗಿ ಹಂಬಲಿಸುತ್ತಿದೆ ಗುಬ್ಬಚ್ಚಿ

ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವ ಯಾರನ್ನು ?ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು? ಮೇಲೆ ಕೆಳಗೆ ಕೊಂಕಿಸಿ ಕೊರಳನು ಹುಡುಕುವೆ ಏನನ್ನು?
– ದಶಕಗಳ ಹಿಂದೆ, ಕೋಣೆಯ ಬಾಗಿಲ್ಲಲಿ ಕತ್ತು ಟಂಕಿಸುತ್ತ ಕುಳಿತ್ದಿದ ಗುಬ್ಬಚ್ಚಿಗಳತ್ತ ಬೊಟ್ಟು ಮಾಡುತ್ತಾ ಮೇಷ್ಟ್ರು ಈ ಪದ್ಯ ಹೇಳುತ್ತ್ದಿದರು. ಈಗ ಆ ಪದ್ಯಗಳೂ ಇಲ. ಶಾಲೆ ಬಳಿಗೆ ಗುಬ್ಬಚ್ಚಿಗಳೂ ಸುಳಿಯುವುದ್ಲಿಲ. ಆ ಪ್ರಮಾಣದ್ಲಲಿ ಗುಬ್ಬಚ್ಚಿಗಳು ನಮ್ಮನಗರದಿಂದ ನಾಪತ್ತೆಯಾಗಿವೆ. ಉದ್ಯಾನನಗರಿ ಎನಿಸಿಕೊಂಡ ಬೆಂಗಳೂರಿನ್ಲಲಂತೂ ಗುಬ್ಬಚ್ಚಿಗಳನ್ನು ’ದುರ್ಬಿನ್’ ಹಾಕಿ ಹುಡುಕಬೇಕು.
ಬೆಂಗಳೂರಿನಾದ್ಯಂತ ಮೇಲ್ಸೇತುವೆ, ಮೆಟ್ರೊ, ಮಾನೋ, ವಾಣಿಜ್ಯ ಸಂಕೀರ್ಣ, ಗಗನ ಚುಂಬಿ ಕಟ್ಟಡ.. ಹೀಗೆ ಅಭಿವೃದ್ಧಿಯ ಸಾಲು ಸಾಲು. ಪರಿಣಾಮ ಗುಬ್ಬಚ್ಚಿಗಳ ಆವಾಸಸ್ಥಾನವಾಗ್ದಿದ ಗಿಡ-ಗಂಟೆಗಳು ನಾಪತ್ತೆ. ಪರಿಣಾಮ ಗೂಡು ಕಟ್ಟಲು ಗುಬ್ಬಿಗಳಿ ಸ್ಥಳವ್ಲಿಲ. ಇದರ ಜೊತೆಗೆ ಸೀಸ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾತಾವರಣದ್ಲಲಿ ಮೀಥೈಲ್ ನೈಟ್ರೇಟ್ ಸೇರ್ಪಡೆ. ಗುಬ್ಬಚ್ಚಿಗಳ ಆಹಾರವಾದ ಕ್ರಿಮಿ ಕೀಟಗಳೂ ಕಲ್ಮಶಗೊಂಡವು. ಬೆಚ್ಚನೆಯ ಗೂಡಿಗೆ ನೆರವಾಗುತ್ತ್ದಿದ ಸಾಂಪ್ರದಾಯಿಕ ಮನೆಗಳೂ ಇಲವಾದವು. ಆಹಾರ, ಆವಾಸ ಎರಡೂ ಕ್ಷೀಣವಾದಾಗ ಗುಬ್ಬಚ್ಚಿ ಸಂತತಿಯೂ ನಶಿಸಿ ಹೋಯಿತು.

ಹೀಗೆ ಇನಿಸು-ಮುನಿಸಿನಿಂದ ಬೆಂಗಳೂರು ಬಿಟ್ಟು ಹೋಗಿರುವ ಗುಬ್ಬಚ್ಚಿಗಳನ್ನು ಮರಳಿ ಕರೆತರುವ ಪ್ರಯತ್ನಕ್ಕೆ ನಗರದ ಬಯೋಡೈವರ್ಸಿಟಿ ಕನ್ಸರ್‌ವೇಷನ್ ಇಂಡಿಯಾ(ಬಿಸಿಐಎಲ್) ಸಂಸ್ಥೆ ‘ಗುಬ್ಬಿ ಗೂಡು’ ಎಂಬ ನೂತನ ಕಾರ್ಯಕ್ರಮ ರೂಪಿಸಿದೆ. ಮಾರ್ಚ್ ೨೦ರ ‘ವಿಶ್ವ ಮನೆಗುಬ್ಬಿ ದಿನ’ದಂದು ‘ಮತ್ತೆ ಗೂಡಿಗೆ ಬಾ ಗುಬ್ಬಿ’ ಎಂಬ ಘೋಷ ವಾಖ್ಯದೊಂದಿಗೆ ಈ ಕಾರ್ಯಕ್ರಮ ಆರಂಭವಾಗಿದೆ.

ಗುಬ್ಬಿ ಗೂಡು ಪರಿಕಲ್ಪನೆ:
ಪರಿಸರಸ್ನೇಹಿ ಗೃಹ ನಿರ್ಮಾಣದ್ಲಲಿ ಮಂಚೂಣಿಯ್ಲಲಿರುವ ಬಿಸಿಐಎಲ್ – ಝೆಡ್ ಪ್ರತಿಷ್ಠಾನ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಕನಸಿನ ಕೂಸು ‘ಗುಬ್ಬಿ ಗೂಡು’ ಯೋಜನೆ. ಗುಬ್ಬಿಗಳನ್ನು ನಮ್ಮ ಮನೆಯ ಅಂಗಳಕ್ಕೆ ಕರೆತಂದು ಅವುಗಳಿಗೆ ಬೆಚ್ಚಗಿನ ವಾಸ, ಇಚ್ಛೆ ಪಡುವ ಆಹಾರ ನೀಡಿ, ಅವುಗಳ ಸಂತತಿ ವೃದ್ಧಿಸುವುದು ಯೋಜನೆ ಉದೇಶ. ಅದಕ್ಕಾಗಿ ಬಿದಿರಿನಿಂದ ವಿಶೇಷವಾದ ‘ಗುಬ್ಬಿ ಗೂಡನ್ನು ಸಂಸ್ಥೆ ಸಿದ್ಧಪಡಿಸಿದೆ. ಬೆಂಗಳೂರಿನ ಗುಬ್ಬಚ್ಚಿ ಪ್ರೀತಿಯ ಮನಸ್ಸುಗಳಿಗೆ ಈ ಗೂಡುಗಳನ್ನು ಉಚಿತವಾಗಿ ವಿತರಿಸುತ್ತಿದೆ. ಗೂಡಿನ ಜೊತೆಗೆ ಗುಬ್ಬಚ್ಚಿಗಳಿಗೆ ಆಹಾರ, ಪೊದೆ ನಿರ್ಮಾಣಕ್ಕೆ ಬೇಕಾದ ಹೂವು, ಹ್ಲುಲು, ಬಳ್ಳಿ.. ಇತ್ಯಾದಿಗಳನ್ನು ನೀಡುತ್ತಿದೆ. ಗುಬ್ಬಿಗಳ ಸಂತಾನ ವೃದ್ಧಿಗೆ ಯೋಗ್ಯ ವಾತಾವರಣ ಕಲ್ಪಿಸುವ ಮಾಹಿತಿಯನ್ನೂ ನೀಡುತ್ತಿದೆ. ’ಸುಮಾರು ಹತ್ತು ಸಾವಿರ ಗೂಡುಗಳನ್ನು ಸಂಸ್ಥೆ ಸಿದ್ಧಪಡಿಸಿದೆ. ಯೋಜನೆ ಕ್ಲಿಕ್ ಆದರೆ ೧೦ ಲಕ್ಷ ಗೂಡುಗಳನ್ನು ವಿತರಿಸುವ ಗುರಿಯಿದೆ’ ಎನ್ನುತ್ತಾರೆ ಬಿಐಸಿಎಲ್‌ನ-ಝೆಡ್ ಪ್ರತಿಷ್ಠಾನದ ಸಿಇಒ ಕ್ರಿಷ್ ಮುರುಳಿ ಈಶ್ವರ್.

ಗುಬ್ಬಚ್ಚಿ ಗೂಡು

ಬೊಂಬಾಟ್ ಪ್ರತಿಕ್ರಿಯೆ :
ಕಾರ್ಯಕ್ರಮ ಉದ್ಘಾಟನೆಗೊಂಡು ನಾಲ್ಕು ದಿನಗಳು ಕಳೆದಿವೆ. ಈಗಾಗಲೇ ಮೂರೂವರೆ ಸಾವಿರ ಜನರು ಗುಬ್ಬಿ ಗೂಡುಗಳನ್ನು ಪಡೆದ್ದಿದಾರೆ. ೫೦೦ ಶಾಲೆಗಳು ಗೂಡುಗಳನ್ನು ಪಡೆದು, ತಮ್ಮ ಶಾಲಾ ಆವರಣದ್ಲಲಿ ತೂಗು ಹಾಕಿವೆ. ‘ಗುಬ್ಬಿ ಸಂತತಿ ಹೆಚ್ಚಿಸುವ ನಮ್ಮ ಪ್ರಯತ್ನಕ್ಕೆ ಅಭೂತಪೂರ್ವ ಆರಂಭ ದೊರೆತಿದೆ. ಇದೇ ವೇಗ ನಿರಂತರವಾಗ್ದಿದರೆ ಕೆಲವೇ ವರ್ಷಗಳ್ಲಲಿ ಗುಬ್ಬಿ ಸಂತತಿ ವಿಸ್ತರಣೆಯಾಗುವುದರ‍್ಲಲಿ ಸಂದೇಹವೇ ಇಲ’ ಎನ್ನುತ್ತಾರೆ ಗೂಡು ವಿತರಣೆಯ ಜವಾಬ್ದಾರಿ ಹೊತ್ತಿರುವ ಪ್ರತಿಷ್ಠಾನದ ಹರೀಶ್.

ಎಷ್ಟು ದಿನಗಳು ಬೇಕಾಗಬಹುದು ?
ಗೂಡು ಕಟ್ಟಿದ ಕೂಡಲೇ ಗುಬ್ಬಚ್ಚಿಗಳು ಬರುವುದ್ಲಿಲ. ಅದಕ್ಕೆ ಪಕ್ಷಿ ತಜ್ಞ ಹರೀಶ್ ಭಟ್ ತಮ್ಮ ಅನುಭವವನ್ನು ಹೀಗೆ ಹಂಚಿಕೊಳ್ಳುತ್ತಾರೆ. ‘ ‘೨೦೦೩ರಿಂದ ನನ್ನ ಮನೆಗೆ ಗುಬ್ಬಚ್ಚಿ ಕರೆತರಲು ಪ್ರಯತ್ನಿಸಿದೆ. ಎರಡು ವರ್ಷಗಳ ನಂತರ ಗಂಡು-ಹೆಣ್ಣು ಗುಬ್ಬಚ್ಚಿಗಳು ಮನೆಯ ಕಂಪೌಂಡ್ ಬಂದವು. ಕಾಳು, ನೀರು ಕೊಡುತ್ತಿದೆ. ಆರೇಳು ವರ್ಷಗಳ ನಂತರ ೨೬ ಗುಬ್ಬಚ್ಚಿಗಳಾಗಿವೆ. ಈಗ ನಮ್ಮ ಕೈಯಿಂದಲೇ ಆಹಾರ ಪಡೆಯುವಷ್ಟು ಗೆಳೆಯಾರಿವೆ. ಗುಬ್ಬಚ್ಚಿಗಳು ಕೇಳುವುದು ವಾಸಕ್ಕೆ ಸುರಕ್ಷಿತವಾದ ತಾಣ, ನಿಶ್ಚಿತವಾದ ಆಹಾರ. ಇವ್ದಿದರೆ ಖಂಡಿತ ಗುಬ್ಬಚ್ಚಿಗಳು ಬರುತ್ತವೆ’ ಎನ್ನುವುದು ಅವರ ಅಭಿಪ್ರಾಯ.

ಒಟ್ಟಾರೆ ಉದ್ಯಾನ ನಗರಿಗೆ ಗುಬ್ಬಚ್ಚಿಗಳನ್ನು ಕರೆತರುವ ಸಂಕಲ್ಪಕ್ಕೆ ನಾಂದಿ ಹಾಡಲಾಗಿದೆ. ಕಾಣೆಯಾಗಿರುವ ಗುಬ್ಬಚ್ಚಿಗಳನ್ನು ಮತ್ತೆ ಗೂಡಿಗೆ ಕರೆತರುವ ಸಂಸ್ಥೆಯ ಕೆಲಸಕ್ಕೆ ಎಲರೂ ಕೈ ಜೋಡಿಸಬೇಕಿದೆ. ಗುಬ್ಬಿ ಗೂಡುಗಳಿಗಾಗಿ ಸಹಾಯವಾಣಿ ೮೪೩೧೮೪೮೨೨೪(Sಏಉ ೧ಖಿ ಎಖಿಆಆಐ)ಗೆ ಕರೆ ಮಾಡಬಹುದು.

ಗೂಡು ಕಟ್ಟುವವರೇ ಗಮನಿಸಿ:
ಮನೆ ಅಂಗಳದ್ಲಲಿ ಗುಚ್ಛವಾಗಿ ಬೆಳೆಯುವ ನಾಲ್ಕಾರು ಹೂವಿನ ಗಿಡ (ಉದಾಹರಣೆಗೆ ದಾಸವಾಳ) ನೆಡಿ. ಕಾರ್ಬೋಹೈಡ್ರೇಟ್ ಹೆಚ್ಚಿರುವ ಗಿಡಗಳಿಗೆ ಇರುವೆ ಮುತ್ತುವುದು ಸಾಮಾನ್ಯ. ಹಾಗಾಗಿ, ಕರಿಬೇವು, ನಿಂಬೆಹಣ್ಣು, ಚೆರ್ರಿ ಗಿಡ (ಲಾಭ ಎರಡು!) ಅಥವಾ ಗಿಡ ಬೇಲಿಗೆ ತೂಗು ಹಾಕಿ. ಗೂಡಿಗೆ ಒಂದು ಹಿಡಿ ಕಾಳು ಹಾಕಿ ಇಡಿ. ಆ ಪದಾರ್ಥಗಳಿಗೆ ಇರುವೆ ಮುತ್ತದಂತೆ ಜಾಗ್ರತೆವಹಿಸಿ. ಗಿಡದ ಬುಡದ್ಲಲಿ ಅಥವಾ ಮನೆ ಅಂಗಳದ್ಲಲಿ ಬಾನಿ, ಹೊಂಡ ಅಥವಾ ಮನೆಯ ತಾರಸಿಯ ಮೇಲೆ ಅಗಲವಾದ ಬಾಯಿಯಿರುವ ಮಣ್ಣಿನ ಕುಡಿಕೆಗಳ್ಲಲಿ ನೀರು ತುಂಬಿಸಿಡಿ. ಬೇಸಿಗೆಯ್ಲಲಿ ಅವುಗಳಿಗೆ ಜೀವ ಬಂದಂತಾಗುತ್ತದೆ. ಮನೆಯ ಸುತ್ತಲೂ ಬಿದರಿನ ಬುಟ್ಟಿ, ಮಣ್ಣಿನ ಪಕ್ಷಿ ಮನೆಗಳನ್ನು ಅಥವಾ ತಗಡಿನ ಡಬ್ಬಿಗಳನ್ನು ಕಟ್ಟಿ, ತುಸು ಭತ್ತದ ಹ್ಲುಲು ಹಾಸಿ. ಈ ಎಲ ಕೆಲಸಕ್ಕೆ ಮಕ್ಕಳನ್ನು ಪ್ರೋತ್ಸಾಹಿಸಿ !
ತರಕಾರಿ, ಹೂವು, ಹಣ್ಣಿನ ಗಿಡಗಳಿರುವ ಕೈತೋಟದ ಸಮೀಪದ್ಲಲಿ ಗೂಡು ಕಟ್ಟಿ. ಇದರಿಂದ ಕೈತೋಟಕ್ಕೆ ದಾಳಿಯಿಡುವ ಕೀಟ, ಹುಳುಗಳನ್ನು ಗುಬ್ಬಚ್ಚಿ ಭಕ್ಷಿಸುತ್ತದೆ. ಇದರಿಂದ ಗುಬ್ಬಚ್ಚಿಗೆ ಆಹಾರ ಪೂರೈಕೆಯ ಶ್ರಮ ತುಸು ತಪ್ಪೀತು. ಇನ್ನೊಂದೆಡೆ ಗುಬ್ಬಚ್ಚಿ ಪೋಷಣೆಯಿಂದ ನಮ್ಮ ಕೈತೋಟ ಕೀಟ ಮುಕ್ತವಾಗಿರುತ್ತದೆ. ಈ ಕ್ರಿಮಿಕೀಟಗಳ ನಿಯಂತ್ರಣಕ್ಕೆ ಔಷಧ ಸಿಂಪಡಿಸುವ ಅಗತ್ಯ ಬೀಳುವುದ್ಲಿಲ. ಪರೋಕ್ಷವಾಗಿ ಸಾವಯವ ಆಹಾರ ಸೇವಿಸುವ ಭಾಗ್ಯ ನಮ್ಮದಾಗುತ್ತದೆ.

