ಕರುನಾಡಿನಲ್ಲಿ ‘ಎಂಡಾಸುರ’

ಎಂಡೋಸಲ್ಫಾನ್ ಎಂಬ ಕೀಟನಾಶಕದ ‘ಬೀಜ’ ನಾಡಿನ ಮೂಲೆ ಮೂಲೆಗಳಲ್ಲಿ ಮೊಳೆಯುತ್ತಿದೆ. ಗೇರು, ಭತ್ತ, ಕಾಫಿ, ತೊಗರಿ ತರಕಾರಿಯಲ್ಲೂ ಎಂಡೋ ವಿಷದ ಪಳೆಯುಳಿಕೆಗಳಿವೆ. ಶೀಘ್ರ ಎಚ್ಚೆತ್ತುಕೊಳ್ಳದಿದ್ದರೆ ಕೊಕ್ಕಡ, ಪಟ್ರಮೆಯಂಥ ದುರಂತಗಳು ಮತ್ತೆ ಮರುಕಳಿಸಬಹುದು.

ಮಮತೆಯ ಮಡಿಲಲ್ಲಿ ಅಂಗವೈಕಲ್ಯವನ್ನೇ ಮರೆತ ಎಂಡೋಸಲ್ಫಾನ್ ಸಂತ್ರಸ್ತ ಬಾಲಕ

ಬೆಳಗ್ಗೆಯೆದ್ದರೆ, ಸಂಜೆಯಾದರೆ ಕಾಫಿ-ಚಹಾ ಕುಡಿಯುತ್ತೀವಲ್ಲ; ಚಿತ್ರಾನ್ನ, ಪುಳಿಯೋಗರೆ, ಪಲಾವ್ ಎಂದು ಸೋನಾ ಮಸೂರಿ ಅಕ್ಕಿಯ ಉಣ್ಣುತ್ತೀವಲ್ಲ; ಊಟದಲ್ಲಿ ತೊಗರಿಬೇಳೆ ತೊವ್ವೆಯನ್ನು, ಹೀರೆಕಾಯಿ ಖಾದ್ಯವನ್ನು ಚಪ್ಪರಿಸುತ್ತೇವಲ್ಲ; ಶ್ಯಾವಿಗೆ ಪಾಯಸದಲ್ಲಿರುವ ಗೋಡಂಬಿಯನ್ನು ಪೌಷ್ಟಿಕ ಎಂದು ತಿನ್ನುತ್ತೇವಲ್ಲ- ಹಾಂ, ಇವೆಲ್ಲವೂ ವಿಷಮಯ!
-ಕಾರಣ, ‘ಎಂಡೋಸಲ್ಫಾನ್’ನಂತಹ ಕೀಟನಾಶಕಗಳು!

ಪಕ್ಕದ ಕೇರಳದಲ್ಲಿ ಇದೀಗ ಎಂಡೋಸಲ್ಫಾನ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ನಿಷೇಧವಿದ್ದರೂ ವ್ಯಾಪಕವಾಗಿ ಬಳಕೆಯಾಗುತ್ತಿರುವ ಈ ಕೀಟನಾಶಕವನ್ನು ದೇಶದಿಂದಲೇ ಹೊರಗಟ್ಟುವಂತೆ ವಿವಿಧ ಕೃಷಿ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ, ಪಟ್ರಮೆ ಮತ್ತು ನಿಡ್ಲೆ ಗ್ರಾಮಗಳಲ್ಲೂ ಎಂಡೋಸಲ್ಫಾನ್ ಉಪಟಳವಿದೆ. ಅಲ್ಲಿನ ಹಲವು ಕುಟುಂಬಗಳು ವಿಷದ ಭಾದೆ ಅನುಭವಿಸುತ್ತಿವೆ. ಗೇರು ತೋಟಗಳ ಮೇಲೆ ನಡೆದ ಎಂಡೋಸಲ್ಫಾನ್ ಅಭಿಷೇಕದಿಂದ 200ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ರೋಗಗ್ರಸ್ತರಾಗಿದ್ದಾರೆ. ಆದರೆ ಈ ಬಗ್ಗೆ ಮಾತನಾಡುವವರೇ ಕಡಿಮೆ.

ಮೇಲಿನ ಮೂರೂ ಗ್ರಾಮಗಳಲ್ಲಿ ಅಂಗವಿಕಲರು, ಬುದ್ಧಿಮಾಂದ್ಯರು, ಹುಟ್ಟುಕುರುಡರು, ಹೆಳವರು.. ಹೀಗೆ ಎಂಡೋ ಬಾಧೆಯ ನೆರಳಿನಲ್ಲೇ ಜೀವನ ಸಾಗಿಸುವವ

ರಿದ್ದಾರೆ. ಎಂಡೋ ಇವರ ವಂಶವಾಹಿಯಲ್ಲಿಯೇ ನೆಲೆ ಕಂಡುಕೊಂಡಿದೆ. ತಾಯಿಯ ಹೊಟ್ಟೆಯಲ್ಲಿರುವ ಮಕ್ಕಳನ್ನೂ ಎಂಡೋ ಭೂತ ಕಾಡುತ್ತಿದೆ. ಸಾರ್ವಜನಿಕರು ಒಕ್ಕೊರಲಿನಿಂದ ಪ್ರತಿಭಟಿಸಿದ್ದರಿಂದ 2002ರಲ್ಲಿ ಎಂಡೋಸಲ್ಫಾನ್ ಸಿಂಪಡಣೆ ಸ್ಥಗಿತಗೊಂಡಿದೆ. ಆದರೆ ಪರಿಣಾಮಗಳು?

ಸರ್ವವೂ ವಿಷಮಯ
ಮಳೆ ನಿಂತರೂ ಮರದ ಹನಿ ನಿಲ್ಲದು. ‘ಎಂಡೋ ಸಿಂಪಡಣೆ’ ನಿಂತರೂ ಅದರ ಪರಿಣಾಮ ಮಾತ್ರ ಈ ಮೂರೂ ಗ್ರಾಮಗಳ ನೆಲ, ಜಲ, ಸಸ್ಯಗಳಲ್ಲಿ ವ್ಯಾಪಿಸಿಕೊಂಡಿದೆ. ಈ ವಿಷದಿಂದ ಕಲುಷಿತಗೊಂಡಿದ್ದ ನದಿಯಲ್ಲಿನ ಸತ್ತ ಮೀನುಗಳನ್ನು ತಿಂದವರು ಇಂದೂ ರೋಗದಿಂದ ಬಳಲುತ್ತಿದ್ದಾರೆ. ಕಳೆದ 20 ವರ್ಷಗಳಲ್ಲಿ ಅಂಗವಿಕಲ ಮಕ್ಕಳ ಜನನ, ಗರ್ಭಪಾತದ ಪ್ರಕರಣಗಳು ಹೆಚ್ಚಾಗಿವೆ ಎಂದು ವೈದ್ಯರೂ ಸ್ಪಷ್ಟಪಡಿಸುತ್ತಾರೆ.

‘ಎಂಡೋಸಲ್ಫಾನ್ ಸಿಂಪಡಣೆ ನಿಂತ ನಂತರ ಹೊಸ ಕಾಯಿಲೆಗಳು ಕಂಡು ಬಂದಿಲ್ಲ. ಹಳೆಯ ಕಾಯಿಲೆಗಳು ಕಡಿಮೆಯಾಗಿಲ್ಲ’ ಎನ್ನುವುದು ಸ್ಥಳೀಯ ವೈದ್ಯ ಡಾ.ಮುರು

ಳೀಧರ್ ವಿವರಣೆ. ಇತ್ತೀಚೆಗೆ ಕೊಕ್ಕಡದಿಂದ ಮದುವೆಯಾದ ಹೆಣ್ಣುಮಗಳಿಗೆ ಅಂಗವಿಕಲ ಮಗು ಜನಿಸಿದೆ. ಮುಖ್ಯಮಂತ್ರಿಗಳು ಪರಿಹಾರ ವಿತರಣೆಗೆ ಆಗಮಿಸುವ ಮುನ್ನ ಮೂವತ್ತೈದರ ಹರೆಯದ ಯುವಕನೊಬ್ಬ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾನೆ ಎನ್ನುವುದು ಸ್ವತಃ ಎಂಡೋ ಫಲಾನುಭವಿಯಾಗಿರುವ ಕೊಕ್ಕಡದ ಶ್ರೀಧರ್‌ಗೌಡರ ವಿವರಣೆ.

ಇದೇ ಗ್ರಾಮದ ಶಿಕ್ಷಕ ಜೋಸೆಫ್ ಪಿರೇರಾ ಈ ಮಾತಿಗೆ ಸಮ್ಮತಿಯ ಮುದ್ರೆ ಒತ್ತುತ್ತಾರೆ. ‘ಇಲ್ಲಿ ರೋಗಗ್ರಸ್ತರು ಸುಧಾರಿಸಿಲ್ಲ. ಸಂತೋಷ್, ಚಿತ್ರ, ನಿರ್ಮಲಾರಂಥವರು ಹಳೆಯ ಕಾಯಿಲೆಗಳಿಂದ ನರಳುತ್ತಿದ್ದಾರೆ. ರೋಗಬಾಧೆ ತೀವ್ರವಾಗಿ ಕೆಲವರು ಸಾವನ್ನಪ್ಪಿದ್ದಾರೆ. ಹಣದ ಕೊರತೆಯಿಂದಾಗಿ ಚಿಕಿತ್ಸೆ ಪಡೆಯಲು ಕಷ್ಟವಾಗುತ್ತಿದೆ’ ಎನ್ನುವುದು ಅವರ ಅಳಲು.

ಕಾಫಿ ನಾಡಿನಲ್ಲೂ ಸದ್ದು
ದಕ್ಷಿಣ ಕನ್ನಡದ ಮೂರು ಗ್ರಾಮಗಳನ್ನು ಎಡಬಿಡದೇ ಕಾಡುತ್ತಿರುವ ಎಂಡೋಸಲ್ಫಾನ್ ಕರ್ನಾಟಕದ ಕಾಫಿನಾಡನ್ನೂ ಬಿಟ್ಟಿಲ್ಲ. ಆದರೆ ಅನಾಹುತ ಉಂಟು ಮಾಡುವಂತಹ ಮಟ್ಟಕ್ಕೆ ಬೆಳವಣಿಗೆಯಾಗಿಲ್ಲ.

