‘ಬಹು’ಮುಖಿ ಹೋರಾಟ

ಅದು ಬೇಡ್ತಿ ನದಿಯ್ಲಲ, ಕರ್ನಾಟಕದ ಸೈಲೆಂಟ್ ವ್ಯಾಲಿ !
-೧೯೮೨ರ‍್ಲಲಿ ಉತ್ತರ ಕನ್ನಡದ ಬೇಡ್ತಿ ಯೋಜನೆ ವಿರುದ್ಧದ ಹೋರಾಟದ್ಲಲಿ ‘ಚಿಪ್ಕೊ’ ಚಳವಳಿ ನೇತಾರ ಸುಂದರ್‌ಲಾಲ್ ಬಹುಗುಣ ಅವರು ಅಲಿನ ಪರಿಸರ ಕಂಡು ಉದ್ಘರಿಸ್ದಿದು ಹೀಗೆ !
ಪಶ್ಚಿಮ ಘಟ್ಟದ ಬಗ್ಗೆ ಬಹುಗುಣ ಅವರಿಗೆ ಎಲ್ಲ್ಲೆಲದ ಪ್ರೀತಿ. ಅದಕ್ಕಾಗಿಯೇ ‘ಘಟ್ಟ’ವನ್ನು ‘ಕರ್ನಾಟಕದ ಮಕುಟ’ ಎಂದ್ದಿದಾರೆ. ಹಿಮಾಲಯದ್ಲಲಿ ಹುಟ್ಟಿದರೂ, ಅವರಿಗೆ ಕರ್ನಾಟಕದ ನಂಟಿದೆ. ಆ ನಂಟಿಗೆ ದಶಕಗಳ ಇತಿಹಾಸವೂ ಇದೆ.

ಸುಂದರಲಾಲ್ ಬಹುಗುಣ

ಹಿಮಾಲಯ ತಪ್ಪಲಿನ ಹಳ್ಳಿಯೊಂದರ‍ಲ್ಲಿ ಜನವರಿ ೯, ೧೯೨೭ರ‍ಲ್ಲಿ ಜನಿಸಿದ ಸುಂದರ್‌ಲಾಲ್ ಬಹುಗುಣ ಅವರು ಗಾಂಧಿ ತತ್ವದೊಂದಿಗೇ ಜೀವನ ರೂಪಿಸಿಕೊಂಡರು. ವಿದ್ಯಾಭ್ಯಾಸದ ನಂತರ ನಡುವೆ ರಾಜಕೀಯ ಪ್ರವೇಶ. ೧೯೫೬ರ‍್ಲಲಿ ರಾಜಕೀಯ ಬಿಟ್ಟು ಪತ್ನಿ ವಿಮಲರೊಂದಿಗೆ ಆಶ್ರಮ ಸ್ಥಾಪಿಸಿದರು. ಆಶ್ರಮದ್ಲಲಿ ಬಡವರೊಟ್ಟಿಗೆ ಬದುಕುತ್ತಾ ‘ಬಡತನ’ಕ್ಕೆ ಕಾರಣ ಹುಡುಕುತ್ತಾ ಹೊರಟರು. ಅರಣ್ಯ ನಾಶ, ಮಣ್ಣಿನ ಸವಕಳಿ, ನೀರಿನ ಕೊರತೆ ಇವ್ಲೆಲ ಬಡತನಕ್ಕೆ ಕಾರಣ ಎಂಬುದನ್ನು ಅರಿತ ಬಹುಗುಣ ‘ಪರಿಸರ ಸಂರಕ್ಷಣೆ’ ಹೋರಾಟ ಆರಂಭಿಸಿದರು.