(ಮಾರ್ಚ್ 20ರ ‘ವಿಶ್ವ ಮನೆಗುಬ್ಬಚ್ಚಿ’ ದಿನದಂದು ಬೆಂಗಳೂರು ಮೆಟ್ರೋದಲ್ಲಿ ಪ್ರಕಟವಾದ ಲೇಖನ)

ಹಳ್ಳಿ ಹಳ್ಳಿಗಳಲ್ಲಿ ಯುಗಾದಿಯ ರಂಗು

ಬಾನಲ್ಲಿ ನಿನ್ನಿಂದ ಸೂರ್ಯೋದಯ...!

ಹೂಗೊಂಚಲಿಗೆ ಬಣ್ಣ, ಪುಟ್ಟ ಹಕ್ಕಿಗೆ ಹಾಡು
ಬೆಟ್ಟಕ್ಕೆ ಎದೆಯೆತ್ತಿ ನ್ಲಿಲುವ ಧೈರ್ಯ
ಹೊಳೆಯ ನೀರಿಗೆ ಉಗುರ ಬಿಸಿ
ಗಾಳಿ ನೆರಳಿಗೆ ತಂಪು ತಂದ ಯುಗಾದಿ
ಕುಸಿದು ಕೊರಗುವ ಬಾಳಿಗೇನ ತಂದೆ…
– ಕವಿ ಡಾ. ಸಿದ್ಧಲಿಂಗಯ್ಯ ಅವರ ಈ ಕವನದ ಸಾಲುಗಳು ವಸಂತ ಋತುವಿನೊಂದಿಗೆ ಆಗಮಿಸುವ ಯುಗಾದಿ ಹಬ್ಬದ ಸಡಗರವನ್ನು ಮೆಲುಕು ಹಾಕಿಸುತ್ತದೆ.

ನಿಜ, ಯುಗಾದಿ ಎಂದರೆ ಹೊಸತನ. ಮಕ್ಕಳಿಗೆ ಹೊಸ ಬಟ್ಟೆಯ ಸಂಭ್ರಮ. ಕೃಷಿಕರಿಗೆ ಮಳೆ-ಬೆಳೆ-ನಕ್ಷತ್ರಗಳ ವರ್ಷದ ಲೆಕ್ಕಾಚಾರ, ಉದಿಮೆದಾರರಿಗೆ ವರ್ಷದ ಸೋಲು-ಗೆಲುವನ್ನು ನಿರ್ಧರಿಸುವ ಸಮಯ. ಹೀಗೆ ಯುಗಾದಿ ಹಬ್ಬ ಹಲವು ‘ಹೊಸತು’ಗಳ ಸಂಗಮ.

ಯುಗಾದಿ – ಚೈತ್ರ ಮಾಸದ ಮೊದಲ ದಿನ. ಹೊಸ ಸಂವತ್ಸರದ ಮೊದಲ ಹಬ್ಬ. ದೇವಾನು-ದೇವತೆಗಳ ಸೋಂಕ್ಲಿಲದ ನಿಸರ್ಗದ ಹಬ್ಬ. ಹೊಸ ಮಳೆಗಾಲಕ್ಕೆ ಶ್ರೀಕಾರ. ಒಳ್ಳೆಯದು – ಕೆಟ್ಟದ್ದನ್ನು ಸಮನಾಗಿ ಸ್ವೀಕರಿಸುವ ಆಶಯದಿಂದ ಬೇವು-ಬ್ಲೆಲ ಮ್ಲೆಲುವ ಹಬ್ಬ. ಹೊಸ ಬಟ್ಟೆ ತೊಟ್ಟು ಹೊಟ್ಟೆ ತುಂಬಾ ಒಬ್ಬಟ್ಟು ತಿಂದು ಎಳೆ ಚಿಗುರಿನ ಹೊಂಗೆ, ಬೇವು, ಹಿಪ್ಪೆ ಮರದ ನೆರಳ್ಲಲಿ ಮೈ ಹರವಿಕೊಂಡು ವಿರಮಿಸಿಕೊಳ್ಳುವ ದಿನ.

ಸೂರ್ಯೋದಯದ ಮತ್ತೊಂದು ಚಿತ್ರ

ಯುಗಾದಿ ಸಂಪೂರ್ಣ ವಿರಾಮದ ಕೊನೆಯ ಮತ್ತು ದುಡಿಮೆಯ ಆರಂಭ- ಇವೆರಡರ ನಡುವೆ ಬರುವಂತಹ ಹಬ್ಬ. ಹಾಗಾಗಿಯೇ ಈ ಹಬ್ಬದ್ಲಲಿ ಸಿಹಿ-ಕಹಿಯ ಮಿಶ್ರಣವಿರುತ್ತದೆ. ಕಾಮನ ಹಬ್ಬ ನಿಸರ್ಗದ್ಲಲಿ ವರ್ಷದ ಕೊನೆಯ ಹಬ್ಬವಾದರೆ, ಯುಗಾದಿ ವರ್ಷದ ಮೊದಲ ಹಬ್ಬ. ಕಾಮನ ಹಬ್ಬವನ್ನು ಹಳ್ಳಿಗರು ಕದಿರೆ ಹುಣ್ಣಿಮೆ ಎಂತಲೂ ಕರೆಯುತ್ತಾರೆ. ಈ ಹಬ್ಬದ್ಲಲಿ ಹಳೆಯ ವಸ್ತುಗಳನ್ನು ಸುಟ್ಟು ಹೊಸ ವಸಂತದ ಆಗಮನಕ್ಕೆ ಸಿದ್ಧವಾಗುವ ಪರ್ವ ಕಾಲ. ಇದಾದ ಸ್ವಲ್ಪ ದಿನಕ್ಕೆ ಬರುವ ಯುಗಾದಿ ಯುಗದ ಆದಿ. ಶಾಲಿವಾಹನ ಶಕೆಯ ಹೊಸ ಸಂವತ್ಸರದ ಆರಂಭ.

ಹಳ್ಳಿಗಳ್ಲಲಿ ಯುಗಾದಿ…
ಯುಗಾದಿಯ ನೈಜತೆ ಉಳಿದಿರುವುದೇ ಹಳ್ಳಿಗಳ್ಲಲಿ, ರೈತರ ನೆಲೆಯ್ಲಲಿ. ನಗರವಾಸಿಗಳಿಗೆ ಯುಗಾದಿ ಕೇವಲ ಒಂದು ಹಬ್ಬ ಮಾತ್ರ. ಅವರು ಅಬ್ಬಬ್ಬಾ ಎಂದರೆ ಎರಡು ದಿವಸ ಹಬ್ಬ ಮಾಡಬಹುದು. ಆದರೆ ಕೃಷಿಕರ ಹಬ್ಬದ ಸಂಭ್ರಮವಿದೆಯ್ಲಲಾ, ಅದು ತಿಂಗಳ ಮುಂಚೆಯೇ ಆರಂಭವಾಗುತ್ತದೆ. ಈ ದಿನಗಳ್ಲಲಿ ಕೃಷಿಕರಿಗೆ ಯಾವುದೇ ಕೆಲಸ ಹೇಳಿದರೂ ‘ಹಬ್ಬಾದ್ಮೇಲೆ ನೋಡನ್ ಬಿಡ್ಲೆ’ ಎನ್ನುತ್ತಾರೆ. ಸಾಲ ಕೇಳಲು ಬಂದವರಿಗೂ ಅಥವಾ ಸಾಲ ಕೇಳುವವರು, ಹೊಸ ಕೆಲಸ ಆರಂಭಿಸುವವರು ಎಲರೂ ‘ಯುಗಾದಿ’ಯ ನೆಪ ಹೇಳುತ್ತಾರೆ.
ಯುಗಾದಿ ಹಬ್ಬವನ್ನು ಸಂಭ್ರಮಿಸಲು ಊರಿಗೆ ಊರೇ ತಯಾರಾಗುತ್ತಿರುತ್ತದೆ. ಮಹಿಳೆಯರು ಎರಡು ವಾರ ಮುಂಚೆಯೇ ಮನೆ ಸ್ವಚ್ಛಗೊಳಿಸಲು ಶುರುಮಾಡುತ್ತಾರೆ. ವರ್ಷಪೂರ್ತಿ ಗುಡಿಸದ ಮೂಲೆಗಳು, ವಾಡೆ, ಕೊಮ್ಮೆಗಳು, ಕೊಟ್ಟಿಗೆ-ಪಡಸಾಲೆಗಳು ಶುದ್ಧವಾಗುತ್ತವೆ. ಅಟ್ಟ, ಗೋಡೆ, ಅಂಗಳ, ಮಾಡು(ತಾರಸಿ)ಗಳ ದೂಳೊಡೆಯುತ್ತಾರೆ. ಮನೆ ಮುಂಭಾಗದ ಗೋಡೆಗಳಿಗೆ ಕೆಮ್ಮಣ್ಣು-ಸಗಣಿಯಿಂದ ಸಾರಿಸುತ್ತಾರೆ(ಈಗ ಎಲ ಪೇಂಟ್‌ಗಳ್ದದೇ ರಾಜ್ಯ). ಇಡೀ ಮನೆ ಸುಣ್ಣ-ಬಣ್ಣ ಕಾಣುತ್ತದೆ. ಕೆಮ್ಮಣ್ಣಿನ ಬಣ್ಣದ್ಲಲಿ ‘ಗೋಡೆಯ ಮೇಲೆ ಹಸೆ ಚಿತ್ತಾರಗಳನ್ನು ಮೂಡಿಸುವುದುಒಂದು ಸಂಭ್ರಮದ ಕೆಲಸ.

ಗಂಡಸರು ಹೊಸ ಬಟ್ಟೆ-ಬರೆ ಖರೀದಿಗೆ ಪಟ್ಟಣಕ್ಕೆ ಓಡಾಡುತ್ತಾರೆ. ಹಬ್ಬದ ಖರೀದಿಗಾಗಿ ಅಡಕೆ ಮಂಡಿ, ಗೊಬ್ಬರಿ ಮಂಡಿ, ಮಾಲೀಕರ ಬಳಿ ‘ಹಬ್ಬದ ಸಾಲವೆಂದೇ’ ಮುಂಗಡ ಹಣ ಪಡೆಯುತ್ತಾರೆ. ಬಟ್ಟೆ ಖರೀದಿಯೊಂದಿಗೆ ಬೇಸಾಯಕ್ಕೆ ಬೇಕಾದ ಹೊಸ ನೇಗಿಲು, ನೊಗ, ಮೇಣಿ, ದೊಡ್ಡಮಿಣಿ, ಹಗ್ಗ, ಚಿಲಕ್ಕಣ್ಣಿ, ಮಕಾಡ, ಕೊಳದಂಡೆ, ಕುಂಟೆ, ಕುಳ, ಅಲುಗು, ಕೂರಿಗೆ ಮುಂತಾದವುಗಳನ್ನು ಹೊಂಚುವ ಧಾವಂತದಲ್ಲಿರುತ್ತಾರೆ. ಯುಗಾದಿ ಹಿಂದೆ ಮುಂದೆ ದನಗಳ ಜಾತ್ರೆಗಳೂ ನಡೆಯುವುದರಿಂದ ರಾಸುಗಳನ್ನು ಕೊಟ್ಟು-ಕೊಳ್ಳುವ ಪ್ರಕ್ರಿಯೆಯೂ ನಡೆಯುತ್ತದೆ.

ಮೂರು ದಿನದ ಹಬ್ಬ !
ಬಯಲು ಸೀಮೆಯ್ಲಲಿ ಯುಗಾದಿ ಮೂರು ದಿನದ ಹಬ್ಬ. ಮೊದಲ ದಿನ ಮುಸುರೆ ಹಬ್ಬ. ಪಾತ್ರೆ-ಪಗಡಗಳನ್ನು ತೊಳೆದು ಹೊಸ ನೀರು ತಂದು ತುಂಬಿಸುತ್ತಾರೆ. ಹದಿನೈದು ದಿನಗಳ ಸ್ವಚ್ಚತಾ ಕಾರ್ಯಕ್ಕೆ ಅಂತಿಮ ರೂಪ. ಎರಡನೇ ದಿನ ಸಿಹಿ ಹಬ್ಬ. ಮನೆ ಮಕ್ಕಳ್ಲೆಲಾ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ತೊಡುತ್ತಾರೆ. ಮನೆಗ್ಲೆಲ ತೋರಣ ಕಟ್ಟಿ, ದನಗಳ ಕೊಟ್ಟಿಗೆಗೂ ಮಾವು-ಬೇವು ತೋರಣ ಕಟ್ಟಿ ಬೇವಿನ ಚಿಕ್ಕ-ಚಿಕ್ಕ ಕೊಂಬೆಗಳನ್ನು ತೋರಣದ ತುದಿಗೆ ಸಿಕ್ಕಿಸುತ್ತಾರೆ. ಜಾನುವಾರುಗಳು ರೋಗ ಮುಕ್ತವಾಗಲೆಂದು ಬೇವು ಬಳಸುತ್ತಾರೆ ಎಂಬುದು ಹಿರಿಯ ನಂಬಿಕೆ. ಮೂರನೆಯದಿನ ‘ವರಷದ ತಡುಕು’ ಅಥವಾ ವರ್ಷದ ಹೆಚ್ಚು. ಈ ದಿನ ಕೆಲವು ಕಡೆ ಬೇಟೆಗೆ ಹೋಗುತ್ತಾರೆ. ಮಾಂಸದ ಅಡುಗೆ ಮಾಡಿ ಊಟ ಮಾಡುತ್ತಾರೆ. ಸಸ್ಯಹಾರಿಗಳು ನುಗ್ಗೆಕಾಯಿ ಸಂಬಾರು, ಆಂಬೊಡೆಯಂತಹ ಎಣ್ಣೆ ತಿಂಡಿ ಮಾಡಿ ಸವಿಯುತ್ತಾರೆ.

ಹೊಸ ನೀರಿನ ಸಿಂಚನ

ಎತ್ತುಗಳಿಗೆ ಗೌಸು ಹೊದಿಸಿ, ಚೆಂಡು ಹೂವಿನ ಹಾರ ಹಾಕಿ, ಬಂಡಿ ಕಟ್ಟಿ ದೇವಾಲಯಕ್ಕೆ ಮೂರು ಸುತ್ತು ಬರುತ್ತಾರೆ. ಅವುಗಳಿಗೆ ವಿಶೇಷ ನೈವೇದ್ಯ ಇರುತ್ತದೆ. ಹೊಸ ಬಟ್ಟೆ ತೊಡುವ ಮುಂಚೆ ದನಗಳ ಬೆನ್ನ ಮೇಲೆ ಹಾಕುವುದು ರೂಢಿ. ಕೆಲವರು ಹೊಸ ಬಟ್ಟೆಗಳಿಗೆ ಅರಿಶಿಣ ಸೋಕಿಸುತ್ತಾರೆ. ಮೈಸೂರು ಸೀಮೆಯ್ಲಲಿ ದವಸ ಧಾನ್ಯಗಳನ್ನು ಕಣದ್ಲಲಿ ಒಟ್ಟು ಮಾಡಿ ಪೂಜಿಸುತ್ತಾರೆ.
ಪೂಜೆ ಪುನಸ್ಕಾರಗಳು ಮುಗಿದ ಮೇಲೆ ಮನೆ ಯಜಮಾನ ಎಲರಿಗೂ ಬೇವು-ಬ್ಲೆಲ ಹಂಚುತ್ತಾನೆ. ಮನೆಗೆ ಯಾರೇ ಬಂದರೂ ಬೇವು-ಬ್ಲೆಲ ನೀಡುವುದು ಸಂಪ್ರದಾಯ. ಕಿತ್ತು ಹೋದ ಎಷ್ಟು ಸಂಬಂಧಗಳು ಈ ಹಬ್ಬದ್ಲಲಿ ಬೇವು-ಬ್ಲೆಲ ತಿಂದು ಒಂದಾಗುವ ಸಂಪ್ರದಾಯವಿದೆ. ಬೇಳೆ ಒಬ್ಬಟ್ಟು, ಗಟ್ಟಕ್ಕಿ ಪಾಯಸ, ಅಕ್ಕಿ ಪಾಯಸ, ಕಡುಬು ಅಡುಗೆಗಳು ಹಬ್ಬದ ವಿಶೇಷ.

