ಜೀವವೈವಿಧ್ಯದ ತಾಣ ‘ಮರೋದ್ಯಾನ’


ಬೆಂಗಳೂರಿನ್ಲಲಿ ಸಾಕಷ್ಟು ಉದ್ಯಾನಗಳಿವೆ. ಅವುಗಳಲ್ಲಿ ಜೀವವೈವಿಧ್ಯದ ಕೊರತೆಯಿದೆ. ಉದ್ಯಾನ ಕೇವಲ ಆಟ, ವಿಹಾರದ ತಾಣವಲ್ಲ.  ಸುತ್ತಲಿನ ಪರಿಸರವನ್ನು ಪರಿಶುದ್ಧವಾಗಿಸುವ ಕೇಂದ್ರ. ಅಂಥ ಪಾರ್ಕ್‌ನಲ್ಲಿ ಮರ,ಗಿಡ, ಪಕ್ಷಿ, ಕೀಟ ಪ್ರಪಂಚ.. ಹೀಗೆ ಜೀವ ಜಗತ್ತೇ  ಇರಬೇಕು. ಇಷ್ಟೆಲ್ಲ ಇಲದ್ದಿದರೂ ಒಂದಷ್ಟು ಜೀವವೈವಿಧ್ಯ ತುಂಬಿಕೊಂಡಿರುವ ಉದ್ಯಾನವೊಂದು ಆರ್‌ಎಂವಿ ೨ನೇ ಹಂತದಲ್ಲಿದೆ. ಈ ಉದ್ಯಾನವನ್ನು ಕೆಲವರು ‘ಟ್ರೀ ಪಾರ್ಕ್’ ಎಂದೂ ಕರೆಯುತ್ತಾರೆ.  ಮೇ ೨೨ರ ‘ವಿಶ್ವ ಜೀವವೈವಿಧ್ಯ ದಿನ’ದ ನೆನಪಿಗಾಗಿ ಆ ಉದ್ಯಾನದ ಒಳಗೆ ಒಂದು ಸುತ್ತಾಟ.
—————


