ಸರಳ, ಸಜ್ಜನಿಕೆಯ ‘ಪ್ರಕಾಶ’


ಎಂ.ಪಿ.ಪ್ರಕಾಶ

ರಾಜಕೀಯ ಮುತ್ಸದಿ ಎಂ.ಪಿ.ಪ್ರಕಾಶ್ ಇನ್ನಿಲ್ಲ

ಸರಳ ಸಜ್ಜನಿಕೆಗೆ ಹೆಸರಾದ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್  ಬುಧವಾರ(ಫೆ.9)ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರಿಗೆ ಪತ್ನಿ ಮತ್ತು ಮೂ

ವರು ಪುತ್ರರು ಇದ್ದರು. ಮೃತರ ಅಂತ್ಯಕ್ಷಿಯೆಯನ್ನು ಅವರ ಸ್ಥಳವಾದ ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ ನಡೆಸುವುದಾಗಿ ಕುಟುಂಬ ಮೂಲಗಳು  ತಿಳಿಸಿವೆ.

———————————————————

ಡಿ.ಕೆ.ಚೌಟರ ಜೊತೆ ಎಂ.ಪಿ.ಪ್ರಕಾಶರು

ಚೌಟರ ತೋಟದಲ್ಲಿ ಪ್ರಕಾಶರ  ಜೊತೆಯಲ್ಲಿ…

ಅದು ೨೦೦೬ ರಜನವರಿ ತಿಂಗಳು. ಕಾಸರಗೋಡಿನ ಮಿಯಪದುವಿನಲ್ಲಿ ಸಿ.ಕೆ.ಚೌಟರು ತಮ್ಮ ತೋಟದಲ್ಲಿ ತೆಂಗು ಸಮಾವೇಶ ಆಯೋಜಿಸಿದ್ದರು. ಆ ಕಾರ್ಯಕ್ರಮದ ಮುಖ್ಯ ಅತಿಥಿ ಅಂದಿನ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್.

ಕೃಷಿ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿಯವರು ಬರ್ತಾರೆಯೇ, ಎಲ್ಲೋ ಚೌಟರಿಗೆ ಭ್ರಮೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದಾಗಲೇ, ಕೆಳಗಡೆ ಕಾರಿನಿಂದ ಇಳಿದು ದಿಬ್ಬ ಹತ್ತಿ ಸಭಾಂಗಣದೆಡೆಗೆ ನಡೆದುಬರುತ್ತಿದ್ದರು ಎಂ.ಪಿ.ಪ್ರಕಾಶ್.

ಹಿಂಬಾಲಕರ ದಂಡಿಲ್ಲದೇ, ಅಂಗರಕ್ಷ

ಕರಿಲ್ಲದೇ ಒಬ್ಬ ಸಾಮಾನ್ಯ ಪ್ರಜೆಯಂತೆ ಆಗಮಿಸುತ್ತಿದ್ದ ಪ್ರಕಾಶ್ ಅವರನ್ನು ಕಂಡು ನಾನು ಪುಳಕಿತನಾದೆ. ಕಾರ್ಯಕ್ರಮಕ್ಕೆ ಬಂದವರೇ ಅಕ್ಕಪಕ್ಕದಲ್ಲಿದ್ದ ನಾಗತಿಹಳ್ಳಿ ಚಂದ್ರಶೇಖರ್, ಸಿಜಿಕೆ, ಸಿ.ಕೆ.ಚೌಟರು, ಡಿ.ಕೆ.ಚೌಟರ.. ಇತ್ಯಾದಿ ಇತ್ಯಾದಿ ಆಪ್ತೇಷ್ಟರನ್ನು ಮಾತನಾಡಿಸಿ, ಗುಂಪು ಚರ್ಚೆಗೆ ಕುಳಿತರು.

