ವೃಕ್ಷಾಶ್ರಯ ಕೃಷಿ

ವೃಕ್ಷಾಶ್ರಯದಲ್ಲಿ ಕೃಷಿಕ ನರೇಂದ್ರ

‘ಈ ತೋಟದ್ಲಲಿ ಎಷ್ಟು ಬೆಳೆಗಳಿರಬಹುದು ಲೆಕ್ಕ ಹಾಕಿ ?’ – ನರೇಂದ್ರ ಸುಮ್ನೆ ಒಂದು ಪ್ರಶ್ನೆ ಹರಿಯಬಿಟ್ಟರು. ‘ದೃಷ್ಟಿ ಹಾಯಿಸಿ ಕಂಡ್ದಿದ್ಲೆಲ ಬೆಳೆ ಲೆಕ್ಕ ಹಾಕಿದೆ. ‘ಏಳೆಂಟು ಬೆಳೆ ಇರಬಹುದು’ಎಂದೆ. ನರೇಂದ್ರ ಥಟ್ಟನೆ ೧೬-೧೮ ಬೆಳೆಗಳನ್ನು ಎಣಿಸಿದರು. ಅಚ್ಚರಿ ವಿಷಯವೆಂದರೆ, ಆ ಬೆಳೆಗಳ್ಲಲಿ ಶೇ ೯೦ ರಷ್ಟು ಮರಗಳು. ಅಷ್ಟೂ ಬೆಳೆಗಳು ಬೆಳೆದ್ದಿದು ಒಂದು ಎಕರೆ ಐದು ಗುಂಟೆ ಪ್ರದೇಶದ್ಲಲಿ ! ಸಾಗರ ತ್ಲಾಲೂಕಿನ ಬೇಳೂರಿನ ನರೇಂದ್ರ ಅವರ‍್ದದು ಬೇರೆ ಬೇರೆಕಡೆ ಐದಾರು ಎಕರೆ ಜಮೀನಿದೆ. ಒಂದು ಎಕರೆ ಐದು ಗುಂಟೆಯ್ಲಲಿ ಮಾತ್ರ ಮರ ಆಧಾರಿತ ಕೃಷಿ. ಈ ತಾಕಿನ್ಲಲಿ ನಿನ್ನೆ ನೆಟ್ಟ ಗಿಡದಿಂದ ಮೂವತ್ತು ವರ್ಷದ ಮರಗಳಿವೆ. ಇವುಗಳ್ಲಲಿ ಮುಖ್ಯ ಬೆಳೆ ಅಡಿಕೆ. ಉಳಿದಂತೆ ಬಾಳೆ, ಕೋಕೋ, ಕಾಫಿ ಇದೆ. ಇವುಗಳ ನಡುವೆಯೇ ಜಾಯಿಕಾಯಿ, ಲವಂಗ, ಏಲಕ್ಕಿ, ಕಾಳುಮೆಣಸು, ಶುಂಠಿ ಮತ್ತು ಅರಿಶಿಣದಂತಹ ಸಂಬಾರ ಬೆಳೆಗಳಿವೆ. ಎಲ ಮರಗಳೂ ಫಲ ಕೊಡುತ್ತಿವೆ. ಇಷ್ಟ್ಲೆಲ ಮರಗಳ್ದಿದರೂ ಒಂದು ಮರ ಮತ್ತೊಂದರ ಬೆಳವಣಿಗೆಗೆ ಅಡ್ಡಿಯಾಗ್ಲಿಲ. ಇದೇ ಅವರ ತೋಟದ ವಿನ್ಯಾಸ ವಿಶೇಷ. ತೋಟದ ಮೇಲ್ಭಾಗದ್ಲಲಿ ಮಾವು, ಹಲಸು, ಕೆಲವು ಹಣ್ಣಿನ ಮರಗಳಿವೆ. ಕೆಳಬಾಗದ್ಲಲಿ ೯೮೦ ಅಡಿಕೆ ಮರಗಳಿವೆ. ೩೦೦ ಬಾಳೆ, ೩೫೦ ಕಾಫಿ, ಕೋಕೋ, ೩೫೦ ಕಾಳುಮೆಣಸು ಬಳ್ಳಿಗಳಿವೆ.೧೦೦ ಜಾಯಿಕಾಯಿ ಮರಗಳು, ೧೫ ಲವಂಗ ಗಿಡಗಳಿವೆ. ಮನೆ ಬಳಕೆಗೆ ಏಲಕ್ಕಿ, ಶುಂಠಿ, ಅರಿಶಿಣ ಮತ್ತು ಸುವರ್ಣಗೆಡ್ಡೆ ಬೆಳೆದುಕೊಳ್ಳುತ್ತಾರೆ. ‘ಅಡಿಕೆ ಕಾಸು ಕೊಡುವ ಬೆಳೆ. ಒಮ್ಮೊಮ್ಮೆ ಕೊಳೆ ರೋಗ ಕಾಣಿಸಿಕೊಂಡರೆ, ಕೈ ಕೊಡುವ ಬೆಳೆಯೂ ಹೌದು. ಮಿಶ್ರ ಬೆಳೆಯಿದ್ದರೆ ಒಂದು ಬೆಳೆ ಕೈ ಎತ್ತಿದರೂ ಉಪ ಬೆಳೆಗಳು ಕೈಹಿಡಿಯುತ್ತವೆ. ಒಮೊಮ್ಮೆ ಎಲ ಬೆಳೆಗಳು ಸಮೃದ್ಧವಾಗಿ ಫಸಲು ನೀಡಿ ಜೇಬು ತುಂಬಿಸ್ದಿದುಂಟು’ – ಮರ ಆಧಾರಿತ, ಮಿಶ್ರ ಕೃಷಿಯ ಹಿಂದಿನ ಉದೇಶ ವಿವರಿಸುತ್ತಾರೆ ನರೇಂದ್ರ.

