
‘ನಾವೆಲ್ಲ ಬಾಣಂತನದಾಗ ನವಣಕ್ಕಿ, ಸಾವಕ್ಕಿ ಅನ್ನ-ರೊಟ್ಟಿ ಉಂಡು; ಮೂಲಂಗಿ, ಹಕ್ಕರಿಕಿ ಸೊಪ್ಪು ತಿಂತಿದ್ವಿ. ನನ್ನ ಗಂಡ ನವಣಕ್ಕಿ ಕುಟ್ಟೋನು. ನಾನು ಹಸನು ಮಾಡೋಳು. ಮುಂಜಾನೆ ಉಂಡ್ರೆ ಸಂಜಿಮಟ ಹಸಿವಾಗ್ತಿರಲಿಲ್ಲ. ಈಗಿನೋರು ನೆಲ್ಲಕ್ಕಿ ಉಣ್ತಾರ. ಅದನ್ನು ದಿವಸಕ್ಕೆ ಮೂರು ಸಾರಿ ಉಂಡ್ರೂ ಹಸಿವು ತಡೆಯಾಕಿಲ್ರಿ’
ಹಾವೇರಿ ಜ್ಲಿಲೆಯ ರಾಣೆಬೆನ್ನೂರು ತ್ಲಾಲೂಕಿನ ಕಾಕೋಳದ ಹೇಮವ್ವ ಲಮಾಣಿ ಬಾಣಂತನದ ಊಟದ್ಲಲಿ ಸಾವೆ, ನವಣಕ್ಕಿ ಬಳಕೆ, ಅದರೊಳಗಿನ ಪೌಷ್ಟಿಕತೆಯನ್ನು ಸೊಗಸಾಗಿ ಬಿಚ್ಚಿಡುತ್ತಾರೆ. ಹೇಮವ್ವ ಅಷ್ಟೇ ಅಲ, ಉತ್ತರ ಕರ್ನಾಟಕದ ಬಹುಪಾಲು ಹಳ್ಳಿಗರು ಸಿರಿಧಾನ್ಯಗಳ ಕುರಿತು ಇಂಥ್ದದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ನವಣೆ, ಸಾಮೆ, ಸಜ್ಜೆ, ಆರಕ, ರಾಗಿಯಂತಹ ಸಿರಿಧಾನ್ಯ(ಕಿರುಧಾನ್ಯ)ಗಳ ಅಡುಗೆಗಳೆಂದರೆ ಹಾಗೆ. ರುಚಿ ಹೆಚ್ಚು, ಪೌಷ್ಟಿಕಾಂಶದ್ಲಲೂ ತುಸು ಮುಂದು. ಈ ಧಾನ್ಯಗಳ ಒಂದು ಉಂಡೆ, ಅರ್ಧ ರೊಟ್ಟಿ, ಅರ್ಧ ಲೋಟ ಪಾಯಸ ದೀರ್ಘಕಾಲ ಹಸಿವನ್ನು ಮುಂದೂಡುತ್ತವೆ. ಹೊಟ್ಟೆಗೆ ತಂಪು ನೀಡಿ, ದೇಹಕ್ಕೆ ಶಕ್ತಿ ತುಂಬುತ್ತವೆ. ಅದಕ್ಕಾಗಿಯೇ ಹಿರಿಯರು ಈ ಖಾದ್ಯಗಳನ್ನು ಸೇವಿಸಿದರೆ ‘ಜೀವಕ್ಕೆ ತಂಪು, ಜುಟ್ಟಿಗೆ ಭದ್ರ’ ಎನ್ನುತ್ತಾರೆ.
