ಬೆಂಗಳೂರಿನ್ಲಲಿ ಸಾಕಷ್ಟು ಉದ್ಯಾನಗಳಿವೆ. ಅವುಗಳಲ್ಲಿ ಜೀವವೈವಿಧ್ಯದ ಕೊರತೆಯಿದೆ. ಉದ್ಯಾನ ಕೇವಲ ಆಟ, ವಿಹಾರದ ತಾಣವಲ್ಲ. ಸುತ್ತಲಿನ ಪರಿಸರವನ್ನು ಪರಿಶುದ್ಧವಾಗಿಸುವ ಕೇಂದ್ರ. ಅಂಥ ಪಾರ್ಕ್‌ನಲ್ಲಿ ಮರ,ಗಿಡ, ಪಕ್ಷಿ, ಕೀಟ ಪ್ರಪಂಚ.. ಹೀಗೆ ಜೀವ ಜಗತ್ತೇ ಇರಬೇಕು. ಇಷ್ಟೆಲ್ಲ ಇಲದ್ದಿದರೂ ಒಂದಷ್ಟು ಜೀವವೈವಿಧ್ಯ ತುಂಬಿಕೊಂಡಿರುವ ಉದ್ಯಾನವೊಂದು ಆರ್‌ಎಂವಿ ೨ನೇ ಹಂತದಲ್ಲಿದೆ. ಈ ಉದ್ಯಾನವನ್ನು ಕೆಲವರು ‘ಟ್ರೀ ಪಾರ್ಕ್’ ಎಂದೂ ಕರೆಯುತ್ತಾರೆ. ಮೇ ೨೨ರ ‘ವಿಶ್ವ ಜೀವವೈವಿಧ್ಯ ದಿನ’ದ ನೆನಪಿಗಾಗಿ ಆ ಉದ್ಯಾನದ ಒಳಗೆ ಒಂದು ಸುತ್ತಾಟ.
—————
ವರ್ಷದ ಹಿಂದಿನ ಮಾತು. ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಡಾ.ಎಸ್.ಸುಬ್ರಹ್ಮಣ್ಯ ಒಂದು ಮೇಲ್ ಕಳುಹಿಸಿದ್ದರು. ಅದರಲ್ಲಿ ‘ಹಕ್ಕಿ ಆಕರ್ಷಿಸುವ ಮರ ಹಾಗೂ ಪೊದೆಗಳ ಪಟ್ಟಿ’ಯಿತ್ತು. ಈ ಪಟ್ಟಿಯಲ್ಲಿ ಹಣ್ಣು ಬಿಡುವ ಮರಗಳು, ಮೊದೆಗಳು, ಪಾತರಗಿತ್ತಿ ಆಕರ್ಷಿಸುವ ಗಿಡಗಳು.. ಹೀಗೆ ಸಸ್ಯ-ಪ್ರಾಣಿ ಸಂಕುಲದ ವಾತಾವರಣವಿರುವ ಕುಟುಂಬದ ಸದಸ್ಯರಿದ್ದರು.
‘ಇಂಥ ಮರಗಳು ಬೆಂಗಳೂರಿನ ಪಾರ್ಕ್‌ಗಳಲ್ಲಿರಬೇಕು. ಆಗಷ್ಟೇ ಅವು ಜೀವಂತ ಉದ್ಯಾನವನವಾಗುತ್ತವೆ’ ಎನ್ನುವುದು ಸುಬ್ರಹ್ಮಣ್ಯ ಅವರ ಅಭಿಪ್ರಾಯವಾಗಿತ್ತು. ಅದಕ್ಕಾಗಿಯೇ ತುಂಬಾ ಕಾಳಜಿಯಿಂದ ಅಂಥ ಮರಗಳನ್ನು ಹುಡುಕಿ ಪಟ್ಟಿ ಸಿದ್ಧಪಡಿಸಿದರು. ದುರದೃಷ್ಟವಶಾತ್, ಅಂಥ ಮರಗಳನ್ನು ಬೆಳೆಸಿ ಉದ್ಯಾನ ನಿರ್ಮಿಸುವ ‘ಸಾಹಸ’ಕ್ಕೆ ಯಾರೂ ಮುಂದಾದಂತಿಲ್ಲ.
ಆದರೂ, ಕೆಲವು ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಆಸಕ್ತಿಯಿಂದಾಗಿ ಬೆರಳೆಣಿಕೆಯಷ್ಟು ವಿಭಿನ್ನ ಉದ್ಯಾನಗಳು ನಗರದಲ್ಲಿ ನಿರ್ಮಾಣವಾಗಿವೆ. ಆ ಉದ್ಯಾನಗಳಲ್ಲಿ ಆರ್‌ಎಂವಿ ೨ನೇ ಹಂತದ್ಲಲಿರುವ ೧೮ನೇ ವಾರ್ಡ್ ನ ೨ನೇ ಮುಖ್ಯರಸ್ತೆಯ ‘ಟ್ರೀ ಪಾರ್ಕ್(ಇದು ಜನರಿಟ್ಟ ಹೆಸರು)’ ಕೂಡ ಒಂದು. ಉದ್ಯಾನದಲ್ಲಿ ೧೫೦ ರಿಂದ ೨೦೦ ಮರಗಳಿವೆ. ಒತ್ತೊತ್ತಾಗಿ ಬೆಳೆದಿವೆ. ಈ ಮರಗಳು ಸೂರ್ಯನನ್ನು ಹುಡುಕಿ ಓಡುತ್ತಾ ಓಡುತ್ತಾ ೪೫ರಿಂದ ೫೦ ಅಡಿ ಎತ್ತರಕ್ಕೆ ಬೆಳೆದು ನಿಂತಿವೆ. ಅಲ್ಲೇ ಒಂದೊನ್ನೊಂದು ಸಂದಿಸಿ ಪಾರ್ಕ್ ಅಂಗಳಕ್ಕೆ ನೆರಳು ಚೆಲ್ಲುತ್ತವೆ.
ಇಲಿ ಬಹಶಃ ಹತ್ತಕ್ಕೂ ಹೆಚ್ಚು ವೆರೈಟಿಯ ಮರಗಳಿರಬಹುದು. ಕಾಂಪೌಂಡ್ ಪಕ್ಕದಲ್ಲಿ ಗ್ಲಿರಿಸೀಡಿಯಾ, ಬೋಗನ್‌ವಿಲಾ ಇದೆ. ಅಂಗಳದಲ್ಲಿ ಬಾಗೆ ಮರ ಹೋಲುವ ಮೇವಿನ ಮರ, ಜಕರಾಂಡ(ನೀಲಿ ಹೂ ಬಿಡುವ ಮರ), ಕಾಪರ್ ಪಾಡ್(ಹಳದಿ ಹೂವಿನ ಗಿಡ), ಅಶೋಕ ಗಿಡ.. ಹೀಗೆ ಪಾರ್ಕ್ ಸುತ್ತಿದರೆ ‘ಮರದ ಕುಟುಂಬ’ ಗುರುತಿಸುವವರಿಗೆ ಇನ್ನಷ್ಟು ಮಾಹಿತಿ ದೊರೆಯಬಹುದು.
ಇಷ್ಟು ಮರಗಳ ಜೊತೆ ಜೊತೆಗೆ ಬೇಲಿಯ ಹೂವುಗಳಿವೆ. ಪೊದೆ ಸೃಷ್ಟಿಸಿ ಪಾತರಗಿತ್ತಿ ಸಂಸಾರಕ್ಕೆ ಆಶ್ರಯ ನೀಡುವ ಸಸ್ಯಗಳೂ ಇವೆ. ಸುತ್ತಲಿನ ನಿವಾಸಿಗಳು ಗಮನಿಸುವ ಪ್ರಕಾರ ಹೂವು ಅರಳುವ ಕಾಲದ್ಲಲಿ ಪಾರ್ಕ್‌ನ್ಲಲಿ ಬಣ್ಣ ಬಣ್ಣಗಳ ಹೂವು ಕಾಣುತ್ತವೆ. ಎತ್ತರದ ಮರಗಳಿರುವುದರಿಂದ ಕಾಗೆ, ಕೋಗಿಲೆಯಂತಹ ಹಕ್ಕಿಗಳೂ ಹಾರಾಡುತ್ತವೆ. ಹೂಗಳ ಕಾಲದಲ್ಲಿ ಮಕರಂದ ಹೀರಲು ದುಂಬಿಗಳೂ ಬರುತ್ತವೆ.

