ನಮ್ಮ ತೆಂಗು.. ನಮ್ಮ ಆರೋಗ್ಯ


ತೆಂಗು ಬೆಳೆಗಾರರೇ ಮತ್ತು ಬಳಕೆದಾರರೆ,ತೆಂಗಿನ ಎಣ್ಣೆಯು ಜಗತ್ತಿನ ಶ್ರೇಷ್ಠ ಎಣ್ಣೆ ಎಂಬುದು ಸಾಬೀತಾಗಿದೆ. ತಾಯಿಯ ಎದೆ ಹಾಲಿಗೆ ಸಮಾನವಾದ ಪೋಷಕಾಂಶಗಳಿವೆ. ತೆಂಗಿನೆಣ್ಣೆಯು ದೇಹದಲ್ಲಿ ರೋಗತರುವ ಬ್ಯಾಕ್ಟೀರಿಯಾ ಹಾಗು ವೈರಸ್‌ಗಳ ವಿರುದ್ದ ಕೆಲಸ ಮಾಡುತ್ತದೆ. ಇದರಿಂದ ಮಾಮೂಲು ಶೀತ, ನೆಗಡಿ, ಜ್ವರ, ಹೆಪಟೈಟಿಸ್, ಅಮೀಬಿಯಾಸಿಸ್, ಹರ್ಷಿಸ್ ಮತ್ತು ಎಚ್‌ಐವಿ ಮುಂತಾದ ರೋಗಗಳ ವಿರುದ್ದ ನಿರೋಧಕ ಶಕ್ತಿಯನ್ನು ಕೊಡುತ್ತದೆ. ಸಕ್ಕರೆ ಕಾಯಿಲೆ, ಹೃದಯ ರೋಗ, ರಕ್ತದೊತ್ತಡ, ಹೆಚ್ಚು ತೂಕ, ಬೊಜ್ಜುದೇಹ ಇವೆಲ್ಲ ರೋಗಿಗಳು ತಿನ್ನಬಹುದಾದ ಏಕೈಕ ಎಣ್ಣೆ ತೆಂಗಿನೆಣ್ಣೆ. ತೆಂಗಿನೆಣ್ಣೆಯಲ್ಲಿರುವ ಲಾರಿಕ್ ಆಸಿಡ್ ಎಂಬುದು ತಾಯಿಯ ಎದೆಹಾಲನ್ನು ಬಿಟ್ಟರೆ ಇಷ್ಟು ಪ್ರಮಾಣದಲ್ಲಿ (ಶೇ.೫೦) ಸಿಗುವುದು ತೆಂಗಿನೆಣ್ಣೆಯಲ್ಲಿ ಮಾತ್ರ. ಜಗತ್ತಿನಲ್ಲಿಯೇ ತೆಂಗಿನ ಎಣ್ಣೆಯನ್ನು ಹೇರಳವಾಗಿ ಬಳಸುವ ಶ್ರೀಲಂಕಾದಲ್ಲಿ ಹೃದಯಾಘಾತದ ಪ್ರಮಾಣ ಬಹಳ ಕಡಿಮೆ ಇದೆ.

  ಆದರೆ, ತೆಂಗಿನೆಣ್ಣೆಯಲ್ಲಿ ಕೊಲೆಸ್ಟರಾಲ್ ಇದೆ (ಸ್ಯಾಚುರೇಟೆಡ್ ಫ್ಯಾಟ್) ಎಂದು ಹೇಳಿ ತೆಂಗಿನ ಎಣ್ಣೆಯನ್ನು ಬಳಸಲು ಜನರು ಭಯಪಡುವಂತಹ ಸನ್ನಿವೇಶ ಬಂದೊದಗಿದೆ. ತೆಂಗಿನೆಣ್ಣೆ ತಿಂದರೆ ಹೃದಯಾಘಾತವಾಗುತ್ತೆ ಎಂದು ಜನರು ದಿಗಿಲು ಬೀಳುವಂತೆ ಮಾಡಿದ್ದಾರೆ. ಆದರೆ ಸತ್ಯ ಏನೆಂದರೆ “ತೆಂಗಿನೆಣ್ಣೆ ತಿನ್ನುವುದರಿಂದ ಹೃದಯ ಸಂಬಂಧಿಕಾಯಿಲೆಗಳು ದೂರವಾಗುತ್ತವೆ” ಎಂಬುದನ್ನು ವೈಜ್ಞಾನಿಕವಾಗಿ ಒಪ್ಪಿಕೊಳ್ಳಲಾಗಿದೆ. ತೆಂಗಿನ ಮೇಲೆ ಅಪವಾದಮಾಡಲು ಕಾರಣ, ಸೋಯಾಬೀನ್ ಎಣ್ಣೆಯನ್ನು ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಮಾರಾಟ ಮಾಡಲು ಪಾಶ್ಚಿಮಾತ್ಯ ರಾಷ್ಟ್ರಗಳು ಪಿತೂರಿ ನಡೆಸುತ್ತಿವೆ. ಇಲ್ಲಿನ ಎಣ್ಣೆಯನ್ನು ಬಳಸದಂತೆ ಮಾಡಿ ತಮ್ಮ ಎಣ್ಣೆಗಳನ್ನು ಮಾರಿಕೊಳ್ಳುತ್ತಿದ್ದಾರೆ.