ಕರಾವಳಿ ಸರಹದ್ದು ದಾಟಿದ ಎಂಡೋ ಘಟ್ಟ ಹತ್ತಿ ಚಿಕ್ಕಮಗಳೂರಿಗೆ ಬಂದಿದೆ. ಕಳೆದ ವರ್ಷ ಚಿಕ್ಕಮಗಳೂರಿನಲ್ಲಿ ಕಾಫಿಗೆ ಕಾಯಿಕೊರಕ ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿತ್ತು

. ವಿಜ್ಞಾನಿಗಳ ‘ಸಲಹೆ’ಯ ಮೇರೆಗೆ ಎಂಡೋ ಪ್ರಾಶನ ನಡೆಯಿತು. ಸಾವಿರಾರು ಎಕರೆ ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಿದ್ದಾಯಿತು. ರೋಗ ನಿಯಂತ್ರಣಕ್ಕೆ ಬಂದಿತೆಂಬ ಸಮಾಧಾನ ಬೆಳೆಗಾರರಿಗೆ. ಆದರೆ ಗದ್ದೆ

ಅಂಕು-ಡೊಂಕಾಗಿರುವ ಕೈಗಳ ಬೆರಳುಗಳು.. ಇಡೀ ಎಂಡೋಸಲ್ಫಾನ್ ದುರಂತವನ್ನು ವಿವರಿಸುತ್ತವೆ

ಬಯಲು, ಅಂತರ್ಜಲ, ಕೆರೆ, ಹೊಂಡಗಳು ಮಲಿನಗೊಂಡವು. ಜೀವವೈವಿಧ್ಯ ನಾಶವಾಯಿತು. ಇವುಗಳು ಲೆಕ್ಕಕ್ಕೆ ಸಿಗಲಿಲ್ಲ, ಬೆಳಕಿಗೆ ಬರಲಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ ಮೂಡಿಗೆರೆಯ ಕಾಫಿ ಬೆಳೆಗಾರ ಭೂತನಕಾಡು ಅರವಿಂದ.

ಶುಂಠಿ, ಏಲಕ್ಕಿ, ಕಾಳುಮೆಣಸು ಕೃಷಿ ವ್ಯಾಪಕವಾಗಿರುವ ಸಕಲೇಶಪುರ, ಚಿಕ್ಕಮಗಳೂರು ತೋಟಗಳಲ್ಲಿ ಎಂಡೋಸಲ್ಫಾನ್‌ನಂತಹ ಕೀಟನಾಶಕಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ‘ಗುತ್ತಿಗೆ ಕೃಷಿ’ ಕೃಷಿ ಕರ್ನಾಟಕಕ್ಕೆ ಕಾಲಿಟ್ಟ ಮೇಲೆ ಭತ್ತದ ಗದ್ದೆಗಳೆಲ್ಲ ‘ವಿಷದ ತೊಟ್ಟಿಲು’- ‘ವಿಷಕನ್ಯೆ’ ಎನ್ನಲು ಅಡ್ಡಿಯಿಲ್ಲ. ಏಕೆಂದರೆ, ಅಲ್ಲೆಗ ಏನು ಬೆಳೆಯಬೇಕಾದರೂ ‘ವಿಷ’ದ ನೆರವು

ಬೇಕು. ಆ ತೋಟಗಳಲ್ಲಿ ಬಳಸುವ ಕೀಟನಾಶಕಗಳಿಗೆ ಅಳತೆ-ಪ್ರಮಾಣವೇನಿಲ್ಲ. ಅಂಗಡಿಯವರು ಹೇಳಿದಷ್ಟು, ಬೆಳೆಗಾರರು ಬಳಸಿದಷ್ಟು!

ಮಲೆನಾಡಿನಲ್ಲಿ ಕೀಟನಾಶಕದ ಪ್ರಮಾಣ ಹೆಚ್ಚಿದ ಮೇಲೆ ‘ವಿಷಮುಕ್ತ’ ಆಹಾರ ಬೆಳವಣಿಗೆ ಕಷ್ಟವಾಗಿದೆ. ಕಾಫಿ ತೋಟದ ತಗ್ಗಿನಲ್ಲಿರುವ ಗದ್ದೆಗಳಲ್ಲಿ ಸಾವಯವ ಕೃಷಿ ಅಸಾಧ್ಯವಾಗಿದೆ. ಇಂಥ ಪ್ರದೇಶದಲ್ಲಿ ಬೆಳೆದ ಬೆಳೆಗೆ ಸಾವಯವ ಕೃಷಿ ದೃಢೀಕರಣ ಪ್ರಮಾಣ ಪತ್ರಗಳನ್ನು

ನೀಡಲಾಗುವುದಿಲ್ಲ ಎನ್ನುತ್ತದೆ ಸಂಬಂಧಪಟ್ಟ ಸಂಸ್ಥೆ. ಹಾಗಾದರೆ ಮಹಾನಗರಗಳಿಗೆ ಸರಬರಾಜಾಗುವ ಸಾವಯವ ಉತ್ಪನ್ನಗಳ ಕಥೆ

ಏನು?

ಅನ್ನದ ಬಟ್ಟಲಲ್ಲೂ..

ದಕ್ಷಿಣದಲ್ಲಷ್ಟೇ ಅಲ್ಲ, ಉತ್ತರ ಕರ್ನಾಟಕದಲ್ಲೂ ‘ಎಂಡೋ’ ಬಳಕೆಯಲ್ಲಿದೆ. ತುಂಗಭದ್ರಾ ಜಲಾಶಯದ ಆಶ್ರಯದಲ್ಲಿ ಭತ್ತ ಬೆಳೆಯುವ ಕೊಪ್ಪಳ, ಗಂಗಾವತಿ ಮತ್ತು ರಾಯಚೂರು ಜಿಲ್ಲೆಗಳಲ್ಲಿನ ಗದ್ದೆ ಅಂಗಳದಲ್ಲಿ ಕೀಟನಾಶಕಗಳ ವಾಸನೆ ಮೂಗಿಗೆ ಅಡರುತ್ತದೆ. ಆಂಧ್ರಪ್ರದೇಶದ ಗುತ್ತಿಗೆದಾರರು ಈ ಭಾಗಕ್ಕೆ ಕಾಲಿಟ್ಟ ಮೇಲೆ ಎಂಡೋಸಲ್ಫಾನ್ ಬಳಕೆ ಹೆಚ್ಚಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಮೊನ್ನೆ ಗುಲ್ಬರ್ಗದಲ್ಲಿ ತೊಗರಿ ಬೆಳೆಗೆ ಎಂಡೋಸಲ್ಫಾನ್ ಸಿಂಪಡಿಸುವಾಗ, ಎರಡು ಎತ್ತುಗಳು ‘ಘಾಟಿಗೆ ತತ್ತರಿಸಿ ಸ್ಥಳದಲ್ಲೇ ಕೊನೆಯುಸಿರೆಳೆದಿವೆ. ಕಡೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಕೀಟನಾಶಕ ಸಿಂಪಡಿಸುತ್ತಿದ್ದ ರೈತ ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದಾನೆ. ಇವೆಲ್ಲ ದುಷ್ಟಾಂತಗಳಲ್ಲ, ನೈಜ ಘಟನೆಗಳು.

ಕೀಟನಾಶಕದ ವಿಷಯ ಮಾತಾಡುವಾಗ ಗೆಳೆಯರೊಬ್ಬರು ಹೇಳಿದ ಘಟನೆ ನೆನಪಾಗುತ್ತದೆ. ಕೊಪ್ಪಳ, ಗಂಗಾವತಿ ಭಾಗದ ರೈತರು ಕೀಟನಾಶಕ ಸಿಂಪಡಿಸುವಾಗ, ವೈದ್ಯರೊಬ್ಬರನ್ನು ಚಹಾ ಕುಡಿಯಲು ಆಹ್ವಾನಿಸುತ್ತಾರೆ. ಅರೆ ವೈದ್ಯರಿಗೂ, ಕೀಟನಾಶಕ ಸಿಂಪಡಣೆಗೆ ಏನು ಸಂಬಂಧ ಎಂದು ಕೇಳಿದರೆ, ‘ಏನಿಲ್ಲ, ಸ್ಪ್ರೇ ಮಾಡ್ಬೇಕಾದರೆ, ಏನಾದರೂ ಹೆಚ್ಚೂ-ಕಡಿಮೆ ಆದ್ರೆ ಇರಲಿ ಅಂತ ಡಾಕ್ಟರ್ ಕರೆದಿರ್ತೀವಿ? ಅಷ್ಟೇ’ ಎನ್ನುತ್ತಾರೆ.

ಕೀಟನಾಶಕ ಸಿಂಪಡಿಸುವವನಿಗೇ ಇಷ್ಟು ತ್ರಾಸಾದರೆ ಇನ್ನು ‘ಸೋನಾ ಮಸೂರಿ ಸಣ್ಣಕ್ಕಿಯೇ ಬೇಕೆಂದು ಹಟ ಹಿಡಿದು ಉಣ್ಣುವ ಗ್ರಾಹಕನ ಪಾಡು? ಈ ವಿಷ ಭೂಮಿಗಿಳಿದಾಗ ಅಲ್ಲಿರುವ ಕ್ರಿಮಿ-ಕೀಟಗಳ ಪಾಡು? ಹೀಗೆ ನಿತ್ಯದ ಆಹಾರದ ಮೂಲಕ ನಮಗರಿವಿಲ್ಲದಂತೆ ಅನ್ನದ ಬಟ್ಟಲಿಗೆ ‘ಎಂಡೋಸಲ್ಫಾನ್’ನಂತಹ ಕೀಟನಾಶಕಗಳು ಬಂದು ಬೀಳುತ್ತಿವೆ. ಹಾಗಾದರೆ ನಾವೆಷ್ಟು ಸುರಕ್ಷಿತರು?