ಅಂದಾಜು ಅರ್ಧ ಎಕರೆ ವಿಸ್ತೀರ್ಣವಿರುವ ಈ ಪಾರ್ಕ್ ಅಂಗಳದಲ್ಲಿ ಎಲೂ ಕೃತಕ ವಾತಾವರಣವಿಲ್ಲ. (ವೃತ್ತಾಕಾರದ ಕಾರಂಜಿ ಹೊರತುಪಡಿಸಿ). ನೆಲ ಹಾಸುಗಳಿಗೆ ಕಲ್ಲು ಹೊದಿಸಿಲ್ಲ. ನೀರು ಹೀರುವ ಹ್ಲುಲು ಹಾಸಿಲ್ಲ. ವಾಕಿಂಗ್ ಪಾತ್, ಮರಗಿಡಗಳಿರುವ ಸ್ಥಳ ಎಲ ಕಡೆಯೂ ಮಣ್ಣಿನ ಅಂಕಣವಿದೆ. ಹಾಗಾಗಿ ಈ ಅಂಗಳದ ಮೇಲೆ ಸುರಿದ ಮಳೆ ನೀರು ಒಂದೇ ಒಂದು ಹನಿ ಆಚೆ ಹೋಗದೇ ಸ್ಥಳದಲ್ಲೇ ಇಂಗುತ್ತದೆ. ಎಲ್ಲೆಲಿ ಹುಲ್ಲು ಬೀಜಗಳಿಗೆ ಬೆಳೆಯಲು ಸಾಧ್ಯವೋ ಅಲ್ಲಲಿ ಹುಲ್ಲಿನ ತೆಂಡೆಗಳು ಬೆಳೆದುಕೊಂಡಿವೆ.
ಇಲಿನ ಗಿಡ ಬೆಳವಣಿಗೆಗೆ ಗೊಬ್ಬರ-ಮಣ್ಣು ಎಲ್ಲ ಇಲ್ಲೇ ತಯಾರಾಗುತ್ತದೆ. ಈ ಪಾರ್ಕ್‌ನಲ್ಲಿರುವ ಗಿಡ ಮರಗಳು ಉದುರಿಸುವ ಎಲೆಗಳು ಕಾಂಪೋಸ್ಟ್ ಆಗುತ್ತವೆ. ಮಣ್ಣಿಗೆ ಬೇಕಾದ ಇಂಗಾಲದ ಅಂಶವನ್ನು ಸರಬರಾಜು ಮಾಡುತ್ತವೆ. ಹೆಚ್ಚಾದ ಎಲೆಗಳನ್ನು ಪಾರ್ಕ್‌ನ ಮೂಲೆಯಲ್ಲಿ ರಾಶಿ ಮಾಡಿ ಕಾಂಪೋಸ್ಟ್ ಮಾಡುತ್ತಾರೆ. ಅದೇ ಗೊಬ್ಬರ ಉದ್ಯಾನಕ್ಕೆ ಬಳಕೆಯಾಗುತ್ತದೆ. ‘ಈ ಉದ್ಯಾನದಲ್ಲಿ ಉಳುಮೆ ಇಲ್ಲ. ಎರೆಹುಳು ಹಾಗೂ ಭೂಮಿ ಅಗೆಯುವ ಜಾತಿಯ ಸಣ್ಣಪುಟ್ಟ ಕೀಟಗಳೇ ಇಲಿನ ಉಳುಮೆಗಾರರು. ‘ಅಲಿನ ಮಣ್ಣನ್ನು ಕೆದಕಿದರೆ ಈ ಸೂಕ್ಷ್ಮ ವಿಷಯ ಬಯಲಾಗುತ್ತದೆ’ ಎನ್ನುತ್ತಾರೆ ಹತ್ತು ವರ್ಷದಿಂದ ಈ ಪಾರ್ಕ್ ಸುತ್ತಾಡುವ ವಿಶ್ರಾಂತ ಎಂಜಿನಿಯರ್ ಎ.ಆರ್.ಎಸ್.ಶರ್ಮಾ. ಇಷ್ಟೆಲ್ಲ ಜೀವ ವೈವಿಧ್ಯದ ಸೊಗಸಿರುವ ಈ ಪಾರ್ಕ್ ಸುತ್ತಾಡಿದರೆ ಪುಟ್ಟ ಕಾಡು ತೋಟ ಹೊಕ್ಕ ಅನುಭವವಾಗುತ್ತದೆ.

ಬಡಾವಣೆಯ ನಿವಾಸಿಗಳ ಆಸಕ್ತಿಯ ಮೇಲೆ ಹತ್ತು ವರ್ಷಗಳ ಹಿಂದೆ ಪಾರ್ಕ್ ನಿರ್ಮಾಣವಾಗಿದೆ. ‘ಮೊದಲು ಸುತ್ತಲಿನ ನಿವಾಸಿಗಳೇ ಗಿಡಗಳನ್ನು ನೆಡುತ್ತ್ದಿದೆವು. ಕೆಲವರು ಉದ್ಯಾನದಲ್ಲಿ ಕಳೆ ತೆಗೆಯುತ್ತ್ದಿದರು. ನೀರು ಹನಿಸುತ್ತ್ದಿದರು. ಪಾರ್ಕ್ ಉಸ್ತುವಾರಿ ಪ್ರಮುಖರಲ್ಲೊಬ್ಬರಾದ ಉಮಾ ಮುಖರ್ಜಿಯವರು ಪಾರ್ಕ್ ನಿರ್ವಹಣೆಯಲ್ಲಿ ಸಕ್ರಿಯವಾಗಿದ್ದರು. ಹೀಗೆ ಕ್ರಿಯಾಶೀಲವಾಗಿದ್ದ ಸದಸ್ಯರೆಲ್ಲ ತಟಸ್ಥವಾಗುತ್ತಿದ್ದ ಸಮಯದಲ್ಲಿ ಪಾಲಿಕೆ ಯವರು ನಿರ್ವಹಣೆ ಜವಾಬ್ದಾರಿ ತೆಗೆದುಕೊಂಡರು’ ಎಂದು ವಿವರಿಸಿದರು ನಿವಾಸಿ ಶ್ರೀಮತಿ.