 ತೆಂಗಿನೆಣ್ಣೆಯನ್ನು ಕಾಯಿಯ ರೂಪದಲ್ಲಿ ತುಮಕೂರು ಸೀಮೆ ಜನ ಹೇರಳವಾಗಿ ಬಳಸುತ್ತಿದ್ದೇವೆ. ಕರಾವಳಿಯ ಜನರಂತೂ ಕೊಬ್ಬರಿಎಣ್ಣೆ ಇಲ್ಲದೆ ಏನನ್ನೂ ಮಾಡುವುದಿಲ್ಲ. ಸಾವಿರಾರು ವರ್ಷಗಳಿಂದ ನಮ್ಮ ಜನ ತೆಂಗನ್ನು ತಿನ್ನುತ್ತಾ ಬದುಕಿದ್ದಾರೆ. ತೆಂಗು ನಮ್ಮ ಜನರ ಆಹಾರ ಸಂಸ್ಕೃತಿಯ ಭಾಗವಾಗಿದೆ. ಆಯುರ್ವೇದವೂ ತೆಂಗಿನೆಣ್ಣೆಯನ್ನು ಸಾಕಷ್ಟುಕಾಯಿಲೆಗಳಿಗೆ ಔಷಧಿಯಾಗಿ ಬಳಸಲು ಹೇಳುತ್ತದೆ.

 ಆದರೆ ಇದರ ಬಗ್ಗೆ ಮಾತನಾಡಬೇಕಾದ ಜವಾಬ್ದಾರಿಯಿರುವ ಬಹುಪಾಲು ವೈದ್ಯರು, ವಿಜ್ಞಾನಿಗಳು, ಇಲಾಖೆಗಳು, ಮಂಡಳಿಗಳು ಬಾಯಿ ಮುಚ್ಚಿ ಕುಳಿತಿದ್ದಾರೆ. ಇದೇ ಕಾರಣದಿಂದ ತೆಂಗಿನ ಉತ್ಪನ್ನಗಳ ಬೆಲೆಯೂ ಕುಸಿದಿದೆ. ಸ್ಥಳೀಯ ಬಳಕೆಯೂ ಕಡಿಮೆಯಾಗಿದೆ. ತೆಂಗು ಬಳಕೆದಾರರೇ ಎದ್ದೇಳಿ, ತೆಂಗಿನ ಶ್ರೇಷ್ಠತೆಯನ್ನು ಜಗತ್ತಿಗೆ ಸಾರೋಣ.

