
ಹೂಗೊಂಚಲಿಗೆ ಬಣ್ಣ, ಪುಟ್ಟ ಹಕ್ಕಿಗೆ ಹಾಡು
ಬೆಟ್ಟಕ್ಕೆ ಎದೆಯೆತ್ತಿ ನ್ಲಿಲುವ ಧೈರ್ಯ
ಹೊಳೆಯ ನೀರಿಗೆ ಉಗುರ ಬಿಸಿ
ಗಾಳಿ ನೆರಳಿಗೆ ತಂಪು ತಂದ ಯುಗಾದಿ
ಕುಸಿದು ಕೊರಗುವ ಬಾಳಿಗೇನ ತಂದೆ…
– ಕವಿ ಡಾ. ಸಿದ್ಧಲಿಂಗಯ್ಯ ಅವರ ಈ ಕವನದ ಸಾಲುಗಳು ವಸಂತ ಋತುವಿನೊಂದಿಗೆ ಆಗಮಿಸುವ ಯುಗಾದಿ ಹಬ್ಬದ ಸಡಗರವನ್ನು ಮೆಲುಕು ಹಾಕಿಸುತ್ತದೆ.
ನಿಜ, ಯುಗಾದಿ ಎಂದರೆ ಹೊಸತನ. ಮಕ್ಕಳಿಗೆ ಹೊಸ ಬಟ್ಟೆಯ ಸಂಭ್ರಮ. ಕೃಷಿಕರಿಗೆ ಮಳೆ-ಬೆಳೆ-ನಕ್ಷತ್ರಗಳ ವರ್ಷದ ಲೆಕ್ಕಾಚಾರ, ಉದಿಮೆದಾರರಿಗೆ ವರ್ಷದ ಸೋಲು-ಗೆಲುವನ್ನು ನಿರ್ಧರಿಸುವ ಸಮಯ. ಹೀಗೆ ಯುಗಾದಿ ಹಬ್ಬ ಹಲವು ‘ಹೊಸತು’ಗಳ ಸಂಗಮ.
ಯುಗಾದಿ – ಚೈತ್ರ ಮಾಸದ ಮೊದಲ ದಿನ. ಹೊಸ ಸಂವತ್ಸರದ ಮೊದಲ ಹಬ್ಬ. ದೇವಾನು-ದೇವತೆಗಳ ಸೋಂಕ್ಲಿಲದ ನಿಸರ್ಗದ ಹಬ್ಬ. ಹೊಸ ಮಳೆಗಾಲಕ್ಕೆ ಶ್ರೀಕಾರ. ಒಳ್ಳೆಯದು – ಕೆಟ್ಟದ್ದನ್ನು ಸಮನಾಗಿ ಸ್ವೀಕರಿಸುವ ಆಶಯದಿಂದ ಬೇವು-ಬ್ಲೆಲ ಮ್ಲೆಲುವ ಹಬ್ಬ. ಹೊಸ ಬಟ್ಟೆ ತೊಟ್ಟು ಹೊಟ್ಟೆ ತುಂಬಾ ಒಬ್ಬಟ್ಟು ತಿಂದು ಎಳೆ ಚಿಗುರಿನ ಹೊಂಗೆ, ಬೇವು, ಹಿಪ್ಪೆ ಮರದ ನೆರಳ್ಲಲಿ ಮೈ ಹರವಿಕೊಂಡು ವಿರಮಿಸಿಕೊಳ್ಳುವ ದಿನ.