‘ಚಿಪ್ಕೊ’ ಚಳವಳಿ ಹುಟ್ದಿದು :
೧೯೩೦ರಲ್ಲಿ ಅರಣ್ಯವನ್ನು ವಾಣಿಜ್ಯಕ್ಕೆ(ಫಾರೆಸ್ಟ್ ಕಮರ್ಷಿಯಲೈಸೇಷನ್) ಬಳಕೆ ಮಾಡಿಕೊಳ್ಳಲು ಬ್ರಿಟಿಷ್ ಆಡಳಿತ ಆದೇಶಿಸಿತು. ಅದರ ವಿರುದ್ಧ ತಿರುಗಿ ಬಿದ್ಧವರನ್ನು ನಿರ್ದಾರ್ಕ್ಷಿಣ್ಯವಾಗಿ ಹತ್ಯೆ ಮಾಡಲಾಯಿತು. ಈ ಘಟನೆಯ್ಲಲಿ ೧೭ ಮಂದಿ ಸಾವನ್ನಪ್ಪಿದರು. ೮೦ ಜನರನ್ನು ಬಂಧಿಸಲಾಯಿತು. ಈ ಹೋರಾಟದ ಸ್ಪೂರ್ತಿಯಿಂದಲೇ ಸುಂದರ್‌ಲಾಲ್ ಬಹುಗುಣ ೧೯೭೦ರಲ್ಲಿ ‘ಚಿಪ್ಕೊ’ ಚಳವಳಿ ಆರಂಭಿಸಿದರು.
‘ಎಕಾಲಜಿ ಈಸ್ ಪರ್ಮನೆಂಟ್ ಎಕಾನಮಿ’ ಎಂಬ ಘೋಷವಾಕ್ಯದೊಂದಿಗೆ ಈ ಚಳವಳಿ ದೇಶ, ವಿದೇಶಗಳಿಗೂ ಪಸರಿಸಿತು. ಸ್ವೀಡನ್, ಜರ್ಮನಿ, ನೆದರ್‌ಲೆಂಡ್, ಸ್ವಿಟ್ಜರ್‌ಲೆಂಡ್, ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕಾದವರು ‘ಚಿಪ್ಕೊ’ ಚಳವಳಿ ನಡೆದ ಪ್ರದೇಶಗಳಿಗೆ, ಬಹುಗುಣ ಅವರ ಆಶ್ರಮಕ್ಕೆ ಭೇಟಿ ನೀಡಿದರು. ಪರಿಸರ ಉಳಿವಿಗಾಗಿ ‘ಪ್ರಾಣ ತೆತ್ತ’ವರ ಬಗ್ಗೆ ಕಂಬನಿ ಮಿಡಿದ ಅನೇಕ ವಿದೇಶಿಯರು, ಈ ಹೋರಾಟವನ್ನು ತಮ್ಮ ದೇಶಗಳಿಗೂ ವಿಸ್ತರಿಸಿದರು. ಈ ಚಳವಳಿಯ ಬಿಸಿ ವಿಶ್ವ ಸಂಸ್ಥೆಯವರೆಗೂ ಮುಟ್ಟಿತು.

ಗಾಂಧಿ ತತ್ವದ್ಲಲೇ ಹೋರಾಟ:
‘ಗಾಂಧಿ ತತ್ವ’ದ ಪ್ರಕಾರ ಶಾಂತಿಯುತವಾಗಿ ಹೋರಾಟ ನಡೆಯಬೇಕು. ಅದಕ್ಕಾಗಿ ಬಹುಗುಣ ಅವರು ‘ಪಾದಯಾತ್ರೆ’ಯನ್ನೇ ಹೋರಾಟದ ಅಸ್ತ್ರವಾಗಿಸಿಕೊಳ್ಳುತ್ತ್ದಿದರು. ಪಾದಯಾತ್ರೆ ಯ್ಲಲಿ ಆಯಾ ಪ್ರದೇಶದ ಜನರನ್ನು ನೇರ ಸಂಪರ್ಕಿಸಬಹುದು. ಭಾವನೆಗಳ ಮೂಲಕ ಅವರ ಮನಸ್ಸು ತಟ್ಟಿ, ಹೃದಯ ಸ್ಪರ್ಶಿಸಬಹುದು. ಜನರ ನಾಡಿ ಮಿಡಿತ ಅರಿತು, ಪರಿಸರ ಶಿಕ್ಷಣ ನೀಡಿ, ಮುಂದಿನ ಹೋರಾಟಕ್ಕೇ ಸ್ಥಳೀಯರನ್ನೇ ಸ್ವಯಂ ಸೇವಕರನ್ನಾಗಿಬಹುದು’ ಎನ್ನುವುದು ಅವರ ಅಭಿಪ್ರಾಯವಾಗಿತ್ತು.