 ಸೆಪ್ಟಂಬರ್ ೨ ವಿಶ್ವ ತೆಂಗು ದಿನ. ಅಂದು ನಾವೆಲ್ಲರೂ ತೆಂಗು ಪ್ರಸಿದ್ದ ಚಿಕ್ಕನಾಯಕನಹಳ್ಳಿಯಿಂದ ತಿಪಟೂರಿನಿಂದ ಮತ್ತು ತುರುವೆಕೆರೆಯಿಂದ ತುಮಕೂರಿನವರೆಗೂ ಸೈಕಲ್ ತುಳಿಯುತ್ತ ಜಾಥಾ ಹೋಗಲು ತೀರ್ಮಾನಿಸಿದ್ದೇವೆ. ಆ ಮೂಲಕ ತೆಂಗು ಜಗತ್ತಿನ ಶ್ರೇಷ್ಠ ಎಣ್ಣೆಯೆಂದು ಎಲ್ಲರಿಗೂ ಹೇಳೋಣ. ತೆಂಗಿನ ಶ್ರೇಷ್ಠತೆಯನ್ನು ಸಾರುವ ಸೈಕಲ್ ಜಾಥಾದಲ್ಲಿ ನೀವು ಭಾಗವಹಿಸಿರಿ. ಭಾಗವಹಿಸುವ ಆಸಕ್ತರು ಹೆಚ್ಚಿನ ಮಾಹಿತಿಗೆ ಕೆಳಗಿನ ದೂರವಾಣಿಗಳಿಗೆ ಸಂಪರ್ಕಿಸಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ. ನೆನಪಿರಲಿ, ನಿಮ್ಮ ಭಾಗವಹಿಸುವಿಕೆಯು ಜಗತ್ತಿಗೆ ಮುಖ್ಯ ಸಂದೇಶವೊಂದನ್ನು ಕೂಗಿ ಹೇಳಲಿದೆ. 

  ಅಲ್ಲದೆ ಇದೇ ದಿನ ಸಂಜೆ ನಾಲ್ಕುಗಂಟೆ ತೆಂಗು ಬೆಳೆಗಾರರೆಲ್ಲ ತುಮಕೂರಿನಲ್ಲಿ ಒಂದೆಡೆ ಸೇರಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಮೂಲಕ ತೆಂಗು ಜಗತ್ತಿನ ಶ್ರೇಷ್ಠ ಎಣ್ಣೆ ಎಂದು ಹೇಳಲು ರೈತರೆಲ್ಲಾ ಸೇರುತ್ತಿದ್ದಾರೆ. ತೆಂಗು ತಜ್ಞರು ಆರೋಗ್ಯದ ಬಗ್ಗೆ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆಂಗು ಬೆಳೆಗಾರರ ಏಕತೆಯನ್ನು ಪ್ರದರ್ಶಿಸೋಣ. ನೀವು ಬನ್ನಿ. 

ಜಾಥಾದ ಸಂಚಾಲಕರು: ಅಣೇಕಟ್ಟೆ ವಿಶ್ವನಾಥ್ ೮೦೯೫೨೨೨೭೨೮, ರಘುರಾಂ ಎಸ್. ೯೯೬೪೨೦೦೮೪೦ ಮತ್ತು ವಿನೋದ್ ೯೪೪೮೩೫೭೫೩೬

ಹೃದಯದ ಆರೋಗ್ಯಕ್ಕೆ ತೆಂಗು ಬಳಸಿ

 

  

