
ಬಿತ್ತನೆ ಮಾಡುವುದರಿಂದ ಹಿಡಿದು ಮಾರುಕಟ್ಟೆಗೆ ಹೋಗುವವರೆಗೂ ರಾಸಾಯನಿಕದಲ್ಲೇ ಮುಳುಗೇಳುವ ದೊಣ್ಣೆ ಮೆಣಸಿನಕಾಯಿ ಬೆಳೆಯನ್ನು ರೈತರೊಬ್ಬರು ಹಸಿರು ಮನೆಯ ಹೊರಗೆ ಸಾವಯವ ಪದ್ಧತಿಯಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ.
*****
ಬೆಂಗಳೂರು ಉತ್ತರ ತ್ಲಾಲೂಕಿನ ಸೀತೆಕೆಂಪನಹಳ್ಳಿ ಮ್ಲಲಿಕಾಜುನ್ ಮುಕ್ಕಾಲು ಎಕರೆ ಜಮೀನಿನ್ಲಲಿ ಕ್ಯಾಪ್ಸಿಕಂ(ದೊಣ್ಣೆ ಮೆಣಸಿನಕಾಯಿ) ಬೆಳೆದ್ದಿದಾರೆ. ಅರೆ, ಅದರಲ್ಲೇನು ವಿಶೇಷ ಅಂತೀರಾ ? ಖಂಡಿತಾ ವಿಶೇಷ ಇದೆ.

ಸಾಮಾನ್ಯವಾಗಿ ಕ್ಯಾಪ್ಸಿಕಂ ಬೆಳೆಯುವುದಕ್ಕೆ ಹವಾನಿಯಂತ್ರಿತ ಹಸಿರು ಮನೆ ಬೇಕು. ಹೈಟೆಕ್ ತಂತ್ರಜ್ಞಾನದ್ಲಲಿ ಬೆಳೆಸಬೇಕು. ರಸಗೊಬ್ಬರ, ಕೀಟನಾಶಕ ಕಡ್ಡಾಯವಾಗಿ ಬಳಸಬೇಕು. ನಿರಂತರ ಆರೈಕೆ.. ಹೀಗೆ ಒಂದಿಷ್ಟು ನಿಯಮಗಳಿವೆ. ಆದರೆ ಮ್ಲಲಿಕಾರ್ಜುನ ಅವನ್ನ್ಲೆಲ ‘ಉಲಂಘಿಸಿ’ ಬಟ್ಟ ಬಯಲಿನ್ಲಲಿ, ಸಾವಯವ ಕೃಷಿ ಪದ್ಧತಿಯ್ಲಲಿ, ಕಡಿಮೆ ಖರ್ಚಿನ್ಲಲಿ ಉತ್ತಮ ಬೆಳೆ ತೆಗೆದ್ದಿದಾರೆ. ಎರಡು ತಿಂಗಳಿಗೆ ಕಾಯಿ ಕೊಯ್ಲಿಗೆ ಬಂದಿದೆ. ಒಂದೊಂದು ಕಾಯಿ ೧೫೦ ರಿಂದ ೨೦೦ ಗ್ರಾಂ ತೂಕವಿದೆ. ಕಡು ಹಸಿರು ಬಣ್ಣದ ಕಾಯಿಗಳು, ರೋಗ ರಹಿತ ಗಿಡಗಳ ಮುಕ್ಕಾಲು ಎಕರೆಯ ಅಂಗಳವನ್ನು ಆವರಿಸಿಕೊಂಡಿವೆ. ‘ಕನಿಷ್ಠ ಮೂರು ತಿಂಗಳು ಉತ್ತಮ ಇಳುವರಿ ಪಡೆಯುತ್ತೇನೆ’ ಎಂಬ ಉಮೇದಿನ್ಲಲ್ದಿದಾರೆ ಮ್ಲಲಿಕಾರ್ಜುನ. ಇದೇ ಇವರ ಕೃಷಿಯ ವಿಶೇಷ !