ಅರಣ್ಯದ್ಲಲಿ ಮರ ಕಡಿಯುವುದಕ್ಕೆ ನಿರ್ಬಂಧ ಹೇರುವುದಕ್ಕೆ ಒತ್ತಾಯಿಸಿ ೧೯೮೧ರಿಂದ ೮೩ರವರಗೆ ಹಿಮಾಲಯ ವ್ಯಾಪ್ತಿಯ ಏಳು ರಾಜ್ಯಗಳ್ಲಲಿ ಐದು ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡಿದರು. ಹಳ್ಳಿ-ಹಳ್ಳಿ ಸುತ್ತುತ್ತಾ ಜನರ ಸಹಕಾರ ಅರಸುತ್ತಾ, ಚಳವಳಿ ಗಟ್ಟಿಗೊಳಿಸಿದ ಅವರು, ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಮನವರಿಕೆ ಮಾಡಿಕೊಟ್ಟರು. ೧೯೮೦ರ‍್ಲಲಿ ‘ಮರ ಕತ್ತರಿಸುವುದಕ್ಕೆ’ ೧೫ ವರ್ಷಗಳ ಕಾಲ ನಿಷೇಧ ಹೇರಲಾಯಿತು. ಹೋರಾಟಕ್ಕೆ ಜಯ ಸಿಕ್ಕಿತು.

ಈ ಪಾದಯಾತ್ರೆ, ಚಳವಳಿ, ಹೋರಾಟಗಳೇ ೧೯೮೨ರ‍ಲ್ಲಿ ಕರ್ನಾಟಕದ್ಲಲಿ ‘ಅಪ್ಪಿಕೊ’ ಚಳವಳಿ ಆರಂಭಕ್ಕೆ ಸ್ಪೂರ್ತಿಯಾಯಿತು. ಶಿರಸಿಯ ಪಾಂಡುರಂಗ ಹೆಗಡೆ ಮತ್ತಿತರ ಪರಿಸರಾಸಕ್ತರ ನೇತೃತ್ವದ್ಲಲಿ ಉತ್ತರ ಕನ್ನಡದ ಪಶ್ಚಿಮ ಘಟ್ಟದ್ಲಲಿ ಆರಂಭವಾದ ಈ ಚಳವಳಿಯ್ಲಲಿ ಸುಂದರ್‌ಲಾಲ್ ಬಹುಗುಣ ಖುದ್ಧಾಗಿ ಪಾಲ್ಗೊಂಡ್ದಿದರು. ಅಂದಿನಿಂದ ಆರಂಭವಾದ ಕರ್ನಾಟಕದ ನಂಟು ಇಂದಿಗೂ ನಿರಂತರವಾಗಿದೆ.

ರಾಜ್ಯದ್ಲಲಿ ಬಹುಗುಣರ ಹೆಜ್ಜೆ:
ರಾಜ್ಯದ್ಲಲಿ ಪರಿಸರ ಸಮಸ್ಯೆಗಳ ವಿರುದ್ಧ ಹೋರಾಟ ನಡೆದಾಗಲ್ಲೆಲಾ ಬಹುಗುಣ ಪ್ರತ್ಯಕ್ಷರಾಗ್ದಿದಾರೆ. ೧೯೮೨ರ‍್ಲಲಿ ನಡೆದ ಅಪ್ಪಿಕೊ ಚಳವಳಿ, ೧೯೮೩ರ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೇತೃತ್ವದ ರೈತ ಸಂಘ ನಡೆಸಿದ ‘ನೀಲಿಗಿರಿ ನಾಟಿ’ ವಿರುದ್ಧದ ಹೋರಾಟ, ದಕ್ಷಿಣ ಕನ್ನಡದ್ಲಲಿ ಉದ್ಭವಿಸ್ದಿದ ಮಂಗನ ಕಾಯಿಲೆ ವಿರುದ್ಧ ಜಾಗೃತಿ, ೧೯೯೨ರ‍್ಲಲಿ ಕೊಡಗಿನ ಶೋಲಾ ಅರಣ್ಯದ್ಲಲಿ ‘ಟೀ ಪ್ಲಾಂಟೇಷನ್ ನಾಟಿ’ ವಿರುದ್ಧ ಆಂದೋಲನ, ೨೦೦೩ರ‍್ಲಲಿ ಕಾರವಾರದ್ಲಲಿ ನಡೆದ ಕಾಳಿ ಪಾದಯಾತ್ರೆಗೆ ಚಾಲನೆ, ೨೦೦೫ರ‍್ಲಲಿ ಶರಾವತಿ ಅವಲೋಕನ ಪಾದಯಾತ್ರೆಯ್ಲಲಿ ಪಾಲ್ಗೊಂಡ್ದಿದರು.