ವರ್ಷದ ಹಿಂದಿನ ಮಾತು. ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಡಾ.ಎಸ್.ಸುಬ್ರಹ್ಮಣ್ಯ ಒಂದು ಮೇಲ್ ಕಳುಹಿಸಿದ್ದರು. ಅದರಲ್ಲಿ ‘ಹಕ್ಕಿ ಆಕರ್ಷಿಸುವ ಮರ ಹಾಗೂ ಪೊದೆಗಳ ಪಟ್ಟಿ’ಯಿತ್ತು. ಈ ಪಟ್ಟಿಯಲ್ಲಿ ಹಣ್ಣು ಬಿಡುವ ಮರಗಳು, ಮೊದೆಗಳು, ಪಾತರಗಿತ್ತಿ ಆಕರ್ಷಿಸುವ ಗಿಡಗಳು.. ಹೀಗೆ ಸಸ್ಯ-ಪ್ರಾಣಿ ಸಂಕುಲದ ವಾತಾವರಣವಿರುವ ಕುಟುಂಬದ ಸದಸ್ಯರಿದ್ದರು.
‘ಇಂಥ ಮರಗಳು ಬೆಂಗಳೂರಿನ ಪಾರ್ಕ್‌ಗಳಲ್ಲಿರಬೇಕು. ಆಗಷ್ಟೇ ಅವು ಜೀವಂತ ಉದ್ಯಾನವನವಾಗುತ್ತವೆ’ ಎನ್ನುವುದು ಸುಬ್ರಹ್ಮಣ್ಯ ಅವರ ಅಭಿಪ್ರಾಯವಾಗಿತ್ತು. ಅದಕ್ಕಾಗಿಯೇ ತುಂಬಾ ಕಾಳಜಿಯಿಂದ ಅಂಥ ಮರಗಳನ್ನು ಹುಡುಕಿ ಪಟ್ಟಿ ಸಿದ್ಧಪಡಿಸಿದರು. ದುರದೃಷ್ಟವಶಾತ್, ಅಂಥ ಮರಗಳನ್ನು ಬೆಳೆಸಿ ಉದ್ಯಾನ ನಿರ್ಮಿಸುವ ‘ಸಾಹಸ’ಕ್ಕೆ ಯಾರೂ ಮುಂದಾದಂತಿಲ್ಲ.
ಆದರೂ, ಕೆಲವು ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಆಸಕ್ತಿಯಿಂದಾಗಿ ಬೆರಳೆಣಿಕೆಯಷ್ಟು ವಿಭಿನ್ನ ಉದ್ಯಾನಗಳು ನಗರದಲ್ಲಿ ನಿರ್ಮಾಣವಾಗಿವೆ. ಆ ಉದ್ಯಾನಗಳಲ್ಲಿ ಆರ್‌ಎಂವಿ ೨ನೇ ಹಂತದ್ಲಲಿರುವ ೧೮ನೇ ವಾರ್ಡ್ ನ ೨ನೇ ಮುಖ್ಯರಸ್ತೆಯ ‘ಟ್ರೀ ಪಾರ್ಕ್(ಇದು