ತೋಟದ ಮೇಲ್ಭಾದಲ್ಲಿರುವ ಹಲಸಿನ ಗಿಡಗಳು

ಬೆಳೆ ಜೋಡಿಸಿರುವ ಪರಿ :

ಪ್ರತಿಯೊಂದು ಗಿಡಗಳ ನಾಟಿ ಹಿಂದೆ ವಿಶೇಷ ವಿಧಾನಗಳಿವೆ. ಅಡಿಕೆ ಮರವನ್ನು ೯ ಅಡಿ ಅಂತರದ್ಲಲಿ ‘ಜಿಗ್ ಜಾಗ್’ ವಿಧಾನದ್ಲಲಿ ನಾಟಿ ಮಾಡಿದ್ದಾರೆ. ನಡುವೆ ಜಾಯಿಕಾಯಿ ಗಿಡಗಳಿವೆ. ಅಡಿಕೆ ಮರಕ್ಕೆ ಕಾಳುಮೆಣಸನ್ನು ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಕೆಲವೊಂದು ಮರಗಳಿಗೆ ವೀಳ್ಯೆದೆಲೆ ಬಳ್ಳಿಗಳೂ ಹಬ್ಬಿವೆ. ಬಳ್ಳಿಗಳು ಮರವನ್ನು ತಬ್ಬಿ ಬೆಳೆಯುವುದರಿಂದ, ಮರಕ್ಕೆ ಬಿಸಿಲಿನಿಂದ ರಕ್ಷಣೆ, ಜೊತೆಗೆ ಬಳಿಗಳಿಗೆ ಗಟ್ಟಿ ಆಸರೆ ಎನ್ನುವುದು ಅವರ ನಂಬಿಕೆ. ಈ ಮರಗಳನ್ನು ಹಂತ ಹಂತವಾಗಿ ನಾಟಿ ಮಾಡ್ದಿದಾರೆ. ಅಡಿಕೆ ಮತ್ತು ಜಾಯಿಕಾಯಿ ಮರಗಳು ಬೆಳೆದು ದೊಡ್ಡವಾದ ನಂತರ ಇವುಗಳ ಆಸುಪಾಸಿನ್ಲಲಿ ಕಾಫಿ, ಬಾಳೆ, ಲವಂಗ ನಾಟಿ ಮಾಡಿದ್ದಾರೆ. ಎರಡು-ಮೂರು ಮರಗಳ ನಡುವೆ ಶುಂಠಿ, ಅರಿಶಿಣ, ಸುವರ್ಣಗೆಡ್ಡೆ ಹಾಕಿದ್ದಾರೆ. ಈ ಎಲ ಬೆಳೆಗಳಿಗೆ ಸೂಕ್ತ ಬಿಸಿಲಿನ ಅಗತ್ಯವಿರುವುದರಿಂದ ಅಡಿಕೆ ಮರಗಳನ್ನು ‘ಜಿಗ್ ಜಾಗ್’ ವಿಧಾನದ್ಲಲಿ ನಾಟಿ ಮಾಡ್ದಿದೇನೆ – ನರೇಂದ್ರ ವಿವರಿಸುತ್ತಾರೆ.