ಯುಗಾದಿ ಸಂಪೂರ್ಣ ವಿರಾಮದ ಕೊನೆಯ ಮತ್ತು ದುಡಿಮೆಯ ಆರಂಭ- ಇವೆರಡರ ನಡುವೆ ಬರುವಂತಹ ಹಬ್ಬ. ಹಾಗಾಗಿಯೇ ಈ ಹಬ್ಬದ್ಲಲಿ ಸಿಹಿ-ಕಹಿಯ ಮಿಶ್ರಣವಿರುತ್ತದೆ. ಕಾಮನ ಹಬ್ಬ ನಿಸರ್ಗದ್ಲಲಿ ವರ್ಷದ ಕೊನೆಯ ಹಬ್ಬವಾದರೆ, ಯುಗಾದಿ ವರ್ಷದ ಮೊದಲ ಹಬ್ಬ. ಕಾಮನ ಹಬ್ಬವನ್ನು ಹಳ್ಳಿಗರು ಕದಿರೆ ಹುಣ್ಣಿಮೆ ಎಂತಲೂ ಕರೆಯುತ್ತಾರೆ. ಈ ಹಬ್ಬದ್ಲಲಿ ಹಳೆಯ ವಸ್ತುಗಳನ್ನು ಸುಟ್ಟು ಹೊಸ ವಸಂತದ ಆಗಮನಕ್ಕೆ ಸಿದ್ಧವಾಗುವ ಪರ್ವ ಕಾಲ. ಇದಾದ ಸ್ವಲ್ಪ ದಿನಕ್ಕೆ ಬರುವ ಯುಗಾದಿ ಯುಗದ ಆದಿ. ಶಾಲಿವಾಹನ ಶಕೆಯ ಹೊಸ ಸಂವತ್ಸರದ ಆರಂಭ.
ಹಳ್ಳಿಗಳ್ಲಲಿ ಯುಗಾದಿ…
ಯುಗಾದಿಯ ನೈಜತೆ ಉಳಿದಿರುವುದೇ ಹಳ್ಳಿಗಳ್ಲಲಿ, ರೈತರ ನೆಲೆಯ್ಲಲಿ. ನಗರವಾಸಿಗಳಿಗೆ ಯುಗಾದಿ ಕೇವಲ ಒಂದು ಹಬ್ಬ ಮಾತ್ರ. ಅವರು ಅಬ್ಬಬ್ಬಾ ಎಂದರೆ ಎರಡು ದಿವಸ ಹಬ್ಬ ಮಾಡಬಹುದು. ಆದರೆ ಕೃಷಿಕರ ಹಬ್ಬದ ಸಂಭ್ರಮವಿದೆಯ್ಲಲಾ, ಅದು ತಿಂಗಳ ಮುಂಚೆಯೇ ಆರಂಭವಾಗುತ್ತದೆ. ಈ ದಿನಗಳ್ಲಲಿ ಕೃಷಿಕರಿಗೆ ಯಾವುದೇ ಕೆಲಸ ಹೇಳಿದರೂ ‘ಹಬ್ಬಾದ್ಮೇಲೆ ನೋಡನ್ ಬಿಡ್ಲೆ’ ಎನ್ನುತ್ತಾರೆ. ಸಾಲ ಕೇಳಲು ಬಂದವರಿಗೂ ಅಥವಾ ಸಾಲ ಕೇಳುವವರು, ಹೊಸ ಕೆಲಸ ಆರಂಭಿಸುವವರು ಎಲರೂ ‘ಯುಗಾದಿ’ಯ ನೆಪ ಹೇಳುತ್ತಾರೆ.
ಯುಗಾದಿ ಹಬ್ಬವನ್ನು ಸಂಭ್ರಮಿಸಲು ಊರಿಗೆ ಊರೇ ತಯಾರಾಗುತ್ತಿರುತ್ತದೆ. ಮಹಿಳೆಯರು ಎರಡು ವಾರ ಮುಂಚೆಯೇ ಮನೆ ಸ್ವಚ್ಛಗೊಳಿಸಲು ಶುರುಮಾಡುತ್ತಾರೆ. ವರ್ಷಪೂರ್ತಿ ಗುಡಿಸದ ಮೂಲೆಗಳು, ವಾಡೆ, ಕೊಮ್ಮೆಗಳು, ಕೊಟ್ಟಿಗೆ-ಪಡಸಾಲೆಗಳು ಶುದ್ಧವಾಗುತ್ತವೆ. ಅಟ್ಟ, ಗೋಡೆ, ಅಂಗಳ, ಮಾಡು(ತಾರಸಿ)ಗಳ ದೂಳೊಡೆಯುತ್ತಾರೆ. ಮನೆ ಮುಂಭಾಗದ ಗೋಡೆಗಳಿಗೆ ಕೆಮ್ಮಣ್ಣು-ಸಗಣಿಯಿಂದ ಸಾರಿಸುತ್ತಾರೆ(ಈಗ ಎಲ ಪೇಂಟ್‌ಗಳ್ದದೇ ರಾಜ್ಯ). ಇಡೀ ಮನೆ ಸುಣ್ಣ-ಬಣ್ಣ ಕಾಣುತ್ತದೆ. ಕೆಮ್ಮಣ್ಣಿನ ಬಣ್ಣದ್ಲಲಿ ‘ಗೋಡೆಯ ಮೇಲೆ ಹಸೆ ಚಿತ್ತಾರಗಳನ್ನು ಮೂಡಿಸುವುದುಒಂದು ಸಂಭ್ರಮದ ಕೆಲಸ.