ತೆಂಗು ಬೆಳೆಗಾರರ ಎಲ್ಲ ಸಮಸ್ಯೆಗಳನ್ನು ಒಬ್ಬ ಶಿಬಿರಾರ್ಥಿಯಂತೆ ಪೆನ್ನು ಪೇಪರ್ ಹಿಡಿದು ಮಾಹಿತಿ ದಾಖಲಿಸಿಕೊಂಡರು. ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು. ಕಾರ್ಯಕ್ರಮ ಮುಗಿಯುವವರೆಗೂ  (ರಾ

ಜಲಪತ್ರಕರ್ತ 'ಶ್ರೀ' ಪಡ್ರೆಯವರೊಂದಿಗೆ

ತ್ರಿ ೮ ಆಗಿತ್ತು) ಜನರ ನಡುವೆಯೇ ಇದ್ದರು.

ಅದೇ ಮೊದಲು ನಾನು ಪ್ರಕಾಶ್ ಅವರನ್ನು ಹತ್ತಿರದಿಂದ ನೋಡಿದ್ದು ಮಾತನಾಡಿದ್ದು. ಬಹಳ ವಿಚಿತ್ರ ಎಂದರೆ, ಅವರು ಎಲ್ಲರೊಡನೆ ಎಲ್ಲ ವಿಷಯಗಳನ್ನೂ ಮಾತನಾಡುತ್ತಿದ್ದರು. ನಾವು ಹಿಂಜರಿಯುತ್ತಿದ್ದರೂ ‘ನಮ್ಮೂರು ಹಾಗೆ, ನಿಮ್ಮೂರು ಹೇಗೆ’ ಎಂದೆಲ್ಲ ವಿಚಾರಿಸುತ್ತಿದ್ದರು.

ಸುಮಾರು ಮೂರ‍್ನಾಲ್ಕು ಗಂಟೆಗಳ ಕಾಲ ಚೌಟರ ತೋಟವನ್ನು ಅವರೊಡನೆ ಸುತ್ತಾಡಿದೆ. ದಾರಿಯುದ್ದಕ್ಕೂ ರಾಜ್ಯದ ಕೃಷಿ ವಿಷಯಗಳನ್ನು ಮೆಲುಕು ಹಾಕುತ್ತಾ ಹೊರಟರು. ನಡು ನಡುವೆ ಬಯಲು ಸೀಮೆ – ಮಲೆನಾಡಿಗೆ ಹೋಲಿಸಿ ಮಾತನಾಡಿದರು. ಬಾಳೆ ಕೃಷಿ, ಅಡಕೆ ಕೃಷಿ, ಮಣ್ಣಿನ ಗುಣ, ನೀರಿನ ಸಮಸ್ಯೆ.. ಕೂಲಿ ಆಳುಗಳ ವಿಚಾರ.. ಹೀಗೆ ಚೌಟರೊಂದಿಗೆ ಸಾಕಷ್ಟು ಚರ್ಚೆ ನಡೆಸಿದರು.

ಕಾಫಿಯೊಂದಿಗೆ ಸಾವಯವ ಚಿತ್ರಾ ಪುಸ್ತಕ ಓದುತ್ತಾ.. ಚಿತ್ರ: ರವಿಶಂಕರ ದೊಡ್ಡಮಾಣಿ

ಹಳ್ಳಿಯ ಬದುಕು ಹಾಳಾಗುತ್ತಿರುವ ಬಗ್ಗೆ ವ್ಯಥೆಪಟ್ಟರು. ಎಲ್ಲದಕ್ಕಿಂತ ಹೆಚ್ಚಾಗಿ ನಾನೊಬ್ಬ ಜನಪ್ರತಿನಿಧಿಯಾಗಿ ತಮ್ಮೂರಿನ ಏತನೀರಾವರಿ ಯೋಜನೆಯೊಂದನ್ನು ಜಾರಿಗೆ ತರಲಾಗಿರಲಿಲ್ಲವಲ್ಲಾ

ಎಂಬ ನೋವನ್ನೂ ಇದೇ ಸಂದರ್ಭ

ದಲ್ಲಿ ಹಂಚಿಕೊಂಡರು.