ಜನರಿಟ್ಟ ಹೆಸರು)’ ಕೂಡ ಒಂದು. ಉದ್ಯಾನದಲ್ಲಿ ೧೫೦ ರಿಂದ ೨೦೦ ಮರಗಳಿವೆ. ಒತ್ತೊತ್ತಾಗಿ ಬೆಳೆದಿವೆ. ಈ ಮರಗಳು ಸೂರ್ಯನನ್ನು ಹುಡುಕಿ ಓಡುತ್ತಾ ಓಡುತ್ತಾ ೪೫ರಿಂದ ೫೦ ಅಡಿ ಎತ್ತರಕ್ಕೆ ಬೆಳೆದು ನಿಂತಿವೆ. ಅಲ್ಲೇ ಒಂದೊನ್ನೊಂದು ಸಂದಿಸಿ ಪಾರ್ಕ್ ಅಂಗಳಕ್ಕೆ ನೆರಳು ಚೆಲ್ಲುತ್ತವೆ.

ಇಲಿ ಬಹಶಃ ಹತ್ತಕ್ಕೂ ಹೆಚ್ಚು ವೆರೈಟಿಯ ಮರಗಳಿರಬಹುದು. ಕಾಂಪೌಂಡ್ ಪಕ್ಕದಲ್ಲಿ ಗ್ಲಿರಿಸೀಡಿಯಾ, ಬೋಗನ್‌ವಿಲಾ ಇದೆ. ಅಂಗಳದಲ್ಲಿ ಬಾಗೆ ಮರ ಹೋಲುವ ಮೇವಿನ ಮರ, ಜಕರಾಂಡ(ನೀಲಿ ಹೂ ಬಿಡುವ ಮರ), ಕಾಪರ್ ಪಾಡ್(ಹಳದಿ ಹೂವಿನ ಗಿಡ), ಅಶೋಕ ಗಿಡ.. ಹೀಗೆ ಪಾರ್ಕ್ ಸುತ್ತಿದರೆ ‘ಮರದ ಕುಟುಂಬ’ ಗುರುತಿಸುವವರಿಗೆ ಇನ್ನಷ್ಟು ಮಾಹಿತಿ ದೊರೆಯಬಹುದು.
ಇಷ್ಟು ಮರಗಳ ಜೊತೆ ಜೊತೆಗೆ ಬೇಲಿಯ ಹೂವುಗಳಿವೆ. ಪೊದೆ ಸೃಷ್ಟಿಸಿ ಪಾತರಗಿತ್ತಿ ಸಂಸಾರಕ್ಕೆ ಆಶ್ರಯ ನೀಡುವ ಸಸ್ಯಗಳೂ ಇವೆ. ಸುತ್ತಲಿನ ನಿವಾಸಿಗಳು ಗಮನಿಸುವ ಪ್ರಕಾರ ಹೂವು ಅರಳುವ ಕಾಲದ್ಲಲಿ ಪಾರ್ಕ್‌ನ್ಲಲಿ ಬಣ್ಣ ಬಣ್ಣಗಳ ಹೂವು ಕಾಣುತ್ತವೆ. ಎತ್ತರದ ಮರಗಳಿರುವುದರಿಂದ ಕಾಗೆ, ಕೋಗಿಲೆಯಂತಹ ಹಕ್ಕಿಗಳೂ ಹಾರಾಡುತ್ತವೆ. ಹೂಗಳ ಕಾಲದಲ್ಲಿ ಮಕರಂದ ಹೀರಲು ದುಂಬಿಗಳೂ ಬರುತ್ತವೆ.