ಭತ್ತದ ಕಥೆ ಬಿಡಿ ಸ್ವಾಮಿ, ಬೆಂಗಳೂರು ಗ್ರಾಮಾಂತರ- ಕೋಲಾರ ಜಿಲ್ಲೆಗಳಲ್ಲಿ ಬೆಳೆಯುವ ತರಕಾರಿಯಲ್ಲಿಯೂ ಎಂಡೋ ವಿಷ ಅಡಗಿದೆ ಎನ್ನುತ್ತವೆ ಇತ್ತೀಚಿನ ಕೆಲವು ಅಧ್ಯಯನಗಳು. ತಾಜಾ ಕೀಟನಾಶಕಗಳೊಂದಿಗೆ ಈ ತರಕಾರಿಯೂ ನಮ್ಮ ಉದರ ಸೇರುತ್ತಿದೆ. ಪುರಾಣದ ಈಶ್ವರನಿಗೆ ಕಂಠದಲ್ಲಿ ಮಾತ್ರ ವಿಷ. ಆಧುನಿಕ ಮನುಷ್ಯನಿಗೆ ಮೈಯೆಲ್ಲಾ ವಿಷ!

ದುರಂತಗಳು ಕಣ್ಣೆದುರೇ ಇದ್ದರೂ, ಎಂಡೋಸಲ್ಫಾನ್‌ನಂತಹ ಕೀಟನಾಶಕಗಳನ್ನು ಬಳಸಿ ಎಂದು ಕೃಷಿ ವಿಜ್ಞಾನಿಗಳು ರೈತರಿಗೆ ‘ಸಲಹೆ’ ನೀಡುತ್ತಿದ್ದಾರೆ. ಏನನ್ನುವುದು ಜೀವದೊಂದಿಗಿನ ಈ ಚೋದ್ಯಕ್ಕೆ?

ಎಂಡೋಸಲ್ಫಾನ್ ನಿಷೇಧಕ್ಕೆ ಬದ್ಧ: ಸಿಎಂ

 

ಗುಲ್ಬರ್ಗ: ರಾಸಾಯನಿಕ ಕೀಟನಾಶಕ ಎಂಡೋಸಲ್ಫಾನ್ ಸೃಷ್ಟಿಸಿರುವ ಅವಾಂತರಗಳನ್ನು ಖುದ್ದಾಗಿ ತಾವು ನೋಡಿದ್ದು, ಎಂಡೋಸಲ್ಫಾನ್ ಅನ್ನು ನಿಷೇಧಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಇಲ್ಲಿನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ವರ್ಷ ನಾನು ಎಂಡೋಸಲ್ಫಾನ್‌ನಿಂದ ಬಾಧಿತವಾದ ಪ್ರದೇಶಕ್ಕೆ ಭೇಟಿ ನೀಡಿದ್ದು, ಅಲ್ಲಿನ ಜನರ ನೋವು ಆಲಿಸಿದ್ದೇನೆ. ಈ ಕೀಟನಾಶಕ ನಿಷೇಧಿಸುವ ಎಲ್ಲ ಪ್ರಯತ್ನಗಳನ್ನೂ ನಮ್ಮ ಸರ್ಕಾರ ಮಾಡಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

 

ಭಾನುವಾರ ರಾತ್ರಿ 9.30ಗೆ ಸಮಯ ಟಿವಿ ನೋಡಿ

‘ಶ್ರೀ ಕೃಷ್ಣ” ಪಡ್ರೆ ಕನ್ನಡ ನಾಡಿನ ಅಭಿವೃದ್ಧಿ ಪತ್ರಕರ್ತರಲ್ಲಿ ಮೊದಲ ಸಾಲಿಗೆ ಸೇರಿದವರು. ಬರೆಯುತ್ತಾ, ಬರೆಸುತ್ತಾ, ಕೃಷಿಕರ ಕೈಗೂ ಲೇಖನಿ ಕೊಟ್ಟು ಅವರನ್ನೂ ಬರೆಯುವಂತೆ ಮಾಡಿದವರು.

ಎಂಡೋಸಲ್ಲ್ಫಾನ್ ಅನಾಹುತವನ್ನು ಬೆಳಕಿಗೆ ತಂದವರು. ಬರನಿರೋಧಕ ಜಾಣ್ಮೆಯ ಯಶೋಗಾಥಗಳನ್ನು ಪರಿಚಯಿಸಿದವರು. ಮಳೆಕೊಯ್ಲು, ನೆಲ-ಜಲ ಸಂರಕ್ಷಣೆಯಲ್ಲಿ ಸ್ಪೆಶಲೈಸೇಶನ್ ಪಡೆದವರು. 22 ವರ್ಷ ವಯಸ್ಸಿನ ಅಡಿಕೆ ಪತ್ರಿಕೆಯ ಸ್ಥಾಪಕ ಸಂಪಾದಕ. ಏಳು ವರ್ಷದ ಬಿಡುವಿನ ನಂತರ ಆಗಸ್ಟ್ ೨೦೦೬ ರಿಂದ ಪುನಃ ಪತ್ರಿಕೆಯ ಸಂಪಾದಕತ್ವ.

ಐದು ವರ್ಷಗಳ ಕಾಲ ವಿಜಯ ಕರ್ನಾಟಕದಲ್ಲಿ ಮಳೆಕೊಯ್ಲಿನ ಬಗ್ಗೆ ಅಂಕಣ – ಹನಿಗೂಡಿಸೋಣ. http://www.indiatogether.com ಜಾಲತಾಣದಲ್ಲಿ ಇದೇ ವಿಷಯದ ಮೇಲೆ ನಿರಂತರವಾಗಿ ನುಡಿಚಿತ್ರ ಪ್ರಕಟಣೆ.

ಮಳೆಕೊಯ್ಲು ನೆಲ-ಜಲ ಸಂರಕ್ಷಣೆಯ ಬಗ್ಗೆ ೧೦ ಪುಸ್ತಕ ರಚನೆ. ಪುಸ್ತಕ ಪ್ರಾಧಿಕಾದ ಕೃಷಿ ಸಂಪುಟಗಳಲ್ಲಿ  ಕರ್ನಾಟಕದ ಬರನಿರೋಧಕ ಜಾಣ್ಮೆಗಳ ಪುಸ್ತಕ ಪ್ರಕಟಣೆ. ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರದ ಕನ್ನಡ – ಪಠ್ಯಪುಸ್ತಕಗಳಲ್ಲಿ ಇವರು ಬರೆದ ಜಲಸಂರಕ್ಷಣೆಯ ಬಗೆಗಿನ ಪಾಠ ಸೇರಿಕೊಂಡಿದೆ. ಮಳೆಕೊಯ್ಲಿನ ಬಗ್ಗೆ ರಾಜ್ಯದುದ್ದಗಲದಲ್ಲಿ ನಾನ್ನೂರಕ್ಕೂ ಹೆಚ್ಚು ಸ್ಲೈಡ್ ಶೋ.

ಅರಸಿ ಬಂದ ಪ್ರಶಸ್ತಿಗಳು ಹಲವು.  ಎರಡು ಬಾರಿ ಸ್ಟೇಟ್ಸ್‌ಮನ್ ಪತ್ರಿಕೆಯ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಸಿಡಿಎಲ್  ಸಂಸ್ಥೆಯ ಪ್ರಶಸ್ತಿ ಇತ್ಯಾದಿ. ಅಶೋಕಾ ಫೆಲೋ.

ಹೀಗೆ ಪತ್ರಿಕೋದ್ಯಮ ಹಾಗೂ ಪರಿಸರ ಜಾಗೃತಿಯ ಕಣಜವಾಗಿರುವ ‘ಶ್ರೀ’ ಪಡ್ರೆಯವರ ಸಾಧನೆಗಳು  ಇದೇ ಭಾನುವಾರ ರಾತ್ರಿ 9.30ಕ್ಕೆ ಸಮಯ ವಾಹಿನಿಯ ‘ಕರ್ನಾಟಕದ ಕಣ್ಮಣಿಗಳು’ ಸರಣಿ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿವೆ.

ಅರ್ಧಗಂಟೆ ಅವಧಿಯ ಈ ಕಾರ್ಯಕ್ರಮದಲ್ಲಿ ಕೃಷಿ, ಪತ್ರಿಕೋದ್ಯಮ, ಜಲಪತ್ರಿಕೋದ್ಯಮ, ಎಂಡೋಸಲ್ಫಾನ್  ವಿರುದ್ಧದ ಹೋರಾಟ.. ಹೀಗೆ ‘ಶ್ರೀ’ ಪಡ್ರೆಯವರ ಎರಡೂವರೆ ದಶಕಗಳ ಕೃಷಿ ಮತ್ತು ಪತ್ರಿಕೋದ್ಯಮದ ಚಟುವಟಿಕೆಗಳು ಬಿತ್ತರಗೊಳ್ಳಲಿವೆ.

<!–[if !mso]> <! st1\:*{behavior:url(#ieooui) } –>

C©üªÀÈ¢Þ ¥ÀvÀæPÀvÀð. FUÀ ªÀļÉPÉÆAiÀÄÄè, £É®-d® ¸ÀAgÀPÀëuÉAiÀÄ°è ¸Éà±À¯ÉʸÉñÀ£ï.

20 ªÀµÀð ªÀAiÀĹì£À CrPÉ ¥ÀwæPÉAiÀÄ ¸ÁÜ¥ÀPÀ ¸ÀA¥ÁzÀPÀ.  K¼ÀÄ ªÀµÀðzÀ ©qÀÄ«£À £ÀAvÀgÀ DUÀ¸ïÖ 2006jAzÀ ¥ÀÅ£ÀB ¥ÀwæPÉAiÀÄ ¸ÀA¥ÁzÀPÀvÀé. £Á®ÄÌ ªÀµÀðUÀ½AzÀ «dAiÀÄ PÀ£ÁðlPÀzÀ°è ªÀļÉPÉÆ¬Äè£À §UÉÎ CAPÀt ºÀ¤UÀÆr¸ÉÆÃt. www.indiatogether.com eÁ®vÁtzÀ°è EzÉà «µÀAiÀÄzÀ ªÉÄÃ¯É PÁAiÀĪÀiÁäV £ÀÄravÀæ ¥ÀæPÀluÉ.