ಅವರ ಜೊತೆ ಕಳೆದ ಆ ಸಮಯ ಜೀವನದಲ್ಲಿ ಮರೆಯಲಾಗದ ಕ್ಷಣ. ಆ ನೆನಪಿಗಾಗಿ ನನ್ನ ಮೊದಲ ಕೃತಿ ‘ಸಾವಯವ ಚಿತ್ತಾರ’ ವನ್ನು ಅವರ ಕೈಗಿತ್ತೆ. ಒಂದು ಕ್ಷಣ ಪುಸ್ತಕ ತಿರುವಿ ಹಾಕಿ, ‘ನಾಡಿನಲ್ಲಿ ಇಷ್ಟೆಲ್ಲಾ ಸಾವಯವ ಕೃಷಿಕರಿದ್ದಾರೆಯೇ. ಒಳ್ಳೆ ದಾಖಲಾತಿ ಮಾಡಿದ್ದೀರಿ’ ಎಂದರು. ಅವತ್ತು ನನಗೆ ಪ್ರಶಸ್ತಿ ಸಿಕ್ಕಷ್ಟೇ ಸಂತೋಷವಾಯಿತು.

ಅಷ್ಟೆಲ್ಲ ಅವರೊಟ್ಟಿಗೆ ಮಾತನಾಡಿದ ಮೇಲೆಯೇ ಪ್ರಕಾಶ್ ಅವರನ್ನು ಎಲ್ಲರೂ ‘ರಾಜಕೀಯ ಮುತ್ಸದಿ ಎಂದು ಗೊತ್ತಾಗಿದ್ದು. ಅಂದು ಅವರು ಆಡಿದ ಮಾತುಗಳಲ್ಲಿ ಶಿವರಾಮಕಾರಂತರ ಆಶಯಗಳಿದ್ದವು. ಕೃಷಿಕನೊಬ್ಬನ ಅಂತರಂಗದ ಮಾತುಗಳಿದ್ದವು. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ‘ಡೌನ್ ಟು ಅರ್ಥ್’ ವಿಚಾರಗಳಿದ್ದವು.

ಇಂಥ ಧೀಮಂತ ಚೇತನ ಇಂದು ಚಿರನಿದ್ರೆಗೆ ಸರಿದಿದೆ. ಅವರ ಪತ್ನಿ, ಪುತ್ರರಿಗೆ ಪ್ರಕಾಶ್ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಆಶಿಸುತ್ತೇನೆ.

—————

ಚೌಟರ ತೋಟದಲ್ಲಿ ಪ್ರಕಾಶ ಅವರ ಜೊತೆಯಲ್ಲಿ ಕಳೆದ ಕ್ಷಣಗಳನ್ನು ನಾನು ಮತ್ತು ಗೆಳೆಯ ರವಿಶಂಕರ ದೊಡ್ಡಮಾಣಿ ಕಾಮೆರಾದಲ್ಲಿ ಸೆರೆ ಹಿಡಿದಿದ್ದೆವು. ಆ ಚಿತ್ತಗಳು https://picasaweb.google.com/ganadhal/MPPrakashPhotos# ಇಲ್ಲಿವೆ.

ಸಿ.ಕೆ.ಚೌಟರೊಂದಿಗೆ ಜಿಪ್ಸಿಯಲ್ಲಿ ಪ್ರಕಾಶರು

 