ಮುಕ್ಕಾಲು ಎಕರೆಯ್ಲಲಿ ಮೊದಲ ಹೆಜ್ಜೆ :
ಮ್ಲಲಿಕಾರ್ಜುನ ಅವರ‍್ದದು ಒಂದು ಕಡೆ ದ್ರಾಕ್ಷಿ ತೋಟ, ಮತ್ತೊಂದು ಕಡೆ ಹೊಲ ಹಾಗೂ ಮನೆಯ ಬಳಿ ತರಕಾರಿ ತೋಟವಿದೆ. ಕಳೆದ ಏಳೆಂಟು ವರ್ಷಗಳಿಂದ ಕ್ಯಾಪ್ಸಿಕಂ ಸೇರಿದಂತೆ ವಿವಿಧ ತರಕಾರಿಗಳನ್ನು ರಾಸಾಯನಿಕ ಪದ್ಧತಿಯ್ಲಲಿ ಬೆಳೆಯುತ್ತ್ದಿದರು. ಒಂದೆರಡು ವರ್ಷಗಳಿಂದೀಚೆಗೆ ರಾಸಾಯನಿಕ ಪದ್ಧತಿಯ ಅವಾಂತರಗಳ ‘ದರ್ಶನ’ವಾಯಿತು. ಮಾಧ್ಯಮಗಳ್ಲಲಿ ಬಿತ್ತರವಾಗುತ್ತ್ದಿದ ಸಾವಯವ ಕೃಷಿ ವಿಚಾರ, ಪ್ರಗತಿಪರ ರೈತರ ಅನುಭವಗಳಿಂದ ಪ್ರೇರಿತರಾದ ಇವರು ಸಾವಯವ ಕೃಷಿಯ್ಲಲಿ ದ್ರಾಕ್ಷಿ, ತರಕಾರಿ ಬೆಳೆಯುವ ಯೋಚನೆಯ್ಲಲ್ದಿದರು. ಇದೇ ಸಮಯದ್ಲಲಿ ಹೆಸರುಘಟ್ಟದ ತೋಟಗಾರಿಕಾ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ ಪ್ರಭಾಕರ್ ಅವರು ಸಾವಯವ ಕೃಷಿಯ್ಲಲಿ ಕ್ಯಾಪ್ಸಿಕಂ ಬೆಳೆಯುವ ಸಲಹೆ ನೀಡಿದರು. ‘ಮಾರ್ಗದರ್ಶನ ನೀಡುವುದಾಗಿ’ ಭರವಸೆ ಕೊಟ್ಟರು. ಈ ನಡುವೆ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ, ಕೃಷಿ ಇಲಾಖೆ ಸಹಯೋಗದೊಂದಿಗೆ ಸಾವಯವ ಗ್ರಾಮ/ಸ್ಥಳ ಯೋಜನೆಯನ್ನು ಸೀತೆಕೆಂಪನಹಳ್ಳಿಯ್ಲಲಿ ಅನುಷ್ಠಾನಗೊಳಿಸಲಾರಂಭಿಸಿತು. ಈ ಯೋಜನೆಯಡಿ ರಚಿತವಾದ ಸಾವಯವ ಕೃಷಿ ಸಂಘಕ್ಕೆ ಮ್ಲಲಿಕಾರ್ಜುನ್ ಅಧ್ಯಕ್ಷರಾದರು. ಈ ಎಲ ‘ಬೆಳವಣಿಗೆ’ಗಳ ಮೊದಲ ಪ್ರಯತ್ನವಾಗಿ ಮೇ ತಿಂಗಳ್ಲಲಿ ಸಾವಯವ ಕೃಷಿ ಪದ್ಧತಿಯ್ಲಲಿ ಕ್ಯಾಪ್ಸಿಕಂ ಬೆಳೆಯಲು ಆರಂಭಿಸಿದರು.