ಕಳೆದ ವರ್ಷ ಹಾಸನ ಜ್ಲಿಲೆಯ್ಲಲಿ ಗುಂಡ್ಯಾ ಜಲವಿದ್ಯುತ್ ಯೋಜನೆ ವಿರೋಧದ ಹೋರಾಟಕ್ಕೂ ಕೈ ಜೋಡಿದ ಬಹುಗುಣ ಅವರು ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗ್ದಿದ ಕಾಲದ್ಲಲಿ ‘ಅರಣ್ಯ ನಾಶ, ನೀಲಿಗಿರಿ ನಾಟಿ’ ವಿರುದ್ಧ ಧ್ವನಿ ಎತ್ತಿ, ರಾಜ್ಯದ ಅರಣ್ಯ ನೀತಿ ಪರಿಷ್ಕರಣೆಗೆ ಕಾರಣರಾದವರು.

ಇಂಥ್ದದೊಂದು ನಂಟಸ್ಥಿಕೆಯೊಂದಿಗೆ ಕರ್ನಾಟಕದ ಪರಿಸರ ಹೋರಾಟಗಾರರ ಪಾಲಿಗೆ ಪ್ರೀತಿಯ ಅಜ್ಜನಾಗಿರುವ ೮೪ರ ಸುಂದರ್‌ಲಾಲ್ ಬಹುಗುಣ ಅವರು ಇತ್ತೀಚೆಗೆ ಮೂಡುಬಿದ್ರೆಯ ಆಳ್ವಾಸ್ ಸಭಾಂಗಣದ್ಲಲಿ ನಡೆದ ‘ಪಶ್ಚಿಮಘಟ್ಟ ಸಂರಕ್ಷಣಾ ಅಭಿಯಾನದ ಸಮಾವೇಶ’ಕ್ಕಾಗಿ ಆಗಮಿಸ್ದಿದರು. ಕಾರ್ಯಕ್ರಮಕ್ಕೂ ಮುನ್ನ ಸಮಕಾಲೀನ ಪರಿಸರ ಸಮಸ್ಯೆಗಳ ಕುರಿತು ಅವರೊಂದಿಗೆ ನಡೆಸಿದ ಸಂವಾದ ಇಲಿದೆ.
*ನೀವು ಅಂದು ಭಾವನಾತ್ಮಕವಾಗಿ ‘ವನಮಹೋತ್ಸವ’ಕ್ಕೆ ಜನರನ್ನು ಪ್ರೇರೇಪಿಸುತ್ತ್ದಿದಿರಿ. ಇಂದು ಹಣಕ್ಕಾಗಿ ಗಿಡ ಬೆಳೆಸುವ ಪರಿಪಾಠವಿದೆ. ಆ ಗಿಡಗಳು ಹತ್ತು-ಹದಿನೈದು ವರ್ಷಗಳ್ಲಲಿ ನಾಶವಾಗುತ್ತಿವೆ. ಇಂಥ ‘ಮರ – ಮುರಿಯುವ ಮನಸ್ಸು’ಗಳನ್ನು ಪರಿವರ್ತಿಸುವ ಬಗೆ ಹೇಗೆ ?