ಬರಗಾಲ ಎದರಿಸುತ್ತಾ ಅರಳುವ ಪ್ರತಿ ಕಿರುಧಾನ್ಯದ ಒಡಲ್ಲಲಿ ಭರಪೂರ ಪೋಷಕಾಂಶಗಳಿವೆ. ಆಹಾರ ತಜ್ಞರ ಪ್ರಕಾರ ಕಿರುಧಾನ್ಯಗಳು, ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಹೆಚ್ಚಿನ ಪ್ರಮಾಣದ್ಲಲಿ ಪ್ರೊಟೀನ್, ವಿಟಮಿನ್ ಹಾಗೂ ಖನಿಜಗಳನ್ನು ಹೊಂದಿವೆ. ಹಾಗಾಗಿ ಈ ಧಾನ್ಯಗಳು ಆಹಾರವಷ್ಟೇ ಅಲ. ಔಷಧವೂ ಹೌದು.

ಸಿರಿಧಾನ್ಯಗಳಲ್ಲಿ ರೋಗಗಳನ್ನು ನಿಯಂತ್ರಿಸುವ ಫಿನೋಲಿಕ್ ಆಸಿಡ್, ಫ್ಲೆವನೋಯ್ಡ್ಸ್ ಹಾಗೂ ಫೈಟೊ ಆಲೆಕ್ಸಿನ್ನಂಥ ಫೈಟೊನ್ಯೂಟ್ರಿಯಂಟ್ಸ್ಗಳಿವೆ. ಅವು ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್ಗಳು. ಸಿರಿಧಾನ್ಯಗಳು ಕೇವಲ ಕಾರ್ಬೊಹೈಡ್ರೇಟ್ ಮಾತ್ರವ್ಲಲ; ಉತ್ತಮ ಗುಣಮಟ್ಟದ ಕೊಬ್ಬನ್ನೂ ಪೂರೈಸುತ್ತವೆ. ‘ಉದಾಹರಣೆಗೆ ಸಜ್ಜೆಯ್ಲಲಿರುವ ೫.೩ ಕೊಬ್ಬಿನ್ಲಲಿ ಶೇ ೨.೮ರಷ್ಟು ಒಮೆಗಾ-೩ ಕೊಬ್ಬಿನಾಮ್ಲ(ಫ್ಯಾಟಿ ಆಸಿಡ್)’ ಇರುತ್ತದೆ ಎನ್ನುತ್ತಾರೆ ಆಹಾರ ತಜ್ಞ ಕೆ.ಸಿ.ರಘು.
ಸಿರಿಧಾನ್ಯಗಳ ಕಾರ್ಯ ವೈಖರಿ: ಸಿರಿಧಾನ್ಯಗಳ ಆಹಾರ ಸೇವಿಸಿದ ನಂತರ ನಿಧಾನವಾಗಿ ಜೀರ್ಣವಾಗುತ್ತಾ, ದೇಹಕ್ಕೆ ಶಕ್ತಿಯನ್ನು ಪೂರೈಸುತ್ತವೆ. ನೋಡಿ, ನಮ್ಮ ದೇಹಕ್ಕೆ ಶಕ್ತಿ ಸರಬರಾಜಾಗುವುದು – ಕಾರ್ಬೊಹೈಡ್ರೇಟ್ಸ್ + ಪ್ರೋಟಿನ್ಸ್ + ಖನಿಜಾಂಶಗಳಿಂದ. ಅದರ್ಲಲೂ ಕಾರ್ಬೊಹೈಡ್ರೇಟ್ಗಳಿಂದ ಹೆಚ್ಚು ಶಕ್ತಿ (ಶೇ ೬೦-೯೦ರಷ್ಟು) ಪೂರೈಕೆಯಾಗುತ್ತದೆ. ಇವುಗಳ್ಲಲಿ ಪಿಷ್ಠದ(ಸ್ಟಾರ್ಚ್) ಅಂಶ ಅಧಿಕವಾಗಿರುತ್ತದೆ. ಈ ಪಿಷ್ಠದ್ಲಲಿ ಅಮಿಲೊ ಪೆಕ್ಟಿನ್ ಮತ್ತು ಅಮಿಲೋಸ್ ಎಂಬ ಎರಡು ರಾಸಾಯನಿಕಗಳಿರುತ್ತವೆ. ಅಮಿಲೋಸ್ – ರಕ್ತಕ್ಕೆ ನಿಧಾನವಾಗಿ ಸಕ್ಕರೆಯನ್ನು ಪೂರೈಸುತ್ತದೆ. ಸಿರಿಧಾನ್ಯಗಳ್ಲಲಿ ಅಮಿಲೋಸ್ ಪ್ರಮಾಣ ಹೆಚ್ಚಿರುವುದರಿಂದ ಆಹಾರ ಪಚನವಾಗಿ, ಶಕ್ತಿಯಾಗಿ ಪರಿವರ್ತನೆಯಾಗುವವರೆಗೂ ರಕ್ತಕ್ಕೆ ಸೇರುವ ಸಕ್ಕರೆ ಪ್ರವಾಹವನ್ನು ನಿಯಂತ್ರಿಸುತ್ತದೆ.