ಈ ಮಿಶ್ರಬೆಳೆ ವಿಧಾನದಿಂದ ಪ್ರತಿ ಬೆಳೆಗೂ ಪ್ರತ್ಯೇಕ ಗೊಬ್ಬರ, ನೀರು ಕೊಡುವ ಶ್ರಮ ಕಡಿಮೆಯಾಗುತ್ತದೆ. ಆಳುಗಳ ಅವಲಂಬನೆ ಕೈ ಬಿಡಬಹುದು’ – ಇದು ಅವರ ಅಭಿಪ್ರಾಯ. ಮಿಶ್ರ ಬೆಳೆಯಾಗಿ ಸಂಬಾರ ಬೆಳೆಗಳೇ ಏಕೆ? – ಎಂಬ ಪ್ರಶ್ನೆಗೆ, ‘ಜಾಯಿಕಾಯಿ ಗಿಡಗಳಿಗೆ ಹೆಚ್ಚು ನೀರು, ಗೊಬ್ಬರ ಆರೈಕೆ ಬೇಡ. ರೋಗ ಕೀಟದ ಬಾಧೆ ಕಡಿಮೆ. ಹದಿನೈದು ದಿನಕ್ಕೊಮ್ಮೆ ದ್ರವರೂಪಿ ಗೊಬ್ಬರ ಮತ್ತು ವಾರಕ್ಕೊಮ್ಮೆ ನೀರುಕೊಟ್ಟರೆ ಸಾಕು. ಇನ್ನು ಶುಂಠಿ, ಅರಿಶಿಣ – ಇವುಗಳನ್ನು ನಾಟಿ ಮಾಡಿದಾಗ ಆರೈಕೆ ಮಾಡಿದರೆ ಸಾಕು. ಇಷ್ಟು ಸರಳವಾಗಿರುವ ಕೃಷಿಗಿಂತ ಇನ್ನೇನು ಬೇಕು?’ ಉತ್ತರಿಸುತ್ತಾರೆ ನರೇಂದ್ರ. ಅಂದ ಹಾಗೆ, ಇಡೀ ತೋಟಕ್ಕೆ ಗೊಬ್ಬರ ಪೂರೈಸಲು ‘ರಸಾವರಿ(ಬಯೋಡೈಜೆಸ್ಟರ್)’ ವಿಧಾನ ಅನುಸರಿಸುತ್ತಾರೆ. ತೋಟದ ಮೇಲ್ಭಾಗದ್ಲಲಿ ನೆಲ ಮಟ್ಟದ ಟ್ಯಾಂಕ್ ನಿರ್ಮಿಸಿ, ಅದರ‍್ಲಲಿ ಗಂಜಲ, ಸೆಗಣಿ, ಕೃಷಿ ತ್ಯಾಜ್ಯ ಕರಗಿಸಿ ತಯಾರಿಸಿದ ‘ರಸಾವರಿ’ಯನ್ನು ಡ್ರಿಪ್ ಪೈಪ್ ಮೂಲಕ ತೋಟದ ಬೆಳೆಗಳಿಗೆ ಉಣಿಸುತ್ತಾರೆ. ಈ ತಂತ್ರಜ್ಞಾನದಿಂದ ಕೂಲಿ ಆಳಿನ ಖರ್ಚು ಉಳಿದಿದೆ ಎನ್ನುತ್ತಾರೆ ನರೇಂದ್ರ.