ªÀļÉPÉÆAiÀÄÄè £É®-d® ¸ÀAgÀPÀëuÉAiÀÄ §UÉÎ 10 ¥ÀŸÀÛPÀ gÀZÀ£É. ¥ÀŸÀÛPÀ ¥Áæ¢üPÁgÀPÁÌV §gÉzÀ PÀ£ÁðlPÀzÀ §gÀ¤gÉÆÃzsÀPÀ eÁuÉäUÀ¼À §UÉV£À ºÉƸÀ ¥ÀŸÀÛPÀ CaÑ£À°è. PÀ£ÁðlPÀ, PÉÃgÀ¼À ªÀÄvÀÄÛ ªÀĺÁgÁµÀÖçzÀ PÀ£ÀßqÀ񎊥¥ÀoÀå¥ÀŸÀÛPÀUÀ¼À°è EªÀgÀÄ §gÉzÀ d®¸ÀAgÀPÀëuÉAiÀÄ §UÉV£À ¥ÁoÀ ¸ÉÃjPÉÆArzÉ. ªÀļÉPÉÆ¬Äè£À §UÉÎ gÁdåzÀÄzÀÝUÀ®zÀ°è £Á£ÀÆßgÀPÀÆÌ ºÉZÀÄÑ ¸ÉèöÊqï ±ÉÆÃ.

CgÀ¹ §AzÀ ¥Àæ±À¹ÛUÀ¼ÀÄ ºÀ®ªÀÅ. ¸ÉÖÃmïìªÀÄ£ï ¥ÀwæPÉAiÀÄ C©üªÀÈ¢Þ ¥ÀwæPÉÆÃzÀåªÀÄ ¥Àæ±À¹Û ºÁUÀÆ PÀ£ÁðlPÀ ¸ÀgÀPÁgÀzÀ ¥Àj¸ÀgÀ ¥ÀwæPÉÆÃzÀåªÀÄ ¥Àæ±À¹Û EvÁå¢. C±ÉÆÃPÁ ¥sɝɯÃ.

ವ್ಯಾಸದಲ್ಲಿ ‘ಅಗ್ನಿಹೋತ್ರ’

ಜಿಗಣಿಯ ವಿವೇಕಾನಂದ ಯೋಗ ಕೇಂದ್ರದಲ್ಲಿ ಸೋಮವಾರದಿಂದ ‘ಯೋಗ, ಗೋವು ಹಾಗೂ ಗ್ರಾಮೀಣ ಪುನರ್‌ರಚನೆ’ ಕುರಿತ ಅಂತರರಾಷ್ಟ್ರೀಯ ಸಮಾವೇಶವೊಂದು ನಡೆಯುತ್ತಿದೆ.

ಯೋಗ, ಧ್ಯಾನ, ಪ್ರಾಣಾಯಾಮಗಳು ಸ್ವಾಸ್ಥ್ಯ ಜೀವನದ ಗುಟ್ಟು. ಪೌಷ್ಟಿಕ ಆಹಾರ ಈ ಗುಟ್ಟಿನ ಹಿಂದಿನ ಶಕ್ತಿ. ಆಹಾರ- ಆರೋಗ್ಯ- ವಾತಾವರಣ- ನಿತ್ಯದ ಕ್ರಿಯೆ. ಇವೆಲ್ಲ ಒಂದೊಕ್ಕೊಂದು ಕೊಂಡಿ. ಅದಕ್ಕಾಗಿ ಯೋಗ- ಧ್ಯಾನ- ಪ್ರಾಣಾಯಾಮ ತರಬೇತಿ ನೀಡುವ ಕೇಂದ್ರಗಳಲ್ಲೆಲ್ಲಾ ವಿಷರಹಿತ ಕೃಷಿ, ಸಾವಯವ ಆಹಾರದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುತ್ತದೆ.

ಯೋಗ ಗುರು ಬಾಬಾ ರಾಮದೇವ್ ಅವರಿಂದ ಹಿಡಿದು, ಸ್ಥಳೀಯ ಮಠ ಮಾನ್ಯಗಳೆಲ್ಲ ಪೌಷ್ಟಿಕ ಆಹಾರ ಉತ್ಪಾದನೆಯಲ್ಲಿ ಆಸಕ್ತಿ ತೋರಿವೆ. ದೇಸಿ ಆಕಳು, ಅವುಗಳ ಸೆಗಣಿ, ಗಂಜಲ ಬಳಕೆಯಿಂದ ಕೃಷಿ ಚಟುವಟಿಕೆ ಕೈಗೊಳ್ಳುವುದರ ಜೊತೆಗೆ, ಸಾವಯವ ಆಹಾರ ಉತ್ಪಾದನೆಯ ದಾಸೋಹಕ್ಕೂ ಮುಂದಾಗಿವೆ. ಪುದುಚೆರಿಯ ಅರಬಿಂದೋ ಆಶ್ರಮದಲ್ಲಿ ಈ ಪ್ರಯತ್ನ ಸಾಗಿದೆ. ಅಲ್ಲಿನ ನಿತ್ಯ ದಾಸೋಹದಲ್ಲಿ ಸಾವಯವ ತರಕಾರಿ, ಹಣ್ಣು, ಹಂಪಲು, ಧಾನ್ಯಗಳನ್ನು ಬಳಸಲಾಗುತ್ತಿದೆ.

ಈ ಚಟುವಟಿಕೆಗಳ ನಡುವೆಯೇ ವೇದಗಳ ಕಾಲದ ಕೃಷಿಗೂ ಜೀವ ತುಂಬುವ ಕೆಲಸ ನಡೆಯುತ್ತಿದೆ. ಅಗ್ನಿಹೋತ್ರ, ಹೋಮ-ಹವನಗಳಿಂದ ಬೆಳೆ ಇಳುವರಿ ಹೆಚ್ಚಳ, ರೋಗ-ಕೀಟ ಬಾಧೆ ನಿಯಂತ್ರಣ, ವಾತಾವರಣ ಶುದ್ಧೀಕರಣ ಕುರಿತು ಸಂಶೋಧನೆಗಳೂ ಯಶಸ್ವಿಯಾಗಿವೆ.

ಅಗ್ನಿಹೋತ್ರ ಎಂದರೆ ನಾಟಿ ಹಸುವಿನ ಸೆಗಣಿಯ ಬೆರಣಿಗೆ ನಾಟಿ ಹಸುವಿನ ಬೆಣ್ಣೆ ಲೇಪಿಸಿ, ಉಲ್ಟಾ ಪಿರಮಿಡ್ (ರಿವರ್ಸ್ ಪಿರಮಿಡ್) ಆಕಾರದ ತಾಮ್ರದ ಹೋಮ ಕುಂಡದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ನಿಗದಿತ ಮಂತ್ರ ಪಠಣದೊಂದಿಗೆ ಹೋಮ ಕೈಗೊಳ್ಳುವ ಕ್ರಿಯೆ. ಈ ಹೋಮದಿಂದ ಹೊರಹೊಮ್ಮುವ ಧೂಪ ವಾತಾವರಣವನ್ನು ಶುದ್ಧೀಕರಿಸುವ ಜೊತೆಗೆ, ಸುತ್ತಲಿನ ಗಿಡ-ಮರ, ಬೆಳೆ-ಬಳ್ಳಿಗಳ ಆರೋಗ್ಯ ಕಾಪಾಡಲು ನೆರವಾಗುತ್ತದೆ ಎನ್ನುವುದು ಈ ಹೋಮ ಕೈಗೊಳ್ಳುವ ಸಂಶೋಧಕರ ಅಭಿಪ್ರಾಯ.

ಒಂದು ಕಾಲದಲ್ಲಿ ಈ ಹೋಮ ಕೇವಲ ಧಾರ್ಮಿಕ ಆಚರಣೆಯಾಗಿತ್ತು. ಇತ್ತೀಚಿನ ಹಲವು ಸಂಶೋಧನೆಗಳ ಬಳಿಕ ಇದು ಕೃಷಿ ಕಾರ್ಯಗಳಲ್ಲೂ ಬಳಕೆಯಾಗುತ್ತಿದೆ. ವಿಶೇಷವಾಗಿ ಸಾವಯವ ಕೃಷಿ ಕೈಗೊಳ್ಳುತ್ತಿರುವ ಕೆಲವು ರೈತರು ಅಗ್ನಿಹೋತ್ರ- ಹೋಮಾ ಫಾರ್ಮ್ ಅಳವಡಿಸಿಕೊಳ್ಳುತ್ತಿದ್ದಾರೆ.

ತೀರ್ಥಹಳ್ಳಿಯ ಸಾವಯವ ಕೃಷಿಕ ದಿ. ಪುರುಷೋತ್ತಮ ರಾಯರು 80-90ರ ದಶಕದಲ್ಲಿ ಕರ್ನಾಟಕಕ್ಕೆ ‘ಅಗ್ನಿಹೋತ್ರ’ ಪರಿಚಯಿಸಿದರು. ಬೆಳಗಾವಿಯ ಅಭಯ್ ಮುತಾಲಿಕ್ ದೇಸಾಯಿ ಅವರು ಇವತ್ತಿಗೂ ತಮ್ಮ ಕೃಷಿ ಜಮೀನಿನಲ್ಲಿ ನಿತ್ಯ ಎರಡು ಹೊತ್ತು ‘ಅಗ್ನಿಹೋತ್ರ’ ಕೈಗೊಳ್ಳುತ್ತಿದ್ದಾರೆ. ಆ ಮೂಲಕ ತರಕಾರಿ ಬೆಳೆದು ಬೆಂಗಳೂರಿನಂತಹ ನಗರಗಳಿಗೆ ಹಂಚುತ್ತಿದ್ದಾರೆ.