ಪೂಜೆ ಮಾಡಿ, ಸಿಹಿ ಊಟದ ನಂತರ ‘ಜೂಜಾಟ ಶುರು’. ಗಂಡಸರು ಹೊಸ ಬಟ್ಟೆ ತೊಟ್ಟು ಹೊಂಗೆ ಮರದ ನೆರಳ್ಲಲಿ ಇಸ್ಪೀಟ್ ಆಟ ಆರಂಭಿಸಿದರೆ, ಮಹಿಳೆಯರು ಮನೆಯ ಅಂಗಳದ್ಲಲೇ ಚೌಕಾಬರ, ಪಗಡೆ, ಆನೆ-ಕುರಿಯಾಟ.. ಹೀಗೆ ವಿವಿಧ ಆಟಗಳನ್ನಾಡುತ್ತಾರೆ. ಮನರಂಜನೆಯೊಂದಿಗೆ ಹೊರ ಹೊಮ್ಮುವ ಸೋಲು-ಗೆಲುವು ವರ್ಷ ಪೂರ್ತಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಜನರಿಗೆ ಮಾರ್ಗದರ್ಶನ ನೀಡುತ್ತವೆ.

ಯುಗಾದಿ ಹಬ್ಬಕ್ಕೆ ಹದಿನೈದು ದಿನ ಮುನ್ನವೇ ಗ್ರಾಮೀಣ ಕ್ರೀಡೆಗಳ ಸುಗ್ಗಿ. ಜೊತೆ ಜೊತೆಗೆ ಬಯಲು ನಾಟಕಗಳ ಅಭ್ಯಾಸ. ಕೃಷಿಯ ಬಿಡುವಿನ ವೇಳೆಯ್ದಾದರಿಂದ ಊರ ಮಂದಿಯ್ಲೆಲ ಈ ಕ್ರೀಡೆಯ್ಲಲಿ ಭಾಗಿಯಾಗುತ್ತಾರೆ. ಮೈಗ್ಲೆಲ ಹರಳೆಣ್ಣೆ ಹಚ್ಚಿಕೊಂಡು ಕಬ್ಬಡ್ಡಿ, ಕೊಕ್ಕೊ, ವಾಲಿಬಾಲ್‌ನಂತಹ ಆಟವಾಡುವ ಸಂಪ್ರದಾಯ ಕೆಲವು ಪ್ರದೇಶಗಳ್ಲಲಿವೆ. ತುಮಕೂರು, ಚಿತ್ರದುರ್ಗ ಭಾಗಗಳ್ಲಲಿ ಯುಗಾದಿ ಹಬ್ಬದ ದಿನದಂದು ಉಯ್ಯಾಲೆಯಾಡುತ್ತಾರೆ. ಉಯ್ಯಾಲೆ ತೂಗುತ್ತ ತೂಗುತ್ತಾ, ಹಾಡುವ ಜನಪದ ಗೀತೆಗಳನ್ನು ಕೇಳುವುದೇ ಒಂದು ಸಂಭ್ರಮ.

ಬಿದಿಗೆ ಚಂದ್ರ ದರ್ಶನ :
ಗಣೇಶ ಚತುರ್ಥಿಯ ಬಿದಿಗೆ ಚಂದ್ರ ದರ್ಶನ ಅಪವಾದ. ಯುಗಾದಿ ಪಾಡ್ಯದ ನಂತರದ ಬಿದಿಗೆ ಚಂದ್ರ ದರ್ಶನ ಶುಭ ಎನ್ನುವ ನಂಬಿಕೆ ಗ್ರಾಮೀಣರ‍್ಲಲಿದೆ.  ಹಬ್ಬದೂಟ ಉಂಡು, ಉಯ್ಯಾಲೆಯಾಡಿ, ಜೂಜಾಟ ಮುಗಿಸಿ, ಪಶ್ಚಿಮದ್ಲಲಿ ಸೂರ್ಯ ಅಸ್ತಂಗತವಾಗುತ್ತ್ದಿದಂತೆ ಊರ ಮಂದಿಯ್ಲಲ ಮುಗಿಲತ್ತ ಮುಖಮಾಡುತ್ತಾರೆ. ಸಂವತ್ಸದರ ಮೊದಲ ಚಂದ್ರನ ಕೋಡನ್ನು ಕಂಡ ಮಂದಿ ಮನೆಗೆ ಹಿಂದಿರುಗಿ ಹಿರಿಯರ ಕಾಲಿಗೆ ನಮಸ್ಕರಿಸುತ್ತಾರೆ. ನವ ಸಂವತ್ಸರದ ಮೊದಲ ಚಂದ್ರನ ದರ್ಶನ ಇಡೀ ವರ್ಷದ್ಲಲಿ ಶುಭವನ್ನೇ ತರುತ್ತದೆ ಎಂಬ ನಂಬಿಕೆ ರೈತರ‍್ದದು.
ಚಂದ್ರನ ಕೋಡಿನ್ಲಲಿ ಮಳೆ-ಬೆಳೆಗಳ ಲೆಕ್ಕಾಚಾರ ಶುರು. ಇದಾದ ನಂತರ ಪಂಚಾಂಗ ಶ್ರವಣ. ಊರಿನ ದೇವಾಲಯದ್ಲಲೋ, ಅರಳಿಕಟ್ಟೆಯ ಮೇಲೋ ಕುಳಿತು, ಆ ವರ್ಷದ ಭವಿಷ್ಯ ಕೇಳುವ ಸಂಪ್ರದಾಯ. ಊರಿನ ಹಿರಿಯರು ವರ್ಷದ್ಲಲಿ ಯಾವ ಬೆಳೆ ಉತ್ತಮವಾಗಿದೆ ಎಂಬುದನ್ನು ವಿವರಿಸುತ್ತಾರೆ. ಧಾನ್ಯ ಹೆಸರು ಹೇಳದೇ ‘ಬಣ್ಣಗಳನ್ನು’ ಉಲೇಖಿಸುತ್ತಾ, ‘ಈ ಬಾರಿ ಹಸಿರು, ಕೆಂಪು, ಬೂದು ಬಣ್ಣದ ಧಾನ್ಯಗಳಿಗೆ ಏಳಿಗೆಯಿದೆ’ ಎಂದು ವಿವರಿಸುತ್ತಾರೆ. ಬುಧ, ಗುರು, ಚಂದ್ರ.. ಇತ್ಯಾದಿ ಗ್ರಹಗಳ ನಾಯಕತ್ವದ್ಲಲಿ ‘ಕೃಷಿ ಗ್ರಹ-ಗತಿ’ಗಳ ಲೆಕ್ಕಾಚಾರವೂ ನಡೆಯುತ್ತದೆ.

ಉತ್ತರ ಕರ್ನಾಟಕದ ಕೆಲವೆಡೆ ಚಕ್ಕಡಿಗೆ (ಗಾಡಿ) ತರಾತರ ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ಚಕ್ಕಡಿಯ ಒಂದೊಂದು ಭಾಗಕ್ಕೆ ಒಂದೊಂದು ಬಣ್ಣ, ಗಾಲಿಗಳಿಗೆ ಕೆಮ್ಮಣ್ಣು, ಗಾಲಿ ಅಂಚಿಗೆ, ಗುಂಭಕ್ಕೆ, ಗುಜ್ಜುಗಳಿಗೆ ಸುಣ್ಣ ಬಳಿಯುವುದು ವಾಡಿಕೆ. ಬಯಲು ಸೀಮೆಯ್ಲಲಿ ಕೆಲವು ಜನಾಂಗದವರು ಕೃಷಿ ಆಯುಧಗಳನ್ನಿಟ್ಟು ಪೂಜಿಸುತ್ತಾರೆ. ಹಿರಿಯರ ಸಮಾಧಿಗಳಿಗೆ ಹೋಗಿ ಹಣ್ಣು-ಕಾಯಿ ಮಾಡಿ, ಎಡೆ ಹಾಕಿ ನಮಸ್ಕರಿಸುತ್ತಾರೆ.

ಅದಕ್ಕೆ ಹೇಳುವುದು ಹಬ್ಬ ಎಂದರೆ ಪೂಜೆ ಪುನಸ್ಕಾರವಷ್ಟೇ ಅಲ, ಅದೊಂದು ಸಂಸ್ಕೃತಿ, ವಿಜ್ಞಾನ, ಮನರಂಜನೆಯ ಸಂಗಮವೆಂದು. ಇಂಥ ಸಂಪ್ರದಾಯ ಹಲವು ಆಧುನಿಕತೆಗಳ ಅಬ್ಬರದ್ಲಲಿ ಮಾಯವಾಗುತ್ತಿದೆ ಎಂಬುದು ನೋವಿನ ಸಂಗತಿ. ಈ ನೋವು ಉಪಶಮನವಾಗಲಿ, ‘ಖರ’ನಾಮ ಸಂವತ್ಸವರ ಹಳೆಯ ಸಂಪ್ರದಾಯಗಳ್ಲೆಲ ಮರಳಿ ಹಳ್ಳಿಗಳಿಗೆ ಬರಲಿ ಎಂದು ಹಾರೈಸೋಣ.

(ಪ್ರಜಾವಾಣಿಯ ‘ಯುಗಾದಿ ವಿಶೇಷ ಪುರವಣಿಯಲ್ಲಿ’ ಬರೆದ ಲೇಖನ)

ಎಂಡೋ ನಿಷೇಧ ಖಾಯಂಗೊಳಿಸಿ, ಸಂತ್ರಸ್ಥರ ಜನಗಣತಿ ಮಾಡಿ

ಬೆಂಗಳೂರು: ರಾಜ್ಯದಲ್ಲಿ ಎಂಡೋ ನಿಷೇಧ ಖಾಯಂಗೊಳಿಸಿ, ವಿಷಕಾರಕ ಕೀಟನಾಶದಿಂದ ಸಂತ್ರಸ್ಥರಾಗಿರುವ ಕುಟುಂಬದ ಗಣತಿ ನಡೆಸಿ, ಶಾಶ್ವತ ಪರಿಹಾರ ನೀಡುವಂತೆ  ‘ಎಂಡೋ ಸಲ್ಫಾನ್’ ವಿರುದ್ಧ ಹೋರಾಟ ನಡೆಸುತ್ತಿರುವ ಚಳವಳಿಕಾರರು, ಪತ್ರಕರ್ತರು, ಸ್ವಯಂ ಸೇವಾ ಸಂಸ್ಥೆಗೆಳು ಸರ್ಕಾರವನ್ನು ಒತ್ತಾಯಿಸಿದವು.

ಎಂಡೋ ಪರಿಣಾಮ

ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸಂಘಟನೆಗಳ ಪರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಹಕ ಬಳಕೆದಾರ ಹೋರಾಟಗಾರ ಡಾ.ರವೀಂದ್ರನಾಥ ಶ್ಯಾನಬೋಗ್, ಸರ್ಕಾರ ತಡವಾಗಿಯಾದರೂ ತಾತ್ಕಾಲಿಕ ಎಂಡೋಸಲ್ಫಾನ್ ನಿಷೇಧಕ್ಕೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ ವಿಚಾರ. ಅದನ್ನು ನಾವು ಸ್ವಾಗತಿಸುತ್ತಿದ್ದೇವೆ. ಕೇರಳ ಸರ್ಕಾರವು ಈ ಹಿಂದೆಯೇ ಎಂಡೋಸಲ್ಫಾನನ್ನು ಖಾಯಮ್ಮಾಗಿ ನಿಷೇಧಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಈಗಾಗಲೇ ವಿಶ್ವದ ೭೦ಕ್ಕೂ ಹೆಚ್ಚು ದೇಶಗಳು ಎಂಡೋಸಲ್ಫಾನ್‌ನ ಉತ್ಪಾದನೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಆದರೆ ಭಾರತ ಸರ್ಕಾರವು ಮಾತ್ರ ಎಂಡೋಸಲ್ಫಾನ್ ದುಷ್ಪರಿಣಾಮಗಳ ಭೀಕರ ಚಿತ್ರಣ ಸಿಕ್ಕಿದ ಮೇಲೂ ಅದನ್ನು ನಿಷೇಧ ಮಾಡಲು ವಿರೋಧಿಸುತ್ತಿರುವುದು ಅತ್ಯಂತ ಖಂಡನೀಯ.

ಎಂಡೋಸಲ್ಫಾನಿನಿಂದಲೇ ಕಾಸರಗೋಡು, ಪುತ್ತೂರು, ವಿಟ್ಲ ಮುಂತಾದ ತಾಲೂಕುಗಳ ಸಾವಿರಾರು ಮಂದಿ ದೈಹಿಕ, ಮಾನಸಿಕ ವೈಕಲ್ಯಗಳಿಂದ ಬಳಲುತ್ತಿದ್ದಾರೆ ಎಂಬುದು ಅನೇಕ ವರದಿಗಳು ಮತ್ತು ಅಧ್ಯಯನಗಳಿಂದ ಖಚಿತವಾಗಿದೆ. ೧೯೮೦ರಿಂದ ಈ ಪ್ರದೇಶದಲ್ಲಿ ಸುಮಾರು ೫೦ ಸಾವಿರ ಲೀಟರ್‌ಗಳಷ್ಟು ಎಂಡೋಸಲ್ಫಾನಿನ ವೈಮಾನಿಕ ಸಿಂಪಡಣೆ ನಡೆದಿತ್ತು. `ಸಿಂಪಡಣೆಗೆ ಬಳಸುವ ರಾಸಾಯನಿಕಗಳು ತುಂಬ ವಿಷಕಾರಿಯಾದುದರಿಂದ ಜಾನುವಾರು, ಮೇಕೆ, ಕುರಿ ಮತ್ತಿತರ ಪ್ರಾಣಿ ಹಕ್ಕಿಗಳನ್ನು ಈ ಅವಧಿಯಲ್ಲಿ ಮತ್ತು ಸಿಂಪಡಣೆ ಮುಗಿದ ನಂತರ ೧೦ ದಿನಗಳವರೆಗೆ ಗೇರು  ತೋಟದಲ್ಲಿ ಬಿಡಕೂಡದೆಂದು’ ಅಂದು ಅರಣ್ಯ ಉಪ ಸಂರಕ್ಷಣಾಧಿಕಾರಿಯವರು ಪತ್ರಿಕಾ ಪ್ರಕಟಣೆ ಕೊಟ್ಟಿದ್ದರು ಎಂಬುದನ್ನು ನಾವು ಮರೆಯುವಂತಿಲ್ಲ.

ಈಗ ಅಲ್ಲಿನ ೨೫ಕ್ಕೂ ಹೆಚ್ಚು ಹಳ್ಳಿಗಳಲ್ಲಿ (ಕೊಕ್ಕಡ, ಪಟ್ರಮೆ, ನಿಡ್ಲೆ, ಮೇದಿನಡ್ಕ, ವೀರಕಂಬ, ಇಳಂತಿಲ, ಕರಾಯ, ಕುಂತೂರು, ಕೊಯ್ಲ, ವಿಟ್ಲ, ಕೆದಂಬಾಡಿ, ಸವಣೂರು, ಕಣಿಯೂರು, ಬಜೆತ್ತೂರು, ಐತ್ತೂರು, ಮಲ್ಲಂಗಳ್, ಬೆಳಾಲ್, ಸಂಪಾಜೆ, ಕಲ್ಲೋಣಿ, ಕುಕ್ಕಂದೂರು, ನೆಕ್ಕಿಲಾಡಿ, ಕೊಯ್ಯೂರು, ಅಲಂಕಾರು, ನೆಲ್ಯಾಡಿ, ಸುವರ್ಮಲೆ, ತಣ್ಣೀರುಪಂಥ, ಹಿರೆಬಂಡಾಡಿ ಇತ್ಯಾದಿ) ಎಂಡೋಸಲ್ಫಾನ್‌ನ ಭೀಕರ ಪರಿಣಾಮ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ಸರ್ಕಾರವು ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ಧನ ವಿತರಿಸಿದೆ.