ಕ್ಯಾಪ್ಸಿಕಂ ಬೆಳೆದ್ದಿದು ಹೀಗೆ :
ಮುಕ್ಕಾಲು ಎಕರೆ (೩೦ ಗುಂಟೆ) ಜಮೀನನ್ನು ಆಳವಾಗಿ ಉಳುಮೆ ಮಾಡಿಸಿದರು. ೧೫ ಟನ್ ಕೊಟ್ಟಿಗೆ(ಮೂರು ಟ್ರ್ಯಾಕ್ಟರ್) ಗೊಬ್ಬರವನ್ನು ಭೂಮಿಗೆ ಹರಗಿಸಿದರು. ಮೂರು ಅಡಿ ಅಳತೆಯ್ಲಲಿ ಸಾಲುಗಳನ್ನು ಗುರುತು ಮಾಡಿದರು. ಪ್ರತಿ ಸಾಲಿನ್ಲಲಿ ಐದು ಇಂಚು ಆಳದ ಗುಂಡಿ ತೆಗೆಸಿದರು. ವರ್ಮಿ ಕಾಂಪೊಸ್ಟ್ ೫೦೦ ಕೆ.ಜಿ, ೨೫೦ ಕೆ.ಜಿ ಬೇವಿನಹಿಂಡಿ, ನಾಲ್ಕು ಕೆ.ಜಿ ಟ್ರೈಕೋಡರ್ಮಾ ಮಿಶ್ರ ಮಾಡಿ ಮೂರು ದಿನ ಕಳಿಸಿದರು. ಈ ಮಿಶ್ರಣವನ್ನು ಪ್ರತಿ ಸಾಲುಗಳಿಗೆ ಹಾಕಿ ಮುಚ್ಚಿಗೆ ಮಾಡಿದರು. ಮತ್ತೆ ಮೂರು ದಿನಗಳ ನಂತರ ಸಾಲುಗಳ ಮೇಲೆ ಡ್ರಿಪ್ ಪೈಪ್ ಅಳವಡಿಸಲಾಯಿತು. ನಂತರ ನೀರು ಹರಿಸಿ ಮಣ್ಣನ್ನು ತೇವಗೊಳಿಸಿದರು. ಮರು ದಿನವೇ ಸಸಿಗಳ ನಾಟಿ ಆರಂಭ. ಇದ್ಲೆಲ ನಾಟಿಗೆ ೨೦ ದಿವಸಗಳ ಮುಂಚೆ ಮಾಡಿದ ಕೆಲಸ.

ಗಿಡಗಳನ್ನು ನಾಟಿ ಮಾಡಿದ ೨೦ ದಿನಗಳ ನಂತರ ಮತ್ತೆ ಪೋಷಕಾಂಶಗಳನ್ನು ಮೇಲುಗೊಬ್ಬರವಾಗಿ ಗಿಡಗಳಿಗೆ ನೀಡಿದರು. ಈ ಬಾರಿ ೧೦೦ ಕೆ.ಜಿ ಬೇವಿನ ಹಿಂಡಿ, ೨೫೦ ಕೆ.ಜಿ ವರ್ಮಿ ಕಾಂಪೋಸ್ಟ್ ಮಿಶ್ರಣವನ್ನು(ಒಂದು ಹಿಡಿ) ಪ್ರತಿ ಎರಡು ಸಸಿಗಳ ನಡುವೆ ಕೊಟ್ಟರು. ಸಾಲುಗಳ ನಡುವ್ದಿದ ಮಣ್ಣನ್ನು ಈ ಮಿಶ್ರಣದ ಮೇಲೆ ಮುಚ್ಚಿ ‘ಬೆಡ್’ ತಯಾರಿಸಲಾಯಿತು. ‘ಬೆಡ್ ಮಾಡ್ದಿದರಿಂದ ಕಳೆ ನಿಯಂತ್ರಣವಾಗುತ್ತದೆ. ಪೋಷಕಾಂಶಗಳು ಭೂಮಿಯೊಳಗಿನ ಗಿಡಗಳ ಬೇರಿಗೆ ನೇರವಾಗಿ ತಲುಪುತ್ತವೆ. ಬೇರು ಬೆಳವಣಿಗೆಗೂ ನೆರವಾಗುತ್ತದೆ’ ಎನ್ನುವುದು ಮ್ಲಲಿಕಾರ್ಜುನ್ ಅಭಿಪ್ರಾಯ.
ಹೂ ಅರಳಿ-ಕಾಯಾಗಿ:
ಗೊಬ್ಬರ, ಪೋಷಕಾಂಶಗಳ ಆರೈಕೆಯೊಂದಿಗೆ ತಿಂಗಳೊಳಗೆ ಗಿಡಗಳ್ಲಲಿ ಹೂವು ಬಿರಿಯಲು ಶುರುವಾಯಿತ. ಈ ಸಂಭ್ರಮದ ಜೊತೆಗೆ ಹೂವಿನ ಪಕಳೆಗಳ ನಡುವೆ ಸಣ್ಣ ಸಣ್ಣ ಹೇನುಗಳು(ತ್ರಿಪ್ಸ್) ಕಾಣಿಸಿಕೊಂಡವು. ಮ್ಲಲಿಕಾರ್ಜುನ ಧೃತಿಗೆಡಲ್ಲಿಲ. ಐಐಎಚ್‌ಆರ್ ವಿಜ್ಞಾನಿ ಪ್ರಭಾಕರ್ ಅವರು ಸೂಚಿಸ್ದಿದ ‘ಮೆಣಸಿನಕಾಯಿ ಕಷಾಯ’ (ಬಾಕ್ಸ್ ನೋಡಿ)ವನ್ನು ಗಿಡಗಳ ನೆತ್ತಿಯ ಮೇಲೆ ಸಿಂಪಡಿಸಿದರು. ‘ಈ ಕಷಾಯದಿಂದ ತ್ರಿಪ್ಸ್ ನಿಯಂತ್ರಣಕ್ಕೆ ಬಂತು. ಗಿಡಗಳ ಎಲೆಗಳು ಕೂಡ ಮೃದುವಾದವು’ ಎನುತ್ತಾರೆ ಮ್ಲಲಿಕಾರ್ಜುನ್.