ತೋಟದ ತುಂಬಾ ದರಕಿನ ಹಾಸಿಗೆ, ಅದರ ಅಡಿಯಲ್ಲಿ ಸೂಕ್ಷ್ಮಾಣು ಜೀವಿಗಳ ಸಂಸಾರ

ದರಕಿನ ಮುಚ್ಚಿಗೆ: ಒತ್ತೊತ್ತಾದ ಬೆಳೆ, ಉಳುಮೆಯ್ಲಿಲದ ಭೂಮಿ ಇದರ ನಡುವೆ ಉತ್ತಮ ಹಾಗೂ ಸುಸ್ಥಿರ ಫಸಲು. ಇವುಗಳ ಹಿಂದಿನ ರಹಸ್ಯವೇ ‘ದರಕಿನ ಮುಚ್ಚಿಗೆ’. ಇಡೀ ತೋಟಕ್ಕೆ ಪ್ರತಿ ಬೇಸಿಗೆಯ್ಲಲಿ ಅರ್ಧ ಅಡಿ ಎತ್ತರಕ್ಕೆ ತರಗೆಲೆಗಳನ್ನು ಮುಚ್ಚಿಗೆ ಮಾಡುತ್ತಾರೆ. ಮೆತ್ತನೆಯ ಹಾಸಿಗೆಯಂತಿರುವ ಎಲೆಗಳ ಅಡಿಯ್ಲಲಿ ಸೂಕ್ಷ್ಮಾಣು ಜೀವಿಗಳ ಸಂಸಾರವಿರುತ್ತದೆ. ಇವು ಮಣ್ಣಿಗೆ ಪೋಷಕಾಂಶ ನೀಡಿ, ಭೂಮಿ ಉಳುಮೆಗೂ ನೆರವಾಗುತ್ತವೆ. ದರಕಿನ ಹಾಸಿನಿಂದಾಗಿ ತೋಟದ್ಲಲಿ ತೇವಾಂಶ ನಿರಂತರವಾಗಿದೆ. ಸೂಕ್ಷ್ಮ ಜೀವಿಗಳ ಜೊತೆ ಎರೆಹುಳು, ಉಪಕಾರಕ ಕೀಟಗಳು ಮಣ್ಣಿನ್ಲಲಿ ವೃದ್ಧಿಯಾಗಿವೆ. ‘ತೋಟವನ್ನು ಇವರೇ ಉಳುಮೆ ಮಾಡುತ್ತಾರೆ. ನಾನೇ ಕೆಲವೊಮ್ಮೆ ಉಪಕಾರಕ ಇರುವೆಗಳನ್ನು ತಂದು ತೋಟಕ್ಕೆ ಬಿಟ್ಟ್ದಿದೇನೆ’ ಎನ್ನುವ ನರೇಂದ್ರ ಅವರಿಗೆ ತೋಟದ ವಾತಾವರಣ ವರ್ಷ ಪೂರ್ತಿ ತಂಪಾಗಿರಲು ಈ ಸೂಕ್ಷ್ಮ ಜೀವಿಗಳೇ ಕಾರಣ ಎನ್ನುತ್ತಾರೆ.