‘ಎಂಡೋಸಲ್ಫಾನ್ ಅಂಥ ವಿಷವೇನಲ್ಲ’ ಎಂದು ವಾದಿಸುವ ಎಂಡೋಸಲ್ಫಾನ್ ತಯಾರಕ ಸಂಸ್ಥೆಗಳ ವಾದದಲ್ಲಿ ಹುರುಳಿಲ್ಲ. ಪ್ರಯೋಗಾಲಯಗಳಲ್ಲಿ ಇಲಿಗಳ ಸಂತಾನ ಶಕ್ತಿ ಕುಂದಿಸಲು, ವೀರ್ಯಮಾಲಿನ್ಯ ಮಾಡಲು ಎಂಡೋಸಲ್ಫಾನ್ ವಿಷವನ್ನೇ ಬಳಸಿ ಅದನ್ನು ಮತ್ತೆ ಸರಿಪಡಿಸುವ ವಿಧಾನವನ್ನು ಈ ಪತ್ರಿಕಾಗೋಷ್ಠಿಯಲ್ಲಿ ಹಾಜರಿರುವ ಡಾ.ರವೀಂದ್ರನಾಥ ಶಾನಭಾಗ್ ಸೇರಿದಂತೆ ಹಲವು ವಿಜ್ಞಾನಿಗಳು ರೂಪಿಸಿದ್ದಾರೆ ಎನ್ನುವುದೇ ಎಂಡೋಸಲ್ಫಾನ್ ಎಂಥ ಕಟು ವಿಷ ಎಂಬುದಕ್ಕೆ ನಿದರ್ಶನವಾಗಿದೆ.
ಎಂಡೋಸಲ್ಫಾನ್‌ನ ವಿಷದ ಭೀಕರತೆಯನ್ನು ಮನಗಂಡು ಅಮೆರಿಕಾದ ಪರಿಸರ ರಕ್ಷಣಾ ಸಂಸ್ಥೆಯು ಅದನ್ನು ಮಹಾವಿಷ ಎಂದು ವರ್ಗೀಕರಿಸಿದೆ. ಅಮೆರಿಕಾವೂ ಎಂಡೋಸಲ್ಫಾನ್ ನಿಷೇಧಿಸಿದೆ. ಇತ್ತ ಆಸ್ಟ್ರೇಲಿಯಾವೂ ಎಂಡೋಸಲ್ಫಾನ್‌ನ್ನು ನಿಷೇಧಿಸಿದೆ. ಬ್ರೆಝಿಲ್, ಕೆನಡಾ ಮತ್ತು ದಕ್ಷಿಣ ಕೊರಿಯಾ ದೇಶಗಳೂ ಎಂಡೋಸಲ್ಫಾನ್‌ನ್ನು ನಿಷೇಧಿಸಿವೆ. ಈ ನಿಷೇಧಗಳ ಹಿನ್ನೆಲೆಯಲ್ಲಿ ಅತ್ಯಂತ ವೈಜ್ಞಾನಿಕವಾದ ಅಧ್ಯಯನಗಳಿವೆ ಎಂಬುದು ಗಮನಾರ್ಹ.

ಶ್ರೀಲಂಕಾದ ಆರ್ಥಿಕತೆಯಲ್ಲಿ ಚಹಾ ಕೃಷಿಯು ಶೇಕಡಾ ೧೬ರಷ್ಟು ಪಾಲು ಹೊಂದಿದ್ದರೂ ಅಲ್ಲಿ ಎಂಡೋಸಲ್ಫಾನ್ ನಿಷೇಧವಾಗಿದ್ದು ಆರ್ಥಿಕತೆಯ ಮೇಲೆ ಯಾವುದೇ ದುಷ್ಪರಿಣಾಮವಾಗಿಲ್ಲ. ಆದರೆ ಭಾರತದಲ್ಲಿ ಅತ್ಯಲ್ಪ ಆರ್ಥಿಕತೆಯ ಪಾಲು ಹೊಂದಿರುವ ಚಹಾ ಉದ್ಯಮದಲ್ಲಿ ಎಂಡೋಸಲ್ಫಾನ್ ನಿಷೇಧಿಸಲು ಭಾರತವು ಹಿಂಜರಿಯುತ್ತಿರುವುದು ವಿಚಿತ್ರವಾಗಿದೆ ಎಂದು ಅವರು ಟೀಕಿಸಿದರು.
ಐರೋಪ್ಯ ಸಮುದಾಯವು ತನ್ನದೇ ಗುಪ್ತ ಉದ್ದೇಶಗಳಿಗೆ ಎಂಡೋಸಲ್ಫಾನ್‌ನ್ನು ನಿಷೇಧಿಸಲು ಕುಮ್ಮಕ್ಕು ನೀಡುತ್ತಿದೆ ಎಂಬ ಎಂಡೋಸಲ್ಫಾನ್ ತಯಾರಕ ಕಂಪೆನಿಗಳ ವಾದವೂ ಆಧಾರ ರಹಿತವಾಗಿದೆ. ಸ್ಥಾಯಿಯಾಗುಳಿವ ಸಾವಯವ ರಾಸಾಯನಿಕ (ಪರ್ಸಿಸ್ಟೆಂಟ್ ಆರ್ಗಾನಿಕ್ ಪೊಲ್ಯುಟೆಂಟ್ಸ್ PಔP) ಮಾಲಿನ್ಯಕಾರಕಗಳ ಪಟ್ಟಿಯಲ್ಲಿ ಎಂಡೋಸಲ್ಫಾನ್‌ನ್ನೂ ಸೇರಿಸಬೇಕೆಂಬ ಚರ್ಚೆಯನ್ನು ನಡೆಸುತ್ತಿರುವುದು ಸ್ಟಾಕ್‌ಹೋಮಿನಲ್ಲಿರುವ ವಿಶ್ವವ್ಯಾಪಿ ಸಂಘಟನೆಯೇ ಹೊರತು ಯಾವುದೇ ದುರುದ್ದೇಶದ ಗುಂಪಲ್ಲ ಎನ್ನುವುದನ್ನು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇವೆ. ಈ ಸಂಸ್ಥೆಯು ವಿಶ್ವಸಂಸ್ಥೆಯದೇ ಒಂದು ಸಂಸ್ಥೆಯಾಗಿದ್ದು ಭಾರತವೂ ಸೇರಿದಂತೆ ೧೭೨ ದೇಶಗಳು ಈ ಸ್ಟಾಕ್‌ಹೋಮ್ ಸಮಾವೇಶಕ್ಕೆ (ಸ್ಟಾಕ್‌ಹೋಮ್ ಕನ್‌ವೆನ್‌ಶನ್)ದ ಸದಸ್ಯ ದೇಶವಾಗಿವೆ.

ಎಂಡೋಸಲ್ಫಾನ್ ಬಳಕೆಯ ಪ್ರಮಾಣ ಎಷ್ಟು ಎನ್ನುವುದಕ್ಕಿಂತ ಅದರ ಪರಿಣಾಮ ಏನು ಎನ್ನುವುದೇ ಮುಖ್ಯ. ಇಲ್ಲಿ ಎಂಡೋಸಲ್ಫಾನ್ ಕಂಪೆನಿಗಳು ಪದೇ ಪದೇ ಸುಳ್ಳು ಹೇಳಿ ಜನರ ಮತ್ತು ಸರ್ಕಾರದ ದಾರಿ ತಪ್ಪಿಸುವ ಯತ್ನ ಮಾಡುತ್ತಿವೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ.

ಎಂಡೋಸಲ್ಫಾನ್‌ನ ಕಣಗಳು ಗರ್ಭನಾಳದೊಳಕ್ಕೆ ಪ್ರವೇಶಿಸುತ್ತವೆ, ಎದೆಹಾಲಿನಲ್ಲೂ ಇವೆ, ಮೆದುಳಿನ ಎಡೆಮಾ (ಊತ)ದಿಂದ ಹಿಡಿದು, ಕನ್ವಲ್ಶನ್, ಶ್ವಾಸಕೋಶ ಸಂಕುಚಿತತೆ, ಉಸಿರಾಟದ ಪಾರ್ಶ್ವವಾಯು, ಯಕೃತ್ತಿನ ರೋಗ, ಹೈಪರ್ ಗ್ಲೈಸೀಮಿಯಾ, ಮೂತ್ರಪಿಂಡ ನಾಳಗಳ ಕುಗ್ಗುವಿಕೆ, ಕ್ಯಾನ್ಸರ್, ನ್ಯೂರೋಟಾಕ್ಸಿಸಿಟಿ ಮುಂತಾದ ಭೀಕರ ರೋಗಗಳಿಗೂ ಕಾರಣವಾಗುತ್ತವೆ ಎಂಬುದು ನೂರಾರು ವೈಜ್ಞಾನಿಕ ಅಧ್ಯಯನಗಳಿಂದ ಸ್ಪಷ್ಟವಾಗಿದ್ದು, ಈ ಮಾಹಿತಿಗಳನ್ನು ಯಾವುದೇ ಸಂದರ್ಭದಲ್ಲೂ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಶ್ಯಾನಭಾಗ್ ಘೋಷಿಸಿದರು.

ಸರ್ಕಾರದ ಮುಂದೆ ನಮ್ಮ ಬೇಡಿಕೆಗಳು ಇಷ್ಟೇ;  ಕರ್ನಾಟಕ ಸರ್ಕಾರವು ಎಂಡೋಸಲ್ಫಾನನ್ನು ಖಾಯಮ್ಮಾಗಿ ನಿಷೇಧಿಸಲು ಬೇಕಾದ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರ ಈ ಕೂಡಲೇ ಸಾರ್ವಜನಿಕ ಕಾರ್ಯಕರ್ತರು, ತಜ್ಞರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್ ದುಷ್ಪರಿಣಾಮಕ್ಕೆ ಸಿಲುಕಿದವರ ಜನಗಣತಿ ಮತ್ತು ದಾಖಲೀಕರಣ ಮಾಡಬೇಕು. ಎಂಡೋಸಲ್ಫಾನ್ ದುಷ್ಪರಿಣಾಮಕ್ಕೆ ತುತ್ತಾದವರ ಕುಟುಂಬಗಳಿಗೆ ಶಾಶ್ವತ ಪರಿಹಾರ ನೀಡಲು ಒಂದು ವಿಶೇಷ ಘಟಕವನ್ನು ಸ್ಥಾಪಿಸಬೇಕು. ಈ ಘಟಕವು ಸದಾ ಚಾಲ್ತಿಯಲ್ಲಿರುವ ಸಹಾಯವಾಣಿ ಸಂಖ್ಯೆಯನ್ನಿಟ್ಟುಕೊಂಡು ಕಾರ್ಯಾಚರಿಸಬೇಕು.

ಕೇರಳ ರಾಜ್ಯ ಸರ್ಕಾರವು ಕಳೆದ ಡಿಸೆಂಬರ್-ಜನವರಿ ೨೦೧೧ರ ಅವಧಿಯಲ್ಲಿ ನಿರ್ದಿಷ್ಟ ಪ್ರದೇಶದ ಜನರ ಆರೋಗ್ಯ ಸಮೀಕ್ಷೆ ನಡೆಸಿ ೧೫೬೦೦ ರೋಗಿಗಳ ಪೈಕಿ ೩೪೫೦ ರೋಗಿಗಳು ಎಂಡೋಸಲ್ಫಾನ್‌ನಿಂದಲೇ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆಂಬುದನ್ನು ಖಚಿತಪಡಿಸಿಕೊಂಡಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಹೀಗೆ ದಾಖಲಾದ ಸಂತ್ರಸ್ತರಿಗೆ ಎಂಡೋಸಲ್ಫಾನ್ ಕಂಪೆನಿಗಳೇ ಸೂಕ್ತವಾದ ಪರಿಹಾರ ಕೊಡಬೇಕು ಎಂಬ ನೀತಿಯನ್ನು ಕರ್ನಾಟಕ ಸರ್ಕಾರವು ಜಾರಿಗೆ ತರಬೇಕು.

ಎಂಡೋಸಲ್ಫಾನ್‌ಗೆ ಬದಲಿಯಾಗಿ ಹಲವು ಬಗೆಯ ಮಾರ್ಗಗಳನ್ನು ರೈತರು ಅನುಸರಿಸಬಹುದು. ಸಮಗ್ರ ಕೀಟ ನಿರ್ವಹಣೆ, ಪರ್ಯಾಯ ಜೈವಿಕ ಕೀಟನಾಶಕಗಳ ಬಳಕೆ, ಸಾವಯವ ಕೃಷಿ ವಿಧಾನ, – ಹೀಗೆ ವಿವಿಧ ವಿಧಾನಗಳಿದ್ದು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ರೈತರಿಗೆ ಯಾವುದೇ ಬಗೆಯ ಮಾಹಿತಿ, ದಿಕ್ಸೂಚಿ ನೆರವನ್ನು ನೀಡಲು ನಾವು ಸಿದ್ಧರಿದ್ದೇವೆ.

ಎಂಡೋಸಲ್ಫಾನ್ ಅಲ್ಲದೆ ಹಲವು ಬಗೆಯ ಅಪಾಯಕಾರಿ ಕೀಟನಾಶಕಗಳು ನಮ್ಮ ಕೃಷಿಪದ್ಧತಿಯನ್ನು ಸೇರಿಕೊಂಡಿವೆ; ನಮ್ಮ ನೆಲ-ಜಲವನ್ನು ಕಲುಷಿತಗೊಳಿಸಿವೆಯಲ್ಲದೆ ಜನರ ದೇಹವನ್ನು ಸೇರಿಕೊಂಡಿವೆ. ಈ ಬಗ್ಗೆ ಕರ್ನಾಟಕ ಸರ್ಕಾರವು ವ್ಯಾಪಕ ಅಧ್ಯಯನವನ್ನು ಕೈಗೊಳ್ಳಬೇಕು. ಕರ್ನಾಟಕ ಸರ್ಕಾರವು ಸಾವಯವ ಕೃಷಿ ಆಂದೋಲನವನ್ನು ಕೈಗೊಂಡಿರುವುದರಿಂದ ರಾಜ್ಯದಲ್ಲಿ ವಿಷಪೂರಿತ, ರಾಸಾಯನಿಕ ಕೀಟನಾಶಕಗಳ ಬಳಕೆಯ ವಿರುದ್ಧ ಜನಜಾಗೃತಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

ಭಾರತ ಸರ್ಕಾರವು ಎಂಡೋಸಲ್ಫಾನ್ ದುಷ್ಪರಿಣಾಮಗಳನ್ನು ಕುರಿತ ಸ್ವತಂತ್ರ ಅಧ್ಯಯನಗಳನ್ನು ಗಮನಿಸುವುದಿರಲಿ, ಸ್ಟಾಕ್‌ಹೋಮ್‌ನ ಜಾಗತಿಕ ಸಂಸ್ಥೆಯ ವರದಿಗಳನ್ನೂ ನಿರ್ಲಕ್ಷಿಸುತ್ತಿರುವುದು ವಿಚಿತ್ರವಾಗಿದೆ. ಇನ್ನಾದರೂ ಏಪ್ರಿಲ್‌ನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಿ ಎಂಡೋಸಲ್ಫಾನ್‌ನ ಬಳಕೆಗೆ ನಿಷೇಧ ಹೇರಲು ಮುಂದಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ.
ಎಂಡೋಸಲ್ಫಾನ್‌ನ ದುಷ್ಪರಿಣಾಮಗಳನ್ನು ವರದಿ ಮಾಡುವಲ್ಲಿ ಮಾಧ್ಯಮಗಳು ಬಹುಮುಖ್ಯ ಪಾತ್ರ ವಹಿಸಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಎಂಡೋಸಲ್ಫಾನ್ ಬಗ್ಗೆ ಮಾಧ್ಯಮಗಳು ಹೆಚ್ಚು ಹೆಚ್ಚು ವಸ್ತುನಿಷ್ಠವಾದ ವರದಿಗಳನ್ನು ಮಾಡಬೇಕು ಎಂದು ನಾವು ವಿನಂತಿಸುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಎಲ್ಲ ಸಂಘಟನೆಗಳು ಮನವಿ ಮಾಡಿದವು.

ಎಂಡೋಸಲ್ಫಾನ್ ಉತ್ಪಾದಕ ಕಂಪೆನಿಗಳು ನಕಲಿ ವೆಬ್‌ಸೈಟ್‌ಗಳ ಮೂಲಕ ಎಂಡೋಸಲ್ಫಾನ್ ಪರವಾಗಿ ಪ್ರಚಾರ ಕೈಗೊಂಡಿರುವುದು ಅವುಗಳ ಮುಖೇಡಿತನಕ್ಕೆ ಸಾಕ್ಷಿಯಾಗಿದೆ. ಈ ಕಂಪೆನಿಗಳ ವಿರುದ್ಧ ಜನರು, ಮಾಧ್ಯಮಗಳು ಜಾಗೃತರಾಗಿರಬೇಕೆಂದು ಈ ಮೂಲಕ ವಿನಂತಿಸುತ್ತಿರುವುದಾಗಿ ತಿಳಿಸಿದರು..