ಗಂಡಸರು ಹೊಸ ಬಟ್ಟೆ-ಬರೆ ಖರೀದಿಗೆ ಪಟ್ಟಣಕ್ಕೆ ಓಡಾಡುತ್ತಾರೆ. ಹಬ್ಬದ ಖರೀದಿಗಾಗಿ ಅಡಕೆ ಮಂಡಿ, ಗೊಬ್ಬರಿ ಮಂಡಿ, ಮಾಲೀಕರ ಬಳಿ ‘ಹಬ್ಬದ ಸಾಲವೆಂದೇ’ ಮುಂಗಡ ಹಣ ಪಡೆಯುತ್ತಾರೆ. ಬಟ್ಟೆ ಖರೀದಿಯೊಂದಿಗೆ ಬೇಸಾಯಕ್ಕೆ ಬೇಕಾದ ಹೊಸ ನೇಗಿಲು, ನೊಗ, ಮೇಣಿ, ದೊಡ್ಡಮಿಣಿ, ಹಗ್ಗ, ಚಿಲಕ್ಕಣ್ಣಿ, ಮಕಾಡ, ಕೊಳದಂಡೆ, ಕುಂಟೆ, ಕುಳ, ಅಲುಗು, ಕೂರಿಗೆ ಮುಂತಾದವುಗಳನ್ನು ಹೊಂಚುವ ಧಾವಂತದಲ್ಲಿರುತ್ತಾರೆ. ಯುಗಾದಿ ಹಿಂದೆ ಮುಂದೆ ದನಗಳ ಜಾತ್ರೆಗಳೂ ನಡೆಯುವುದರಿಂದ ರಾಸುಗಳನ್ನು ಕೊಟ್ಟು-ಕೊಳ್ಳುವ ಪ್ರಕ್ರಿಯೆಯೂ ನಡೆಯುತ್ತದೆ.
ಮೂರು ದಿನದ ಹಬ್ಬ !
ಬಯಲು ಸೀಮೆಯ್ಲಲಿ ಯುಗಾದಿ ಮೂರು ದಿನದ ಹಬ್ಬ. ಮೊದಲ ದಿನ ಮುಸುರೆ ಹಬ್ಬ. ಪಾತ್ರೆ-ಪಗಡಗಳನ್ನು ತೊಳೆದು ಹೊಸ ನೀರು ತಂದು ತುಂಬಿಸುತ್ತಾರೆ. ಹದಿನೈದು ದಿನಗಳ ಸ್ವಚ್ಚತಾ ಕಾರ್ಯಕ್ಕೆ ಅಂತಿಮ ರೂಪ. ಎರಡನೇ ದಿನ ಸಿಹಿ ಹಬ್ಬ. ಮನೆ ಮಕ್ಕಳ್ಲೆಲಾ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ತೊಡುತ್ತಾರೆ. ಮನೆಗ್ಲೆಲ ತೋರಣ ಕಟ್ಟಿ, ದನಗಳ ಕೊಟ್ಟಿಗೆಗೂ ಮಾವು-ಬೇವು ತೋರಣ ಕಟ್ಟಿ ಬೇವಿನ ಚಿಕ್ಕ-ಚಿಕ್ಕ ಕೊಂಬೆಗಳನ್ನು ತೋರಣದ ತುದಿಗೆ ಸಿಕ್ಕಿಸುತ್ತಾರೆ. ಜಾನುವಾರುಗಳು ರೋಗ ಮುಕ್ತವಾಗಲೆಂದು ಬೇವು ಬಳಸುತ್ತಾರೆ ಎಂಬುದು ಹಿರಿಯ ನಂಬಿಕೆ. ಮೂರನೆಯದಿನ ‘ವರಷದ ತಡುಕು’ ಅಥವಾ ವರ್ಷದ ಹೆಚ್ಚು. ಈ ದಿನ ಕೆಲವು ಕಡೆ ಬೇಟೆಗೆ ಹೋಗುತ್ತಾರೆ. ಮಾಂಸದ ಅಡುಗೆ ಮಾಡಿ ಊಟ ಮಾಡುತ್ತಾರೆ. ಸಸ್ಯಹಾರಿಗಳು ನುಗ್ಗೆಕಾಯಿ ಸಂಬಾರು, ಆಂಬೊಡೆಯಂತಹ ಎಣ್ಣೆ ತಿಂಡಿ ಮಾಡಿ ಸವಿಯುತ್ತಾರೆ.