ಕೆನಾಪಿಗಳ ಸಂಗಮ

ಅಂದಾಜು ಅರ್ಧ ಎಕರೆ ವಿಸ್ತೀರ್ಣವಿರುವ ಈ ಪಾರ್ಕ್ ಅಂಗಳದಲ್ಲಿ ಎಲೂ ಕೃತಕ ವಾತಾವರಣವಿಲ್ಲ. (ವೃತ್ತಾಕಾರದ ಕಾರಂಜಿ ಹೊರತುಪಡಿಸಿ). ನೆಲ ಹಾಸುಗಳಿಗೆ ಕಲ್ಲು ಹೊದಿಸಿಲ್ಲ. ನೀರು ಹೀರುವ ಹ್ಲುಲು ಹಾಸಿಲ್ಲ. ವಾಕಿಂಗ್ ಪಾತ್, ಮರಗಿಡಗಳಿರುವ ಸ್ಥಳ ಎಲ ಕಡೆಯೂ ಮಣ್ಣಿನ ಅಂಕಣವಿದೆ. ಹಾಗಾಗಿ ಈ ಅಂಗಳದ ಮೇಲೆ ಸುರಿದ ಮಳೆ ನೀರು ಒಂದೇ ಒಂದು ಹನಿ ಆಚೆ ಹೋಗದೇ ಸ್ಥಳದಲ್ಲೇ ಇಂಗುತ್ತದೆ. ಎಲ್ಲೆಲಿ ಹುಲ್ಲು ಬೀಜಗಳಿಗೆ ಬೆಳೆಯಲು ಸಾಧ್ಯವೋ ಅಲ್ಲಲಿ ಹುಲ್ಲಿನ ತೆಂಡೆಗಳು ಬೆಳೆದುಕೊಂಡಿವೆ.
ಇಲಿನ ಗಿಡ ಬೆಳವಣಿಗೆಗೆ ಗೊಬ್ಬರ-ಮಣ್ಣು ಎಲ್ಲ ಇಲ್ಲೇ ತಯಾರಾಗುತ್ತದೆ. ಈ ಪಾರ್ಕ್‌ನಲ್ಲಿರುವ ಗಿಡ ಮರಗಳು ಉದುರಿಸುವ ಎಲೆಗಳು ಕಾಂಪೋಸ್ಟ್ ಆಗುತ್ತವೆ. ಮಣ್ಣಿಗೆ ಬೇಕಾದ ಇಂಗಾಲದ ಅಂಶವನ್ನು ಸರಬರಾಜು ಮಾಡುತ್ತವೆ. ಹೆಚ್ಚಾದ ಎಲೆಗಳನ್ನು ಪಾರ್ಕ್‌ನ ಮೂಲೆಯಲ್ಲಿ ರಾಶಿ ಮಾಡಿ ಕಾಂಪೋಸ್ಟ್ ಮಾಡುತ್ತಾರೆ. ಅದೇ ಗೊಬ್ಬರ ಉದ್ಯಾನಕ್ಕೆ ಬಳಕೆಯಾಗುತ್ತದೆ. ‘ಈ ಉದ್ಯಾನದಲ್ಲಿ ಉಳುಮೆ ಇಲ್ಲ. ಎರೆಹುಳು ಹಾಗೂ ಭೂಮಿ ಅಗೆಯುವ ಜಾತಿಯ ಸಣ್ಣಪುಟ್ಟ ಕೀಟಗಳೇ ಇಲಿನ ಉಳುಮೆಗಾರರು. ‘ಅಲಿನ ಮಣ್ಣನ್ನು ಕೆದಕಿದರೆ ಈ ಸೂಕ್ಷ್ಮ ವಿಷಯ ಬಯಲಾಗುತ್ತದೆ’ ಎನ್ನುತ್ತಾರೆ ಹತ್ತು ವರ್ಷದಿಂದ ಈ ಪಾರ್ಕ್ ಸುತ್ತಾಡುವ ವಿಶ್ರಾಂತ ಎಂಜಿನಿಯರ್ ಎ.ಆರ್.ಎಸ್.ಶರ್ಮಾ. ಇಷ್ಟೆಲ್ಲ ಜೀವ ವೈವಿಧ್ಯದ ಸೊಗಸಿರುವ ಈ ಪಾರ್ಕ್ ಸುತ್ತಾಡಿದರೆ ಪುಟ್ಟ ಕಾಡು ತೋಟ ಹೊಕ್ಕ ಅನುಭವವಾಗುತ್ತದೆ.