ಪ್ರಸ್ತುತ ನಾವು ಸೇವಿಸುತ್ತಿರುವ ಪಾಲಿಷ್ ಮಾಡಿದ ಗೋಧಿ, ಅಕ್ಕಿಯಂತಹ ಆಹಾರದ್ಲಲಿ ಪೆಕ್ಟಿನ್ ಅಂಶ ಹೆಚ್ಚು, ಅಮಿಲೋಸ್ ಕಡಿಮೆ. ಪರಿಣಾಮ ಸೇವಿಸಿದ ಆಹಾರ ಶೀಘ್ರ ಕೊಬ್ಬಾಗಿ ಪರಿವರ್ತನೆಗೊಳ್ಳುತ್ತದೆ. ಆಹಾರದ್ಲಲಿರುವ ಸಕ್ಕರೆ ಪ್ರಮಾಣ ವೇಗವಾಗಿ ಹಾಗೂ ನೇರವಾಗಿ ರಕ್ತ ಸೇರುತ್ತದೆ. ರಕ್ತದ್ಲಲಿ ಸಕ್ಕರೆ ಹೆಚ್ಚಾಗಿ ಮಧುಮೇಹ ರೋಗ ಉಲ್ಬಣಕ್ಕೆ ಕಾರಣವಾಗುತ್ತದೆ. ಕೊಬ್ಬು ಹೆಚ್ಚಾಗಿ ‘ರಕ್ತದ ಒತ್ತಡ’ಕ್ಕೆ ಕಾರಣವಾಗುತ್ತದೆ’- ಎಂದು ರಘು ವಿವರಿಸುತ್ತಾರೆ. ‘ಇದೇ ಕಾರಣಗಳಿಂದಲೇ ಹಿಂದಿನ ಕಾಲದ್ಲಲಿ ನವಣೆ, ಸಾಮೆ, ಸಜ್ಜೆಯಂತಹ ಸಿರಿಧಾನ್ಯಗಳ ಆಹಾರ ಉಂಡು ಬೆಳೆದವರಿಗೆ ಮಧುಮೇಹ, ರಕ್ತದೊತ್ತಡದಂತಹ ಖಾಯಿಲೆಗಳು ಸೋಕುತ್ತಿರಲ್ಲಿಲ. ಮಾತ್ರವ್ಲಲ, ದೀರ್ಘಾಯುಷಿಗಳಾಗಿರುತ್ತ್ದಿದರು’ ಎನ್ನುವುದು ಅವರ ಅಭಿಪ್ರಾಯ.