ಪಾರ್ಕ್ ಸ್ವಾಭಾವಿಕವಾಗಿರಬೇಕೆನ್ನುವುದ ಈ ಬಡಾವಣೆಯವರ ಉದೇಶ. ಕಾಲಿಗೆ ಮಣ್ಣಿನ ಸ್ಪರ್ಶವಾಗಬೇಕು. ಅದಕ್ಕಾಗಿಯೇ ಉದ್ಯಾನದಲ್ಲೆಲ್ಲೂ ಕಲ್ಲು ಹಾಸುಗಳಿಲ್ಲ. ‘ಒಮ್ಮೆ ಸ್ಲಾಬ್ ಹಾಕುತ್ತೇವೆಂದು ಪಾಲಿಕೆಯವರು ಮುಂದಾಗಿದ್ದರು. ಪ್ರತಿಭಟನೆ ಮಾಡಿ, ಕಲ್ಲು ಹಾಕದಂತೆ ತಡೆದವು’ ಎನ್ನುತ್ತಾರೆ ಇಲಿನ ವಾಕರ್‌ಗಳು. ಕಲ್ಲಿನ ಹಾಸಿನ ಮೇಲೆ ನಡೆದರೆ ಕಾಲು ನೋಯುತ್ತದೆ. ಮರಳಿನ ಸ್ಪರ್ಶ ಆಕ್ಯುಪಂಚರ್ ಚಿಕಿತ್ಸೆ ನೀಡುತ್ತದೆ. ಮಣ್ಣಿದ್ದರೆ ಮಳೆ ನೀರು ಇಂಗಲು ಸಹಾಯಕವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.
ಪ್ರತಿ ನಿತ್ಯ ಹತ್ತಾರು ಮಂದಿ ಪಾರ್ಕ್ ಬಳಸುತ್ತಾರೆ. ಅದರಲ್ಲಿ ವಯಸ್ಸಾದವರೇ ಹೆಚ್ಚು. ಜೊತೆಗೆ ಮಕ್ಕಳು ಆಟವಾಡಲು ಬರುತ್ತಾರೆ. ಹಾಗಾಗಿ ಉದ್ಯಾನ ಬಳಕೆದಾರರಿಗೆ ಈ ಪಾರ್ಕ್ ಅಭಿವೃದ್ಧಿಯಾಗಬೇಕೆಂಬ ಆಸೆಯಿದೆ. ಹಾಗೆಯೇ ಅಭಿವೃದ್ಧಿ ಹೆಸರಲ್ಲಿ ಪಾರ್ಕ್‌ನ ಸ್ವರೂಪ ವಿರೂಪವಾಗಬಾರದೆಂಬ ಕಾಳಜಿಯೂ ಇದೆ. ಸದ್ಯ ಪಾಲಿಕೆಯವರು ಇಲ್ಲಿನ ಗಾರ್ಡ್‌ನರ್ ಸಂಖ್ಯೆ ವಿಸ್ತರಿಸಬೇಕು. ವಾಕಿಂಗ್ ಪಾತ್‌ನಲ್ಲಿ ಮೃದುವಾದ ಮರಳು ಹಾಕಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಹಸಿರು ಉಸಿರಿನ ಜೊತೆಗೆ ಪಕ್ಕದ ಚರಂಡಿಯಿಂದ ಹೊರ ಹೊಮ್ಮುವ ‘ದುರ್ನಾತವನ್ನು’ ಕಡಿಮೆಗೊಳಿಸಬೇಕು. ಜೊತೆಗೆ ಪಾರ್ಕ್ ಸಮಯವನ್ನು ವಿಸ್ತರಿಸಿದರೆ ಸಾಕು ಎನ್ನುವುದು ಇಲಿನ ನಿವಾಸಿಗಳ ಬೇಡಿಕೆಯಾಗಿದೆ.