ಉದ್ಯಾನದ ಅಂಗಳದಲ್ಲಿ ಹಸಿರು ಪಟ್ಟೆಗಳು

ಬಡಾವಣೆಯ ನಿವಾಸಿಗಳ ಆಸಕ್ತಿಯ ಮೇಲೆ ಹತ್ತು ವರ್ಷಗಳ ಹಿಂದೆ ಪಾರ್ಕ್ ನಿರ್ಮಾಣವಾಗಿದೆ. ‘ಮೊದಲು ಸುತ್ತಲಿನ ನಿವಾಸಿಗಳೇ ಗಿಡಗಳನ್ನು ನೆಡುತ್ತ್ದಿದೆವು. ಕೆಲವರು ಉದ್ಯಾನದಲ್ಲಿ ಕಳೆ ತೆಗೆಯುತ್ತ್ದಿದರು. ನೀರು ಹನಿಸುತ್ತ್ದಿದರು. ಪಾರ್ಕ್ ಉಸ್ತುವಾರಿ ಪ್ರಮುಖರಲ್ಲೊಬ್ಬರಾದ ಉಮಾ ಮುಖರ್ಜಿಯವರು ಪಾರ್ಕ್ ನಿರ್ವಹಣೆಯಲ್ಲಿ ಸಕ್ರಿಯವಾಗಿದ್ದರು. ಹೀಗೆ ಕ್ರಿಯಾಶೀಲವಾಗಿದ್ದ ಸದಸ್ಯರೆಲ್ಲ ತಟಸ್ಥವಾಗುತ್ತಿದ್ದ ಸಮಯದಲ್ಲಿ ಪಾಲಿಕೆ ಯವರು ನಿರ್ವಹಣೆ ಜವಾಬ್ದಾರಿ ತೆಗೆದುಕೊಂಡರು’ ಎಂದು ವಿವರಿಸಿದರು ನಿವಾಸಿ ಶ್ರೀಮತಿ.
ಪಾರ್ಕ್ ಸ್ವಾಭಾವಿಕವಾಗಿರಬೇಕೆನ್ನುವುದ ಈ ಬಡಾವಣೆಯವರ ಉದೇಶ. ಕಾಲಿಗೆ ಮಣ್ಣಿನ ಸ್ಪರ್ಶವಾಗಬೇಕು. ಅದಕ್ಕಾಗಿಯೇ ಉದ್ಯಾನದಲ್ಲೆಲ್ಲೂ ಕಲ್ಲು ಹಾಸುಗಳಿಲ್ಲ. ‘ಒಮ್ಮೆ ಸ್ಲಾಬ್ ಹಾಕುತ್ತೇವೆಂದು ಪಾಲಿಕೆಯವರು ಮುಂದಾಗಿದ್ದರು. ಪ್ರತಿಭಟನೆ ಮಾಡಿ, ಕಲ್ಲು ಹಾಕದಂತೆ ತಡೆದವು’ ಎನ್ನುತ್ತಾರೆ ಇಲಿನ ವಾಕರ್‌ಗಳು. ಕಲ್ಲಿನ ಹಾಸಿನ ಮೇಲೆ ನಡೆದರೆ ಕಾಲು ನೋಯುತ್ತದೆ. ಮರಳಿನ ಸ್ಪರ್ಶ ಆಕ್ಯುಪಂಚರ್ ಚಿಕಿತ್ಸೆ ನೀಡುತ್ತದೆ. ಮಣ್ಣಿದ್ದರೆ ಮಳೆ ನೀರು ಇಂಗಲು ಸಹಾಯಕವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.
ಪ್ರತಿ ನಿತ್ಯ ಹತ್ತಾರು ಮಂದಿ ಪಾರ್ಕ್ ಬಳಸುತ್ತಾರೆ. ಅದರಲ್ಲಿ ವಯಸ್ಸಾದವರೇ ಹೆಚ್ಚು. ಜೊತೆಗೆ ಮಕ್ಕಳು ಆಟವಾಡಲು ಬರುತ್ತಾರೆ. ಹಾಗಾಗಿ ಉದ್ಯಾನ ಬಳಕೆದಾರರಿಗೆ ಈ ಪಾರ್ಕ್ ಅಭಿವೃದ್ಧಿಯಾಗಬೇಕೆಂಬ ಆಸೆಯಿದೆ. ಹಾಗೆಯೇ ಅಭಿವೃದ್ಧಿ ಹೆಸರಲ್ಲಿ ಪಾರ್ಕ್‌ನ ಸ್ವರೂಪ ವಿರೂಪವಾಗಬಾರದೆಂಬ ಕಾಳಜಿಯೂ ಇದೆ. ಸದ್ಯ ಪಾಲಿಕೆಯವರು ಇಲ್ಲಿನ ಗಾರ್ಡ್‌ನರ್ ಸಂಖ್ಯೆ ವಿಸ್ತರಿಸಬೇಕು. ವಾಕಿಂಗ್ ಪಾತ್‌ನಲ್ಲಿ ಮೃದುವಾದ ಮರಳು ಹಾಕಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಹಸಿರು ಉಸಿರಿನ ಜೊತೆಗೆ ಪಕ್ಕದ ಚರಂಡಿಯಿಂದ ಹೊರ ಹೊಮ್ಮುವ ‘ದುರ್ನಾತವನ್ನು’ ಕಡಿಮೆಗೊಳಿಸಬೇಕು. ಜೊತೆಗೆ ಪಾರ್ಕ್ ಸಮಯವನ್ನು ವಿಸ್ತರಿಸಿದರೆ ಸಾಕು ಎನ್ನುವುದು ಇಲಿನ ನಿವಾಸಿಗಳ ಬೇಡಿಕೆಯಾಗಿದೆ.