ಭವಿಷ್ಯದಲ್ಲಿ ತೋಟದ ಮುಚ್ಚಿಗೆಗಾಗಿ ಹಲಸಿ ಸಸಿಗಳ ನಾಟಿ

ಪ್ರಯೋಗಗಳು – ಫಲಿತಾಂಶಗಳು : ದರಕು ಕೇವಲ ಗೊಬ್ಬರ ಅಥವಾ ಮುಚ್ಚಿಗೆ ಅಷ್ಟೇ ಅಲ. ಕೆಲವು ಬೆಳೆಗಳಿಗೆ ತಗಲುವ ರೋಗ ನಿಯಂತ್ರಕ, ನಿವಾರಕವೂ ಹೌದು. ಅಡಿಕೆ ಮರದ ಬುಡದ್ಲಲಿ ದರಕು ಹೊದಿಸಿ,ಮೆಣಸಿನ ಬಳ್ಳಿ ನಾಟಿ ಮಾಡಿ, ಸಮೀಪದ್ಲಲೇ ಅರಿಶಿಣ ಗೆಡ್ಡೆ ನೆಟ್ಟ್ದಿದಾರೆ. ಇದರಿಂದ ಕಾಳುಮೆಣಸಿಗೆ ಬರುವ ಸೊರಗು ರೋಗ ಹತೋಟಿ ಬಂದಿದೆ’ – ನರೇಂದ್ರ ವಿವರಿಸುತ್ತಾರೆ. ಅರಿಶಿಣದ್ಲಲಿ ರೋಗ ನಿರೋಧಕ ಗುಣವಿರುವುದರಿಂದ ಬಳ್ಳಿಗೆ ತಗುಲುವ ರೋಗವನ್ನು ನಿಯಂತ್ರಿಸಿದೆ ಎನ್ನುವುದು ಅವರ ಅಭಿಪ್ರಾಯ. ‘ಇಷ್ಟಾಗಿಯೂ ಒಮೊಮ್ಮೆ ಸೊರಗು ರೋಗ ಕಾಟ ಕೊಡುತ್ತದೆ. ಆಗ ಇಪ್ಪತ್ತು ಕೆ.ಜಿ ಟ್ರೈಕೋಡರ್ಮವನ್ನು ಕಾಡು ಮಣ್ಣಿನೊಂದಿಗೆ ಬೆರೆಸಿ ಎಂಟರಿಂದ ಹತ್ತು ದಿವಸಗಳ ಅಂತರದ್ಲಲಿ ಮೆಣಸಿನ ಬಳ್ಳಿಯ ಬುಡಕ್ಕೆ ಹಾಕುತ್ತೆನೆ. ರೋಗ ಹತೋಟಿಗೆ ಬರುತ್ತದೆ’ – ಪರಿಹಾರ ಸೂಚಿಸುತ್ತಾರೆ ನರೇಂದ್ರ. ಶುಂಠಿ, ಅರಿಶಿಣ, ಸುವರ್ಣಗೆಡ್ಡೆಯಂತಹ ತರಕಾರಿ/ಸಂಬಾರ ಬೆಳಗಳನ್ನು ಮನೆಗೆ ಅಗತ್ಯವ್ದಿದಷ್ಟು ಕೊಯ್ಯುತ್ತಾರೆ. ಉಳಿದ ಗೆಡ್ಡೆಗಳನ್ನು ಮಣ್ಣಿನ್ಲಲೇ ಬಿಡುತ್ತಾರೆ. ‘ಗೆಡ್ಡೆ ಗೆಣೆಸುಗಳು ಭೂಮಿಯ್ಲಲ್ದಿದರೆ ಚೆನ್ನಾಗಿ ಉಳುಮೆ ಮಾಡುತ್ತವೆ. ಮಣ್ಣಿಗೆ ಬೇಕಾದ ಪೂರಕ ಪೋಷಕಾಂಶಗಳನ್ನು ನೀಡುತ್ತವೆ. ಅವುಗಳನ್ನು ಕಿತ್ತು ಮಾರಿದರೆ ಇನ್ನೆಷ್ಟು ಸಂಪಾದಿಸಲು ಸಾಧ್ಯ ? – ಅವರು ಪ್ರಶ್ನಿಸುತ್ತಾರೆ.

ಇಳುವರಿ ಕೇಳ್ಬೇಡಿ ! ಇಷ್ಟು ಮರಗಳಿವೆ, ಬೆಳೆಯಿದೆ. ಇವುಗಳ ಇಳವರಿ ಎಷ್ಟು ? ಎಲಿಗೆ ಮಾರುತ್ತೀರಿ ?- ಎಂದರೆ, ನರೇಂದ್ರ ಅವರು ‘ಇಳುವರಿ ಕೇಳಬೇಡಿ. ಅಷ್ಟು ನಿಖರವಾಗಿ ಲೆಕ್ಕ ಇಟ್ಟ್ಲಿಲ’ ಎಂದು ಮಾತು ಬದಲಿಸುತ್ತಾರೆ. ಇನ್ನು ಮಾರುಕಟ್ಟೆ ವಿಷಯ; ಕಾಳುಮೆಣಸು, ಜಾಕಾಯಿ, ಪತ್ರೆಯನ್ನು ಬೆಂಗಳೂರು, ಬೆಳಗಾವಿ ಶಿರಸಿಗೆ ಕಳುಹಿಸುತ್ತಾರೆ. ಅಡಿಕೆ, ಬಾಳೆ, ಕಾಫಿ, ಏಲಕ್ಕಿ, ಲವಂಗವನ್ನು ಸಾಗರದ ಅಂಗಡಿಗಳಿಗೆ ಕೊಡುತ್ತಾರೆ. ವೀಳ್ಯೆದೆಲೆಯನ್ನು ಕೂಲಿ ಕಾರ್ಮಿಕರೇ ಖರೀದಿಸುತ್ತಾರೆ. ‘ಇಷ್ಟು ಮಾರ್ಗಗಳಿದ್ದಾಗ, ಮಾರುಕಟ್ಟೆ ಬಗ್ಗೆ ಚಿಂತೆ ಏಕೆ? ಎನ್ನುತ್ತಾರೆ ಅವರು. ನರೇಂದ್ರ ಅವರ ಸಂಪರ್ಕ, ದೂರವಾಣಿ ಸಂಖ್ಯೆ :೦೮೧೮೩-೨೬೦೧೩೫, ೦೮೧೮೩-೨೧೨೨೨೨. ಚಿತ್ರ-ಲೇಖನ: ಗಾಣಧಾಳು ಶ್ರೀಕಂಠ