ಕ್ಯಾಪ್ಸಿಕಂ ಬೆಳೆ ಸೋಲುವುದೇ ‘ಫಂಗಸ್’ ಬಾಧೆಯಿಂದ. ಫಂಗಸ್ ನಿಯಂತ್ರಣಕ್ಕೆ ಹದಿನೈದು ದಿನಗಳಿಗೊಮ್ಮೆ ಟ್ರೈಕೋಡರ್ಮವನ್ನು ಕಷಾಯ ಮಾಡಿ ಗಿಡಗಳಿಗೆ ಸಿಂಪಡಿಸಬೇಕು. ಎಲೆ- ಪೌಡರ್ ರೋಗ ಬಾಧಿಸಿದರೆ ಬೋರ್ಡೊ ದ್ರಾವಣ ಸಿಂಪಡಿಸಬೇಕು’ ಎಂಬುದು ಅವರ ಸಲಹೆ. ಇಂಥ ಸಲಹೆಗಳನ್ನು ಅಳವಡಿಸಿಕೊಂಡ್ದಿದರಿಂದಲೇ ಐದು ಸಾವಿರ ಕ್ಯಾಪ್ಸಿಕಂ ಗಿಡಗಳ್ಲಲಿ ಒಂದೇ ಒಂದು ಗಿಡವೂ ಹಾಳಾಗಲ್ಲಿಲ. ಜೊತೆಗೆ ರೋಗ ರಹಿತ ಕಾಯಿಗಳು ಹೊರ ಹೊಮ್ಮಲು ಕಾರಣವಾಯಿತು ಎನ್ನುತ್ತಾರೆ ಮ್ಲಲಿಕಾರ್ಜುನ.
ಪ್ರಸ್ತುತ ಜಮೀನಿನ್ಲಲಿ ಎಲಾ ಗಿಡಗಳು ಕಾಯಿ ಕಚ್ಚಿವೆ. ಎರಡು ಅಡಿ ಎತ್ತರವಿರುವ ಪ್ರತಿ ಗಿಡದ್ಲಲಿ ನಾಲ್ಕೈದು ಕಾಯಿಗಳು ಜೋತಾಡುತ್ತಿವೆ. ‘ರಾಸಾಯನಿಕ ಪದ್ಧತಿಯ್ಲಲಿ ಇಂಥ ತಾಜಾ ಕಾಯಿ ಕಾಣುವುದಕ್ಕೆ ಬಹಳ ಸರ್ಕಸ್ ಮಾಡಬೇಕು. ಅಷ್ಟೇ ಅಲ, ಈ ಹಂತದ್ಲಲಿ ೨೫ ಸಾವಿರ ರೂಪಾಯಿಗೂ ಹೆಚ್ಚು ಹಣ ಖರ್ಚಾಗುತ್ತಿತ್ತು. ಕೂಲಿ ಆಳು, ಗೊಬ್ಬರ, ಕಷಾಯ, ಸಸಿ.. ಹೀಗೆ ಎಲ ಲೆಕ್ಕ ಹಾಕಿದರೂ, ಹತ್ತು ಸಾವಿರ ದಾಟ್ಲಿಲ. ನನ್ನದು ಕಡಿಮೆ ಶ್ರಮದ್ಲಲಿ ಉತ್ತಮ ಇಳುವರಿ ತೆಗೆಯುವ ಪ್ರಯತ್ನ ಎಂದು ಮ್ಲಲಿಕಾರ್ಜುನ ಖುಷಿಯಿಂದ ವಿವರಿಸುತ್ತಾರೆ. ಅಂದ ಹಾಗೆ, ಎರಡೂ ಪದ್ಧತಿಯ್ಲಲಿ ಇಳುವರಿ ಒಂದೇ. ಆದರೆ ಕಾಯಿಯ ಗುಣಮಟ್ಟ (ಸಿಪ್ಪೆಯ ಗಾತ್ರ) ಸಾವಯವದ್ಲಲಿ ತುಸು ದಪ್ಪ, ರುಚಿಯ್ಲಲೂ ಸೊಗಸು’ – ಅನುಭವ ಎನ್ನುವುದು ಮ್ಲಲಿಕಾರ್ಜುನ ಅವರಿಗೆ ವಿಜ್ಞಾನ, ಲೆಕ್ಕಾಚಾರ.. ಎಲವನ್ನೂ ಕಲಿಸಿದೆ.