Published by

ಗಾಣಧಾಳು ಶ್ರೀಕಂಠ

ಹುಟ್ಟೂರು ಗಾಣಧಾಳು. ಓದಿದ್ದು ತಿಪಟೂರು. ಕೆಲಸ ಮಾಡ್ತಿರೋದು ಬೆಂಗಳೂರು. ವೃತ್ತಿಯಲ್ಲಿ ಪತ್ರರ್ತ, ಆಸಕ್ತಿ ಕೃಷಿ-ಗ್ರಾಮೀಣಾಬಿವೃದ್ದಿ ಮತ್ತು ಪರಿಸರ. ಫೋಟೋಗ್ರಫಿ, ಪುಟ ವಿನ್ಯಾಸ, ಪ್ರವಾಸ ಹವ್ಯಾಸ. ರಮಾ ಬಾಳಸಂಗಾತಿ. ಆಕೆಯೂ ಹವ್ಯಾಸಿ ಬರಹಗಾರ್ತಿ. ಸ್ಪೈಸ್ ಇಂಡಿಯಾ ಕನ್ನಡ ಮಾಸ ಪತ್ರಿಕೆಯಲ್ಲಿ ಆರು ವರ್ಷ ಸಹಾಯಕ ಸಂಪಾದಕಿ (ಎಡಿಟೋರಿಯಲ್ ಅಸಿಸ್ಟೆಂಟ್) ಕೆಲಸ ಮಾಡಿದ್ದಾರೆ. ಸದ್ಯ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಗೌರವ ಉದ್ಘೋಷಕಿ, ಮಗಳು ನದಿ ನನ್ನ ಬದುಕು, ಮಗ ಅಗರ್ತ, ನನ್ನ ಭವಿಷ್ಯ. ನಿವೃತ್ತ ಶಿಕ್ಷಕ ತಂದೆ ಗಾಣಧಾಳು ರಾಮಣ್ಣ ಅವರೊಂದಿಗೆ ವರ್ಗವಾದ ಕಡೆ ವಾಸ್ತವ್ಯ. ಸದ್ಯ ಚಿತ್ರದುರ್ಗದಲ್ಲಿ ವಾಸ. ಸಮಾಜಶಾಸ್ತ್ರ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ. ಪ್ರಜಾಪ್ರಗತಿ, ಉದಯವಾಣಿ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರನಾಗಿ ಸೇವೆ. ೧೯೯೬ರಿಂದ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ದಾಖಲಾತಿಗಾರನಾಗಿ ವೃತ್ತಿ ಆರಂಭ. ಕ್ರಮೇಣ, ಅದೇ ಸಂಸ್ಥೆಯ ಪ್ರಕಾಶನದ ಸಿರಿಸಮೃದ್ಧಿ ಕೃಷಿ ಮಾಸಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇವೆ ಮುಂದುವರಿಕೆ. ೨೦೦೨ರಿಂದ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಆವೃತ್ತಿಯಲ್ಲಿ ಉಪ ಸಂಪಾದಕನಾಗಿ ಸೇವೆ ಆರಂಭ. ೨೦೦೪ರಲ್ಲಿ ಇದೇ ಪತ್ರಿಕೆಯ ಕೃಷಿ ವಿಜಯ ಪುರವಣಿಯ ಮುಖ್ಯಸ್ಥನಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ೨೦೦೬ರಿಂದ ಪ್ರಜಾವಾಣಿ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ. ಪ್ರಕಟಿತ ಕೃತಿಗಳು : ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಿ ಬೀಜಗಳ ಪರಂಪರೆ ಕುರಿತ ಸರಣಿಯ ಅಕ್ಷರ ರೂಪದ ಕೃತಿ ‘ಬೀಜಸಂಪದ’ . ಸಾವಯವ ಕೃಷಿಕರ ಯಶೋಗಾಥೆಯ ಕೃತಿ ‘ಸಾವಯವ ಚಿತ್ತಾರ’, ‘ವೆಲ್ವೆಟ್ ಬೀನ್ಸ್ -ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ’, ‘ಸ್ಲೋಫುಡ್- ಸುಭೋಜನಾ ಸಾವಧಾನ’, ‘ದೇಸಿ ಕೃಷಿ ಉಪಕರಣಗಳು’, ‘ನೆಲಮೂಲ ಕೃಷಿಜ್ಞಾನ- ಮಲೆನಾಡ ದೇಸಿ ಕೃಷಿ ಪದ್ಧತಿಗಳು’, ‘ ಹಸಿರು ಹಾದಿ’, ‘ಅಜೋಲಾ-ಮೇವಿಗೂ ಸೈ ಗೊಬ್ಬರಕ್ಕೂ ಜೈ’, ‘ಸುಸ್ಥಿರ ತೋಟ ಮಾಡೋಣ ಬನ್ನಿ’ ಹಾಗೂ ‘ಹೊನ್ನಾರು - ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆ’ ಕುರಿತ ಕೃತಿಗಳು ಪ್ರಕಟಗೊಂಡಿವೆ. ಪ್ರಶಸ್ತಿ ಪುರಸ್ಕಾರ ೨೦೦೬ರಲ್ಲಿ ಸಿಡಿಎಲ್ ಸಂಸ್ಥೆಯಿಂದ ‘ಕೆರೆ ಆಪೋಷಣ ಪುರಾಣ’ ಲೇಖನಕ್ಕೆ ರಾಜ್ಯಮಟ್ಟದ ‘ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’. ಇದೇ ವರ್ಷ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದಿಂದ ‘ವೆಲ್ವೆಟ್ ಬೀನ್ಸ್’ ಲೇಖನಕ್ಕಾಗಿ ‘ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ’. ‘ದೇಸಿ ಭತ್ತ ಭ್ರಹ್ಮ ನಟವರಸಾರಂಗಿ’ ಲೇಖನಕ್ಕಾಗಿ ೨೦೦೯ರಲ್ಲಿ ಮುರುಘಾಶ್ರೀ - ರಾಜ್ಯಮಟ್ಟದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ೨೦೧೦-೧೧ನೇ ಸಾಲಿನ ‘ಉತ್ತಮ ವಿಜ್ಞಾನ ಲೇಖಕ ಪ್ರಶಸ್ತಿಗೆ ವೆಲ್ವೆಟ್ ಬೀನ್ಸ್ ಮತ್ತು ಸಾವಯವ ಚಿತ್ತಾರ ಪುಸ್ತಕಗಳ ಆಯ್ಕೆ. ೨೦೧೧ರಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ಸಂಸ್ಥೆಯಿಂದ ‘ಜಲಮೂಲಗಳ ಅಧ್ಯಯನಕ್ಕಾಗಿ’ ೧೨ನೇ ಸಿಎಸ್ಇ ಫೆಲೋಷಿಪ್ ಗೌರವ. ೨೦೧೨ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಯಜಮಾನ್ ಶ್ರೀ ನಾರಾಯಣಪ್ಪ ಪ್ರಶಸ್ತಿ, ೨೦೧೧ನೇ ಸಾಲಿನಲ್ಲಿ ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿನ ಎರಡು ದಶಕಗಳ ಗಣನೀಯ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ‘೨೦೧೪ನೇ ಸಾಲಿನ ರಾಜ್ಯಮಟ್ಟದ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಧ್ಯಯನ ಪ್ರವಾಸ : ಕೃಷಿ ಅಧ್ಯಯನಕ್ಕಾಗಿ ೨೦೧೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ಫ್ರಾನ್ಸಿಸ್ಕೋಗೆ ಪ್ರವಾಸ. ಭಾರತದ ಚಂಡಿಗಡ, ಒರಿಸ್ಸಾ, ಬಿಹಾರ, ಆಂಧ್ರ, ತಮಿಳುನಾಡು ಸೇರಿದಂತೆ ಕೃಷಿ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ.