ಪೌಷ್ಟಿಕಾಂಶ ಪರೀಕ್ಷೆ, ಫಲಿತಾಂಶ :
‘ಸಿರಿಧಾನ್ಯಗಳ್ಲಲಿ ಇಷ್ಟ್ಲೆಲ ಪೋಷಕಾಂಶಗಳು, ಪ್ರೋಟಿನ್, ವಿಟಮಿನ್ ಇರುತ್ತವೆ ಎಂದು ಹೇಗೆ ನಂಬುವುದು’- ಇದು ಇವತ್ತಿನ ಬ್ದುದಿವಂತ ನಾಗರಿಕ ಸಮಾಜ ಕೇಳುವ ಪ್ರಶ್ನೆ. ಇಂಥ ಪ್ರಶ್ನೆಗಳನ್ನಿಟ್ಟುಕೊಂಡೇ ಬೆಂಗಳೂರಿನ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ, ಪ್ರಿಸ್ಟೀನ್ ಆರ್ಗಾನಿಕ್ಸ್ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗೃಹ ವಿಜ್ಞಾನ ವಿಭಾಗದವರು ಮೊಟ್ಟ ಮೊದಲ ಬಾರಿಗೆ ಸಿರಿಧಾನ್ಯಗಳನ್ನು ಪರೀಕ್ಷೆಗೆ ಒಳಪಡಿಸಿ ಅವುಗಳ್ಲಲಿರುವ ಪೌಷ್ಟಿಕಾಂಶ, ನಾರು ಮತ್ತು ಕಬ್ಬಿಣದ ಅಂಶಗಳನ್ನು ದಾಖಲಿಸ್ದಿದಾರೆ.
ಆ ಪ್ರಕಾರ ನವಣೆ, ಸಾಮೆ, ಹಾರಕ ಮತ್ತು ರಾಗಿಯ್ಲಲಿ ಡಯಟರಿ ಫೈಬರ್ಗಳು (ನಾರಿನಂಶ) ಹೆಚ್ಚಾಗಿರುವುದನ್ನು ಗುರುತಿಸಲಾಗಿದೆ. ಈ ಧಾನ್ಯಗಳ ಖಾದ್ಯಗಳು ಸಕ್ಕರೆಯನ್ನು ನಿಧಾನವಾಗಿ ಹೀರಿಕೊಂಡು, ರಕ್ತದ್ಲಲಿ ಕರಾರುವಕ್ಕಾಗಿ ಬಿಡುಗಡೆ ಮಾಡುತ್ತವೆ. ಇದರಿಂದ ಪಚನಕ್ರಿಯೆ ನಿಧಾನವಾಗಿ, ದೇಹಕ್ಕೆ ಶಕ್ತಿ ಸರಬರಾಜಾ ಗುತ್ತದೆ. ಅದೇ ರೀತಿ ಪೌಷ್ಟಿಕಾಂಶಗಳಂತೆ ಸಿರಿಧಾನ್ಯಗಳ್ಲಲಿರುವ ಖನಿಜಾಂಶಗಳು ಕೂಡ ಗಮನಾರ್ಹವಾಗಿವೆ. ೧೦೦ ಗ್ರಾಂ ಸಜ್ಜೆಯ್ಲಲಿ ೮ ಮಿ.ಗ್ರಾಂ ಕಬ್ಬಿಣದ ಅಂಶವಿದೆ. ಅಕ್ಕಿಯ್ಲಲಿ ಕೇವಲ ೦.೭ ಮಿ.ಗ್ರಾಂ ಅಂಶವಿದೆ. ಹಾಗಾಗಿ ಸಜ್ಜೆರೊಟ್ಟಿ ತಿನ್ನುವುದರಿಂದ ಕಬ್ಬಿಣಾಂಶ ದೇಹಕ್ಕೆ ಪೂರೈಕೆಯಾಗುತ್ತದೆ.
‘ಕ್ಯಾಲ್ಸಿಯಂ ಕೊರತೆ’ ಎಂದ ಕೂಡಲೇ ವೈದ್ಯರು ಮಾತ್ರೆಗಳನ್ನು ಬರೆಯುತ್ತಾರೆ. ಗರ್ಭಿಣಿಯರಲ್ಲಂತೂ ಈ ಮಾತ್ರೆ ಸೇವನೆ ಪ್ರಮಾಣ ಹೆಚ್ಚು. ‘ಕ್ಯಾಲ್ಸಿಯಂ ಕೊರತೆಯಿರುವ ನನ್ನ ಪೇಷೆಂಟ್ಗಳಿಗೆ ರಾಗಿ ಆಹಾರವನ್ನೇ ಸೂಚಿಸುತ್ತೇನೆ. ಮಧುಮೇಹಿಗಳಿಗೆ ಅನ್ನದ ಬದಲಿಗೆ ನವಣೆ ಪದಾರ್ಥಗಳನ್ನು ಸೂಚಿಸುತ್ತೇನೆ. ಬಾಲ್ಯದಿಂದಲೇ ನವಣೆ, ಸಾಮೆ, ರಾಗಿ ಬಳಸುವ ಅಭ್ಯಾಸ ರೂಢಿಸಿಕೊಂಡರೆ ರೋಗಗಳಿಂದ ದೂರವಿರಬಹುದು’ ಎನ್ನುತ್ತಾರೆ ಆಯುರ್ವೇದ ವೈದ್ಯೆ ಡಾ.ವಸುಂಧರಾ ಭೂಪತಿ.