ಸೂರ್ಯೋದಯ ಸಮಯದಲ್ಲಿ...
ಚೌಟದ್ವಯರೊಂದಿಗೆ ತೆಂಗಿನ ನ್ಯೂಕ್ಲಿಯಸ್ ಗಾರ್ಡ್ ನಲ್ಲಿ

Published by

ಗಾಣಧಾಳು ಶ್ರೀಕಂಠ

ಹುಟ್ಟೂರು ಗಾಣಧಾಳು. ಓದಿದ್ದು ತಿಪಟೂರು. ಕೆಲಸ ಮಾಡ್ತಿರೋದು ಬೆಂಗಳೂರು. ವೃತ್ತಿಯಲ್ಲಿ ಪತ್ರರ್ತ, ಆಸಕ್ತಿ ಕೃಷಿ-ಗ್ರಾಮೀಣಾಬಿವೃದ್ದಿ ಮತ್ತು ಪರಿಸರ. ಫೋಟೋಗ್ರಫಿ, ಪುಟ ವಿನ್ಯಾಸ, ಪ್ರವಾಸ ಹವ್ಯಾಸ. ರಮಾ ಬಾಳಸಂಗಾತಿ. ಆಕೆಯೂ ಹವ್ಯಾಸಿ ಬರಹಗಾರ್ತಿ. ಸ್ಪೈಸ್ ಇಂಡಿಯಾ ಕನ್ನಡ ಮಾಸ ಪತ್ರಿಕೆಯಲ್ಲಿ ಆರು ವರ್ಷ ಸಹಾಯಕ ಸಂಪಾದಕಿ (ಎಡಿಟೋರಿಯಲ್ ಅಸಿಸ್ಟೆಂಟ್) ಕೆಲಸ ಮಾಡಿದ್ದಾರೆ. ಸದ್ಯ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಗೌರವ ಉದ್ಘೋಷಕಿ, ಮಗಳು ನದಿ ನನ್ನ ಬದುಕು, ಮಗ ಅಗರ್ತ, ನನ್ನ ಭವಿಷ್ಯ. ನಿವೃತ್ತ ಶಿಕ್ಷಕ ತಂದೆ ಗಾಣಧಾಳು ರಾಮಣ್ಣ ಅವರೊಂದಿಗೆ ವರ್ಗವಾದ ಕಡೆ ವಾಸ್ತವ್ಯ. ಸದ್ಯ ಚಿತ್ರದುರ್ಗದಲ್ಲಿ ವಾಸ. ಸಮಾಜಶಾಸ್ತ್ರ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ. ಪ್ರಜಾಪ್ರಗತಿ, ಉದಯವಾಣಿ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರನಾಗಿ ಸೇವೆ. ೧೯೯೬ರಿಂದ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ದಾಖಲಾತಿಗಾರನಾಗಿ ವೃತ್ತಿ ಆರಂಭ. ಕ್ರಮೇಣ, ಅದೇ ಸಂಸ್ಥೆಯ ಪ್ರಕಾಶನದ ಸಿರಿಸಮೃದ್ಧಿ ಕೃಷಿ ಮಾಸಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇವೆ ಮುಂದುವರಿಕೆ. ೨೦೦೨ರಿಂದ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಆವೃತ್ತಿಯಲ್ಲಿ ಉಪ ಸಂಪಾದಕನಾಗಿ ಸೇವೆ ಆರಂಭ. ೨೦೦೪ರಲ್ಲಿ ಇದೇ ಪತ್ರಿಕೆಯ ಕೃಷಿ ವಿಜಯ ಪುರವಣಿಯ ಮುಖ್ಯಸ್ಥನಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ೨೦೦೬ರಿಂದ ಪ್ರಜಾವಾಣಿ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ. ಪ್ರಕಟಿತ ಕೃತಿಗಳು : ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಿ ಬೀಜಗಳ ಪರಂಪರೆ ಕುರಿತ ಸರಣಿಯ ಅಕ್ಷರ ರೂಪದ ಕೃತಿ ‘ಬೀಜಸಂಪದ’ . ಸಾವಯವ ಕೃಷಿಕರ ಯಶೋಗಾಥೆಯ ಕೃತಿ ‘ಸಾವಯವ ಚಿತ್ತಾರ’, ‘ವೆಲ್ವೆಟ್ ಬೀನ್ಸ್ -ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ’, ‘ಸ್ಲೋಫುಡ್- ಸುಭೋಜನಾ ಸಾವಧಾನ’, ‘ದೇಸಿ ಕೃಷಿ ಉಪಕರಣಗಳು’, ‘ನೆಲಮೂಲ ಕೃಷಿಜ್ಞಾನ- ಮಲೆನಾಡ ದೇಸಿ ಕೃಷಿ ಪದ್ಧತಿಗಳು’, ‘ ಹಸಿರು ಹಾದಿ’, ‘ಅಜೋಲಾ-ಮೇವಿಗೂ ಸೈ ಗೊಬ್ಬರಕ್ಕೂ ಜೈ’, ‘ಸುಸ್ಥಿರ ತೋಟ ಮಾಡೋಣ ಬನ್ನಿ’ ಹಾಗೂ ‘ಹೊನ್ನಾರು - ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆ’ ಕುರಿತ ಕೃತಿಗಳು ಪ್ರಕಟಗೊಂಡಿವೆ. ಪ್ರಶಸ್ತಿ ಪುರಸ್ಕಾರ ೨೦೦೬ರಲ್ಲಿ ಸಿಡಿಎಲ್ ಸಂಸ್ಥೆಯಿಂದ ‘ಕೆರೆ ಆಪೋಷಣ ಪುರಾಣ’ ಲೇಖನಕ್ಕೆ ರಾಜ್ಯಮಟ್ಟದ ‘ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’. ಇದೇ ವರ್ಷ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದಿಂದ ‘ವೆಲ್ವೆಟ್ ಬೀನ್ಸ್’ ಲೇಖನಕ್ಕಾಗಿ ‘ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ’. ‘ದೇಸಿ ಭತ್ತ ಭ್ರಹ್ಮ ನಟವರಸಾರಂಗಿ’ ಲೇಖನಕ್ಕಾಗಿ ೨೦೦೯ರಲ್ಲಿ ಮುರುಘಾಶ್ರೀ - ರಾಜ್ಯಮಟ್ಟದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ೨೦೧೦-೧೧ನೇ ಸಾಲಿನ ‘ಉತ್ತಮ ವಿಜ್ಞಾನ ಲೇಖಕ ಪ್ರಶಸ್ತಿಗೆ ವೆಲ್ವೆಟ್ ಬೀನ್ಸ್ ಮತ್ತು ಸಾವಯವ ಚಿತ್ತಾರ ಪುಸ್ತಕಗಳ ಆಯ್ಕೆ. ೨೦೧೧ರಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ಸಂಸ್ಥೆಯಿಂದ ‘ಜಲಮೂಲಗಳ ಅಧ್ಯಯನಕ್ಕಾಗಿ’ ೧೨ನೇ ಸಿಎಸ್ಇ ಫೆಲೋಷಿಪ್ ಗೌರವ. ೨೦೧೨ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಯಜಮಾನ್ ಶ್ರೀ ನಾರಾಯಣಪ್ಪ ಪ್ರಶಸ್ತಿ, ೨೦೧೧ನೇ ಸಾಲಿನಲ್ಲಿ ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿನ ಎರಡು ದಶಕಗಳ ಗಣನೀಯ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ‘೨೦೧೪ನೇ ಸಾಲಿನ ರಾಜ್ಯಮಟ್ಟದ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಧ್ಯಯನ ಪ್ರವಾಸ : ಕೃಷಿ ಅಧ್ಯಯನಕ್ಕಾಗಿ ೨೦೧೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ಫ್ರಾನ್ಸಿಸ್ಕೋಗೆ ಪ್ರವಾಸ. ಭಾರತದ ಚಂಡಿಗಡ, ಒರಿಸ್ಸಾ, ಬಿಹಾರ, ಆಂಧ್ರ, ತಮಿಳುನಾಡು ಸೇರಿದಂತೆ ಕೃಷಿ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ.

One thought on “ಸರಳ, ಸಜ್ಜನಿಕೆಯ ‘ಪ್ರಕಾಶ’”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s