ಅಗ್ನಿಹೋತ್ರ ಹೋಮದಿಂದ ಹೊರಹೊಮ್ಮುವ ಭಸ್ಮದಿಂದ ನೀರನ್ನು ಪರಿಶುದ್ಧಗೊಳಿಸಬಹುದು ಎಂದು ಟುಸ್ಕೀ ವಿವಿ ಸಂಶೋಧನೆಯೊಂದರಿಂದ ದೃಢಪಡಿಸಿದೆ. ಶಾಂತಿ ವಿಲ್ಲಾ ಸಂಸ್ಥೆ, ಈ ಸಂಶೋಧನೆಯನ್ನು ಪ್ರಯೋಗಕ್ಕೂ ಇಳಿಸಿದೆ.

ಉದಕಮಂಡಲದಲ್ಲಿರುವ ತೋಟಗಾರಿಕಾ ಸಂಶೋಧನಾ ಕೇಂದ್ರ ನಡೆಸಿದ ಪ್ರಾಥಮಿಕ ಅಧ್ಯಯನದಿಂದ ಹೋಮಾ ಫಾರ್ಮ್‌ನಿಂದ ತೋಟದ ಬೆಳೆಗಳಿಗೆ ಬಾಧಿಸಿದ್ದ ರೋಗ ನಿಯಂತ್ರಣಗೊಂಡಿದ್ದು, ಬೆಳೆ ಇಳುವರಿ ಏರಿಕೆಯಾಗಿರುವುದು ದೃಢಪಟ್ಟಿದೆ.

ಹೀಗೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕೃಷಿ ವಲಯದಲ್ಲಿ ನಡೆಯುತ್ತಿರುವ ಹೋಮಾ ಫಾರ್ಮ್, ಅಗ್ನಿಹೋತ್ರ ಪ್ರಕ್ರಿಯೆಗಳ ಪರಿಣಾಮ ಕುರಿತ ವೈಜ್ಞಾನಿಕ ಸಂಶೋಧನೆಗಳ ಚರ್ಚೆಗೆ ಜಿಗಣಿ ಸಮೀಪವಿರುವ ವಿವೇಕಾನಂದ ಅನುಸಂದಾನ ಸಂಸ್ಥಾನದಲ್ಲಿ (ವ್ಯಾಸ) ‘ಯೋಗ, ಗೋವು ಮತ್ತು ಗ್ರಾಮೀಣ ಪುನರ್‌ರಚನೆ’ ಎಂಬ ಅಂತರರಾಷ್ಟ್ರೀಯ ಸಮಾವೇಶವೊಂದು ಸೋಮವಾರ ಆರಂಭವಾಗಿದ್ದು, ಮೂರು ದಿನ ನಡೆಯಲಿದೆ.

ಸಮಾವೇಶದಲ್ಲಿ ಏನೇನಿದೆ ?
ಭಾರತೀಯ ಕೃಷಿಯಲ್ಲಿ ಗೋವಿನ ಮಹತ್ವ ಕುರಿತ ಉಪನ್ಯಾಸ. ಮೂರೂ ದಿನಗಳ ಕಾಲ ‘ಅಗ್ನಿಹೋತ್ರ’ದ ಪ್ರಾತ್ಯಕ್ಷಿಕೆ, ವಿವಿಧ ಯೋಗಾಸನಗಳ ತರಬೇತಿ, ಭಜನೆ, ಗುಂಪು ಚರ್ಚೆ, ಕ್ಷೇತ್ರ ಭೇಟಿ, ಸತ್ಸಂಗ, ಕೃಷಿಯಲ್ಲಿ ಯೋಗ ವೃಕ್ಷಾಯುರ್ವೇದದ ಬಳಕೆ, ಸಾವಯವ ಕೃಷಿ ಮತ್ತು ಆರೋಗ್ಯ, ಗೋವು ಆಧಾರಿತ ಕೃಷಿ ಕುರಿತ ಚರ್ಚೆ  ಹಾಗೂ ಮನರಂಜನಾ ಕಾರ್ಯಕ್ರಮಗಳಿವೆ.

ಗೋವು ಆಧಾರಿತ ಸುಸ್ಥಿರ ಕೃಷಿಯಲ್ಲಿ ಪಂಚಗವ್ಯ ಮತ್ತು ಹೋಮಾ ಫಾರ್ಮ್ ಬಳಕೆ, ಆರ್ಥಿಕಾಭಿವೃದ್ಧಿಗೆ ಗೋವು, ಗೋವು ಮತ್ತು ಸಂಸ್ಕೃತಿ, ಗೋವು ಮತ್ತು ತಂತ್ರಜ್ಞಾನ, ಗೋವು ಮತ್ತು ಸಮುದಾಯ ಆಧಾರಿತ ಉದ್ಯೋಗ.. ಹೀಗೆ ಔದ್ಯೋಗಿಕ ದೃಷ್ಟಿಕೋನದಲ್ಲಿ ಚರ್ಚೆಗಳು ನಡೆಯಲಿವೆ. ದೇಶದ ವಿವಿಧ ಭಾಗಗಳಿಂದ ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಲಿದ್ದು, ಅಗ್ನಿಹೋತ್ರ ಉತ್ಪನ್ನಗಳು, ಅರ್ಕ, ಪಂಚಗವ್ಯ ಸೇರಿದಂತೆ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿದೆ.ಸಾವಯವ ಆಹಾರ ಕೃಷಿ ಹಾಗೂ ಆಯುರ್ವೇದ ಸಂಬಂಧಿ ಪುಸ್ತಕಗಳು,ಸಿಡಿಗಳು ಪ್ರದರ್ಶನದಲ್ಲಿರುತ್ತವೆ.

ಸ್ಥಳ: ವ್ಯಾಸ (ವಿವೇಕಾನಂದ ಅನುಸಂದಾನ ಸಂಸ್ಥಾನ),ಪ್ರಶಾಂತಿ ಕುಟೀರ, ವಿವೇಕಾನಂದ ಮಾರ್ಗ,ಜಿಗಣಿ. ಮಾಹಿತಿಗೆ: 2263 9955.

ಕಳೆ ತೆಗೆಯುವ ಸರಳ ಸಾಧನ

ಬೆಂಗಳೂರು ಕೃಷಿ ವಿವಿ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ರೈತ ಸ್ನೇಹಿ ಕಳೆ ತೆಗೆಯುವ ಉಪಕರಣ ಸಿದ್ಧಪಡಿಸಿದ್ದಾರೆ. ಅಲ್ಪಸ್ವಲ್ಪ ಕಬ್ಬಿಣ ಕೆಲಸದ ಜ್ಞಾನವಿರುವ ಸಣ್ಣ ಹಿಡುವಳಿ ರೈತರೂ ತಯಾರಿಸಿಕೊಳ್ಳಬಹುದು.

ಕಳೆ ತೆಗೆವ ಯಂತ್ರ

ಕೃಷಿಯಲ್ಲಿ ಕಳೆ ತೆಗೆಯುವುದು ಒಂದು ಸಾಹಸದ ಕೆಲಸ. ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಈ ಕೆಲಸ ಮತ್ತಷ್ಟು ಹೈರಾಣ. ಆದರೂ ಹಠಕ್ಕೆ ಬಿದ್ದವರಂತೆ ಕಳೆ ಕಿತ್ತೇ ಕೀಳ್ತೀನಿ ಅಂತ ಕುಡುಗೋಲು ಹಿಡಿದು, ನಡು ಬಗ್ಗಿಸಿ, ಕುಳಿತರೆ ಒಂದು ದಿನಕ್ಕೆ ಅಬ್ಬಬ್ಬಾ ಅಂದ್ರೆ, 8 ರಿಂದ 10 ಗುಂಟೆ ಕಳೆ ತೆಗೆಯಬಹುದು. ಆಳುಗಳಿಗೆ ಕೂಲಿ ಕೊಟ್ಟು ತೆಗೆಸುತ್ತೇನೆಂದರೂ ನೂರಾರು ರೂಪಾಯಿ ಖರ್ಚು ಮಾಡಬೇಕು!

ಇಂಥ ‘ಕಳೆ ಸಮಸ್ಯೆ’ಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿಭಾಗದ ಅಂತಿಮ ಪದವಿ ವಿದ್ಯಾರ್ಥಿಗಳು ಸುಲಭದ ಪರಿಹಾರ ಕಂಡುಹಿಡಿದ್ದಾರೆ. ಪ್ರೊ.ಎ.ಆರ್.ರಾಧಾಕೃಷ್ಣ ಅವರ ಮಾರ್ಗದರ್ಶನದಲ್ಲಿ ಖರ್ಚಿಲ್ಲದೇ ಕಳೆ ತೆಗೆಯುವ ಮಾನವ ಚಾಲಿತ ಉಪಕರಣವನ್ನು ಸಿದ್ಧಪಡಿಸಿದ್ಧಾರೆ. ನಿರುಪಯೋಗಿ ಬೈಸಿಕಲ್‌ನ ಬಿಡಿ ಭಾಗ ಬಳಸಿದ್ದಾರೆ.

ಬೈಸಿಕಲ್ ಹ್ಯಾಂಡಲ್, ಫೋರ್ಕ್, ನಡುವಿನ ಫ್ರೇಮ್ (ಕಬ್ಬಿಣದ ಪೈಪು), ವ್ಹೀಲ್ ಹಬ್, ಹಲ್ಲಿನ ಚಕ್ರ (ಚೈನ್ ವೀಲ್) ಹೀಗೆ ಸೈಕಲ್‌ನ ಬಿಡಿ ಭಾಗಗಳನ್ನು ಬಳಸಿ ಈ ಸಾಧನವನ್ನು ಸಿದ್ಧಪಡಿಸಲಾಗಿದೆ. ಕಳೆ ತೆಗೆಯುವ ಭಾಗಕ್ಕೆ ಬಳಸಿರುವ ಚೂಪಾದ ಪಟ್ಟಿಮಾತ್ರ ಮಾತ್ರ ಹೊಸ ಕಬ್ಬಿಣದ ವಸ್ತು.