ಹೀಗೆ ಆಹಾರ – ಔಷಧ ಎರಡನ್ನೂ ಒಳಗೊಂಡ ಸಿರಿಧಾನ್ಯಗಳು ನಮ್ಮ ದಿನಿಸಿ ಪಟ್ಟಿಯಿಂದ ನಾಪತ್ತೆಯಾಗಿವೆ. ಸಂಸ್ಕರಣೆ ಸಮಸ್ಯೆಯಿಂದಾಗಿ ರೈತರ ಹೊಲಗಳಿಂದಲೂ ಕಾಣೆಯಾಗುತ್ತಿವೆ. ಈ ಧಾನ್ಯಗಳ ಸಂರಕ್ಷಣೆಗಾಗಿ ಹೈದರಾಬಾದ್ನ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿ(ಡಿಡಿಎಸ್) ದಶಕಗಳಿಂದ ಶ್ರಮಿಸುತ್ತಿದೆ. ಮಿಲೆಟ್ ನೆಟ್ವರ್ಕ್ ಆಫ್ ಇಂಡಿಯಾ ಎಂಬ ಜಾಲದೊಂದಿಗೆ ವಿವಿಧ ಸಂಸ್ಥೆಗಳೊಡನೆ ಜನರ್ಲಲಿ ಜಾಗೃತಿ ಮೂಡಿಸುತ್ತಿದೆ. ಹವಾಮಾನ ವೈಪರೀತ್ಯ, ಆಹಾರ ಸುರಕ್ಷತೆಗೆ ನೆರವಾಗುವ ಈ ಧಾನ್ಯಗಳನ್ನು ‘ಸಾರ್ವಜನಿಕ ಪಡಿತರ ವ್ಯವಸ್ಥೆ’ಯ್ಲಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಬಿಸಿಯೂಟ, ಅಂಗನವಾಡಿ ಯೋಜನೆಯ್ಲಲಿ ಈ ಧಾನ್ಯಗಳನ್ನು ಬಳಸುವುದರಿಂದ ಮಕ್ಕಳ್ಲಲಿನ ಅಪೌಷ್ಠಿಕತೆಗೆ ಪರಿಹಾರ ದೊರೆತಂತಾಗುತ್ತದೆ. ಈ ಯೋಜನೆಗಳಿಗಾಗಿ ಸ್ಥಳೀಯ ರೈತರಿಂದ ಧಾನ್ಯ ಖರೀದಿಸಿದರೆ ಉತ್ತಮ ಮಾರುಕಟ್ಟೆ ಲಭ್ಯವಾಗುತ್ತದೆ ಎನ್ನುವುದು ಡಿಡಿಎಸ್ನ ಮುಖ್ಯಸ್ಥ ಪಿ.ವಿ.ಸತೀಶ್ ಅವರ ಅಭಿಪ್ರಾಯ. ಸಿರಿಧಾನ್ಯಗಳ ಪೌಷ್ಟಿಕಾಂಶ ಕುರಿತು ಹೆಚ್ಚಿನ ಮಾಹಿತಿಗೆ ಆಹಾರ ತಜ್ಞ ಕೆ.ಸಿ.ರಘು ಅವರ ದೂರವಾಣಿ ಸಂಖ್ಯೆ: ೯೯೮೦೦೦೯೧೪೦.