ಸುದ್ದಿಗೋಷ್ಠಿಯಲ್ಲಿ ಡಾ. ರವೀಂದ್ರನಾಥ ಶ್ಯಾನಭಾಗ್, ಗ್ರಾಹಕ ಚಳವಳಿಗಾರ ನಿರ್ದೇಶಕರು, ವಿ ಕೆ ವಿರಾನಿ ಫಾರ್ಮ ಸಂಶೋಧನಾ ಕೇಂದ್ರ, ಅಮ್ರೇಲಿ, ಗುಜರಾತ್‌. ಡಾ.ಮೊಹಮದ್ ಅಶೀಲ್, ಸಹ ನೋಡಲ್ ಅಧಿಕಾರಿ (ಕೇರಳ ಸರ್ಕಾರದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ  ಯೋಜನೆ), ಜಯಕುಮಾರ್, ಥನಾಲ್ ಸ್ವಯಂಸೇವಾ ಸಂಸ್ಥೆ, ತಿರುವನಂತಪುರ, ಡಾ. ರಾಮಾಂಜನೇಯುಲು, ಕಾರ್ಯಪಾಲಕ ನಿರ್ದೇಶಕ, ಸುಸ್ಥಿರ ಪರ್ಯಾಯ ಕೃಷಿ, ಸಿಕಂದರಾಬಾದ್. `ಶ್ರೀ’ ಪಡ್ರೆ, ಜಲ ಪತ್ರಕರ್ತ; ಸಂಪಾದಕ, ಅಡಿಕೆ ಪತ್ರಿಕೆ, ಪುತ್ತೂರು  ನಾಗೇಶ ಹೆಗಡೆ, ಪತ್ರಕರ್ತ. ಸೂಲಿಕೆರೆ ಗ್ರಾಮ ಎ ಎಸ್ ಆನಂದ, ಅಧ್ಯಕ್ಷರು, ಸಾವಯವ ಕೃಷಿ ಮಿಶನ್, ಕರ್ನಾಟಕ ಸರ್ಕಾರ  ವೈ ಬಿ ರಾಮಕೃಷ್ಣ, ಅಧ್ಯಕ್ಷರು, ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ  ಹರಿ ಬೆಳ್ಳೂರು, ಪತ್ರಿಕಾ ಛಾಯಾಗ್ರಾಹಕ, ಕಾಸರಗೋಡು  ಜಿ. ಕೃಷ್ಣಪ್ರಸಾದ, ಸಹಜ ಸಮೃದ್ಧ, ಸಾವಯವ ಕೃಷಿ ಸಂಘಟನೆ, ಬೆಂಗಳೂರು ಬೇಳೂರು ಸುದರ್ಶನ, ಪತ್ರಕರ್ತ, ಮಿತ್ರಮಾಧ್ಯಮ, ಬೆಂಗಳೂರು ಭಾಗವಹಿಸಿದ್ದರು.

ಎಲ್ಲಾ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ

ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಏನ್ಮಾಡ್ತಿದ್ದಾರೆ ?

ವಿಶ್ವಕನ್ನಡ ಸಮ್ಮೇಳನ್ನಕ್ಕಾಗಿ ಸರ್ಕಾರಕ್ಕೆ ಸಾಕ್ಷ್ಯಚಿತ್ರ  ನಿರ್ಮಿಸಿಕೊಡುತ್ತಿದ್ದಾರೆ.

ನಿಜ, ನಾಗ್ತಿಹಳ್ಳಿ ಈಗ ವಿಶ್ವಕನ್ನಡ ಸಮ್ಮೇಳನಕ್ಕಾಗಿ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿಕೊಡುತ್ತಿದ್ದಾರೆ. ವಾರದ ಗಡುವಿನೊಳಗೆ ಈ ಸಾಕ್ಷ್ಯಚಿತ್ರ ಮುಗಿಯಬೇಕು. ಅದಕ್ಕಾಗಿ ನಾಡಿನ ಸಂಪನ್ಮೂಲ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ನಿನ್ನೆ ಇದ್ದಕ್ಕಿದ್ದಂತೆ ಬೆಂಗಳೂರಿನ ಹೆಬ್ಬಾಳದ ಮಂಗಳ ರೈತ ಭವನದಲ್ಲಿ ಕಾಣಿಸಿಕೊಂಡರು. ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ, ಶ್ರೀಪಡ್ರೆ, ಶಿವಾನಂದ ಕಳವೆ ಭಾಗವಹಿಸಿದ ವಿಚಾರ ತಿಳಿದೇ ಅಲ್ಲಿಗೆ ಬಂದಿದ್ದರು ನಾಗತಿಹಳ್ಳಿ.

ಹಳ್ಳಿಯ ಸಮಸ್ಯೆಗಳು, ಕೃಷಿ ವಲಯದ ಸಮಕಾಲೀನ ವಿಚಾರಗಳ ಬಗ್ಗೆ ಕೃಷಿ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು.. ಹೀಗೆ ಗ್ರಾಮೀಣ ಜಗತ್ತಿನ ಹಲವು ವಿಚಾರಗಳನಗೊಂಡ ಪ್ರಶ್ನೆ ಕೇಳುತ್ತಾ, ಕಾರ್ಯಕ್ರಮ ನಡುವೆಯೇ ಚಕಾಚಕ್  ಅಂತ ಚುಟುಕಾಗಿ ಸಂದರ್ಶನ ಮುಗಿಸಿಬಿಟ್ಟರು.

ನಾಗ್ತಿಹಳ್ಳಿಯವರಿಗಲ್ಲದೇ, ಬೇರೆ ಯಾರಿಗಾದ್ರೂ ಈ ಜವಾಬ್ದಾರಿ ಕೊಟ್ಟಿದ್ದರೆ,  ಈ ಮೂವರ ಬದಲಿಗೆ ಹಳ್ಳಿಯನ್ನೇ ಸುತ್ತಾಡದ ಸಚಿವರು, ರೈತರ ಮನ ಮುಟ್ಟದ ವಿಜ್ಞಾನಿಗಳು, ಹಳ್ಳಿಯ ಸಮಸ್ಯೆಗಳನ್ನು ಹತ್ತಿರದಿಂದ ನೋಡದ ‘ತಜ್ಞರ’ ಮುಖಗಳು, ಮಾತುಗಳು ವಿಶ್ವಕನ್ನಡ ಸಮ್ಮೇಳನದಲ್ಲಿ ರಾರಾಜಿಸುತ್ತಿದ್ದರು.

ಈ ವಿಷಯದಲ್ಲಿ ಸರ್ಕಾರಕ್ಕೊಂದು ಥ್ಯಾಂಕ್ಸ್.

 

 

‘ಬಹು’ಮುಖಿ ಹೋರಾಟ

ಅದು ಬೇಡ್ತಿ ನದಿಯ್ಲಲ, ಕರ್ನಾಟಕದ ಸೈಲೆಂಟ್ ವ್ಯಾಲಿ !
-೧೯೮೨ರ‍್ಲಲಿ ಉತ್ತರ ಕನ್ನಡದ ಬೇಡ್ತಿ ಯೋಜನೆ ವಿರುದ್ಧದ ಹೋರಾಟದ್ಲಲಿ ‘ಚಿಪ್ಕೊ’ ಚಳವಳಿ ನೇತಾರ ಸುಂದರ್‌ಲಾಲ್ ಬಹುಗುಣ ಅವರು ಅಲಿನ ಪರಿಸರ ಕಂಡು ಉದ್ಘರಿಸ್ದಿದು ಹೀಗೆ !
ಪಶ್ಚಿಮ ಘಟ್ಟದ ಬಗ್ಗೆ ಬಹುಗುಣ ಅವರಿಗೆ ಎಲ್ಲ್ಲೆಲದ ಪ್ರೀತಿ. ಅದಕ್ಕಾಗಿಯೇ ‘ಘಟ್ಟ’ವನ್ನು ‘ಕರ್ನಾಟಕದ ಮಕುಟ’ ಎಂದ್ದಿದಾರೆ. ಹಿಮಾಲಯದ್ಲಲಿ ಹುಟ್ಟಿದರೂ, ಅವರಿಗೆ ಕರ್ನಾಟಕದ ನಂಟಿದೆ. ಆ ನಂಟಿಗೆ ದಶಕಗಳ ಇತಿಹಾಸವೂ ಇದೆ.

ಸುಂದರಲಾಲ್ ಬಹುಗುಣ

ಹಿಮಾಲಯ ತಪ್ಪಲಿನ ಹಳ್ಳಿಯೊಂದರ‍ಲ್ಲಿ ಜನವರಿ ೯, ೧೯೨೭ರ‍ಲ್ಲಿ ಜನಿಸಿದ ಸುಂದರ್‌ಲಾಲ್ ಬಹುಗುಣ ಅವರು ಗಾಂಧಿ ತತ್ವದೊಂದಿಗೇ ಜೀವನ ರೂಪಿಸಿಕೊಂಡರು. ವಿದ್ಯಾಭ್ಯಾಸದ ನಂತರ ನಡುವೆ ರಾಜಕೀಯ ಪ್ರವೇಶ. ೧೯೫೬ರ‍್ಲಲಿ ರಾಜಕೀಯ ಬಿಟ್ಟು ಪತ್ನಿ ವಿಮಲರೊಂದಿಗೆ ಆಶ್ರಮ ಸ್ಥಾಪಿಸಿದರು. ಆಶ್ರಮದ್ಲಲಿ ಬಡವರೊಟ್ಟಿಗೆ ಬದುಕುತ್ತಾ ‘ಬಡತನ’ಕ್ಕೆ ಕಾರಣ ಹುಡುಕುತ್ತಾ ಹೊರಟರು. ಅರಣ್ಯ ನಾಶ, ಮಣ್ಣಿನ ಸವಕಳಿ, ನೀರಿನ ಕೊರತೆ ಇವ್ಲೆಲ ಬಡತನಕ್ಕೆ ಕಾರಣ ಎಂಬುದನ್ನು ಅರಿತ ಬಹುಗುಣ ‘ಪರಿಸರ ಸಂರಕ್ಷಣೆ’ ಹೋರಾಟ ಆರಂಭಿಸಿದರು.

‘ಚಿಪ್ಕೊ’ ಚಳವಳಿ ಹುಟ್ದಿದು :
೧೯೩೦ರಲ್ಲಿ ಅರಣ್ಯವನ್ನು ವಾಣಿಜ್ಯಕ್ಕೆ(ಫಾರೆಸ್ಟ್ ಕಮರ್ಷಿಯಲೈಸೇಷನ್) ಬಳಕೆ ಮಾಡಿಕೊಳ್ಳಲು ಬ್ರಿಟಿಷ್ ಆಡಳಿತ ಆದೇಶಿಸಿತು. ಅದರ ವಿರುದ್ಧ ತಿರುಗಿ ಬಿದ್ಧವರನ್ನು ನಿರ್ದಾರ್ಕ್ಷಿಣ್ಯವಾಗಿ ಹತ್ಯೆ ಮಾಡಲಾಯಿತು. ಈ ಘಟನೆಯ್ಲಲಿ ೧೭ ಮಂದಿ ಸಾವನ್ನಪ್ಪಿದರು. ೮೦ ಜನರನ್ನು ಬಂಧಿಸಲಾಯಿತು. ಈ ಹೋರಾಟದ ಸ್ಪೂರ್ತಿಯಿಂದಲೇ ಸುಂದರ್‌ಲಾಲ್ ಬಹುಗುಣ ೧೯೭೦ರಲ್ಲಿ ‘ಚಿಪ್ಕೊ’ ಚಳವಳಿ ಆರಂಭಿಸಿದರು.
‘ಎಕಾಲಜಿ ಈಸ್ ಪರ್ಮನೆಂಟ್ ಎಕಾನಮಿ’ ಎಂಬ ಘೋಷವಾಕ್ಯದೊಂದಿಗೆ ಈ ಚಳವಳಿ ದೇಶ, ವಿದೇಶಗಳಿಗೂ ಪಸರಿಸಿತು. ಸ್ವೀಡನ್, ಜರ್ಮನಿ, ನೆದರ್‌ಲೆಂಡ್, ಸ್ವಿಟ್ಜರ್‌ಲೆಂಡ್, ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕಾದವರು ‘ಚಿಪ್ಕೊ’ ಚಳವಳಿ ನಡೆದ ಪ್ರದೇಶಗಳಿಗೆ, ಬಹುಗುಣ ಅವರ ಆಶ್ರಮಕ್ಕೆ ಭೇಟಿ ನೀಡಿದರು. ಪರಿಸರ ಉಳಿವಿಗಾಗಿ ‘ಪ್ರಾಣ ತೆತ್ತ’ವರ ಬಗ್ಗೆ ಕಂಬನಿ ಮಿಡಿದ ಅನೇಕ ವಿದೇಶಿಯರು, ಈ ಹೋರಾಟವನ್ನು ತಮ್ಮ ದೇಶಗಳಿಗೂ ವಿಸ್ತರಿಸಿದರು. ಈ ಚಳವಳಿಯ ಬಿಸಿ ವಿಶ್ವ ಸಂಸ್ಥೆಯವರೆಗೂ ಮುಟ್ಟಿತು.

ಗಾಂಧಿ ತತ್ವದ್ಲಲೇ ಹೋರಾಟ:
‘ಗಾಂಧಿ ತತ್ವ’ದ ಪ್ರಕಾರ ಶಾಂತಿಯುತವಾಗಿ ಹೋರಾಟ ನಡೆಯಬೇಕು. ಅದಕ್ಕಾಗಿ ಬಹುಗುಣ ಅವರು ‘ಪಾದಯಾತ್ರೆ’ಯನ್ನೇ ಹೋರಾಟದ ಅಸ್ತ್ರವಾಗಿಸಿಕೊಳ್ಳುತ್ತ್ದಿದರು. ಪಾದಯಾತ್ರೆ ಯ್ಲಲಿ ಆಯಾ ಪ್ರದೇಶದ ಜನರನ್ನು ನೇರ ಸಂಪರ್ಕಿಸಬಹುದು. ಭಾವನೆಗಳ ಮೂಲಕ ಅವರ ಮನಸ್ಸು ತಟ್ಟಿ, ಹೃದಯ ಸ್ಪರ್ಶಿಸಬಹುದು. ಜನರ ನಾಡಿ ಮಿಡಿತ ಅರಿತು, ಪರಿಸರ ಶಿಕ್ಷಣ ನೀಡಿ, ಮುಂದಿನ ಹೋರಾಟಕ್ಕೇ ಸ್ಥಳೀಯರನ್ನೇ ಸ್ವಯಂ ಸೇವಕರನ್ನಾಗಿಬಹುದು’ ಎನ್ನುವುದು ಅವರ ಅಭಿಪ್ರಾಯವಾಗಿತ್ತು.
ಅರಣ್ಯದ್ಲಲಿ ಮರ ಕಡಿಯುವುದಕ್ಕೆ ನಿರ್ಬಂಧ ಹೇರುವುದಕ್ಕೆ ಒತ್ತಾಯಿಸಿ ೧೯೮೧ರಿಂದ ೮೩ರವರಗೆ ಹಿಮಾಲಯ ವ್ಯಾಪ್ತಿಯ ಏಳು ರಾಜ್ಯಗಳ್ಲಲಿ ಐದು ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡಿದರು. ಹಳ್ಳಿ-ಹಳ್ಳಿ ಸುತ್ತುತ್ತಾ ಜನರ ಸಹಕಾರ ಅರಸುತ್ತಾ, ಚಳವಳಿ ಗಟ್ಟಿಗೊಳಿಸಿದ ಅವರು, ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಮನವರಿಕೆ ಮಾಡಿಕೊಟ್ಟರು. ೧೯೮೦ರ‍್ಲಲಿ ‘ಮರ ಕತ್ತರಿಸುವುದಕ್ಕೆ’ ೧೫ ವರ್ಷಗಳ ಕಾಲ ನಿಷೇಧ ಹೇರಲಾಯಿತು. ಹೋರಾಟಕ್ಕೆ ಜಯ ಸಿಕ್ಕಿತು.

ಈ ಪಾದಯಾತ್ರೆ, ಚಳವಳಿ, ಹೋರಾಟಗಳೇ ೧೯೮೨ರ‍ಲ್ಲಿ ಕರ್ನಾಟಕದ್ಲಲಿ ‘ಅಪ್ಪಿಕೊ’ ಚಳವಳಿ ಆರಂಭಕ್ಕೆ ಸ್ಪೂರ್ತಿಯಾಯಿತು. ಶಿರಸಿಯ ಪಾಂಡುರಂಗ ಹೆಗಡೆ ಮತ್ತಿತರ ಪರಿಸರಾಸಕ್ತರ ನೇತೃತ್ವದ್ಲಲಿ ಉತ್ತರ ಕನ್ನಡದ ಪಶ್ಚಿಮ ಘಟ್ಟದ್ಲಲಿ ಆರಂಭವಾದ ಈ ಚಳವಳಿಯ್ಲಲಿ ಸುಂದರ್‌ಲಾಲ್ ಬಹುಗುಣ ಖುದ್ಧಾಗಿ ಪಾಲ್ಗೊಂಡ್ದಿದರು. ಅಂದಿನಿಂದ ಆರಂಭವಾದ ಕರ್ನಾಟಕದ ನಂಟು ಇಂದಿಗೂ ನಿರಂತರವಾಗಿದೆ.

