ಎಲ್ಲಾ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ

ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಏನ್ಮಾಡ್ತಿದ್ದಾರೆ ?

ವಿಶ್ವಕನ್ನಡ ಸಮ್ಮೇಳನ್ನಕ್ಕಾಗಿ ಸರ್ಕಾರಕ್ಕೆ ಸಾಕ್ಷ್ಯಚಿತ್ರ  ನಿರ್ಮಿಸಿಕೊಡುತ್ತಿದ್ದಾರೆ.

ನಿಜ, ನಾಗ್ತಿಹಳ್ಳಿ ಈಗ ವಿಶ್ವಕನ್ನಡ ಸಮ್ಮೇಳನಕ್ಕಾಗಿ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿಕೊಡುತ್ತಿದ್ದಾರೆ. ವಾರದ ಗಡುವಿನೊಳಗೆ ಈ ಸಾಕ್ಷ್ಯಚಿತ್ರ ಮುಗಿಯಬೇಕು. ಅದಕ್ಕಾಗಿ ನಾಡಿನ ಸಂಪನ್ಮೂಲ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ನಿನ್ನೆ ಇದ್ದಕ್ಕಿದ್ದಂತೆ ಬೆಂಗಳೂರಿನ ಹೆಬ್ಬಾಳದ ಮಂಗಳ ರೈತ ಭವನದಲ್ಲಿ ಕಾಣಿಸಿಕೊಂಡರು. ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ, ಶ್ರೀಪಡ್ರೆ, ಶಿವಾನಂದ ಕಳವೆ ಭಾಗವಹಿಸಿದ ವಿಚಾರ ತಿಳಿದೇ ಅಲ್ಲಿಗೆ ಬಂದಿದ್ದರು ನಾಗತಿಹಳ್ಳಿ.

ಹಳ್ಳಿಯ ಸಮಸ್ಯೆಗಳು, ಕೃಷಿ ವಲಯದ ಸಮಕಾಲೀನ ವಿಚಾರಗಳ ಬಗ್ಗೆ ಕೃಷಿ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು.. ಹೀಗೆ ಗ್ರಾಮೀಣ ಜಗತ್ತಿನ ಹಲವು ವಿಚಾರಗಳನಗೊಂಡ ಪ್ರಶ್ನೆ ಕೇಳುತ್ತಾ, ಕಾರ್ಯಕ್ರಮ ನಡುವೆಯೇ ಚಕಾಚಕ್  ಅಂತ ಚುಟುಕಾಗಿ ಸಂದರ್ಶನ ಮುಗಿಸಿಬಿಟ್ಟರು.

ನಾಗ್ತಿಹಳ್ಳಿಯವರಿಗಲ್ಲದೇ, ಬೇರೆ ಯಾರಿಗಾದ್ರೂ ಈ ಜವಾಬ್ದಾರಿ ಕೊಟ್ಟಿದ್ದರೆ,  ಈ ಮೂವರ ಬದಲಿಗೆ ಹಳ್ಳಿಯನ್ನೇ ಸುತ್ತಾಡದ ಸಚಿವರು, ರೈತರ ಮನ ಮುಟ್ಟದ ವಿಜ್ಞಾನಿಗಳು, ಹಳ್ಳಿಯ ಸಮಸ್ಯೆಗಳನ್ನು ಹತ್ತಿರದಿಂದ ನೋಡದ ‘ತಜ್ಞರ’ ಮುಖಗಳು, ಮಾತುಗಳು ವಿಶ್ವಕನ್ನಡ ಸಮ್ಮೇಳನದಲ್ಲಿ ರಾರಾಜಿಸುತ್ತಿದ್ದರು.

ಈ ವಿಷಯದಲ್ಲಿ ಸರ್ಕಾರಕ್ಕೊಂದು ಥ್ಯಾಂಕ್ಸ್.