ಸ್ವಾವಲಂಬಿಯಾದರೆ ಖರ್ಚು ಕಡಿಮೆ :
ಸಾವಯವ ಕೃಷಿ ಪದ್ಧತಿ ಎಂದರೆ ‘ದುಬಾರಿ’ ಎನ್ನುವ ಮಾತಿದೆ. ಆ ಮಾತನ್ನು ಮ್ಲಲಿಕಾರ್ಜುನ ಸುಳ್ಳು ಮಾಡ್ದಿದಾರೆ. ಖರ್ಚು ಕಡಿಮೆಯಾಗಲು ಮನೆಗಳ್ಲಲಿ ಸಂಪನ್ಮೂಲಗಳಿರಬೇಕು ಎನ್ನುವ ಅವರು, ಸಸಿ, ಬೇವಿನ ಹಿಂಡಿ ಬಿಟ್ಟರೆ, ಬೇರೇನೂ ಹೊರಗಿನಿಂದ ಖರೀದಿಸ್ಲಿಲ. ಗಿಡ ನಾಟಿ ಹಾಗೂ ಕಳೆ ತೆಗೆಯಲು ಮಾತ್ರ ಆಳುಗಳನ್ನು ಬಳಸ್ದಿದಾರೆ. ವಿಜ್ಞಾನಿಗಳ ಲೆಕ್ಕಾಚಾರದ ಪ್ರಕಾರ ಒಂದು ಎಕರೆ ಕ್ಯಾಪ್ಸಿಕಂ ಬೆಳೆಯಲು ಕನಿಷ್ಠ ೩೫ ಸಾವಿರ ರೂಪಾಯಿ ಬೇಕು. ಹಸಿರು ಮನೆಯ್ಲಲಿ (ರಫ್ತು ಗುಣಮಟ್ಟದ)ಬಣ್ಣಬಣ್ಣದ ಕ್ಯಾಪ್ಸಿಕಂ ಬೆಳೆಯಲು 3-4 ಲಕ್ಷ ರೂಪಾಯಿ ಅಗತ್ಯ. ಮ್ಲಲಿಕಾರ್ಜುನ್ ೧೩ ಸಾವಿರ ಬಂಡವಾಳದ್ಲಲಿ ಮುಕ್ಕಾಲು ಎಕರೆಯ್ಲಲಿ ಕ್ಯಾಪ್ಸಿಕಂ ಬೆಳೆದ್ದಿದಾರೆ !
ಈಗ ಕ್ಯಾಪ್ಸಿಕಂ ಕೊಯ್ಲು ಶುರುವಾಗಿದೆ. ಎರಡು ಬಾರಿ ಕೊಯ್ಲು ಮಾಡ್ದಿದಾರೆ. ಮೊದಲು ೩೫೦ ಕೆ.ಜಿ, ನಂತರ ೫೦೦ ಕೆ.ಜಿ ಕಾಯಿಗಳು ಸಿಕ್ಕಿವೆ. ಯಲಹಂಕ ರೈತ ಸಂತೆಯ ವ್ಯಾಪಾರಸ್ಥರೊಬ್ಬರು ಮನೆ ಬಾಗಿಲಿಗೆ ಬಂದು ಕೆ.ಜಿ.ಗೆ ೨೫ ರೂಪಾಯಿ ಕೊಟ್ಟು ಖರೀದಿಸ್ದಿದಾರೆ. ಸಾಗಾಟ ವೆಚ್ಚ ಇಲ. ಮಾರ್ಕೆಟ್ ಸುಲಭವಾಗಿದೆ. ಎಲದಕ್ಕಿಂತ ಆರೋಗ್ಯಪೂರ್ಣ ಗಿಡಗಳು, ಕಾಯಿಗಳನ್ನು ಕಂಡು ಮ್ಲಲಿಕಾರ್ಜುನ್ ಸಮಾಧಾನಗೊಂಡ್ದಿದಾರೆ. ಮ್ಲಲಿಕಾರ್ಜುನ ಸಂಪರ್ಕ ಸಂಖ್ಯೆ: ೯೩೪೨೪೬೦೨೧೬.