ರಾಜ್ಯದ್ಲಲಿ ಬಹುಗುಣರ ಹೆಜ್ಜೆ:
ರಾಜ್ಯದ್ಲಲಿ ಪರಿಸರ ಸಮಸ್ಯೆಗಳ ವಿರುದ್ಧ ಹೋರಾಟ ನಡೆದಾಗಲ್ಲೆಲಾ ಬಹುಗುಣ ಪ್ರತ್ಯಕ್ಷರಾಗ್ದಿದಾರೆ. ೧೯೮೨ರ‍್ಲಲಿ ನಡೆದ ಅಪ್ಪಿಕೊ ಚಳವಳಿ, ೧೯೮೩ರ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೇತೃತ್ವದ ರೈತ ಸಂಘ ನಡೆಸಿದ ‘ನೀಲಿಗಿರಿ ನಾಟಿ’ ವಿರುದ್ಧದ ಹೋರಾಟ, ದಕ್ಷಿಣ ಕನ್ನಡದ್ಲಲಿ ಉದ್ಭವಿಸ್ದಿದ ಮಂಗನ ಕಾಯಿಲೆ ವಿರುದ್ಧ ಜಾಗೃತಿ, ೧೯೯೨ರ‍್ಲಲಿ ಕೊಡಗಿನ ಶೋಲಾ ಅರಣ್ಯದ್ಲಲಿ ‘ಟೀ ಪ್ಲಾಂಟೇಷನ್ ನಾಟಿ’ ವಿರುದ್ಧ ಆಂದೋಲನ, ೨೦೦೩ರ‍್ಲಲಿ ಕಾರವಾರದ್ಲಲಿ ನಡೆದ ಕಾಳಿ ಪಾದಯಾತ್ರೆಗೆ ಚಾಲನೆ, ೨೦೦೫ರ‍್ಲಲಿ ಶರಾವತಿ ಅವಲೋಕನ ಪಾದಯಾತ್ರೆಯ್ಲಲಿ ಪಾಲ್ಗೊಂಡ್ದಿದರು.
ಕಳೆದ ವರ್ಷ ಹಾಸನ ಜ್ಲಿಲೆಯ್ಲಲಿ ಗುಂಡ್ಯಾ ಜಲವಿದ್ಯುತ್ ಯೋಜನೆ ವಿರೋಧದ ಹೋರಾಟಕ್ಕೂ ಕೈ ಜೋಡಿದ ಬಹುಗುಣ ಅವರು ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗ್ದಿದ ಕಾಲದ್ಲಲಿ ‘ಅರಣ್ಯ ನಾಶ, ನೀಲಿಗಿರಿ ನಾಟಿ’ ವಿರುದ್ಧ ಧ್ವನಿ ಎತ್ತಿ, ರಾಜ್ಯದ ಅರಣ್ಯ ನೀತಿ ಪರಿಷ್ಕರಣೆಗೆ ಕಾರಣರಾದವರು.

ಇಂಥ್ದದೊಂದು ನಂಟಸ್ಥಿಕೆಯೊಂದಿಗೆ ಕರ್ನಾಟಕದ ಪರಿಸರ ಹೋರಾಟಗಾರರ ಪಾಲಿಗೆ ಪ್ರೀತಿಯ ಅಜ್ಜನಾಗಿರುವ ೮೪ರ ಸುಂದರ್‌ಲಾಲ್ ಬಹುಗುಣ ಅವರು ಇತ್ತೀಚೆಗೆ ಮೂಡುಬಿದ್ರೆಯ ಆಳ್ವಾಸ್ ಸಭಾಂಗಣದ್ಲಲಿ ನಡೆದ ‘ಪಶ್ಚಿಮಘಟ್ಟ ಸಂರಕ್ಷಣಾ ಅಭಿಯಾನದ ಸಮಾವೇಶ’ಕ್ಕಾಗಿ ಆಗಮಿಸ್ದಿದರು. ಕಾರ್ಯಕ್ರಮಕ್ಕೂ ಮುನ್ನ ಸಮಕಾಲೀನ ಪರಿಸರ ಸಮಸ್ಯೆಗಳ ಕುರಿತು ಅವರೊಂದಿಗೆ ನಡೆಸಿದ ಸಂವಾದ ಇಲಿದೆ.
*ನೀವು ಅಂದು ಭಾವನಾತ್ಮಕವಾಗಿ ‘ವನಮಹೋತ್ಸವ’ಕ್ಕೆ ಜನರನ್ನು ಪ್ರೇರೇಪಿಸುತ್ತ್ದಿದಿರಿ. ಇಂದು ಹಣಕ್ಕಾಗಿ ಗಿಡ ಬೆಳೆಸುವ ಪರಿಪಾಠವಿದೆ. ಆ ಗಿಡಗಳು ಹತ್ತು-ಹದಿನೈದು ವರ್ಷಗಳ್ಲಲಿ ನಾಶವಾಗುತ್ತಿವೆ. ಇಂಥ ‘ಮರ – ಮುರಿಯುವ ಮನಸ್ಸು’ಗಳನ್ನು ಪರಿವರ್ತಿಸುವ ಬಗೆ ಹೇಗೆ ?
ಮುನ್ನೂರು ದಿನ. ನಾಲ್ಕೂವರೆ ಸಾವಿರ ಕಿಲೋಮೀಟರ್. ಏಳು ರಾಜ್ಯಗಳ್ಲಲಿ ಪರಿಸರ ಸಂರಕ್ಷಣಾ ಪಾದಯಾತ್ರೆ ಮಾಡಿ ಜನರನ್ನು ಸಂಘಟಿಸ್ದಿದೇನೆ. ಅಂಥ ಚಳವಳಿ ಮತ್ತೆ ಎಲೆಡೆ ಆರಂಭವಾಗಬೇಕು. ಅದು ಜನರ‍್ಲಲಿ ಪರಿಸರದ ಅರಿವು ಮೂಡಿಸುವ ಜನಾಂದೋಲನವಾಗಬೇಕು. ಅದು ನಿರಂತರವಾಗಬೇಕು. ಈ ಹೋರಾಟಕ್ಕೆ ಯುವಕರೇ ನಾಯಕತ್ವ ವಹಿಸಿಕೊಳ್ಳಬೇಕು.
*ಪಶ್ಚಿಮ ಘಟ್ಟಗಳಿಗೆ ‘ಘಾಸಿ’ಯಾದರೆ ಕೃಷಿ ಮೇಲೆ ನೇರ ಪರಿಣಾಮ ಬೀರುತ್ತದೆ. ಇಷ್ಟಾದರೂ ಪರಿಸರ ಹೋರಾಟಗಳಿಗೆ ಕೃಷಿಕರು ಜೊತೆಯಾಗುತ್ತ್ಲಿಲ. ನಿಮ್ಮ ‘ಚಿಪ್ಕೊ’ ಚಳವಳಿಗೆ ರೈತರ ಬೆಂಬಲವಿತ್ತೇ? ಹೇಗೆ ರೈತರನ್ನು ಸಂಘಟಿಸುತಿದ್ದಿರಿ?
ಚಿಪ್ಕೋ ಚಳವಳಿಯ್ಲಲ್ದಿದವರ‍್ಲಲಿ ಬಹುತೇಕರು ರೈತರು. ರಾಜ್ಯದ ‘ಅಪ್ಪಿಕೋ’ ಚಳವಳಿಯ್ಲಲೂ ರೈತರಿದ್ದರು. ಇವರೂ ರೈತರಲ್ಲವೇ(ಪಾಂಡುರಂಗ ಹೆಗಡೆಯವರನ್ನು ತೋರಿಸುತ್ತಾ)?  ಎಲರೂ ಜೊತೆಯಾದರೆ ಹೋರಾಟ ಬಲಗೊಳ್ಳುತ್ತದೆ. ಹಾಗೆ ಬಲಗೊಳ್ಳಬೇಕಾದರೆ ಕೃಷಿಕರಲ್ಲೂ ಪರಿಸರ ಪ್ರಜ್ಞೆ ಮೂಡಬೇಕು. ಆ ಕೆಲಸವನ್ನು ಪರಿಸರ ಹೋರಾಟಗಾರರೇ ಮಾಡಬೇಕು. ಪರಿಸರ – ಕೃಷಿ, ತಾಯಿ-ಮಕ್ಕಳ್ದಿದಂತೆ.
*ಇತ್ತೀಚೆಗೆ ಹಳ್ಳಿಗಳ್ಲಲಿ ಪರಿಸರ ಕಾಳಜಿ ಕುಂಠಿತವಾಗಿದೆ. ಗಣಿಗಾರಿಕೆ, ರಿಯಲ್ ಎಸ್ಟೇಟ್, ಭೂಮಾಫಿಯಾಗಳಿಂದಾಗಿ ಹಳ್ಳಿ ಬರಿದಾಗುತ್ತಿದೆ. ಹಳ್ಳಿಗಳ್ಲಲಿ ಪರಿಸರ ಜಾಗೃತಿ ಮೂಡಿಸುವ ಬಗೆ ಹೇಗೆ ?
ಹಳ್ಳಿಗಳ್ಲಲಿರುವ ಹಿರಿಯರಿಂದಲೇ ಜನರಿಗೆ ಪರಿಸರ ಪಾಠ ಹೇಳಿಸಿ. ಇಲಿ ಸೇರಿರುವ ನಿಮ್ಮಂತಹ ಪರಿಸರ ಹೋರಾಟಗಾರರು ಹಳ್ಳಿಗಳ್ಲಲಿ ವಾಸಿಸಲು ನಿರ್ಧರಿಸಿ. ಸಮುದಾಯ ಸಂಘಟನೆ ಮಾಡಿ. ಆಯಾ ಊರಿನ ಪರಿಸರ ಸಂರಕ್ಷಣೆಗೆ ಅಲಿಯವರೇ ಕಾವಲುಗಾರರಾಗಲಿ.
ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶವಾಗುತ್ತಿದೆ ? ಹಾಗಾದರೆ ‘ಅಭಿವೃದ್ಧಿ’ಯ ವ್ಯಾಖ್ಯಾನವೇನು ?
ಯೋಜನೆ ಮತ್ತು ಅಭಿವೃದ್ಧಿ ವ್ಯವಸ್ಥೆಯ್ಲಲಿ ವಿಕೇಂದ್ರೀಕರಣವಾಗಬೇಕು. ಅದು ಹಳ್ಳಿಗಳಿಗೆ, ಬ್ಲಾಕ್ ಮಟ್ಟಕ್ಕೆ ವರ್ಗಾವಣೆಯಾಗಬೇಕು. ಪರಿಸರಕ್ಕೆ ಹಾನಿಯಾಗದಂತಹ ‘ಪರಿಸರಪೂರಕ, ಸುಸ್ಥಿರ ಅಭಿವೃದ್ಧಿ’ ಜಾರಿಗೆ ಬರಬೇಕು. ಶಾಂತಿ, ಸಂತೋಷ ಹಾಗೂ ಸಂತುಷ್ಟಿ ನೆಲಸುವಂತೆ ಮಾಡುವುದೇ  ‘ಸುಸ್ಥಿರ ಅಭಿವೃದ್ಧಿ’.
ಪರಿಸರ ಹೋರಾಟಕ್ಕೆ ಯುವಕರಿಗೆ  ನಿಮ್ಮ ಕಿವಿಮಾತು?
ಎಲದಕ್ಕೂ ಸರ್ಕಾರವನ್ನು ಆಶ್ರಯಿಸಬೇಡಿ. ಅದೊಂದು ಹೃದಯವ್ಲಿಲದ ಯಂತ್ರವ್ದಿದಂತೆ. ಸರ್ಕಾರ ಎಂದೂ ಜನರ ಸಮಸ್ಯೆಗಳನ್ನು ಪರಿಹರಿಸುವುದ್ಲಿಲ. ಹಾಗಾಗಿ ಸರ್ಕಾರವನ್ನು ಮರೆತುಬಿಡಿ. ಅಭಿವೃದ್ಧಿ ವಿಷಯದ್ಲಲಿ ಪಾಶ್ಚಿಮಾತ್ಯರ ವಿಧಾನಗಳು ನಮಗೆ ಮಾದರಿಯ್ಲಲ. ಅವರು ಅಭಿವೃದ್ಧಿ ಹೆಸರ‍ಲ್ಲಿ ಬಡವರನ್ನು ಸುಲಿಗೆ ಮಾಡುತ್ತಾರೆ. ನಾವು ಅದನ್ನು ಅನುಸರಿಸಿದರೆ ನಮ್ಮ ದೇಶದ ಬಡವರನ್ನು ಸುಲಿಗೆ ಮಾಡಬೇಕಾಗುತ್ತದೆ. ನಮ್ಮದು ವನಸಂಸ್ಕೃತಿ. ಟಿಂಬರ್, ಮೈನಿಂಗ್ ಸಂಸ್ಕೃತಿಯ್ಲಲ. ಅದ್ಲೆಲ ನಮ್ಮನ್ನು ಆಳಿದ ಬ್ರಿಟಿಷರ ಕೊಡುಗೆ.

ನೆನಪಿರಲಿ, ಪ್ರೀತಿ ಕಾಮವಲ್ಲ

ಅಜ್ಜೀಪುರ ಪ್ರಕಾಶನ ುದ್ಘಾಟನೆ

ಹೀಗೆಂದು ಪುಸ್ತಕ ಬರೆದಿದ್ದಾರೆ ಗೆಳೆಯ ರವಿ ಅಜ್ಜೀಪುರ. ಇದು ಅವರ ಮೊದಲ ಕೃತಿ. ಕೃತಿ ಬಿಡುಗಡೆಯ ಜೊತೆಗೆ ‘ಅಜ್ಜೀಪುರ ಪ್ರಕಾಶನ’ ಕೂಡ ಉದ್ಘಾಟನೆಯಾಯಿತು. ಪತ್ರಕರ್ತ ರವಿಬೆಳೆಗೆರೆ , ಪುಸ್ತಕಗಳನ್ನು ಓದುವಂತೆ ಮಕ್ಕಳನ್ನು ಬೆಳೆಸಿ. ಮಹಿಳೆಯರು ಟೀವಿ ನೋಡ್ತಾ ಕಾಲ ಕಳೆಯದಿರಿ. ಪುರಷರು ಗುಂಡು ಹಾಕುತ್ತಾ ಸಮಯ ವ್ಯರ್ಥ ಮಾಡಬೇಡಿ. ಎಲ್ಲರೂ ಪುಸ್ತಕ ಓದಿ. ಪುಸ್ತಕ ಲೋಕವನ್ನು ವಿಸ್ತರಿಸಿ ಅಂತ ಸಲಹೆ ನೀಡಿದರು.

ಚಿತ್ರ ನಿರ್ದೇಶಕ ‘ಗುರುಪ್ರಸಾದ್ ಅಜ್ಜೀಪುರ ಪ್ರಕಾಶನ ಉದ್ಘಾಟಿಸಿದರು. ಟಿವಿ9 ಗೆಳೆಯ ರವಿಕುಮಾರ್ ಮುಖ್ಯಅತಿಥಿಯಾಗಿದ್ದರು. ಕವಯತ್ರಿ ಶಶಿಕಲ ವೀಯ್ಯಸ್ವಾಮಿ ಪುಸ್ತಕ ಕುರಿತು ಮಾತನಾಡಿದರು. ಟಿವಿ9 ರಾಘವಸೂರಿ, ಅಮರೇಶ್, ಸ್ನೇಹ ತಮ್ಮ ಸುಮಧುರ ಕಂಠದಿಂದ ಸಭಾ ಸದರನ್ನು ರಂಜಿಸಿದರು.

ಕಾರ್ಯಕ್ರಮಕ್ಕೆ ಬಾರದವರಿಗೆ ಇಲ್ಲಿವೆ ಕೆಲವು ಫೋಟೋಗಳು. ನೋಡಿ ಎಂಜಾಯ್ ಮಾಡಿ.