ಎತ್ತುಗಳಿಗೆ ಗೌಸು ಹೊದಿಸಿ, ಚೆಂಡು ಹೂವಿನ ಹಾರ ಹಾಕಿ, ಬಂಡಿ ಕಟ್ಟಿ ದೇವಾಲಯಕ್ಕೆ ಮೂರು ಸುತ್ತು ಬರುತ್ತಾರೆ. ಅವುಗಳಿಗೆ ವಿಶೇಷ ನೈವೇದ್ಯ ಇರುತ್ತದೆ. ಹೊಸ ಬಟ್ಟೆ ತೊಡುವ ಮುಂಚೆ ದನಗಳ ಬೆನ್ನ ಮೇಲೆ ಹಾಕುವುದು ರೂಢಿ. ಕೆಲವರು ಹೊಸ ಬಟ್ಟೆಗಳಿಗೆ ಅರಿಶಿಣ ಸೋಕಿಸುತ್ತಾರೆ. ಮೈಸೂರು ಸೀಮೆಯ್ಲಲಿ ದವಸ ಧಾನ್ಯಗಳನ್ನು ಕಣದ್ಲಲಿ ಒಟ್ಟು ಮಾಡಿ ಪೂಜಿಸುತ್ತಾರೆ.
ಪೂಜೆ ಪುನಸ್ಕಾರಗಳು ಮುಗಿದ ಮೇಲೆ ಮನೆ ಯಜಮಾನ ಎಲರಿಗೂ ಬೇವು-ಬ್ಲೆಲ ಹಂಚುತ್ತಾನೆ. ಮನೆಗೆ ಯಾರೇ ಬಂದರೂ ಬೇವು-ಬ್ಲೆಲ ನೀಡುವುದು ಸಂಪ್ರದಾಯ. ಕಿತ್ತು ಹೋದ ಎಷ್ಟು ಸಂಬಂಧಗಳು ಈ ಹಬ್ಬದ್ಲಲಿ ಬೇವು-ಬ್ಲೆಲ ತಿಂದು ಒಂದಾಗುವ ಸಂಪ್ರದಾಯವಿದೆ. ಬೇಳೆ ಒಬ್ಬಟ್ಟು, ಗಟ್ಟಕ್ಕಿ ಪಾಯಸ, ಅಕ್ಕಿ ಪಾಯಸ, ಕಡುಬು ಅಡುಗೆಗಳು ಹಬ್ಬದ ವಿಶೇಷ.
ಪೂಜೆ ಮಾಡಿ, ಸಿಹಿ ಊಟದ ನಂತರ ‘ಜೂಜಾಟ ಶುರು’. ಗಂಡಸರು ಹೊಸ ಬಟ್ಟೆ ತೊಟ್ಟು ಹೊಂಗೆ ಮರದ ನೆರಳ್ಲಲಿ ಇಸ್ಪೀಟ್ ಆಟ ಆರಂಭಿಸಿದರೆ, ಮಹಿಳೆಯರು ಮನೆಯ ಅಂಗಳದ್ಲಲೇ ಚೌಕಾಬರ, ಪಗಡೆ, ಆನೆ-ಕುರಿಯಾಟ.. ಹೀಗೆ ವಿವಿಧ ಆಟಗಳನ್ನಾಡುತ್ತಾರೆ. ಮನರಂಜನೆಯೊಂದಿಗೆ ಹೊರ ಹೊಮ್ಮುವ ಸೋಲು-ಗೆಲುವು ವರ್ಷ ಪೂರ್ತಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಜನರಿಗೆ ಮಾರ್ಗದರ್ಶನ ನೀಡುತ್ತವೆ.