5 thoughts on “ಜೀವವೈವಿಧ್ಯದ ತಾಣ ‘ಮರೋದ್ಯಾನ’”

 1. ಪ್ರಿಯ ಬ್ಲಾಗಿಗರೆ,
  ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.
  ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.

  ತಮ್ಮ ವಿಶ್ವಾಸಿ
  ಬೇಳೂರು ಸುದರ್ಶನ
  ಸಲಹಾ ಸಮನ್ವಯಕಾರ, ಕಣಜ ಯೋಜನೆ
  (ಕರ್ನಾಟಕ ಜ್ಞಾನ ಆಯೋಗದ ಯೋಜನೆ)
  ಈ ಮೈಲ್: projectmanager@kanaja.net
  http://www.kanaja.in
  ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು
  ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ
  ಬೆಂಗಳೂರು – 560100
  ದೂರವಾಣಿ: ೯೭೪೧೯೭೬೭೮೯

 2. ಗಾಣಧಾಳು ಶ್ರೀಕಂಠ ಅವರಲ್ಲಿ ಒಂದು ಪ್ರಶ್ನೆ. ದಿನಾಂಕ 21/07/2011ರ ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಭೂ ವಿಜ್ಞಾನ ಸಂಸ್ಥೆ ಪ್ರಕಟಿಸಿರುವ ’ಅಂತರ್ಜಲ’ ಪುಸ್ತಕದ ಪರಿಚಯ ಮಾಡಿಕೊಟ್ಟಿದ್ದೀರಿ. ಆ ಪುಸ್ತಕ ಎಲ್ಲಿ ಸಿಗುತ್ತದೆ. ಮಾಹಿತಿಯಿದ್ದರೆ ದಯವಿಟ್ಟು ತಿಳಿಸಿ. – ಶ್ರೀಕಾಂತ hssrikanthrao@gmail.com

  1. ಇವತ್ತು ಮಧ್ಯಾಹ್ನ 2 .30 ನಂತರ ನಿಮಗೆ ಮೇಲ್ ಮಾಡುತ್ತೇನೆ. ನಾನು ವಿಳಾಸ ಬರೆದಿದ್ದೆ. ಪೇಜ್ ಗೆ ಹಾಕುವಾಗಿ ಎಡಿಟ್ ಆಗ್ಬಿಟ್ಟಿದೆ. ಬಹಳ ಜನಕ್ಕೆ ಹೀಗೆ ತೊಂದರೆಯಾಗಿದೆ. ತೊಂದರೆಗೆ ವಿಷಾದವಿರಲಿ.
   -ಶ್ರೀಕಂಠ

 3. ಗಾಣಧಾಳು ಶ್ರೀಕಂಠ ಅವರಲ್ಲಿ ಒಂದು ಪ್ರಶ್ನೆ. ದಿನಾಂಕ 21/07/2011ರ ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಭೂ ವಿಜ್ಞಾನ ಸಂಸ್ಥೆ ಪ್ರಕಟಿಸಿರುವ ’ಅಂತರ್ಜಲ’ ಪುಸ್ತಕದ ಪರಿಚಯ ಮಾಡಿಕೊಟ್ಟಿದ್ದೀರಿ. ಆ ಪುಸ್ತಕ ಎಲ್ಲಿ ಸಿಗುತ್ತದೆ. ಮಾಹಿತಿಯಿದ್ದರೆ ದಯವಿಟ್ಟು ತಿಳಿಸಿ. – ಶ್ರೀಕಾಂತ

 4. ಗಾಣಧಾಳು ಶ್ರೀಕಂಠರವರೆ ಮತ್ತೆ ಮತ್ತೆ ತೊಂದರೆ ಕೊಡುತ್ತಿರುವುದಕ್ಕೆ ಕ್ಷಮೆಯಿರಲಿ. ’ಅಂತರ್ಜಲ’ ಪುಸ್ತಕದ ವಿವರಗಳು ಸಿಗಲಿಲ್ಲ. ನಿರೀಕ್ಷೆಯಲ್ಲಿ ಶ್ರೀಕಾಂತ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s