ಶಾರದೆ ದಯತೋರಿದೆ ನಿನ್ನ ಕರುಣೆಯ ಕಡಲಲ್ಲಿ ಮೊಗ್ಗಾದೆ.. ಅಮರೇಶ್, ರಾಘವಸೂರಿ ಗಾಯನ

ನೆನಪಿರಲಿ ಪ್ರೀತಿ ಕಾಮವಲ್ಲ ಪುಸ್ತಕ ಲೋಕಾರ್ಪಣೆ
ಪುಸ್ತಕ ಬಿಡುಗಡೆಗೆ ಮುನ್ನ ಗುರು - ರವಿ
ರವಿಯನ್ನು ಪೂರ್ವಿಯಾಗಿಸಿದ್ದ ಎ.ಆರ್.ಮಣಿಕಾಂತ್
ಕೃತಿ ಲೇಖಕ ರವಿ ಅಜ್ಜೀಪುರ
ಟಿವಿ 9 ರವಿಕುಮಾರ್ - ಇಂದಿನಿಂದ ಪುಸ್ತಕ ಓದುವ ಶಪಥ
ಹೀಗಿತ್ತು ಸಭಾಂಗಣ
ಸಭಾಂಗಣ ಭರ್ತಿ
ನವಿರಾದ ನಿರೂಪಣೆ - ಪತ್ರಕರ್ತೆ ಶ್ರೀದೇವಿ ಕಳಸದ

ಸರಳ, ಸಜ್ಜನಿಕೆಯ ‘ಪ್ರಕಾಶ’

ಎಂ.ಪಿ.ಪ್ರಕಾಶ

ರಾಜಕೀಯ ಮುತ್ಸದಿ ಎಂ.ಪಿ.ಪ್ರಕಾಶ್ ಇನ್ನಿಲ್ಲ

ಸರಳ ಸಜ್ಜನಿಕೆಗೆ ಹೆಸರಾದ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್  ಬುಧವಾರ(ಫೆ.9)ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರಿಗೆ ಪತ್ನಿ ಮತ್ತು ಮೂ

ವರು ಪುತ್ರರು ಇದ್ದರು. ಮೃತರ ಅಂತ್ಯಕ್ಷಿಯೆಯನ್ನು ಅವರ ಸ್ಥಳವಾದ ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ ನಡೆಸುವುದಾಗಿ ಕುಟುಂಬ ಮೂಲಗಳು  ತಿಳಿಸಿವೆ.

———————————————————

ಡಿ.ಕೆ.ಚೌಟರ ಜೊತೆ ಎಂ.ಪಿ.ಪ್ರಕಾಶರು

ಚೌಟರ ತೋಟದಲ್ಲಿ ಪ್ರಕಾಶರ  ಜೊತೆಯಲ್ಲಿ…

ಅದು ೨೦೦೬ ರಜನವರಿ ತಿಂಗಳು. ಕಾಸರಗೋಡಿನ ಮಿಯಪದುವಿನಲ್ಲಿ ಸಿ.ಕೆ.ಚೌಟರು ತಮ್ಮ ತೋಟದಲ್ಲಿ ತೆಂಗು ಸಮಾವೇಶ ಆಯೋಜಿಸಿದ್ದರು. ಆ ಕಾರ್ಯಕ್ರಮದ ಮುಖ್ಯ ಅತಿಥಿ ಅಂದಿನ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್.

ಕೃಷಿ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿಯವರು ಬರ್ತಾರೆಯೇ, ಎಲ್ಲೋ ಚೌಟರಿಗೆ ಭ್ರಮೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದಾಗಲೇ, ಕೆಳಗಡೆ ಕಾರಿನಿಂದ ಇಳಿದು ದಿಬ್ಬ ಹತ್ತಿ ಸಭಾಂಗಣದೆಡೆಗೆ ನಡೆದುಬರುತ್ತಿದ್ದರು ಎಂ.ಪಿ.ಪ್ರಕಾಶ್.

ಹಿಂಬಾಲಕರ ದಂಡಿಲ್ಲದೇ, ಅಂಗರಕ್ಷ

ಕರಿಲ್ಲದೇ ಒಬ್ಬ ಸಾಮಾನ್ಯ ಪ್ರಜೆಯಂತೆ ಆಗಮಿಸುತ್ತಿದ್ದ ಪ್ರಕಾಶ್ ಅವರನ್ನು ಕಂಡು ನಾನು ಪುಳಕಿತನಾದೆ. ಕಾರ್ಯಕ್ರಮಕ್ಕೆ ಬಂದವರೇ ಅಕ್ಕಪಕ್ಕದಲ್ಲಿದ್ದ ನಾಗತಿಹಳ್ಳಿ ಚಂದ್ರಶೇಖರ್, ಸಿಜಿಕೆ, ಸಿ.ಕೆ.ಚೌಟರು, ಡಿ.ಕೆ.ಚೌಟರ.. ಇತ್ಯಾದಿ ಇತ್ಯಾದಿ ಆಪ್ತೇಷ್ಟರನ್ನು ಮಾತನಾಡಿಸಿ, ಗುಂಪು ಚರ್ಚೆಗೆ ಕುಳಿತರು.

ತೆಂಗು ಬೆಳೆಗಾರರ ಎಲ್ಲ ಸಮಸ್ಯೆಗಳನ್ನು ಒಬ್ಬ ಶಿಬಿರಾರ್ಥಿಯಂತೆ ಪೆನ್ನು ಪೇಪರ್ ಹಿಡಿದು ಮಾಹಿತಿ ದಾಖಲಿಸಿಕೊಂಡರು. ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು. ಕಾರ್ಯಕ್ರಮ ಮುಗಿಯುವವರೆಗೂ  (ರಾ

ಜಲಪತ್ರಕರ್ತ 'ಶ್ರೀ' ಪಡ್ರೆಯವರೊಂದಿಗೆ

ತ್ರಿ ೮ ಆಗಿತ್ತು) ಜನರ ನಡುವೆಯೇ ಇದ್ದರು.

ಅದೇ ಮೊದಲು ನಾನು ಪ್ರಕಾಶ್ ಅವರನ್ನು ಹತ್ತಿರದಿಂದ ನೋಡಿದ್ದು ಮಾತನಾಡಿದ್ದು. ಬಹಳ ವಿಚಿತ್ರ ಎಂದರೆ, ಅವರು ಎಲ್ಲರೊಡನೆ ಎಲ್ಲ ವಿಷಯಗಳನ್ನೂ ಮಾತನಾಡುತ್ತಿದ್ದರು. ನಾವು ಹಿಂಜರಿಯುತ್ತಿದ್ದರೂ ‘ನಮ್ಮೂರು ಹಾಗೆ, ನಿಮ್ಮೂರು ಹೇಗೆ’ ಎಂದೆಲ್ಲ ವಿಚಾರಿಸುತ್ತಿದ್ದರು.

ಸುಮಾರು ಮೂರ‍್ನಾಲ್ಕು ಗಂಟೆಗಳ ಕಾಲ ಚೌಟರ ತೋಟವನ್ನು ಅವರೊಡನೆ ಸುತ್ತಾಡಿದೆ. ದಾರಿಯುದ್ದಕ್ಕೂ ರಾಜ್ಯದ ಕೃಷಿ ವಿಷಯಗಳನ್ನು ಮೆಲುಕು ಹಾಕುತ್ತಾ ಹೊರಟರು. ನಡು ನಡುವೆ ಬಯಲು ಸೀಮೆ – ಮಲೆನಾಡಿಗೆ ಹೋಲಿಸಿ ಮಾತನಾಡಿದರು. ಬಾಳೆ ಕೃಷಿ, ಅಡಕೆ ಕೃಷಿ, ಮಣ್ಣಿನ ಗುಣ, ನೀರಿನ ಸಮಸ್ಯೆ.. ಕೂಲಿ ಆಳುಗಳ ವಿಚಾರ.. ಹೀಗೆ ಚೌಟರೊಂದಿಗೆ ಸಾಕಷ್ಟು ಚರ್ಚೆ ನಡೆಸಿದರು.

ಕಾಫಿಯೊಂದಿಗೆ ಸಾವಯವ ಚಿತ್ರಾ ಪುಸ್ತಕ ಓದುತ್ತಾ.. ಚಿತ್ರ: ರವಿಶಂಕರ ದೊಡ್ಡಮಾಣಿ

ಹಳ್ಳಿಯ ಬದುಕು ಹಾಳಾಗುತ್ತಿರುವ ಬಗ್ಗೆ ವ್ಯಥೆಪಟ್ಟರು. ಎಲ್ಲದಕ್ಕಿಂತ ಹೆಚ್ಚಾಗಿ ನಾನೊಬ್ಬ ಜನಪ್ರತಿನಿಧಿಯಾಗಿ ತಮ್ಮೂರಿನ ಏತನೀರಾವರಿ ಯೋಜನೆಯೊಂದನ್ನು ಜಾರಿಗೆ ತರಲಾಗಿರಲಿಲ್ಲವಲ್ಲಾ

ಎಂಬ ನೋವನ್ನೂ ಇದೇ ಸಂದರ್ಭ

ದಲ್ಲಿ ಹಂಚಿಕೊಂಡರು.

ಅವರ ಜೊತೆ ಕಳೆದ ಆ ಸಮಯ ಜೀವನದಲ್ಲಿ ಮರೆಯಲಾಗದ ಕ್ಷಣ. ಆ ನೆನಪಿಗಾಗಿ ನನ್ನ ಮೊದಲ ಕೃತಿ ‘ಸಾವಯವ ಚಿತ್ತಾರ’ ವನ್ನು ಅವರ ಕೈಗಿತ್ತೆ. ಒಂದು ಕ್ಷಣ ಪುಸ್ತಕ ತಿರುವಿ ಹಾಕಿ, ‘ನಾಡಿನಲ್ಲಿ ಇಷ್ಟೆಲ್ಲಾ ಸಾವಯವ ಕೃಷಿಕರಿದ್ದಾರೆಯೇ. ಒಳ್ಳೆ ದಾಖಲಾತಿ ಮಾಡಿದ್ದೀರಿ’ ಎಂದರು. ಅವತ್ತು ನನಗೆ ಪ್ರಶಸ್ತಿ ಸಿಕ್ಕಷ್ಟೇ ಸಂತೋಷವಾಯಿತು.

ಅಷ್ಟೆಲ್ಲ ಅವರೊಟ್ಟಿಗೆ ಮಾತನಾಡಿದ ಮೇಲೆಯೇ ಪ್ರಕಾಶ್ ಅವರನ್ನು ಎಲ್ಲರೂ ‘ರಾಜಕೀಯ ಮುತ್ಸದಿ ಎಂದು ಗೊತ್ತಾಗಿದ್ದು. ಅಂದು ಅವರು ಆಡಿದ ಮಾತುಗಳಲ್ಲಿ ಶಿವರಾಮಕಾರಂತರ ಆಶಯಗಳಿದ್ದವು. ಕೃಷಿಕನೊಬ್ಬನ ಅಂತರಂಗದ ಮಾತುಗಳಿದ್ದವು. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ‘ಡೌನ್ ಟು ಅರ್ಥ್’ ವಿಚಾರಗಳಿದ್ದವು.

ಇಂಥ ಧೀಮಂತ ಚೇತನ ಇಂದು ಚಿರನಿದ್ರೆಗೆ ಸರಿದಿದೆ. ಅವರ ಪತ್ನಿ, ಪುತ್ರರಿಗೆ ಪ್ರಕಾಶ್ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಆಶಿಸುತ್ತೇನೆ.

—————

ಚೌಟರ ತೋಟದಲ್ಲಿ ಪ್ರಕಾಶ ಅವರ ಜೊತೆಯಲ್ಲಿ ಕಳೆದ ಕ್ಷಣಗಳನ್ನು ನಾನು ಮತ್ತು ಗೆಳೆಯ ರವಿಶಂಕರ ದೊಡ್ಡಮಾಣಿ ಕಾಮೆರಾದಲ್ಲಿ ಸೆರೆ ಹಿಡಿದಿದ್ದೆವು. ಆ ಚಿತ್ತಗಳು https://picasaweb.google.com/ganadhal/MPPrakashPhotos# ಇಲ್ಲಿವೆ.

ಸಿ.ಕೆ.ಚೌಟರೊಂದಿಗೆ ಜಿಪ್ಸಿಯಲ್ಲಿ ಪ್ರಕಾಶರು

 

ಸೂರ್ಯೋದಯ ಸಮಯದಲ್ಲಿ...
ಚೌಟದ್ವಯರೊಂದಿಗೆ ತೆಂಗಿನ ನ್ಯೂಕ್ಲಿಯಸ್ ಗಾರ್ಡ್ ನಲ್ಲಿ

ಕರುನಾಡಿನಲ್ಲಿ ‘ಎಂಡಾಸುರ’

ಎಂಡೋಸಲ್ಫಾನ್ ಎಂಬ ಕೀಟನಾಶಕದ ‘ಬೀಜ’ ನಾಡಿನ ಮೂಲೆ ಮೂಲೆಗಳಲ್ಲಿ ಮೊಳೆಯುತ್ತಿದೆ. ಗೇರು, ಭತ್ತ, ಕಾಫಿ, ತೊಗರಿ ತರಕಾರಿಯಲ್ಲೂ ಎಂಡೋ ವಿಷದ ಪಳೆಯುಳಿಕೆಗಳಿವೆ. ಶೀಘ್ರ ಎಚ್ಚೆತ್ತುಕೊಳ್ಳದಿದ್ದರೆ ಕೊಕ್ಕಡ, ಪಟ್ರಮೆಯಂಥ ದುರಂತಗಳು ಮತ್ತೆ ಮರುಕಳಿಸಬಹುದು.

ಮಮತೆಯ ಮಡಿಲಲ್ಲಿ ಅಂಗವೈಕಲ್ಯವನ್ನೇ ಮರೆತ ಎಂಡೋಸಲ್ಫಾನ್ ಸಂತ್ರಸ್ತ ಬಾಲಕ

ಬೆಳಗ್ಗೆಯೆದ್ದರೆ, ಸಂಜೆಯಾದರೆ ಕಾಫಿ-ಚಹಾ ಕುಡಿಯುತ್ತೀವಲ್ಲ; ಚಿತ್ರಾನ್ನ, ಪುಳಿಯೋಗರೆ, ಪಲಾವ್ ಎಂದು ಸೋನಾ ಮಸೂರಿ ಅಕ್ಕಿಯ ಉಣ್ಣುತ್ತೀವಲ್ಲ; ಊಟದಲ್ಲಿ ತೊಗರಿಬೇಳೆ ತೊವ್ವೆಯನ್ನು, ಹೀರೆಕಾಯಿ ಖಾದ್ಯವನ್ನು ಚಪ್ಪರಿಸುತ್ತೇವಲ್ಲ; ಶ್ಯಾವಿಗೆ ಪಾಯಸದಲ್ಲಿರುವ ಗೋಡಂಬಿಯನ್ನು ಪೌಷ್ಟಿಕ ಎಂದು ತಿನ್ನುತ್ತೇವಲ್ಲ- ಹಾಂ, ಇವೆಲ್ಲವೂ ವಿಷಮಯ!
-ಕಾರಣ, ‘ಎಂಡೋಸಲ್ಫಾನ್’ನಂತಹ ಕೀಟನಾಶಕಗಳು!

ಪಕ್ಕದ ಕೇರಳದಲ್ಲಿ ಇದೀಗ ಎಂಡೋಸಲ್ಫಾನ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ನಿಷೇಧವಿದ್ದರೂ ವ್ಯಾಪಕವಾಗಿ ಬಳಕೆಯಾಗುತ್ತಿರುವ ಈ ಕೀಟನಾಶಕವನ್ನು ದೇಶದಿಂದಲೇ ಹೊರಗಟ್ಟುವಂತೆ ವಿವಿಧ ಕೃಷಿ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ, ಪಟ್ರಮೆ ಮತ್ತು ನಿಡ್ಲೆ ಗ್ರಾಮಗಳಲ್ಲೂ ಎಂಡೋಸಲ್ಫಾನ್ ಉಪಟಳವಿದೆ. ಅಲ್ಲಿನ ಹಲವು ಕುಟುಂಬಗಳು ವಿಷದ ಭಾದೆ ಅನುಭವಿಸುತ್ತಿವೆ. ಗೇರು ತೋಟಗಳ ಮೇಲೆ ನಡೆದ ಎಂಡೋಸಲ್ಫಾನ್ ಅಭಿಷೇಕದಿಂದ 200ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ರೋಗಗ್ರಸ್ತರಾಗಿದ್ದಾರೆ. ಆದರೆ ಈ ಬಗ್ಗೆ ಮಾತನಾಡುವವರೇ ಕಡಿಮೆ.

ಮೇಲಿನ ಮೂರೂ ಗ್ರಾಮಗಳಲ್ಲಿ ಅಂಗವಿಕಲರು, ಬುದ್ಧಿಮಾಂದ್ಯರು, ಹುಟ್ಟುಕುರುಡರು, ಹೆಳವರು.. ಹೀಗೆ ಎಂಡೋ ಬಾಧೆಯ ನೆರಳಿನಲ್ಲೇ ಜೀವನ ಸಾಗಿಸುವವ

ರಿದ್ದಾರೆ. ಎಂಡೋ ಇವರ ವಂಶವಾಹಿಯಲ್ಲಿಯೇ ನೆಲೆ ಕಂಡುಕೊಂಡಿದೆ. ತಾಯಿಯ ಹೊಟ್ಟೆಯಲ್ಲಿರುವ ಮಕ್ಕಳನ್ನೂ ಎಂಡೋ ಭೂತ ಕಾಡುತ್ತಿದೆ. ಸಾರ್ವಜನಿಕರು ಒಕ್ಕೊರಲಿನಿಂದ ಪ್ರತಿಭಟಿಸಿದ್ದರಿಂದ 2002ರಲ್ಲಿ ಎಂಡೋಸಲ್ಫಾನ್ ಸಿಂಪಡಣೆ ಸ್ಥಗಿತಗೊಂಡಿದೆ. ಆದರೆ ಪರಿಣಾಮಗಳು?