ಯುಗಾದಿ ಹಬ್ಬಕ್ಕೆ ಹದಿನೈದು ದಿನ ಮುನ್ನವೇ ಗ್ರಾಮೀಣ ಕ್ರೀಡೆಗಳ ಸುಗ್ಗಿ. ಜೊತೆ ಜೊತೆಗೆ ಬಯಲು ನಾಟಕಗಳ ಅಭ್ಯಾಸ. ಕೃಷಿಯ ಬಿಡುವಿನ ವೇಳೆಯ್ದಾದರಿಂದ ಊರ ಮಂದಿಯ್ಲೆಲ ಈ ಕ್ರೀಡೆಯ್ಲಲಿ ಭಾಗಿಯಾಗುತ್ತಾರೆ. ಮೈಗ್ಲೆಲ ಹರಳೆಣ್ಣೆ ಹಚ್ಚಿಕೊಂಡು ಕಬ್ಬಡ್ಡಿ, ಕೊಕ್ಕೊ, ವಾಲಿಬಾಲ್‌ನಂತಹ ಆಟವಾಡುವ ಸಂಪ್ರದಾಯ ಕೆಲವು ಪ್ರದೇಶಗಳ್ಲಲಿವೆ. ತುಮಕೂರು, ಚಿತ್ರದುರ್ಗ ಭಾಗಗಳ್ಲಲಿ ಯುಗಾದಿ ಹಬ್ಬದ ದಿನದಂದು ಉಯ್ಯಾಲೆಯಾಡುತ್ತಾರೆ. ಉಯ್ಯಾಲೆ ತೂಗುತ್ತ ತೂಗುತ್ತಾ, ಹಾಡುವ ಜನಪದ ಗೀತೆಗಳನ್ನು ಕೇಳುವುದೇ ಒಂದು ಸಂಭ್ರಮ.
ಬಿದಿಗೆ ಚಂದ್ರ ದರ್ಶನ :
ಗಣೇಶ ಚತುರ್ಥಿಯ ಬಿದಿಗೆ ಚಂದ್ರ ದರ್ಶನ ಅಪವಾದ. ಯುಗಾದಿ ಪಾಡ್ಯದ ನಂತರದ ಬಿದಿಗೆ ಚಂದ್ರ ದರ್ಶನ ಶುಭ ಎನ್ನುವ ನಂಬಿಕೆ ಗ್ರಾಮೀಣರ‍್ಲಲಿದೆ. ಹಬ್ಬದೂಟ ಉಂಡು, ಉಯ್ಯಾಲೆಯಾಡಿ, ಜೂಜಾಟ ಮುಗಿಸಿ, ಪಶ್ಚಿಮದ್ಲಲಿ ಸೂರ್ಯ ಅಸ್ತಂಗತವಾಗುತ್ತ್ದಿದಂತೆ ಊರ ಮಂದಿಯ್ಲಲ ಮುಗಿಲತ್ತ ಮುಖಮಾಡುತ್ತಾರೆ. ಸಂವತ್ಸದರ ಮೊದಲ ಚಂದ್ರನ ಕೋಡನ್ನು ಕಂಡ ಮಂದಿ ಮನೆಗೆ ಹಿಂದಿರುಗಿ ಹಿರಿಯರ ಕಾಲಿಗೆ ನಮಸ್ಕರಿಸುತ್ತಾರೆ. ನವ ಸಂವತ್ಸರದ ಮೊದಲ ಚಂದ್ರನ ದರ್ಶನ ಇಡೀ ವರ್ಷದ್ಲಲಿ ಶುಭವನ್ನೇ ತರುತ್ತದೆ ಎಂಬ ನಂಬಿಕೆ ರೈತರ‍್ದದು.