Published by

ಗಾಣಧಾಳು ಶ್ರೀಕಂಠ

ಹುಟ್ಟೂರು ಗಾಣಧಾಳು. ಓದಿದ್ದು ತಿಪಟೂರು. ಕೆಲಸ ಮಾಡ್ತಿರೋದು ಬೆಂಗಳೂರು. ವೃತ್ತಿಯಲ್ಲಿ ಪತ್ರರ್ತ, ಆಸಕ್ತಿ ಕೃಷಿ-ಗ್ರಾಮೀಣಾಬಿವೃದ್ದಿ ಮತ್ತು ಪರಿಸರ. ಫೋಟೋಗ್ರಫಿ, ಪುಟ ವಿನ್ಯಾಸ, ಪ್ರವಾಸ ಹವ್ಯಾಸ. ರಮಾ ಬಾಳಸಂಗಾತಿ. ಆಕೆಯೂ ಹವ್ಯಾಸಿ ಬರಹಗಾರ್ತಿ. ಸ್ಪೈಸ್ ಇಂಡಿಯಾ ಕನ್ನಡ ಮಾಸ ಪತ್ರಿಕೆಯಲ್ಲಿ ಆರು ವರ್ಷ ಸಹಾಯಕ ಸಂಪಾದಕಿ (ಎಡಿಟೋರಿಯಲ್ ಅಸಿಸ್ಟೆಂಟ್) ಕೆಲಸ ಮಾಡಿದ್ದಾರೆ. ಸದ್ಯ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಗೌರವ ಉದ್ಘೋಷಕಿ, ಮಗಳು ನದಿ ನನ್ನ ಬದುಕು, ಮಗ ಅಗರ್ತ, ನನ್ನ ಭವಿಷ್ಯ. ನಿವೃತ್ತ ಶಿಕ್ಷಕ ತಂದೆ ಗಾಣಧಾಳು ರಾಮಣ್ಣ ಅವರೊಂದಿಗೆ ವರ್ಗವಾದ ಕಡೆ ವಾಸ್ತವ್ಯ. ಸದ್ಯ ಚಿತ್ರದುರ್ಗದಲ್ಲಿ ವಾಸ. ಸಮಾಜಶಾಸ್ತ್ರ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ. ಪ್ರಜಾಪ್ರಗತಿ, ಉದಯವಾಣಿ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರನಾಗಿ ಸೇವೆ. ೧೯೯೬ರಿಂದ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ದಾಖಲಾತಿಗಾರನಾಗಿ ವೃತ್ತಿ ಆರಂಭ. ಕ್ರಮೇಣ, ಅದೇ ಸಂಸ್ಥೆಯ ಪ್ರಕಾಶನದ ಸಿರಿಸಮೃದ್ಧಿ ಕೃಷಿ ಮಾಸಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇವೆ ಮುಂದುವರಿಕೆ. ೨೦೦೨ರಿಂದ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಆವೃತ್ತಿಯಲ್ಲಿ ಉಪ ಸಂಪಾದಕನಾಗಿ ಸೇವೆ ಆರಂಭ. ೨೦೦೪ರಲ್ಲಿ ಇದೇ ಪತ್ರಿಕೆಯ ಕೃಷಿ ವಿಜಯ ಪುರವಣಿಯ ಮುಖ್ಯಸ್ಥನಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ೨೦೦೬ರಿಂದ ಪ್ರಜಾವಾಣಿ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ. ಪ್ರಕಟಿತ ಕೃತಿಗಳು : ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಿ ಬೀಜಗಳ ಪರಂಪರೆ ಕುರಿತ ಸರಣಿಯ ಅಕ್ಷರ ರೂಪದ ಕೃತಿ ‘ಬೀಜಸಂಪದ’ . ಸಾವಯವ ಕೃಷಿಕರ ಯಶೋಗಾಥೆಯ ಕೃತಿ ‘ಸಾವಯವ ಚಿತ್ತಾರ’, ‘ವೆಲ್ವೆಟ್ ಬೀನ್ಸ್ -ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ’, ‘ಸ್ಲೋಫುಡ್- ಸುಭೋಜನಾ ಸಾವಧಾನ’, ‘ದೇಸಿ ಕೃಷಿ ಉಪಕರಣಗಳು’, ‘ನೆಲಮೂಲ ಕೃಷಿಜ್ಞಾನ- ಮಲೆನಾಡ ದೇಸಿ ಕೃಷಿ ಪದ್ಧತಿಗಳು’, ‘ ಹಸಿರು ಹಾದಿ’, ‘ಅಜೋಲಾ-ಮೇವಿಗೂ ಸೈ ಗೊಬ್ಬರಕ್ಕೂ ಜೈ’, ‘ಸುಸ್ಥಿರ ತೋಟ ಮಾಡೋಣ ಬನ್ನಿ’ ಹಾಗೂ ‘ಹೊನ್ನಾರು - ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆ’ ಕುರಿತ ಕೃತಿಗಳು ಪ್ರಕಟಗೊಂಡಿವೆ. ಪ್ರಶಸ್ತಿ ಪುರಸ್ಕಾರ ೨೦೦೬ರಲ್ಲಿ ಸಿಡಿಎಲ್ ಸಂಸ್ಥೆಯಿಂದ ‘ಕೆರೆ ಆಪೋಷಣ ಪುರಾಣ’ ಲೇಖನಕ್ಕೆ ರಾಜ್ಯಮಟ್ಟದ ‘ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’. ಇದೇ ವರ್ಷ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದಿಂದ ‘ವೆಲ್ವೆಟ್ ಬೀನ್ಸ್’ ಲೇಖನಕ್ಕಾಗಿ ‘ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ’. ‘ದೇಸಿ ಭತ್ತ ಭ್ರಹ್ಮ ನಟವರಸಾರಂಗಿ’ ಲೇಖನಕ್ಕಾಗಿ ೨೦೦೯ರಲ್ಲಿ ಮುರುಘಾಶ್ರೀ - ರಾಜ್ಯಮಟ್ಟದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ೨೦೧೦-೧೧ನೇ ಸಾಲಿನ ‘ಉತ್ತಮ ವಿಜ್ಞಾನ ಲೇಖಕ ಪ್ರಶಸ್ತಿಗೆ ವೆಲ್ವೆಟ್ ಬೀನ್ಸ್ ಮತ್ತು ಸಾವಯವ ಚಿತ್ತಾರ ಪುಸ್ತಕಗಳ ಆಯ್ಕೆ. ೨೦೧೧ರಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ಸಂಸ್ಥೆಯಿಂದ ‘ಜಲಮೂಲಗಳ ಅಧ್ಯಯನಕ್ಕಾಗಿ’ ೧೨ನೇ ಸಿಎಸ್ಇ ಫೆಲೋಷಿಪ್ ಗೌರವ. ೨೦೧೨ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಯಜಮಾನ್ ಶ್ರೀ ನಾರಾಯಣಪ್ಪ ಪ್ರಶಸ್ತಿ, ೨೦೧೧ನೇ ಸಾಲಿನಲ್ಲಿ ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿನ ಎರಡು ದಶಕಗಳ ಗಣನೀಯ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ‘೨೦೧೪ನೇ ಸಾಲಿನ ರಾಜ್ಯಮಟ್ಟದ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಧ್ಯಯನ ಪ್ರವಾಸ : ಕೃಷಿ ಅಧ್ಯಯನಕ್ಕಾಗಿ ೨೦೧೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ಫ್ರಾನ್ಸಿಸ್ಕೋಗೆ ಪ್ರವಾಸ. ಭಾರತದ ಚಂಡಿಗಡ, ಒರಿಸ್ಸಾ, ಬಿಹಾರ, ಆಂಧ್ರ, ತಮಿಳುನಾಡು ಸೇರಿದಂತೆ ಕೃಷಿ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ.