ಸರ್ವವೂ ವಿಷಮಯ
ಮಳೆ ನಿಂತರೂ ಮರದ ಹನಿ ನಿಲ್ಲದು. ‘ಎಂಡೋ ಸಿಂಪಡಣೆ’ ನಿಂತರೂ ಅದರ ಪರಿಣಾಮ ಮಾತ್ರ ಈ ಮೂರೂ ಗ್ರಾಮಗಳ ನೆಲ, ಜಲ, ಸಸ್ಯಗಳಲ್ಲಿ ವ್ಯಾಪಿಸಿಕೊಂಡಿದೆ. ಈ ವಿಷದಿಂದ ಕಲುಷಿತಗೊಂಡಿದ್ದ ನದಿಯಲ್ಲಿನ ಸತ್ತ ಮೀನುಗಳನ್ನು ತಿಂದವರು ಇಂದೂ ರೋಗದಿಂದ ಬಳಲುತ್ತಿದ್ದಾರೆ. ಕಳೆದ 20 ವರ್ಷಗಳಲ್ಲಿ ಅಂಗವಿಕಲ ಮಕ್ಕಳ ಜನನ, ಗರ್ಭಪಾತದ ಪ್ರಕರಣಗಳು ಹೆಚ್ಚಾಗಿವೆ ಎಂದು ವೈದ್ಯರೂ ಸ್ಪಷ್ಟಪಡಿಸುತ್ತಾರೆ.

‘ಎಂಡೋಸಲ್ಫಾನ್ ಸಿಂಪಡಣೆ ನಿಂತ ನಂತರ ಹೊಸ ಕಾಯಿಲೆಗಳು ಕಂಡು ಬಂದಿಲ್ಲ. ಹಳೆಯ ಕಾಯಿಲೆಗಳು ಕಡಿಮೆಯಾಗಿಲ್ಲ’ ಎನ್ನುವುದು ಸ್ಥಳೀಯ ವೈದ್ಯ ಡಾ.ಮುರು

ಳೀಧರ್ ವಿವರಣೆ. ಇತ್ತೀಚೆಗೆ ಕೊಕ್ಕಡದಿಂದ ಮದುವೆಯಾದ ಹೆಣ್ಣುಮಗಳಿಗೆ ಅಂಗವಿಕಲ ಮಗು ಜನಿಸಿದೆ. ಮುಖ್ಯಮಂತ್ರಿಗಳು ಪರಿಹಾರ ವಿತರಣೆಗೆ ಆಗಮಿಸುವ ಮುನ್ನ ಮೂವತ್ತೈದರ ಹರೆಯದ ಯುವಕನೊಬ್ಬ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾನೆ ಎನ್ನುವುದು ಸ್ವತಃ ಎಂಡೋ ಫಲಾನುಭವಿಯಾಗಿರುವ ಕೊಕ್ಕಡದ ಶ್ರೀಧರ್‌ಗೌಡರ ವಿವರಣೆ.

ಇದೇ ಗ್ರಾಮದ ಶಿಕ್ಷಕ ಜೋಸೆಫ್ ಪಿರೇರಾ ಈ ಮಾತಿಗೆ ಸಮ್ಮತಿಯ ಮುದ್ರೆ ಒತ್ತುತ್ತಾರೆ. ‘ಇಲ್ಲಿ ರೋಗಗ್ರಸ್ತರು ಸುಧಾರಿಸಿಲ್ಲ. ಸಂತೋಷ್, ಚಿತ್ರ, ನಿರ್ಮಲಾರಂಥವರು ಹಳೆಯ ಕಾಯಿಲೆಗಳಿಂದ ನರಳುತ್ತಿದ್ದಾರೆ. ರೋಗಬಾಧೆ ತೀವ್ರವಾಗಿ ಕೆಲವರು ಸಾವನ್ನಪ್ಪಿದ್ದಾರೆ. ಹಣದ ಕೊರತೆಯಿಂದಾಗಿ ಚಿಕಿತ್ಸೆ ಪಡೆಯಲು ಕಷ್ಟವಾಗುತ್ತಿದೆ’ ಎನ್ನುವುದು ಅವರ ಅಳಲು.

ಕಾಫಿ ನಾಡಿನಲ್ಲೂ ಸದ್ದು
ದಕ್ಷಿಣ ಕನ್ನಡದ ಮೂರು ಗ್ರಾಮಗಳನ್ನು ಎಡಬಿಡದೇ ಕಾಡುತ್ತಿರುವ ಎಂಡೋಸಲ್ಫಾನ್ ಕರ್ನಾಟಕದ ಕಾಫಿನಾಡನ್ನೂ ಬಿಟ್ಟಿಲ್ಲ. ಆದರೆ ಅನಾಹುತ ಉಂಟು ಮಾಡುವಂತಹ ಮಟ್ಟಕ್ಕೆ ಬೆಳವಣಿಗೆಯಾಗಿಲ್ಲ.

ಕರಾವಳಿ ಸರಹದ್ದು ದಾಟಿದ ಎಂಡೋ ಘಟ್ಟ ಹತ್ತಿ ಚಿಕ್ಕಮಗಳೂರಿಗೆ ಬಂದಿದೆ. ಕಳೆದ ವರ್ಷ ಚಿಕ್ಕಮಗಳೂರಿನಲ್ಲಿ ಕಾಫಿಗೆ ಕಾಯಿಕೊರಕ ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿತ್ತು

. ವಿಜ್ಞಾನಿಗಳ ‘ಸಲಹೆ’ಯ ಮೇರೆಗೆ ಎಂಡೋ ಪ್ರಾಶನ ನಡೆಯಿತು. ಸಾವಿರಾರು ಎಕರೆ ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಿದ್ದಾಯಿತು. ರೋಗ ನಿಯಂತ್ರಣಕ್ಕೆ ಬಂದಿತೆಂಬ ಸಮಾಧಾನ ಬೆಳೆಗಾರರಿಗೆ. ಆದರೆ ಗದ್ದೆ

ಅಂಕು-ಡೊಂಕಾಗಿರುವ ಕೈಗಳ ಬೆರಳುಗಳು.. ಇಡೀ ಎಂಡೋಸಲ್ಫಾನ್ ದುರಂತವನ್ನು ವಿವರಿಸುತ್ತವೆ

ಬಯಲು, ಅಂತರ್ಜಲ, ಕೆರೆ, ಹೊಂಡಗಳು ಮಲಿನಗೊಂಡವು. ಜೀವವೈವಿಧ್ಯ ನಾಶವಾಯಿತು. ಇವುಗಳು ಲೆಕ್ಕಕ್ಕೆ ಸಿಗಲಿಲ್ಲ, ಬೆಳಕಿಗೆ ಬರಲಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ ಮೂಡಿಗೆರೆಯ ಕಾಫಿ ಬೆಳೆಗಾರ ಭೂತನಕಾಡು ಅರವಿಂದ.

ಶುಂಠಿ, ಏಲಕ್ಕಿ, ಕಾಳುಮೆಣಸು ಕೃಷಿ ವ್ಯಾಪಕವಾಗಿರುವ ಸಕಲೇಶಪುರ, ಚಿಕ್ಕಮಗಳೂರು ತೋಟಗಳಲ್ಲಿ ಎಂಡೋಸಲ್ಫಾನ್‌ನಂತಹ ಕೀಟನಾಶಕಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ‘ಗುತ್ತಿಗೆ ಕೃಷಿ’ ಕೃಷಿ ಕರ್ನಾಟಕಕ್ಕೆ ಕಾಲಿಟ್ಟ ಮೇಲೆ ಭತ್ತದ ಗದ್ದೆಗಳೆಲ್ಲ ‘ವಿಷದ ತೊಟ್ಟಿಲು’- ‘ವಿಷಕನ್ಯೆ’ ಎನ್ನಲು ಅಡ್ಡಿಯಿಲ್ಲ. ಏಕೆಂದರೆ, ಅಲ್ಲೆಗ ಏನು ಬೆಳೆಯಬೇಕಾದರೂ ‘ವಿಷ’ದ ನೆರವು

ಬೇಕು. ಆ ತೋಟಗಳಲ್ಲಿ ಬಳಸುವ ಕೀಟನಾಶಕಗಳಿಗೆ ಅಳತೆ-ಪ್ರಮಾಣವೇನಿಲ್ಲ. ಅಂಗಡಿಯವರು ಹೇಳಿದಷ್ಟು, ಬೆಳೆಗಾರರು ಬಳಸಿದಷ್ಟು!

ಮಲೆನಾಡಿನಲ್ಲಿ ಕೀಟನಾಶಕದ ಪ್ರಮಾಣ ಹೆಚ್ಚಿದ ಮೇಲೆ ‘ವಿಷಮುಕ್ತ’ ಆಹಾರ ಬೆಳವಣಿಗೆ ಕಷ್ಟವಾಗಿದೆ. ಕಾಫಿ ತೋಟದ ತಗ್ಗಿನಲ್ಲಿರುವ ಗದ್ದೆಗಳಲ್ಲಿ ಸಾವಯವ ಕೃಷಿ ಅಸಾಧ್ಯವಾಗಿದೆ. ಇಂಥ ಪ್ರದೇಶದಲ್ಲಿ ಬೆಳೆದ ಬೆಳೆಗೆ ಸಾವಯವ ಕೃಷಿ ದೃಢೀಕರಣ ಪ್ರಮಾಣ ಪತ್ರಗಳನ್ನು

ನೀಡಲಾಗುವುದಿಲ್ಲ ಎನ್ನುತ್ತದೆ ಸಂಬಂಧಪಟ್ಟ ಸಂಸ್ಥೆ. ಹಾಗಾದರೆ ಮಹಾನಗರಗಳಿಗೆ ಸರಬರಾಜಾಗುವ ಸಾವಯವ ಉತ್ಪನ್ನಗಳ ಕಥೆ

ಏನು?

ಅನ್ನದ ಬಟ್ಟಲಲ್ಲೂ..

ದಕ್ಷಿಣದಲ್ಲಷ್ಟೇ ಅಲ್ಲ, ಉತ್ತರ ಕರ್ನಾಟಕದಲ್ಲೂ ‘ಎಂಡೋ’ ಬಳಕೆಯಲ್ಲಿದೆ. ತುಂಗಭದ್ರಾ ಜಲಾಶಯದ ಆಶ್ರಯದಲ್ಲಿ ಭತ್ತ ಬೆಳೆಯುವ ಕೊಪ್ಪಳ, ಗಂಗಾವತಿ ಮತ್ತು ರಾಯಚೂರು ಜಿಲ್ಲೆಗಳಲ್ಲಿನ ಗದ್ದೆ ಅಂಗಳದಲ್ಲಿ ಕೀಟನಾಶಕಗಳ ವಾಸನೆ ಮೂಗಿಗೆ ಅಡರುತ್ತದೆ. ಆಂಧ್ರಪ್ರದೇಶದ ಗುತ್ತಿಗೆದಾರರು ಈ ಭಾಗಕ್ಕೆ ಕಾಲಿಟ್ಟ ಮೇಲೆ ಎಂಡೋಸಲ್ಫಾನ್ ಬಳಕೆ ಹೆಚ್ಚಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಮೊನ್ನೆ ಗುಲ್ಬರ್ಗದಲ್ಲಿ ತೊಗರಿ ಬೆಳೆಗೆ ಎಂಡೋಸಲ್ಫಾನ್ ಸಿಂಪಡಿಸುವಾಗ, ಎರಡು ಎತ್ತುಗಳು ‘ಘಾಟಿಗೆ ತತ್ತರಿಸಿ ಸ್ಥಳದಲ್ಲೇ ಕೊನೆಯುಸಿರೆಳೆದಿವೆ. ಕಡೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಕೀಟನಾಶಕ ಸಿಂಪಡಿಸುತ್ತಿದ್ದ ರೈತ ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದಾನೆ. ಇವೆಲ್ಲ ದುಷ್ಟಾಂತಗಳಲ್ಲ, ನೈಜ ಘಟನೆಗಳು.

ಕೀಟನಾಶಕದ ವಿಷಯ ಮಾತಾಡುವಾಗ ಗೆಳೆಯರೊಬ್ಬರು ಹೇಳಿದ ಘಟನೆ ನೆನಪಾಗುತ್ತದೆ. ಕೊಪ್ಪಳ, ಗಂಗಾವತಿ ಭಾಗದ ರೈತರು ಕೀಟನಾಶಕ ಸಿಂಪಡಿಸುವಾಗ, ವೈದ್ಯರೊಬ್ಬರನ್ನು ಚಹಾ ಕುಡಿಯಲು ಆಹ್ವಾನಿಸುತ್ತಾರೆ. ಅರೆ ವೈದ್ಯರಿಗೂ, ಕೀಟನಾಶಕ ಸಿಂಪಡಣೆಗೆ ಏನು ಸಂಬಂಧ ಎಂದು ಕೇಳಿದರೆ, ‘ಏನಿಲ್ಲ, ಸ್ಪ್ರೇ ಮಾಡ್ಬೇಕಾದರೆ, ಏನಾದರೂ ಹೆಚ್ಚೂ-ಕಡಿಮೆ ಆದ್ರೆ ಇರಲಿ ಅಂತ ಡಾಕ್ಟರ್ ಕರೆದಿರ್ತೀವಿ? ಅಷ್ಟೇ’ ಎನ್ನುತ್ತಾರೆ.

ಕೀಟನಾಶಕ ಸಿಂಪಡಿಸುವವನಿಗೇ ಇಷ್ಟು ತ್ರಾಸಾದರೆ ಇನ್ನು ‘ಸೋನಾ ಮಸೂರಿ ಸಣ್ಣಕ್ಕಿಯೇ ಬೇಕೆಂದು ಹಟ ಹಿಡಿದು ಉಣ್ಣುವ ಗ್ರಾಹಕನ ಪಾಡು? ಈ ವಿಷ ಭೂಮಿಗಿಳಿದಾಗ ಅಲ್ಲಿರುವ ಕ್ರಿಮಿ-ಕೀಟಗಳ ಪಾಡು? ಹೀಗೆ ನಿತ್ಯದ ಆಹಾರದ ಮೂಲಕ ನಮಗರಿವಿಲ್ಲದಂತೆ ಅನ್ನದ ಬಟ್ಟಲಿಗೆ ‘ಎಂಡೋಸಲ್ಫಾನ್’ನಂತಹ ಕೀಟನಾಶಕಗಳು ಬಂದು ಬೀಳುತ್ತಿವೆ. ಹಾಗಾದರೆ ನಾವೆಷ್ಟು ಸುರಕ್ಷಿತರು?

ಭತ್ತದ ಕಥೆ ಬಿಡಿ ಸ್ವಾಮಿ, ಬೆಂಗಳೂರು ಗ್ರಾಮಾಂತರ- ಕೋಲಾರ ಜಿಲ್ಲೆಗಳಲ್ಲಿ ಬೆಳೆಯುವ ತರಕಾರಿಯಲ್ಲಿಯೂ ಎಂಡೋ ವಿಷ ಅಡಗಿದೆ ಎನ್ನುತ್ತವೆ ಇತ್ತೀಚಿನ ಕೆಲವು ಅಧ್ಯಯನಗಳು. ತಾಜಾ ಕೀಟನಾಶಕಗಳೊಂದಿಗೆ ಈ ತರಕಾರಿಯೂ ನಮ್ಮ ಉದರ ಸೇರುತ್ತಿದೆ. ಪುರಾಣದ ಈಶ್ವರನಿಗೆ ಕಂಠದಲ್ಲಿ ಮಾತ್ರ ವಿಷ. ಆಧುನಿಕ ಮನುಷ್ಯನಿಗೆ ಮೈಯೆಲ್ಲಾ ವಿಷ!

ದುರಂತಗಳು ಕಣ್ಣೆದುರೇ ಇದ್ದರೂ, ಎಂಡೋಸಲ್ಫಾನ್‌ನಂತಹ ಕೀಟನಾಶಕಗಳನ್ನು ಬಳಸಿ ಎಂದು ಕೃಷಿ ವಿಜ್ಞಾನಿಗಳು ರೈತರಿಗೆ ‘ಸಲಹೆ’ ನೀಡುತ್ತಿದ್ದಾರೆ. ಏನನ್ನುವುದು ಜೀವದೊಂದಿಗಿನ ಈ ಚೋದ್ಯಕ್ಕೆ?