ಮುನ್ನೂರು ದಿನ. ನಾಲ್ಕೂವರೆ ಸಾವಿರ ಕಿಲೋಮೀಟರ್. ಏಳು ರಾಜ್ಯಗಳ್ಲಲಿ ಪರಿಸರ ಸಂರಕ್ಷಣಾ ಪಾದಯಾತ್ರೆ ಮಾಡಿ ಜನರನ್ನು ಸಂಘಟಿಸ್ದಿದೇನೆ. ಅಂಥ ಚಳವಳಿ ಮತ್ತೆ ಎಲೆಡೆ ಆರಂಭವಾಗಬೇಕು. ಅದು ಜನರ‍್ಲಲಿ ಪರಿಸರದ ಅರಿವು ಮೂಡಿಸುವ ಜನಾಂದೋಲನವಾಗಬೇಕು. ಅದು ನಿರಂತರವಾಗಬೇಕು. ಈ ಹೋರಾಟಕ್ಕೆ ಯುವಕರೇ ನಾಯಕತ್ವ ವಹಿಸಿಕೊಳ್ಳಬೇಕು.
*ಪಶ್ಚಿಮ ಘಟ್ಟಗಳಿಗೆ ‘ಘಾಸಿ’ಯಾದರೆ ಕೃಷಿ ಮೇಲೆ ನೇರ ಪರಿಣಾಮ ಬೀರುತ್ತದೆ. ಇಷ್ಟಾದರೂ ಪರಿಸರ ಹೋರಾಟಗಳಿಗೆ ಕೃಷಿಕರು ಜೊತೆಯಾಗುತ್ತ್ಲಿಲ. ನಿಮ್ಮ ‘ಚಿಪ್ಕೊ’ ಚಳವಳಿಗೆ ರೈತರ ಬೆಂಬಲವಿತ್ತೇ? ಹೇಗೆ ರೈತರನ್ನು ಸಂಘಟಿಸುತಿದ್ದಿರಿ?
ಚಿಪ್ಕೋ ಚಳವಳಿಯ್ಲಲ್ದಿದವರ‍್ಲಲಿ ಬಹುತೇಕರು ರೈತರು. ರಾಜ್ಯದ ‘ಅಪ್ಪಿಕೋ’ ಚಳವಳಿಯ್ಲಲೂ ರೈತರಿದ್ದರು. ಇವರೂ ರೈತರಲ್ಲವೇ(ಪಾಂಡುರಂಗ ಹೆಗಡೆಯವರನ್ನು ತೋರಿಸುತ್ತಾ)?  ಎಲರೂ ಜೊತೆಯಾದರೆ ಹೋರಾಟ ಬಲಗೊಳ್ಳುತ್ತದೆ. ಹಾಗೆ ಬಲಗೊಳ್ಳಬೇಕಾದರೆ ಕೃಷಿಕರಲ್ಲೂ ಪರಿಸರ ಪ್ರಜ್ಞೆ ಮೂಡಬೇಕು. ಆ ಕೆಲಸವನ್ನು ಪರಿಸರ ಹೋರಾಟಗಾರರೇ ಮಾಡಬೇಕು. ಪರಿಸರ – ಕೃಷಿ, ತಾಯಿ-ಮಕ್ಕಳ್ದಿದಂತೆ.
*ಇತ್ತೀಚೆಗೆ ಹಳ್ಳಿಗಳ್ಲಲಿ ಪರಿಸರ ಕಾಳಜಿ ಕುಂಠಿತವಾಗಿದೆ. ಗಣಿಗಾರಿಕೆ, ರಿಯಲ್ ಎಸ್ಟೇಟ್, ಭೂಮಾಫಿಯಾಗಳಿಂದಾಗಿ ಹಳ್ಳಿ ಬರಿದಾಗುತ್ತಿದೆ. ಹಳ್ಳಿಗಳ್ಲಲಿ ಪರಿಸರ ಜಾಗೃತಿ ಮೂಡಿಸುವ ಬಗೆ ಹೇಗೆ ?