4 thoughts on “ನಮ್ಮ ತೆಂಗು.. ನಮ್ಮ ಆರೋಗ್ಯ”

 1. ಪ್ರಿಯ ತೆಂಗು ಬೆಳೆಗಾರರಿಗೆ ನಮಸ್ಕಾರಗಳು.

  ವಿಶ್ವ ತೆಂಗು ದಿನಾಚರಣೆಯಂದು ಆಚರಿಸುತ್ತಿರುವ ’ನಮ್ಮ ತೆಂಗು – ನಮ್ಮ ಆರೋಗ್ಯ’ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಲೆಂದು ಹಾರೆಐಸುವೆ. ಸೆಪ್ಟೆಂಬರ್ ೨ ರಂದು ವಿಶ್ವ ತೆಂಗು ದಿನ ಎಂದು ತಿಳಿದದ್ದಕ್ಕೆ ಧನ್ಯವಾದಗಳು.

  ನಾನು ತೆಂಗು ಸಸಿ ನಾಟಿ ಮಾಡುವ ತರಾತುರಿಯಲ್ಲಿದ್ದೆ. ನಿಮ್ಮ ಕಾರ್ಯಕ್ರಮ ನೋಡಿದ ನಂತರ ನಾನೂ ಸಹ ವಿಶ್ವ ತೆಂದು ದಿನದಂದೇ ತೆಂಗು ನಾಟಿ ಮಾಡಲು ನಿರ್ಧರಿಸಿದ್ದೇನೆ.

  ನಮ್ಮಲ್ಲಿ ಹೆಚ್ಚಾಗಿ ತಿಪಟೂರು ಟಾಲ್ ತಳಿಯನ್ನು ಬೆಳೆಯುತ್ತಿದ್ದಾರೆ. ಇದಕ್ಕಿಂತ ಸುಧಾರಿತ ತಳಿ ಇದ್ದರೆ ತಕ್ಷಣ ತಿಳಿಸಿರಿ. ಸಸಿ ಸಿಗುವ ಮತ್ತು ಅವರನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆ ತಿಳಿಸಿರಿ.

  ನಿಮ್ಮ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಮತ್ತೊಮ್ಮೆ ಹಾರೈಸುವೆ.

