ಪುಟ್ಟ ಕಾಡು, ಅದರೊಳಗೊಂದು ಜಲಪಾತ…

ಎತ್ತಿಪೋತೆ ಅರಣ್ಯದ ವಿಹಂಗಮ ನೋಟ

ಚಿತ್ರ ನೋಡಿದ ಕೂಡಲೇ ಯಾವುದೋ ಮಲೆನಾಡಿನ ಭಾಗವಿರಬೇಕು ಎನ್ನಿಸಿರಬೇಕಲ್ವಾ ? ಹಾಗೆಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಇದು ವರ್ಷೊಂಭತ್ತುಕಾಲ ಧಗ ಧಗ ಉರಿಯುವ ಬಿಸಿಲ ನಾಡು ಗುಲ್ಬರ್ಗ ಜಿಲ್ಲೆಯ ಸಮೀಪವಿರುವ ಒಂದು ಕಾಡಿನ ದೃಶ್ಯ. ಇತ್ತೀಚೆಗೆ ಗೆಳೆಯರಾದ ಶಿವಾನಂದ ಕಳವೆ, ಆನಂದತೀರ್ಥ ಪ್ಯಾಟಿ ಈ ಕಾಡಿಗೆ ಭೇಟಿ ನೀಡಿದ್ದಾರೆ.  ಕನ್ನಡ ನಾಡಿನ ಗಡಿಯಲ್ಲಿರುವ ಈ ಕಾಡಿನ ಬಗ್ಗೆ ಒಂದೆರಡು ತುಣುಕು ಹಾಗೂ ನಾಲ್ಕೈದು ಫೋಟೋ ಕಳುಹಿಸಿದ್ದಾನೆ ಪ್ಯಾಟಿ. ಅವನ ಬರಹದೊಂದಿಗೆ ಚಿತ್ರಗಳನ್ನು ಪೋಸ್ಟ್ ಮಾಡಿದ್ದೇನೆ. ಅದಕ್ಕೆ ಗೆಳೆಯ ವಿನೋದ್ ಪ್ರತಿಕ್ರಿಯಿಸಿದ್ದಾನೆ. ಅದನ್ನು ಪೊಸ್ಟಿಸಿದ್ದೇನೆ..

‘ಗುಲ್ಬರ್ಗ ಜಿಲ್ಲೆ ಎಂದರೆ ಬಿಸಿಲಿನ ನಾಡು. ಇಲ್ಲಿ ಕೂಡ ಹಸಿರಿನ ತಾಣವೊಂದು ಇದೆ ಗೊತ್ತೇ?! ಹೌದು… ಇದರ ಹೆಸರು ಕೊಂಚಾವರಂ ಕಾಡು. ಮಿತ್ರ ಶಿವಾನಂದ ಕಳವೆ ಜತೆ ಎರಡು ದಿನ ಸುತ್ತಾಡಿ ಬಂದ ಬಳಿಕ, ಕೆಲ ಚಿತ್ರ ಕಳಿಸುತ್ತಿದ್ದೇನೆ. ಅಂದ ಹಾಗೆ, ಕಾಡಿನಲ್ಲಿ ಜಲಪಾತ ಕೂಡ ಇದೆ!! ‘ಎತ್ತಿಪೋತೆ’ ಅಂತ ಹೆಸರು. ಇನ್ನು ಈ ಚಿತ್ರಗಳು ನಿಮಗಾಗಿ…

-ಆನಂದತೀರ್ಥ ಪ್ಯಾಟಿ

ಈ ಹಿಂದೆ  ಇದೇ ಕಾಡನ್ನು ಸುತ್ತಾಡಿ ತೋಳಗಳ ಕುರಿತು ಅಧ್ಯಯನ ನಡೆಸಿರುವ ಕಾಡು ಪ್ರೀತಿಯ ಪರ್ತಕರ್ತ ಗೆಳೆಯ ಬಿ.ವಿನೋದ್ ಕುಮಾರ್  (ಸುವರ್ಣ ನ್ಯೂಸ್ )  ಬಿಸಿಲ ನಾಡಿನ ಕಾಡು ಕುರಿತು ಖುಷಿಯಿಂದ ಪ್ರತಿಕ್ರಿಯಿಸಿದ್ದಾರ. ಆ ಪ್ರತಿಕ್ರಿಯೆ ಹೀಗಿದೆ ;

……This is like a oasis in your district. I had an opportunity to roam in this forest searching for indian grey wolves. This is one of the finest forest patch in this region. if i am not wrong, this joins bidar and gulbarga with some parts of AP. Forest department is declaring this as a wildlife sanctuary.
This amazing forest is facing a major threat from local villagers as all of they directly depend on this forest for firewood.
I request you to focus on this forest  and write some stories, which will definately help to restore this beautiful bio diversity.

ಹೀಗೆಲ್ಲ ಹೇಳಿದ ಮೇಲೆ ಬಿಸಲೂರಿನ  ಈ ಕಾಡು ನೋಡಬೇಕೆನಿಸಿದೆ. ಈ ಚಳಿಗಾಲದಲ್ಲೇಕೆ ಒಮ್ಮೆ ಭೇಟಿ ಕೊಡಬಾರದು ? ಎಂದು ಯೋಚಿಸುತ್ತಿದ್ದೇನೆ. ಅದಕ್ಕೆ ಮುಂದೆ ಈ ಚಿತ್ರಗಳನ್ನೊಮ್ಮೆ ನೋಡಿ.. ಎಂಜಾಯ್್ ಮಾಡಿ.

ಗಾಣಧಾಳು..

ಕಾಡೊಳಗಿನ ಕೆರೆ/ನದಿಯ ವಿಹಂಗಮ ನೋಟ
ಕಾಡಿನೊಳಗೊಂದು ಜಲಪಾತ.. ಊಹಿಸಲೂ ಅಸಾಧ್ಯ
ಗಾಲ್ಫ್ ಅಂಗಳದಂತೆ ಕಾಡುವ ಎತ್ತಿಪೋತೆ ಕಾಡಿನ ಅಂಗಳ
ದಟ್ಟ ಕಾಡಿನೊಳಗಿನ ರಸ್ತೆ