ಹಳ್ಳಿಗಳ್ಲಲಿರುವ ಹಿರಿಯರಿಂದಲೇ ಜನರಿಗೆ ಪರಿಸರ ಪಾಠ ಹೇಳಿಸಿ. ಇಲಿ ಸೇರಿರುವ ನಿಮ್ಮಂತಹ ಪರಿಸರ ಹೋರಾಟಗಾರರು ಹಳ್ಳಿಗಳ್ಲಲಿ ವಾಸಿಸಲು ನಿರ್ಧರಿಸಿ. ಸಮುದಾಯ ಸಂಘಟನೆ ಮಾಡಿ. ಆಯಾ ಊರಿನ ಪರಿಸರ ಸಂರಕ್ಷಣೆಗೆ ಅಲಿಯವರೇ ಕಾವಲುಗಾರರಾಗಲಿ.
ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶವಾಗುತ್ತಿದೆ ? ಹಾಗಾದರೆ ‘ಅಭಿವೃದ್ಧಿ’ಯ ವ್ಯಾಖ್ಯಾನವೇನು ?
ಯೋಜನೆ ಮತ್ತು ಅಭಿವೃದ್ಧಿ ವ್ಯವಸ್ಥೆಯ್ಲಲಿ ವಿಕೇಂದ್ರೀಕರಣವಾಗಬೇಕು. ಅದು ಹಳ್ಳಿಗಳಿಗೆ, ಬ್ಲಾಕ್ ಮಟ್ಟಕ್ಕೆ ವರ್ಗಾವಣೆಯಾಗಬೇಕು. ಪರಿಸರಕ್ಕೆ ಹಾನಿಯಾಗದಂತಹ ‘ಪರಿಸರಪೂರಕ, ಸುಸ್ಥಿರ ಅಭಿವೃದ್ಧಿ’ ಜಾರಿಗೆ ಬರಬೇಕು. ಶಾಂತಿ, ಸಂತೋಷ ಹಾಗೂ ಸಂತುಷ್ಟಿ ನೆಲಸುವಂತೆ ಮಾಡುವುದೇ  ‘ಸುಸ್ಥಿರ ಅಭಿವೃದ್ಧಿ’.
ಪರಿಸರ ಹೋರಾಟಕ್ಕೆ ಯುವಕರಿಗೆ  ನಿಮ್ಮ ಕಿವಿಮಾತು?
ಎಲದಕ್ಕೂ ಸರ್ಕಾರವನ್ನು ಆಶ್ರಯಿಸಬೇಡಿ. ಅದೊಂದು ಹೃದಯವ್ಲಿಲದ ಯಂತ್ರವ್ದಿದಂತೆ. ಸರ್ಕಾರ ಎಂದೂ ಜನರ ಸಮಸ್ಯೆಗಳನ್ನು ಪರಿಹರಿಸುವುದ್ಲಿಲ. ಹಾಗಾಗಿ ಸರ್ಕಾರವನ್ನು ಮರೆತುಬಿಡಿ. ಅಭಿವೃದ್ಧಿ ವಿಷಯದ್ಲಲಿ ಪಾಶ್ಚಿಮಾತ್ಯರ ವಿಧಾನಗಳು ನಮಗೆ ಮಾದರಿಯ್ಲಲ. ಅವರು ಅಭಿವೃದ್ಧಿ ಹೆಸರ‍ಲ್ಲಿ ಬಡವರನ್ನು ಸುಲಿಗೆ ಮಾಡುತ್ತಾರೆ. ನಾವು ಅದನ್ನು ಅನುಸರಿಸಿದರೆ ನಮ್ಮ ದೇಶದ ಬಡವರನ್ನು ಸುಲಿಗೆ ಮಾಡಬೇಕಾಗುತ್ತದೆ. ನಮ್ಮದು ವನಸಂಸ್ಕೃತಿ. ಟಿಂಬರ್, ಮೈನಿಂಗ್ ಸಂಸ್ಕೃತಿಯ್ಲಲ. ಅದ್ಲೆಲ ನಮ್ಮನ್ನು ಆಳಿದ ಬ್ರಿಟಿಷರ ಕೊಡುಗೆ.