  ವಂದನೆಗಳೊಂದಿಗೆ,

  ವಸಂತ್ ಮಾಲವಿ.
  9448261916

 2. ವಸಂತ ಮಾಲವಿ, ಶಿವರಾಂ ಪೈಲೂರು ಅವರ ಪ್ರತಿಕ್ರಿಯೆಗೆ ಧನ್ಯವಾದಗಳು. ಕಳೆದ ಎರಡು ತಿಂಗಳಿನಿಂದ ಕಾರ್ಯಕ್ರಮ ತಯಾರಿ ನಡೆದಿದೆ. ಅಣೆಕಟ್ಟೆ ವಿಶ್ವನಾಥ್, ರಘುರಾಂ ಅಣೇಕಟ್ಟೆ, ಜಯಪ್ರಸಾದ್ ಬಳ್ಳೇಕೆರೆ ಕಾರ್ಯಕ್ರಮಕ್ಕೆ ತುಂಬಾ ಶ್ರಮ ವಹಿಸಿದ್ದಾರೆ. ತುಮಕೂರಿನಿಂದ ಮಲ್ಲಿಕಾರ್ಜುನ ಹೊಸಪಾಳ್ಯ ಮಾಧ್ಯಮಗಳ ಜೊತೆ ಸಂಪರ್ಕದಲ್ಲಿದ್ದಾರೆ. ಬೆಂಗಳೂರಿನ ದೃಶ್ಯ ಮಾಧ್ಯಮಗಳು ಹಾಗೂ ಉಳಿದಂತೆ ನಾನು ಸಂಪರ್ಕದಲ್ಲಿದ್ದೇನೆ. ಒಟ್ಟಾರೆ ಕಾರ್ಯಕ್ರಮ ಯಶಸ್ವಿಯಾಗಬೇಕು. ಎಲ್ಲರೂ ಕೈ ಜೋಡಿಸಬೇಕೆಂಬುದು ನನ್ನ ಆಶಯ.

  ಗಾಣಧಾಳು ಶ್ರೀಕಂಠ

 3. ನಾನು ಮತ್ತೊಮ್ಮೆ ’ನಮ್ಮ ತೆಂಗು ನಮ್ಮ ಆರೋಗ್ಯ’ದ ಸನಿಹಕ್ಕೆ ಬರುತ್ತಿದ್ದೇನೆ. ನಿಮ್ಮ ಕಾರ್ಯಕ್ರಮ ಯಶಸ್ವಿಯಾಗಲೆನ್ನುವ ಹಿನ್ನೆಲೆಯಲ್ಲಿ ನಮ್ಮ ತಾಲ್ಲೂಕಿನ ಅಂಕಸಮುದ್ರ ಗ್ರಾಮದ ಆಯ್ದ (ಮರ – ಗಿಡ ಬೆಳೆಸುವಲ್ಲಿ ಆಸಕ್ತಿ ಇರುವ) ನೂರು ಕುಟುಂಬಗಳಿಗೆ ತಲಾ ಒಂದೊಂದು ತೆಂಗಿನ ಗಿಡವನ್ನು ಉಚಿತವಾಗಿ ನೀಡುತ್ತಿದ್ದೇನೆ. ಸೆಪ್ಟೆಂಬರ್‌ ಎರಡರಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಂದಿನ ವರ್ಷದಿಂದಲೂ ಪ್ರತಿ ಬಾರಿ ಒಂದೊಂದು ಗ್ರಾಮ ಆಯ್ಕೆ ಮಾಡಿಕೊಂಡು ನೂರು ತೆಂಗಿನ ಸಸಿಗಳನ್ನು ನೀಡುವ ಉದ್ದೇಶವನ್ನೂ ಹೊಂದಲಾಗಿದೆ. ಸಧ್ಯದಲ್ಲಿಯೇ ರಚನೆಯಾಗುವ ’ಸಾರ್ಥಕ ಫೌಂಡೇಶನ್’ನಿಂದ ಈ ಕಾರ್ಯಕ್ರಮವನ್ನು ನಡೆಸಲಾಗುವುದು. (ಸಾರ್ಥಕ ಫೌಂಡೇಶನ್ – SARTHAKA Foundation : SA – Savayavr RT – Raitharige HA – Hada K – Krushi A – Abhyasa Foundation) ಫೌಂಡೇಶನ್ ರಚನೆಯಾದ ನಂತರ ನಿಮ್ಮಂತಹವರ ಸಹಕಾರ ತುಂಬಾ ಅಗತ್ಯ, ಅವಶ್ಯವಾಗಿದೆ.
  ನಿಮ್ಮವ
  ವಸಂತ್ ಮಾಲವಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s