ಹಲ್ಲಿನ ಚಕ್ರಗಳನ್ನು ಹಬ್‌ನೊಂದಿಗೆ ನಟ್-ಬೋಲ್ಟ್‌ಗಳಿಂದ ಜೋಡಿಸಲಾಗಿದೆ. ಕೆಳಭಾಗಕ್ಕೆ ಚೂಪು ಅಲುಗಿನ ತುಸು ಉಲ್ಟಾ ‘V’ ಆಕಾರದಲ್ಲಿರುವ ಕಬ್ಬಿಣದ ಪಟ್ಟಿಯಿದೆ. ಚಕ್ರ ಜೋಡಿಸಿರುವ ಹಬ್‌ಗೆ ಫೋರ್ಕ್ ಕೊಂಡಿಯಾಗಿದೆ. ಪೈಪಿನ ಮೇಲ್ಭಾಗಕ್ಕೆ ನಾಲ್ಕು ಅಡಿ ಉದ್ದದ ಪೈಪು. ಮೇಲ್ಭಾಗದಲ್ಲಿ ಹ್ಯಾಂಡಲ್ ಸೇರಿಸಿದ್ದಾರೆ. ಇದೆಲ್ಲ ಸೇರಿ ಕಳೆ ತೆಗೆಯುವ ಯಂತ್ರವಾಗಿದೆ.

‘ಈ ಉಪಕರಣದಿಂದ ದಿನವೊಂದಕ್ಕೆ ಒಬ್ಬ ವ್ಯಕ್ತಿ ಅರ್ಧ ಎಕರೆಯಷ್ಟು ಕಳೆತೆಗೆಯಬಹುದು. ಮಹಿಳೆಯರೂ ಸುಲಭವಾಗಿ ಇದನ್ನು ಬಳಸಬಹುದು’ ಎನ್ನುತ್ತಾರೆ ಉಪಕರಣ ತಯಾರಿಸಿದ ಕೆ.ಮಂಜುನಾಥ್. ರಮ್ಯಾ, ವಿಕ್ರಮ್ ಮತ್ತು ಜಯಂತಿ.

ಬೆಳೆ ಸಾಲಿನ ನಡುವೆ ಕಳೆಗಳಿರುವ ಜಾಗದಲ್ಲಿ ಹ್ಯಾಂಡಲ್ ಹಿಡಿದು ಈ ಉಪಕರಣವನ್ನು ಉರುಳಿಸುತ್ತಾ ಹೊರಟರೆ ಚೂಪಾದ ಅಲುಗು ಕಳೆಗಳನ್ನು ತೆಗೆಯುತ್ತಾ ಹೋಗುತ್ತದೆ.

ಚಕ್ರಗಳಿಗೆ ಹಲ್ಲುಗಳಿರುವುದರಿಂದ ತೇವವಾದ ಮಣ್ಣಿನಲ್ಲೂ ಸಿಕ್ಕಿ ಹಾಕಿಕೊಳ್ಳದೇ ಸರಾಗವಾಗಿ ಸಾಗುತ್ತದೆ. ‘ಟ್ರಾಕ್ಟರ್ ಟೈರ್‌ಗಳಲ್ಲಿರುತ್ತದಲ್ಲಾ, ಅದೇ ತಂತ್ರಜ್ಞಾನವನ್ನು ಇಲ್ಲಿ ಬಳಸಿದ್ದೇವೆ’ ಎಂದು ವಿವರಿಸುತ್ತಾರೆ ಎಂಜಿನಿಯರಿಂಗ್ ವಿಭಾಗದ ಟೆಕ್ನೀಷಿಯನ್ ರಾಮೇಗೌಡ.

ಮುಂಭಾಗದಲ್ಲಿ ಜೋಡಿಸಿರುವ ಬ್ಲೇಡನ್ನು (ಕಬ್ಬಿಣದ ಪಟ್ಟಿ) ಆಗಾಗ್ಗೆ ಬದಲಾಯಿಸಬಹುದು. ಬೆಳೆಗಳು ಹಾಗೂ ಸಾಲುಗಳ ಅಳತೆಗೆ ತಕ್ಕಂತೆ ವ್ಯತ್ಯಾಸ ಮಾಡಿಕೊಳ್ಳುವ ಅವಕಾಶವಿದೆ. ಬ್ಲೇಡ್ ಮೊಂಡಾದರೆ ಸಾಣೆ (ಚೂಪು) ಹಿಡಿಸಬಹುದು.

‘ರೈತರಿಗೆ ಕೈಗೆಟಕುವ ವಸ್ತುಗಳನ್ನು ಬಳಸಿ ಈ ಉಪಕರಣವನ್ನು ಸಿದ್ಧಪಡಿಸಲಾಗಿದೆ. ಹಾಗಾಗಿ ಸ್ವತಃ ರೈತರೇ ಇದನ್ನು ತಯಾರಿಸಿಕೊಳ್ಳಬಹುದು. ಈ ಉಪಕರಣವನ್ನು ಇಂತಿಷ್ಟೇ ಅಳತೆಯ ವಸ್ತುಗಳನ್ನು ಬಳಸಿ ಸಿದ್ಧಪಡಿಸಬೇಕೆಂಬ ನಿಯಮವಿಲ್ಲ. ಬೇಕಾದ ಅಳತೆಗೆ ತಕ್ಕಂತೆ ರೂಪಿಸಿಕೊಳ್ಳಬಹುದು. ಅಷ್ಟು ಸರಳವಾಗಿದೆ ಈ ಉಪಕರಣದ ವಿನ್ಯಾಸ’ ಎನ್ನುತ್ತಾರೆ ಎಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಶಂಕರ್.

ಕಳೆ ತೆಗೆಯುವ ಈ ಉಪಕರಣವನ್ನು ಕೃಷಿ ವಿಶ್ವವಿದ್ಯಾಲಯದ ಪ್ರಯೋಗ ತಾಕುಗಳಲ್ಲಿ ಕೂಲಿ ಕಾರ್ಮಿಕರು ಬಳಸುತ್ತಿದ್ದಾರೆ. ಸುಲಭ ಹಾಗೂ ಶ್ರಮವಿಲ್ಲದೇ ಕಳೆ ತೆಗೆಯುವ ಜೊತೆಗೆ ಸಮಯವೂ ಉಳಿತಾಯವಾಗುತ್ತದೆ’ ಎನ್ನುವುದು ಅವರ ಅಭಿಪ್ರಾಯವಾಗಿದೆ.

‘ನೆಲದಲ್ಲಿ ಗಂಟೆಗಟ್ಟಲೆ ಕುಳಿತು ಸೊಂಟ ಬಗ್ಗಿಸಿ ಕಳೆ ಕೀಳುವ ಶ್ರಮವನ್ನು ತಗ್ಗಿಸುವ ಸಲುವಾಗಿ ಈ ಉಪಕರಣವನ್ನು ಆವಿಷ್ಕರಿಸಲಾಗಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳು.

‘ಕೃಷಿ ಕ್ಷೇತ್ರದಲ್ಲಿ ಕಳೆ ತೆಗೆಯುವ ಯಂತ್ರಗಳು ಸಾಕಷ್ಟಿವೆ. ಅವುಗಳ ತಯಾರಿಕೆಗೆ ಇತರರನ್ನು ಅವಲಂಬಿಸಬೇಕು. ರೈತರಿಗೆ ಸುಲಭವಾಗಿ ಉಪಕರಣ ದೊರೆಯಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ರೈತರು ತಮಗೆ ಬೇಕಾದ ರೀತಿಯಲ್ಲಿ ತಾವೇ ಸುಲಭವಾಗಿ ಸಿದ್ಧಪಡಿಸಿಕೊಳ್ಳಬೇಕು.

ಆ ಉದ್ದೇಶದಿಂದ ಇಂಥ ಸರಳ ಸಾಧನವನ್ನು ವಿದ್ಯಾರ್ಥಿಗಳ ಮೂಲಕ ತಯಾರಿಸಿದ್ದೇವೆ’ ಎನ್ನುವುದು ಕೃಷಿ ವಿವಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಎ.ಆರ್.ರಾಧಾಕೃಷ್ಣ ಅವರ ಅಭಿಪ್ರಾಯ.

ಸೈಕಲ್ ಬಿಡಿ ಭಾಗಗಳನ್ನು ಬಳಸಿಕೊಂಡು ಸಣ್ಣ ಹಿಡುವಳಿದಾರ ರೈತರಿಗಾಗಿಯೇ ತಯಾರಿಸಿರುವ ಈ ಉಪಕರಣದ ನಿರ್ಮಾಣ ವೆಚ್ಚ ಅಂದಾಜು 300- 400 ರೂಪಾಯಿ. ಮಾಹಿತಿಗೆ 94483 66315.

ಫಲ ಸಂಗಮದಲ್ಲಿ ಭರ್ಜರಿ ಫಸಲು

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಇತ್ತೀಚೆಗೆ ನಡೆದ ‘ಹಾರ್ಟಿ ಸಂಗಮ್-2010’ ಮೇಳ ಹಣ್ಣುಬೆಳೆಗಾರರಿಗೆ ಉತ್ತಮ ವೇದಿಕೆ ಕಲ್ಪಿಸಿತು. ಈಶಾನ್ಯ ರಾಜ್ಯಗಳಿಂದ ಆಗಮಿಸಿದ್ದ ಬೆಳೆಗಾರರು ನಿರೀಕ್ಷೆಗೂ ಮೀರಿ ಲಾಭ ಗಳಿಸಿದರು. ಸಾವಯವ ಉತ್ಪನ್ನಗಳಿಗೆ ಎಲ್ಲಿದೆ ಮಾರುಕಟ್ಟೆ? ಎಂದು ಪ್ರಶ್ನಿಸುವವರಿಗೆ ಈ ಮೇಳ ಸ್ಪಷ್ಟ ಉತ್ತರ ನೀಡಿತು.

ಸಾವಯವದಲ್ಲಿ ಬೆಳೆದಿರುವ ಮಣಿಪುರ ಕಿತ್ತಳೆ ಹಣ್ಣು

‘100 ಟನ್ ಕಿತ್ತಳೆ ಮೂರೇ ದಿನಕ್ಕೆ ಖಾಲಿ. ಮತ್ತೆ 80 ಟನ್‌ಗೆ ಆರ್ಡ್‌ರ್ ಮಾಡಿದ್ದೇವೆ. ರೈಲ್‌ನಲ್ಲಿ ಬರ್ತಾ ಇದೆ. ಬೇಡಿಕೆ ನೋಡಿದರೆ, ಇದೂ ಸಾಕಾಗೋದಿಲ್ಲ ಅನ್ನಿಸುತ್ತದೆ..’