ಚಂದ್ರನ ಕೋಡಿನ್ಲಲಿ ಮಳೆ-ಬೆಳೆಗಳ ಲೆಕ್ಕಾಚಾರ ಶುರು. ಇದಾದ ನಂತರ ಪಂಚಾಂಗ ಶ್ರವಣ. ಊರಿನ ದೇವಾಲಯದ್ಲಲೋ, ಅರಳಿಕಟ್ಟೆಯ ಮೇಲೋ ಕುಳಿತು, ಆ ವರ್ಷದ ಭವಿಷ್ಯ ಕೇಳುವ ಸಂಪ್ರದಾಯ. ಊರಿನ ಹಿರಿಯರು ವರ್ಷದ್ಲಲಿ ಯಾವ ಬೆಳೆ ಉತ್ತಮವಾಗಿದೆ ಎಂಬುದನ್ನು ವಿವರಿಸುತ್ತಾರೆ. ಧಾನ್ಯ ಹೆಸರು ಹೇಳದೇ ‘ಬಣ್ಣಗಳನ್ನು’ ಉಲೇಖಿಸುತ್ತಾ, ‘ಈ ಬಾರಿ ಹಸಿರು, ಕೆಂಪು, ಬೂದು ಬಣ್ಣದ ಧಾನ್ಯಗಳಿಗೆ ಏಳಿಗೆಯಿದೆ’ ಎಂದು ವಿವರಿಸುತ್ತಾರೆ. ಬುಧ, ಗುರು, ಚಂದ್ರ.. ಇತ್ಯಾದಿ ಗ್ರಹಗಳ ನಾಯಕತ್ವದ್ಲಲಿ ‘ಕೃಷಿ ಗ್ರಹ-ಗತಿ’ಗಳ ಲೆಕ್ಕಾಚಾರವೂ ನಡೆಯುತ್ತದೆ.
ಉತ್ತರ ಕರ್ನಾಟಕದ ಕೆಲವೆಡೆ ಚಕ್ಕಡಿಗೆ (ಗಾಡಿ) ತರಾತರ ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ಚಕ್ಕಡಿಯ ಒಂದೊಂದು ಭಾಗಕ್ಕೆ ಒಂದೊಂದು ಬಣ್ಣ, ಗಾಲಿಗಳಿಗೆ ಕೆಮ್ಮಣ್ಣು, ಗಾಲಿ ಅಂಚಿಗೆ, ಗುಂಭಕ್ಕೆ, ಗುಜ್ಜುಗಳಿಗೆ ಸುಣ್ಣ ಬಳಿಯುವುದು ವಾಡಿಕೆ. ಬಯಲು ಸೀಮೆಯ್ಲಲಿ ಕೆಲವು ಜನಾಂಗದವರು ಕೃಷಿ ಆಯುಧಗಳನ್ನಿಟ್ಟು ಪೂಜಿಸುತ್ತಾರೆ. ಹಿರಿಯರ ಸಮಾಧಿಗಳಿಗೆ ಹೋಗಿ ಹಣ್ಣು-ಕಾಯಿ ಮಾಡಿ, ಎಡೆ ಹಾಕಿ ನಮಸ್ಕರಿಸುತ್ತಾರೆ.
ಅದಕ್ಕೆ ಹೇಳುವುದು ಹಬ್ಬ ಎಂದರೆ ಪೂಜೆ ಪುನಸ್ಕಾರವಷ್ಟೇ ಅಲ, ಅದೊಂದು ಸಂಸ್ಕೃತಿ, ವಿಜ್ಞಾನ, ಮನರಂಜನೆಯ ಸಂಗಮವೆಂದು. ಇಂಥ ಸಂಪ್ರದಾಯ ಹಲವು ಆಧುನಿಕತೆಗಳ ಅಬ್ಬರದ್ಲಲಿ ಮಾಯವಾಗುತ್ತಿದೆ ಎಂಬುದು ನೋವಿನ ಸಂಗತಿ. ಈ ನೋವು ಉಪಶಮನವಾಗಲಿ, ‘ಖರ’ನಾಮ ಸಂವತ್ಸವರ ಹಳೆಯ ಸಂಪ್ರದಾಯಗಳ್ಲೆಲ ಮರಳಿ ಹಳ್ಳಿಗಳಿಗೆ ಬರಲಿ ಎಂದು ಹಾರೈಸೋಣ.
(ಪ್ರಜಾವಾಣಿಯ ‘ಯುಗಾದಿ ವಿಶೇಷ ಪುರವಣಿಯಲ್ಲಿ’ ಬರೆದ ಲೇಖನ)