– ಲಾಲ್‌ಬಾಗ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ‘ಹಾರ್ಟಿ ಸಂಗಮ್ – 2010’ ಹೆಸರಿನ ಹಣ್ಣಿನ ಮೇಳದಲ್ಲಿ ನಾಗಾಲ್ಯಾಂಡ್‌ನ ತೋಟಗಾರಿಕಾ ಟೆಕ್ನಾಲಜಿ ಮಿಷನ್‌ನ ನಿರ್ದೇಶಕ ಡಾ.ಬೆನ್ಜೋಂಗ್ ಐರ್ ಉಮೇದಿನಿಂದಲೇ ಮೇಳದಲ್ಲಿನ ಕಿತ್ತಳೆ ವಹಿವಾಟನ್ನು ಬಿಚ್ಚಿಟ್ಟರು. ಅಂದ ಹಾಗೆ, ಐದು ದಿನಗಳ ಈ ಮೇಳದಲ್ಲಿ ಬರೋಬ್ಬರಿ 180 ಟನ್ನಿನಷ್ಟು ಸಾವಯವ ಕಿತ್ತಳೆ ವ್ಯಾಪಾರವಾಗಿತ್ತು. ಒಂದು ಕೆ.ಜಿ. ಕಿತ್ತಳೆ ಬೆಲೆ ರೂ. 50!

ಕಿತ್ತಳೆ ಅಷ್ಟೇ ಅಲ್ಲ, ಈಶಾನ್ಯ ರಾಜ್ಯಗಳ ವಿಶೇಷ ಹಣ್ಣುಗಳಾದ ಕಿವಿ, ಪೈನಾಪಲ್ (ಅನಾನಸ್), ಸಂಬಾರ ಪದಾರ್ಥಗಳಾದ ಶುಂಠಿ, ಅರಿಶಿಣ, ನಾಗಾ ಮಿರ್ಚಿ ಕೂಡ ದಾಖಲೆ ಪ್ರಮಾಣದಲ್ಲಿ ಬಿಕರಿಯಾಗಿವೆ. ಮೂರನೇ ದಿನದ ಹೊತ್ತಿಗೆ ಹಣ್ಣುಗಳೆಲ್ಲ ಖಾಲಿ, ಕೆಲವು ಮಳಿಗೆಗಳು ಖಾಲಿ ಖಾಲಿ.

ಸಾವಯವ ಅನಾನಸ್ಗೆ ಭಾರಿ ಬೇಡಿಕೆ

ಸಾವಯವ ಉತ್ಪನ್ನಗಳಿಗೆ ಎಲ್ಲಿದೆ ಮಾರುಕಟ್ಟೆ? ಎಂದು ಪ್ರಶ್ನಿಸುವವರಿಗೆ ಈ ಮೇಳ ಸ್ಪಷ್ಟ ಉತ್ತರ ನೀಡಿತು. ಬೆಳೆಗಾರರ ಪ್ರಕಾರ ಎರಡನೇ ದಿನದ ಹೊತ್ತಿಗೆ  45 ಟನ್ ಪೈನಾಪಲ್ ಖಾಲಿ. ಅಂದು ಮಧ್ಯಾಹ್ನ ಮೇಳಕ್ಕೆ ಬಂದವರಿಗೆ ಕಿವಿ ಹಣ್ಣು ನೋಡಲೂ ಸಿಗಲಿಲ್ಲ. ಕೆ.ಜಿಗೆ ರೂ. 240ಇದ್ದರೂ 500 ಕೆ.ಜಿ ಹಣ್ಣು ಖರ್ಚಾಯಿತು. ಇದರ ಜೊತೆಗೆ 10 ಟನ್ ಶುಂಠಿ, 10 ಟನ್ ಅರಿಶಿಣ, 100 ಕೆ ಜಿ ನಾಗಾ ಚಿಲ್ಲಿ (ಮೆಣಸಿನಕಾಯಿ)- ಎಲ್ಲ ಖರ್ಚಾಯಿತು. ಈ ಟ್ರೆಂಡ್ ನೋಡಿದ ಬೆನ್ಜೋಂಗ್, ‘ಸಾವಯವ ಉತ್ಪನ್ನಗಳಿಗೆ ಬೆಂಗಳೂರಿನಲ್ಲಿ ಉತ್ತಮ ಮಾರ್ಕೆಟ್ ಇದೆ, ಅಲ್ವಾ’ ಅಂತ ಪ್ರಶ್ನೆ ಮಾಡಿದರು.

ನಾಗಾ ರೈತರು ಫುಲ್ ಖುಷ್: ಮೇಳದ ವ್ಯಾಪಾರದಿಂದ ನಾಗಾಲ್ಯಾಂಡ್ ರೈತರಂತೂ ಫುಲ್ ಖುಷಿಯಾದರು. ಅಲ್ಲಿನ ಮೊಕ್ಕೋಚುಂಗ್ ಜಿಲ್ಲೆಯ ಯಾಚಾಂಗ್ ಗ್ರಾಮದ ಯಾಂಗೈ ಎಂಬ ರೈತ, ಕಿತ್ತಳೆ ಜ್ಯೂಸ್‌ನಿಂದ ಮೂರು ದಿನಗಳೊಳಗೆ ರೂ. 50 ಸಾವಿರ ವ್ಯಾಪಾರ ಮಾಡಿದ್ರು. ‘ಒಂದು ಲೋಟಕ್ಕೆ ರೂ. 10  ಬಿಡುವಿಲ್ಲದ ವ್ಯಾಪಾರ. ನಾವಂತೂ ನಿರೀಕ್ಷಿಸಿರಲಿಲ್ಲ’ ಎನ್ನುವ ಯಾಂಗೈಗೆ ಮುಖದಲ್ಲಿ ಗೆಲುವಿನ ನಗೆ. ಅಂದ ಹಾಗೆ, ಮೇಳದ ಐದು ದಿನಗಳಲ್ಲಿ ಬರೀ ಕಿತ್ತಳೆ ಹಣ್ಣಿನಿಂದಲೇ ರೂ.2.5 ಲಕ್ಷದಷ್ಟು ವ್ಯಾಪಾರವಾಗಿದೆ. ಅಲ್ಲಿಗೆ ಸಾವಯವ ಹಣ್ಣಿಗೆ ಇನ್ನೆಷ್ಟು ಬೇಡಿಕೆ ಇರಬೇಕೆಂಬುದನ್ನು ಸ್ಥಳೀಯ ಬೆಳೆಗಾರರು ಊಹಿಸಬಹುದು !

ಕರ್ನಾಟಕದ ಕೊಡಗಿನಲ್ಲಿ ಕಿತ್ತಳೆ ಬೆಳೆಯುವ ಹಾಗೆ, ನಾಗಾಲ್ಯಾಂಡ್‌ನಾದ್ಯಂತ 12000 ಹೆಕ್ಟೇರ್‌ನಲ್ಲಿ ಕಿತ್ತಳೆ ಬೆಳೆಯುತ್ತಾರೆ. ಪ್ರತಿ ರೈತರು ಕನಿಷ್ಠ 2 ರಿಂದ 3 ಎಕರೆ ಕಿತ್ತಳೆ ಬೆಳೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಸಾವಯವ ಕೃಷಿಗೆ ಉತ್ತೇಜನ ನೀಡಲು ಆರಂಭಿಸಿದ ಮೇಲೆ, ಸಾವಯವದಲ್ಲಿ ಕಿತ್ತಳೆ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಬೆಳೆಗಾರ ಯಾಂಗೈ ಕೂಡ ಮೂರು ಹೆಕ್ಟೇರ್‌ನಲ್ಲಿ ಸಾವಯವದಲ್ಲಿ ಕಿತ್ತಳೆ ಬೆಳೆಯುತ್ತಾರೆ. ಎಕರೆಗೆ ಪ್ರತಿ ವರ್ಷ 15 ಸಾವಿರ ರೂಪಾಯಿ ಖರ್ಚು. ಹಣ್ಣು ಬಿಡಲು ಆರಂಭವಾದ ಮೇಲೆ ಪ್ರತಿವರ್ಷ ಎಕರೆಗೆ ರೂ. 2 ಲಕ್ಷ   ಆದಾಯ’ ಪಕ್ಕಾ ಲೆಕ್ಕಾಚಾರ ಕೊಡ್ತಾರೆ ಯಾಂಗೈ. ಇವರಂಥ 46 ಹಣ್ಣಿನ ಬೆಳೆಗಾರರು ನಾಗಾಲ್ಯಾಂಡ್‌ನ ವಿವಿಧ ಪ್ರದೇಶಗಳಿಂದ ಮೇಳಕ್ಕೆ ಬಂದಿದ್ದರು.

ಸಾವಯವ ತರಕಾರಿಗೂ ಡಿಮಾಂಡ್: ಮೇಳದಲ್ಲಿ ಹಣ್ಣಿನ ಜೊತೆಗೆ ಸಾವಯವ ತರಕಾರಿಗೂ ಹೆಚ್ಚು ಬೇಡಿಕಿಯಿತ್ತು. ಬೆಂಗಳೂರಿನ ಇಕೋವಾ ಸ್ವಯಂ ಸೇವಾ ಸಂಸ್ಥೆ 70ಟನ್‌ಗಳಷ್ಟು ತರಕಾರಿಯನ್ನು ಮಾರಾಟ ಮಾಡಿತು. ಹೀರೆ, ಹಾಗಲ, ಎಲೆ ಕೋಸಿಗೆ ಹೆಚ್ಚು ಬೇಡಿಕೆ. ಸೌತೆಕಾಯಿ, ಬೀನ್ಸ್, ಟೊಮೆಟೊ ಸೇರಿದಂತೆ ಹದಿಮೂರು ವಿಧದ ಸಾವಯವ ತರಕಾರಿಗಳು ಮಾರಾಟವಾದವು.

ಇಕೋವಾ - ಸಾವಯವ ತರಕಾರಿ

‘ಐದು ದಿನಗಳಲ್ಲಿ ಅಂದಾಜು 2000 ಗ್ರಾಹಕರು ತರಕಾರಿ ಖರೀದಿಸಿದ್ದಾರೆ. ಒಂದು ಲಕ್ಷ ರೂಪಾಯಿಯಷ್ಟು ವ್ಯಾಪಾರವಾಗಿರಬಹುದು’ ಎಂದು ಅಂದಾಜಿಸುತ್ತಾರೆ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರಾಮಚಂದ್ರ. ಅಂದ ಹಾಗೆ ಈ ಎಲ್ಲ ತರಕಾರಿಗಳನ್ನು ಬೆಳೆದವರು ದೇವನಹಳ್ಳಿ, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರದ 170 ರೈತರು. ಇವರ ಪ್ರತಿನಿಧಿಯಾಗಿ ಸಂಸ್ಥೆ ಮೇಳಗಳಲ್ಲಿ ಮಾರುಕಟ್ಟೆ ಒದಗಿಸುವ ಕೆಲಸ ಮಾಡುತ್ತಿದೆ. ‘ಇದು ರೈತರ ಬೆಳೆ. ಸಂಸ್ಥೆ ಕೇವಲ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡ್ತಿದೆ’ ಎನ್ನುವ ಕ್ಷೇತ್ರಾಧಿಕಾರಿ ಮಹದೇವ್, ಈ ಎಲ್ಲ ರೈತರಿಗೆ ಸಾವಯವ ದೃಢೀಕರಣ ಪ್ರಮಾಣ ಪತ್ರ ಕೊಡಿಸಲು ಸಂಸ್ಥೆ ತರಬೇತಿ ನೀಡುತ್ತಿದೆ. ಒಂದೂವರೆ ವರ್ಷದ ನಂತರ ‘ದೃಢೀಕೃತ ತರಕಾರಿಗಳೊಂದಿಗೆ’ ರೈತರೇ ಅಧಿಕೃತವಾಗಿ ಗ್ರಾಹಕರನ್ನು ತಲುಪುತ್ತಾರೆಂದು ಮಹದೇವ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸಾವಯವ ತರಕಾರಿಗಳಿಗೆ ಮಾಮೂಲಿ ತರಕಾರಿಗಳಿಗಿಂತ ಶೇ 15ರಷ್ಟು ಬೆಲೆ ಹೆಚ್ಚಿದೆ. ‘ಆದರೂ ಈಗಿನ ತರಕಾರಿ ಬೆಲೆಗೆ ಹೋಲಿಸಿದರೆ ಇವುಗಳ ಬೆಲೆ ಸ್ಪರ್ಧಾತ್ಮಕವಾಗಿಯೇ ಇದೆ’ ಎನ್ನುತ್ತಾ ಬೆಲೆ ಪಟ್ಟಿಯತ್ತ ಕೈ ತೋರುತ್ತಾರೆ ರಾಮಚಂದ್ರ. ‘ಬೆಲೆ ಯಾರೂ ನೋಡ್ತಿಲ್ಲ ಸರ್, ತರಕಾರಿ ವಿಷರಹಿತವಾಗಿದೆಯಾ ಎಂದು ಕೇಳ್ತಾರೆ. ಅದಕ್ಕಾಗಿಯೇ ಸಂಸ್ಥೆ ಪ್ರತಿ ತರಕಾರಿ ಮೇಲೂ ‘ಇದು ಸಾವಯದಿಂದ ಬೆಳೆಯುತ್ತಿರುವ ತರಕಾರಿ’ ಎಂಬ ಲೇಬಲ್ ಅಂಟಿಸಿದೆ’.

ಜ್ಯೂಸ್, ಜಾಮ್‌ಗೂ ಬೇಡಿಕೆ: ಮೇಳದಲ್ಲಿ ತರಕಾರಿ, ಹಣ್ಣುಗಳಷ್ಟೇ ಅಲ್ಲದೇ ಮೌಲ್ಯವರ್ಧಿತ ಉತ್ಪನ್ನಗಳಾದ ಜ್ಯೂಸ್, ಜಾಮ್, ಜೆಲ್ಲಿ, ತರಕಾರಿ ಉಪ್ಪಿನಕಾಯಿಗಳೂ ದಾಖಲೆ ಪ್ರಮಾಣದಲ್ಲಿ ಖರ್ಚಾಗಿದೆ. ಹಿಮಾಚಲ ಪ್ರದೇಶದ ಫ್ಯಾಷನ್ ಫ್ರೂಟ್ ಜ್ಯೂಸ್, ಮಿಕ್ಸೆಡ್ ಫ್ರೂಟ್ ಜಾಮ್ ಕೊಡಗಿನ ಜೇನು, ತಮಿಳುನಾಡು, ಕೇರಳದ ಗೋಡಂಬಿ, ದ್ರಾಕ್ಷಿ, ನೆಲ್ಲಿ ಜ್ಯೂಸ್, ಶಿರಸಿಯ ಕೋಕಂ, ಕೋಕಂ ಸಿಪ್ಪೆ, ಬಾಗಲಕೋಟೆಯ ಒಣ ದ್ರಾಕ್ಷಿಗೆ ಗ್ರಾಹಕರು ಮನಸೋತಿದ್ದಾರೆ.

‘ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ವ್ಯಾಪಾರ ಕಡಿಮೆ. ಹಾಗಾಗಿ ಕಡಿಮೆ ವಸ್ತುಗಳನ್ನು ತಂದಿದ್ದೆವು. ಈಗ ಮೂರೇ ದಿನಕ್ಕೆ ಎಲ್ಲ ಖಾಲಿಯಾಗಿದೆ. ಇನ್ನೆರಡು ದಿನಕ್ಕೆ ಹೊಸದಾಗಿ ಜ್ಯೂಸ್, ಜೇನು ತರಿಸಿದ್ದೇವೆ’ –  ಶಿರಸಿಯ ಕದಂಬ ಮಾರ್ಕೆಟಿಂಗ್ ಸಂಸ್ಥೆಯ ಗಣಪತಿ ಭಟ್ ಗ್ರಾಹಕ ಬೇಡಿಕೆ ಪ್ರಮಾಣ ವಿವರಿಸಿದರು. ಭಟ್ಟರ ಮಳಿಗೆಯಲ್ಲಿ 100ಕ್ಕೂ ಹೆಚ್ಚು ಕೋಕಂ ಜ್ಯೂಸ್, ಸಿಪ್ಪೆ, ಜೇನು, ಜಾಮ್ ಮಾರಾಟವಾಗಿದೆ.  ‘ಗ್ರಾಹಕರ ಸಂಖ್ಯೆ ಕಡಿಮೆಯಿದ್ದರೂ ವ್ಯಾಪಾರ ಜೋರಾಗಿರುತ್ತದೆ’ ಎನ್ನುವುದು ಅವರ ಅಭಿಪ್ರಾಯ.

ಒಟ್ಟಾರೆ ಮೇಳದಲ್ಲಿ ಹಣ್ಣಿನ ವ್ಯಾಪಾರ ಜೋರು. ಈಶಾನ್ಯ ರಾಜ್ಯದ ಹಣ್ಣುಗಳನ್ನು ನೋಡಬೇಕು, ಮಕ್ಕಳಿಗೆ ತೋರಿಸಬೇಕು, ರುಚಿ ಸವಿಯ ಬೇಕೆಂದವರಿಗೆ ‘ನಿರಾಸೆ’. ಸಕಾಲದಲ್ಲಿ ಹಣ್ಣಿನ ಮೇಳ ನಡೆಸಿದ್ದರೆ ಪ್ರದರ್ಶನ ಇನ್ನೂ ಯಶಸ್ವಿಯಾಗುತ್ತಿತ್ತು ಎನ್ನುವುದು ಹಣ್ಣು ಬೆಳೆಗಾರರ ಅಭಿಪ್ರಾಯ. ಪ್ರಚಾರಕ್ಕೆ ತಕ್ಕ ಹಣ್ಣುಗಳು ಮೇಳದಲ್ಲಿರಬೇಕು ಎನ್ನುವುದು ಗ್ರಾಹಕರ ಬೇಡಿಕೆ.

ಪ್ರಶ್ನೆಗಳಾಗಿ ಉಳಿದಿದ್ದು
ಸಾವಯವ ಹಣ್ಣು, ತರಕಾರಿಗೆ ಬೇಡಿಕೆ ಇದೆ ಎಂಬುದನ್ನು ‘ಹಾರ್ಟಿ ಸಂಗಮ್ – 2010’ ಹಣ್ಣುಗಳ ಮೇಳ ಸಾಬೀತು ಪಡಿಸಿದೆ. ಇಷ್ಟೆಲ್ಲ ವಿಪುಲ ಅವಕಾಶಗಳು ನಮ್ಮ ರಾಜ್ಯದಲ್ಲಿರಬೇಕಾದರೆ, ನಮ್ಮ ರೈತರಿಗೇಕೆ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಲು ಕಠಿಣವಾಗುತ್ತಿದೆ ?  ಈ ವಿಚಾರದಲ್ಲಿ ಸರ್ಕಾರದ ರಾಷ್ಟ್ರೀಯ ತೋಟಗಾರಿಕಾ ಮಿಷನ್, ರಾಜ್ಯ ತೋಟಗಾರಿಕೆ ಇಲಾಖೆ, ಸಾವಯವ ಕೃಷಿ ಮಿಷನ್.. ಇತ್ಯಾದಿ ಇಲಾಖೆಗಳು(ವಿಭಾಗಗಳು) ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲವೇ ? ಅಥವಾ ಬೆಳೆಗಾರರನ್ನು ಸಂಘಟಿಸುವಲ್ಲಿ ವಿಫಲವಾಗಿರಬಹುದೇ ? – ಹಾರ್ಟಿ ಸಂಗಮ್ – ಹಣ್ಣಿನ ಮೇಳದ ವಹಿವಾಟು ಕೇಳಿದ ಮೇಲೆ ಇಂಥ ಪ್ರಶ್ನೆಗಳು ಸಾಲು ಸಾಲಾಗಿ ಉದ್ಭವಿಸುತ್ತಿವೆ.